Homeಮುಖಪುಟವಸ್ತ್ರ ಸಂಹಿತೆ ಉಲ್ಲಂಘಿಸಿದ್ದಕ್ಕೆ ಮಹಿಳೆಯರ ಬಂಧನ: ತಾಲಿಬಾನ್ ಕ್ರಮದ ಕುರಿತು ವಿಶ್ವಸಂಸ್ಥೆ ಕಳವಳ

ವಸ್ತ್ರ ಸಂಹಿತೆ ಉಲ್ಲಂಘಿಸಿದ್ದಕ್ಕೆ ಮಹಿಳೆಯರ ಬಂಧನ: ತಾಲಿಬಾನ್ ಕ್ರಮದ ಕುರಿತು ವಿಶ್ವಸಂಸ್ಥೆ ಕಳವಳ

- Advertisement -
- Advertisement -

ಹಿಜಾಬ್ ಧರಿಸುವುದು ಸೇರಿದಂತೆ ಇಸ್ಲಾಮಿಕ್ ವಸ್ತ್ರ ಸಂಹಿತೆಯನ್ನು ಪಾಲಿಸದ ಮಹಿಳೆಯರನ್ನು ಬಂಧಿಸುತ್ತಿರುವ ತಾಲಿಬಾನ್ ಸರ್ಕಾರದ ಕ್ರಮದ ಕುರಿತು ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ಘಟಕ ಕಳವಳ ವ್ಯಕ್ತಪಡಿಸಿದೆ.

ಗುರುವಾರ (ಜ.12) ಹೇಳಿಕೆ ಬಿಡುಗಡೆ ಮಾಡಿರುವ ಅಫ್ಘಾನಿಸ್ತಾನದ ಯುಎನ್ ಅಸಿಸ್ಟೆನ್ಸ್ ಮಿಷನ್ (ಯುಎನ್‌ಎಎಂಎ) ಜನವರಿ 1ರಿಂದ ಕಾಬೂಲ್ ಮತ್ತು ಡೇಕುಂಡಿ ಪ್ರಾಂತ್ಯಗಳಲ್ಲಿ ನಡೆಸುತ್ತಿರುವ ಹಿಜಾಬ್ ಜಾರಿ ಡ್ರೈವ್ ಅನ್ನು ಖಂಡಿಸಿದೆ.

ತಾಲಿಬಾನ್ ವಸ್ತ್ರ ಸಂಹಿತೆಯ ಕಡ್ಡಾಯ ಜಾರಿಯನ್ನು ಸದ್ಗುಣ ಜಾರಿಯ ಪೊಲೀಸ್ ಕ್ರಮದ ಒಂದು ಭಾಗ ಎಂದಿದೆ. ವಸ್ತ್ರ ಸಂಹಿತೆ ಉಲ್ಲಂಘಿಸಿ ಬಂಧನಕ್ಕೊಳಗಾದ ಮಹಿಳೆಯರನ್ನು ಬಿಡಿಸಲು ಅವರ ಪೋಷಕರು, “ಇನ್ನು ಮುಂದೆ ನಿಯಮ ಉಲ್ಲಂಘಿಸುವುದಿಲ್ಲ” ಎಂಬ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕಿದೆ. ಇಲ್ಲದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವರದಿಗಳು ಹೇಳಿವೆ.

ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು. ಅವರಿಗೆ ಮಾನಸಿಕ, ದೈಹಿಕ ಹಿಂಸೆ ನೀಡುವುದು ಅವಮಾನಕರ ಮತ್ತು ಅಪಾಯಕಾರಿ ಎಂದು ವಿಶ್ವಸಂಸ್ಥೆಯ ಮಿಷನ್ ಹೇಳಿದ್ದು, ತಾಲಿಬಾನ್ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.

ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದ ಬಳಿಕ ತಾಲಿಬಾನ್ ಹುಡುಗಿಯರು ಮತ್ತು ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದನ್ನು ಲಿಂಗಬೇಧ ನೀತಿ ಎಂದು ವಿಶ್ವಸಂಸ್ಥೆ ಟೀಕಿಸಿದೆ.

ತಂಬ್‌ನೈಲ್ ಫೋಟೋ ಸಾಂಧರ್ಬಿಕ

ಇದನ್ನೂ ಓದಿ: ತಪ್ಪು ಮಾಹಿತಿಯಿಂದ ಮುಂದಿನ ಎರಡು ವರ್ಷಗಳಲ್ಲಿ ಭಾರತಕ್ಕೆ ಹೆಚ್ಚಿನ ಅಪಾಯ: ವರ್ಲ್ಡ್‌ ಇಕನಾಮಿಕ್‌ ಫೋರಂ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...