Homeಮುಖಪುಟಗುಜರಾತ್: ತನ್ನ ಮಗಳ ಅಶ್ಲೀಲ ವೀಡಿಯೊ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿದ BSF ಯೋಧನ ಕೊಲೆ

ಗುಜರಾತ್: ತನ್ನ ಮಗಳ ಅಶ್ಲೀಲ ವೀಡಿಯೊ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿದ BSF ಯೋಧನ ಕೊಲೆ

ಈ ಗಲಾಟೆಯಲ್ಲಿ ತಮ್ಮ ತಂದೆಯ ಮೇಲಿನ ಹಲ್ಲೆ ತಡೆಯಲು ಮುಂದಾದ ಮೇಲಾಜಿ ವಘೇಲ ಪುತ್ರನಿಗೂ ಗಂಭೀರ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -
- Advertisement -

15 ವರ್ಷದ ತನ್ನ ಅಪ್ರಾಪ್ತ ಮಗಳ ಅಶ್ಲೀಲ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ BSF ಯೋಧನನ್ನು ಹೊಡೆದು ಕೊಂದ ಆರೋಪದ ಮೇಲೆ 7 ಜನರನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ.

ಮೇಲಾಜಿ ವಘೇಲ ಎಂಬ 45 ವರ್ಷದ ಬಿಎಸ್‌ಎಫ್ ಯೋಧನ 15 ವರ್ಷದ ಮಗಳ ಆಶ್ಲೀಲ ವಿಡಿಯೋವನ್ನು ಶೈಲೇಶ್ ಯಾದವ್ ಎಂಬ ಯುವಕ ಆನ್‌ಲೈನ್‌ ನಲ್ಲಿ ಪೋಸ್ಟ್ ಮಾಡಿದ್ದ. ಆ ಯುವಕ ಅಪ್ರಾಪ್ತ ಯುವತಿಯ ಸಹಪಾಠಿಯಾಗಿದ್ದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಯೋಧನನ್ನು ಶೈಲೇಶ್ ಕುಟುಂಬ ಹೊಡೆದು ಕೊಲೆ ಮಾಡಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಯೋಧ ಮೇಲಾಜಿ ವಘೇಲ ಶೈಲೇಶ್ ಯಾದವ್ ಮನೆಗೆ ತೆರಳಿ ತನ್ನ ಮಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಆಗ ಶೈಲೇಶ್ ತಂದೆ ದಿನೇಶ್ ಯಾದವ್, ಚಿಕ್ಕಪ್ಪ ಅರವಿಂದ್ ಯಾದವ್ ಇತರರು ಸೇರಿಕೊಂಡು ದೊಣ್ಣೆ ಮತ್ತು ಚೂಪಾದ ಆಯುಧಗಳಿಂದ ಹೊಡೆದು ಯೋಧನನ್ನು ಕೊಲ್ಲಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬಾಜಪೇಯಿ ತಿಳಿಸಿದ್ದಾರೆ.

ಕೊಲೆ ಮತ್ತು ಗಲಭೆ ಆರೋಪದ ಮೇಲೆ ಸದ್ಯಕ್ಕೆ 7 ಜನರನ್ನು ಬಂಧಿಸಿದ್ದು ಅವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಈ ಗಲಾಟೆಯಲ್ಲಿ ತಮ್ಮ ತಂದೆಯ ಮೇಲಿನ ಹಲ್ಲೆ ತಡೆಯಲು ಮುಂದಾದ ಮೇಲಾಜಿ ವಘೇಲ ಪುತ್ರನಿಗೂ ಗಂಭೀರ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 4 ವರ್ಷದ ಮಗು ಮೇಲೆ ಅತ್ಯಾಚಾರ: ಸಿಸಿಕ್ಯಾಮರ ನೆರವಿನಿಂದ ಆರೋಪಿಯ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...