Homeಮುಖಪುಟನಾಗ್ಪುರ: ಮಹಿಳಾ ಅಧಿಕಾರಿ ಮೇಲೆ ಲಾರಿ ಚಲಾಯಿಸಲು ಯತ್ನಿಸಿದ ಮರಳು ಮಾಫಿಯಾ

ನಾಗ್ಪುರ: ಮಹಿಳಾ ಅಧಿಕಾರಿ ಮೇಲೆ ಲಾರಿ ಚಲಾಯಿಸಲು ಯತ್ನಿಸಿದ ಮರಳು ಮಾಫಿಯಾ

- Advertisement -
- Advertisement -

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಕ್‌ನ ಚಾಲಕ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಚಲಾಯಿಸಲು ಯತ್ನಿಸಿದ ಘಟನೆ ಭಾನುವಾರ ಬೆಳಗ್ಗೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ತಪಾಸಣೆ ವೇಳೆ ಎಂಟು ವಾಹನಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗ್ಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಮನ್ಸಾರ್-ತುಮ್ಸಾರ್ ರಾಷ್ಟ್ರೀಯ ಹೆದ್ದಾರಿಯ ಘೋಟಿಟೋಕ್ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಾಟ ತಡೆಯಲು ಕಂದಾಯ ಇಲಾಖೆ ಅಧಿಕಾರಿಗಳು ಟ್ರಕ್‌ಗಳನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ನಡೆದಿದೆ.

ರಾಮ್ಟೆಕ್‌ನಲ್ಲಿ ಉಪವಿಭಾಗಾಧಿಕಾರಿ (ಕಂದಾಯ) ವಂದನಾ ಸಾವ್ರಂಗಪಟ್ಟೆ ಮತ್ತು ಅವರ ತಂಡವು ಮೊದಲು ಅತಿವೇಗದಲ್ಲಿ ಚಲಿಸುತ್ತಿದ್ದ ಕೆಲವು ಟ್ರಕ್‌ಗಳನ್ನು ತಡೆದರು. ತಪಾಸಣೆ ನಡೆಸಿದ ನಂತರ ಎಂಟು ಮರಳು ತುಂಬಿದ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕಂದಾಯ ಸಿಬ್ಬಂದಿಗಳು ಮತ್ತೊಂದು ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಅದರ ಚಾಲಕ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಎಸ್‌ಡಿಒ ಸಾವರಂಗಪಟ್ಟೆ ಮೇಲೆ ಚಲಾಯಿಸಲು ಪ್ರಯತ್ನಿಸಿದ್ದು, ಅವರು ಸ್ವಲ್ಪದರಲ್ಲಿ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ಎಸ್‌ಡಿಒ ಮತ್ತು ಅವರ ತಂಡವು ಟ್ರಕ್ ಅನ್ನು ಹಿಂಬಾಲಿಸಿದಾಗ, ನ್ಯಾನೋ ಕಾರೊಂದು ಅವರ ಮಾರ್ಗಕ್ಕೆ ಅಡ್ಡಿಪಡಿಸಿತು. ಲಾರಿ ಸಿಬ್ಬಂದಿಗಳು ಕಂದಾಯ ಸಿಬ್ಬಂದಿಯ ಮೇಲೆ ಸುತ್ತಿಗೆ ಮತ್ತು ಕಬ್ಬಿಣದ ರಾಡ್‌ಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.

ರಾಮ್ಟೆಕ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು 353 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ; ಸ್ಲಂ ತೆರವು ಕಾರ್ಯಾಚರಣೆ; ‘ಘರ್ ಬಚಾವೋ, ಬಿಜೆಪಿ ಹಟಾವೋ’ ಅಭಿಯಾನ ಆರಂಭಿಸಿದ ಎಎಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...