Homeಮುಖಪುಟರಾಜಕೀಯ ವ್ಯವಸ್ಥೆಯನ್ನು ಟೀಕಿಸಿ ಕೆಂಗಣ್ಣಿಗೆ ಗುರಿಯಾದ ಲೇಖಕ ವಾಸುದೇವನ್

ರಾಜಕೀಯ ವ್ಯವಸ್ಥೆಯನ್ನು ಟೀಕಿಸಿ ಕೆಂಗಣ್ಣಿಗೆ ಗುರಿಯಾದ ಲೇಖಕ ವಾಸುದೇವನ್

- Advertisement -
- Advertisement -

ಕೋಝಿಕ್ಕೋಡ್‌ನಲ್ಲಿ ನಡೆದ ಕೇರಳ ಸಾಹಿತ್ಯೋತ್ಸವದ ಏಳನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮಲಯಾಳಂನ ಹೆಸರಾಂತ ಲೇಖಕ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂ.ಟಿ ವಾಸುದೇವನ್ ನಾಯರ್ ಅವರು, ರಾಜಕೀಯ ನಾಯಕರನ್ನು ಟೀಕಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಾಹಿತ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ವಾಸುದೇವನ್ ಅವರು, ರಾಜಕೀಯದ ಹದಗೆಟ್ಟ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ರಾಜಕೀಯ ಚಟುವಟಿಕೆಗಳು ಅಧಿಕಾರವನ್ನು ಪಡೆಯುವ ಸಾಧನವಾಗಿ ಮಾರ್ಪಟ್ಟಿವೆ ಎಂದು ಕಿಡಿಕಾರಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವೇದಿಕೆಯಲ್ಲಿ ಇದ್ದರು.

ವಾಸುದೇವನ್ ಅವರು ತಮ್ಮ ಭಾಷಣದಲ್ಲಿ ಯಾವುದೇ ರಾಜಕೀಯ ನಾಯಕ ಅಥವಾ ಪಕ್ಷವನ್ನು ಉಲ್ಲೇಖಿಸಿಲ್ಲ. ಆದರೂ, ಹಿರಿಯ ಲೇಖಕನ ಭಾಷಣ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ವಾಸುದೇವನ್ ಅವರು ವೇದಿಕೆಯಲ್ಲಿದ್ದ ಸಿಎಂ ಪಿಣರಾಯಿ ವಿಜಯನ್ ಅವರಿಗೇ ತಮ್ಮ ಮಾತಿನ ಮೂಲಕ ತಿವಿದಿದ್ದಾರೆ ಎಂದು ಕೆಲ ನೆಟ್ಟಿಗರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಸಿಪಿಎಂ ನಾಯಕ ಮತ್ತು ಎಲ್‌ಡಿಎಫ್ ಸಂಚಾಲಕ ಇ ಪಿ ಜಯರಾಜನ್ ಅವರು, ಮುಖ್ಯಮಂತ್ರಿಯನ್ನು ಟೀಕಿಸಿದ್ದಾರೆ ಎಂಬುವುದನ್ನು ನಿರಾಕರಿಸಿದ್ದು, ಲೇಖಕರ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ವಾಸುದೇವನ್ ಹೇಳಿದ್ದೇನು?

ರಾಜಕೀಯ ವ್ಯವಸ್ಥೆಯ ರೂಪಾಂತರ ಬಗ್ಗೆ ವಾಸುದೇವನ್ ಟೀಕೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ವ್ಯವಸ್ಥೆ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದಕ್ಕಿಂತ ಸರ್ವಾಧಿಕಾರಿಯಾಗಿ ಬದಲಾಗ್ತಿದೆ ಎಂದಿದ್ದಾರೆ. ಆದರೆ, ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಎಲ್‌ಡಿಎಫ್ ಸರ್ಕಾರವಾಗಲಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವನ್ನಾಗಲಿ ಅವರು ನೇರವಾಗಿ ಉಲ್ಲೇಖಿಸಿಲ್ಲ.

ಅಧಿಕಾರವನ್ನು ಸಾರ್ವಜನಿಕ ಸೇವೆಗೆ ಅವಕಾಶವೆಂದು ಗುರುತಿಸಿದ ಸಿದ್ಧಾಂತವನ್ನು ನಾವು ಸಮಾಧಿ ಮಾಡಿಯಾಗಿದೆ. ರಾಜಕೀಯದಲ್ಲಿ ನೈತಿಕ ಮೌಲ್ಯಗಳ ಕುಸಿತ ಹೊಸ ಚರ್ಚೆಯ ವಿಷಯವೇನಲ್ಲ. ಅರ್ಹರು ಚುನಾವಣೆಯಲ್ಲಿ ಗೆಲ್ಲುತ್ತಿಲ್ಲ ಎಂದು ಊಹಿಸುವ ಮೂಲಕ ಈ ಚರ್ಚೆಗಳನ್ನು ಸಾಮಾನ್ಯವಾಗಿ ಪರಿಗಣಿಸಲಾಗ್ತಿದೆ. ಇಂದು, ರಾಜಕೀಯ ಚಟುವಟಿಕೆಗಳು ಅಧಿಕಾರವನ್ನು ಪಡೆಯಲು ಅನುಮೋದಿತ ತಂತ್ರವಾಗಿದೆ. ಇದನ್ನು ಪ್ರಾಬಲ್ಯ ಅಥವಾ ನಿರಂಕುಶವಾದ ಶಕ್ತಿ ಎನ್ನಬಹುದು. ಯಾರಾದರೂ ವಿಧಾನಸಭೆ ಅಥವಾ ಸಂಸತ್‌ಗೆ ಪ್ರವೇಶಿಸಿದಾಗ ಇಡೀ ವಿಧಾನಸಭೆ ಅಥವಾ ಸಂಸತ್‌ ಅನ್ನು ನಿಯಂತ್ರಿಸುವ ಅಧಿಕಾರ ಸಿಕ್ಕಂತೆ ಯೋಚಿಸಲಾಗ್ತಿದೆ ಎಂದು ವಾಸುದೇವನ್ ತಮ್ಮ ಭಾಷಣದಲ್ಲಿ ಹೇಳಿದ್ದರು.

ವಾಸುದೇವನ್ ಪ್ರತಿಕ್ರಿಯೆ:

ತನ್ನ ಭಾಷಣ ವೈರಲ್ ಆಗಿ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ತಿಳಿದ ಬೆನ್ನಲ್ಲೇ ಎಂ.ಟಿ ವಾಸುದೇವನ್ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಪ್ರಸ್ತುತ ವಾಸ್ತವತೆಯನ್ನು ಎತ್ತಿ ತೋರಿಸಿದ್ದೇನೆ ಹೊರತು, ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿ ಮಾತನಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ‘ರಾಮ’ನಿಗಿಂತ ‘ಮೋದಿ’ಯೇ ಹೆಚ್ಚು ಗೋಚರಿಸುತ್ತಿದ್ದಾರೆ: ಆರ್‌ಜೆಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...