Homeಮುಖಪುಟಮಹಾರಾಷ್ಟ್ರ: ಈಡೇರದ ಮುಸ್ಲಿಮರ ಮೀಸಲಾತಿ ಬೇಡಿಕೆ

ಮಹಾರಾಷ್ಟ್ರ: ಈಡೇರದ ಮುಸ್ಲಿಮರ ಮೀಸಲಾತಿ ಬೇಡಿಕೆ

- Advertisement -
- Advertisement -

ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಶಿಕ್ಷಣದಲ್ಲಿ ಶೇ 5ರಷ್ಟು ಮೀಸಲಾತಿ ನೀಡಬೇಕೆಂದು ಮುಸ್ಲಿಂ ಸಮುದಾಯ ಹಲವು ವರ್ಷಗಳಿಂದ ಬೇಡಿಕೆಗಳನ್ನು ಮುಂದಿಡುತ್ತಲೇ ಬರುತ್ತಿದೆ. ಈ ಕುರಿತು ನ್ಯಾಯಾಲಯವು ಅನುಮೋದಿಸಿದರೂ ಸರಕಾರ ಆದೇಶದ ಪಾಲನೆಗೆ ಉತ್ಸುಕತೆಯನ್ನು ತೋರಿಸಿಲ್ಲ. ಇದರಿಂದಾಗಿ ಮರಾಠರು, ಧಂಗರ್ ಸಮುದಾಯದ ಜನರ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಮುಸ್ಲಿಂ ಸಮುದಾಯವು ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದೆ.

ಮೀಸಲಾತಿ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಮುಸ್ಲಿಮರು ಕೂಡ ಮರಾಠರು ಮತ್ತು ಧಂಗಾರ್‌ಗಳಂತೆ ಬೀದಿಗೆ ಬರಬೇಕಾಗುತ್ತದೆ ಎಂದು ಸಮುದಾಯದ ಮುಖಂಡರು ಮಹರಾಷ್ಟ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಪುಣೆಯಲ್ಲಿ ನಡೆದ ಅಖಿಲ ಭಾರತ ಉಲೇಮಾ ಮಂಡಳಿಯ  ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಸ್ಲಿಂ ಸಮುದಾಯವು  ಶಿಕ್ಷಣದಲ್ಲಿ 5% ಮೀಸಲಾತಿ ಕುರಿತ ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದು, ರಾಜ್ಯದ ಉರ್ದು ಶಾಲೆಗಳಲ್ಲಿ ಅರೇಬಿಕ್ ಭಾಷೆಯನ್ನು ಕಡ್ಡಾಯವಾಗಿ ಕಲಿಸುವಂತೆ ಒತ್ತಾಯಿಸಿದೆ.

ನಾವು ಹಲವಾರು ವಿಷಯಗಳನ್ನು ಚರ್ಚಿಸಿದ್ದೇವೆ ಮತ್ತು ಅದನ್ನು ಪರಿಹರಿಸಲು ಸರ್ಕಾರಕ್ಕೆ ಔಪಚಾರಿಕ ಮನವಿಯನ್ನು ಮಾಡಿದ್ದೇವೆ. ನಾವು ಗೆಲ್ಲಲು ಸಾಧ್ಯವಾಗದಿರಬಹುದು. ಆದರೆ ಖಂಡಿತವಾಗಿಯೂ  ಯಾರನ್ನಾದರೂ ಸೋಲಿಸಬಹುದು. ಇದಕ್ಕೆ ಸಮಯ ಬಂದಿದೆ. ಮುಸ್ಲಿಮ್ ಸಮುದಾಯದ ಅಗತ್ಯಗಳ ವಿಚಾರದಲ್ಲಿ ನಾವು ಕಣ್ಣು ಮುಚ್ಚಿಕೊಂಡು ಇರಲು ಸಾಧ್ಯವಿಲ್ಲ ಎಂದು ಎಐಯುಬಿಯ ವಕ್ಫ್ ವಿಭಾಗದ ಮುಖ್ಯಸ್ಥ ಸಲೀಮ್ ಸಾರಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಚರ್ಚಿಸಲು ನಾವು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ,  ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರೊಂದಿಗೆ  ಅಪಾಯಿಂಟ್‌ಮೆಂಟ್ ಕೇಳಿದ್ದೇವೆ. ಇದುವರೆಗೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಶಿಕ್ಷಣದಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಬುದ್ಧಿಜೀವಿಗಳು, ಧಾರ್ಮಿಕ ವಿದ್ವಾಂಸರು, ಸಮುದಾಯದ ಮುಖಂಡರು ಮತ್ತು ರಾಜಕಾರಣಿಗಳು ಪಕ್ಷದ ರೇಖೆಗಳನ್ನು ಮೀರಿ ಮಾತನಾಡುತ್ತಿದ್ದಾರೆ. ನಾನು ಈ ಮೀಸಲಾತಿ ಸಮಸ್ಯೆಗಳ ಬಗ್ಗೆ ಬೇರೆ-ಬೇರೆ ಪಕ್ಷದ ನಾಯಕರ ಜೊತೆ ಮಾತನಾಡುತ್ತಿದ್ದೇನೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಶಿಕ್ಷಣದಲ್ಲಿ 5% ಮೀಸಲಾತಿಯನ್ನು ನ್ಯಾಯಾಲಯವು ಅನುಮೋದಿಸಿದರೂ, ಇಲ್ಲಿಯವರೆಗೆ ಯಾವುದೇ ಸರ್ಕಾರ ಅದನ್ನು ಜಾರಿಗೆ ತರಲು ಉತ್ಸುಕತೆ ತೋರುತ್ತಿಲ್ಲ ಎಂದು ಸಾರಂಗ್ ಆರೋಪಿಸಿದ್ದಾರೆ.

ಇಂದು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಗಳನ್ನು ಪಡೆಯಲು ಅರೇಬಿಕ್ ಭಾಷೆಯ ಜ್ಞಾನವು ಹೆಚ್ಚುವರಿ ಅರ್ಹತೆಯಾಗಿದೆ. ಇಲ್ಲಿ ಜನರು ಮದರಸಾಗಳ ವಿರುದ್ಧ ಮಾತನಾಡುತ್ತಾರೆ. ಆದರೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಅರೇಬಿಕ್ ಭಾಷೆ ಸೇರಿದಂತೆ ಹಲವು ವಿಷಯಗಳನ್ನು ಕಲಿಯಲು ಇಲ್ಲಿಗೆ ಹೋಗುವುದನ್ನು ಸ್ಮರಿಸಬಹುದಾಗಿದೆ.  ರಾಜ್ಯದ ಎಲ್ಲಾ ಉರ್ದು ಶಾಲೆಗಳಲ್ಲಿ ಅರೇಬಿಕ್ ಭಾಷೆಯನ್ನು ಒಂದು ವಿಷಯವಾಗಿ ಕಲಿಸಬೇಕು ಎಂದು ಸಲೀಮ್ ಸಾರಂಗ್‌ ಆಗ್ರಹಿಸಿದ್ದಾರೆ.

ಇದನ್ನು ಓದಿ: ಇಸ್ರೇಲ್- ಹಮಾಸ್‌: ಒಪ್ಪಂದದ ಉಲ್ಲಂಘನೆ ಆರೋಪ, ಪ್ರತ್ಯಾರೋಪ; ಮತ್ತೆ ಯುದ್ಧದ ಭೀತಿ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಅರವಿಂದ್ ಕೇಜ್ರಿವಾಲ್ ನಿವಾಸದ ಹೊಸ ವೀಡಿಯೊ ವೈರಲ್

0
ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯ ಮನೆಯೊಳಗೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಎಎಪಿ ನಾಯಕಿ ಸ್ವಾತಿ ಮಲಿವಾಲ್ ಅವರು,...