Homeಕರೋನಾ ತಲ್ಲಣಮುಂಬೈ: ರಫ್ತು ಮಾಡಲು ಇಟ್ಟಿದ್ದ 2,200 ‘ರೆಮ್‌ಡೆಸಿವಿರ್‌’ ಬಾಟಲುಗಳು ವಶ

ಮುಂಬೈ: ರಫ್ತು ಮಾಡಲು ಇಟ್ಟಿದ್ದ 2,200 ‘ರೆಮ್‌ಡೆಸಿವಿರ್‌’ ಬಾಟಲುಗಳು ವಶ

- Advertisement -
- Advertisement -

ಮುಂಬೈನ ಎರಡು ಸ್ಥಳಗಳಲ್ಲಿ ದಾಳಿ ನಡೆಸಿರುವ ಪೊಲೀಸರು ಮತ್ತು ಎಫ್‌ಡಿಎ ಅಧಿಕಾರಿಗಳು ರಫ್ತು ಮಾಡಲು ಸಂಗ್ರಹಿಸಿದ್ದ 2,200 ಬಾಟಲುಗಳ ರೆಮ್‌ಡೆಸಿವಿರ್‌ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆಂದು TNIE ವರದಿ ಮಾಡಿದೆ.

ರೆಮ್‌ಡೆಸಿವಿರ್‌‌ ಆಂಟಿ ವೈರಲ್ ಲಸಿಕೆಯಾಗಿದ್ದು, ಅದನ್ನು ಕೊರೊನಾ ಸೋಂಕು ಗಂಭೀರವಾಗಿ ಕಾಡುವ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ.

ಏರುತ್ತಿರುವ ಕೊರೊನಾ ಪ್ರಕರಣದಿಂದಾಗಿ ರೆಮ್‌ಡೆಸಿವಿರ್‌‌ ಔಷಧದ ಬೇಡಿಕೆ ಕೂಡಾ ಹಠಾತ್ತನೆ ಏರಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಕೇಂದ್ರ ಸರ್ಕಾರವು ಕಳೆದ ವಾರ ಅವರ ರಫ್ತು ನಿಷೇಧಿಸಿತ್ತು.

ಇದನ್ನೂ ಓದಿ: ‘ಜೈಶ್ರೀರಾಮ್’ ಹೇಳದೇ ಇದ್ದುದಕ್ಕೆ 10 ವರ್ಷದ ಬಾಲಕನನ್ನು ತೀವ್ರವಾಗಿ ಥಳಿಸಿದ ಬಿಜೆಪಿ ಕಾರ್ಯಕರ್ತ!

ಮಾಹಿತಿಯ ಮೇರೆಗೆ ಪೊಲೀಸರು ಹಾಗೂ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ(ಎಫ್‌ಡಿಎ)  ಅಧಿಕಾರಿಗಳು ದಕ್ಷಿಣ ಮುಂಬೈನ ಉಪನಗರ ಅಂಧೇರಿ ಮತ್ತು ನ್ಯೂ ಮೆರೈನ್ ಲೈನ್ಸ್‌ನ ಎರಡು ಸ್ಥಳಗಳಲ್ಲಿ ಸೋಮವಾರ ದಾಳಿ ನಡೆಸಿದ್ದಾರೆ.

ಔಷಧೀಯ ಕಂಪನಿಗೆ ಸೇರಿದ ರೆಮ್‌ಡೆಸಿವಿರ್‌ನ 2 ಸಾವಿರ ಬಾಟಲುಗಳನ್ನು ಅಂಧೇರಿ (ಪೂರ್ವ) ನ ಮರೋಲ್ ಪ್ರದೇಶದಲ್ಲಿ ರಫ್ತು ಮಾಡುವ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರ ಎಸ್ ಚೈತನ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಘ ಪರಿವಾರ ಬೆಂಬಲಿಗ ಪತ್ರಿಕೆ ‘ಹೊಸದಿಗಂತ’ದ ಸಂಪಾದಕ ಮತ್ತು ಪ್ರಕಾಶಕರಿಗೆ ಏಳು ತಿಂಗಳ ಜೈಲು

ಅಲ್ಲದೆ, ನ್ಯೂ ಮೆರೈನ್ ಲೈನ್ಸ್‌ ಪ್ರದೇಶದ ರಫ್ತು ಮಾಡುವ ಮತ್ತೊಂದು ಸ್ಥಳದಿಂದ ಸುಮಾರು 200 ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಾಟಲುಗಳನ್ನು ವಿದೇಶಗಳ ಮಾರುಕಟ್ಟೆಗಳಿಗೆ ಉತ್ಪಾದಿಸಲಾಗುತ್ತಿತ್ತು, ಆದರೆ ಸರ್ಕಾರವು ಔಷಧ ರಫ್ತಿಗೆ ನಿಷೇಧ ಹೇರಿದ ನಂತರ ಅದನ್ನು ಸಂಗ್ರಹಿಸಿ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ವಶಪಡಿಸಿಕೊಳ್ಳಲಾಗಿರುವ 2,200 ಬಾಟಲುಗಳನ್ನು ಎಫ್‌ಡಿಎ ತನ್ನ ವಶಕ್ಕೆ ತೆಗೆದುಕೊಂಡಿದ್ದು, ಅವುಗಳನ್ನು ಆಸ್ಪತ್ರೆಗಳಿಗೆ ಲಭ್ಯವಾಗುವಂತೆ ಮಾಡುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಸ್ಕಿ: ಬಿಜೆಪಿ ಪರ ಹಣ ಹಂಚಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹಾಸನದ ಯುವಕರ ಬಂಧನ

ವಿಡಿಯೊ ನೋಡಿ:ವಿದ್ಯಾರ್ಥಿಗಳಿಬ್ಬರ ನೃತ್ಯಕ್ಕೆ ಕೋಮು ಬಣ್ಣ ಹಚ್ಚಿದ ಬಲಪಂಥೀಯರಿಗೆ ಕೇರಳ ಪ್ರತಿರೋಧಿಸಿದ್ದು ಹೇಗೆ ಗೊತ್ತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...