Homeಚಳವಳಿಬಿಕ್ಕಟ್ಟಿನಲ್ಲಿ ಜನತಂತ್ರ - ಮುಂದಿನ ಹಾದಿ: ವಿಚಾರ ಸಂಕಿರಣ

ಬಿಕ್ಕಟ್ಟಿನಲ್ಲಿ ಜನತಂತ್ರ – ಮುಂದಿನ ಹಾದಿ: ವಿಚಾರ ಸಂಕಿರಣ

- Advertisement -
- Advertisement -

ಫೋರಮ್ ಫಾರ್ ಡೆಮಾಕ್ರಸಿ ಆಂಡ್ ಕಮ್ಯೂನಲ್ ಅಮಿಟಿ ಕರ್ನಾಟಕ ಘಟಕದ (FDCA – K) ವತಿಯಿಂದ ಡಿಸೆಂಬರ್ 12 ರ ಭಾನುವಾರದಂದು “ಬಿಕ್ಕಟ್ಟಿನಲ್ಲಿ ಜನತಂತ್ರ – ಮುಂದಿನ ಹಾದಿ” ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ.

ಭಾನುವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಇನ್’ಫಾಂಟ್ರಿ ರಸ್ತೆಯಲ್ಲಿರುವ ಕೆಎಎಸ್ ಆಫೀಸರ್ಸ್ ಅಸೋಸಿಯೇಷನ್ ಹಾಲ್ (ಪೋಲಿಸ್ ಕಮಿಷನರ್ ಕಚೇರಿ ಬಳಿ) ನಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಪತ್ರಕರ್ತರು ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಘಟನೆಯ ಮಾಜಿ ಮುಖ್ಯಸ್ಥರಾದ ಆಕಾರ್ ಪಟೇಲ್‌ರವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಎಚ್.ಎನ್.ನಾಗಮೋಹನದಾಸ್‌ರವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಲಿದ್ದು, ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರಾಧ್ಯಕ್ಷರಾದ ಸಯ್ಯದ್ ಸಾದತುಲ್ಲಾ ಹುಸೈನಿಯವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಆಸಕ್ತರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಫೋರಮ್ ಫಾರ್ ಡೆಮಾಕ್ರಸಿ ಆಂಡ್ ಕಮ್ಯೂನಲ್ ಅಮಿಟಿ ಕರ್ನಾಟಕ ಘಟಕದ ಕಾರ್ಯದರ್ಶಿಗಳಾದ ನಿವೃತ್ತ ಐಪಿಎಸ್ ಅಧಿಕಾರಿ ಎಮ್.ಎಫ್.ಪಾಶರವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ಹರಿಯಾಣದ ಹಳ್ಳಿಗಳಿಗೆ ತೆರಳಿ ಧನ್ಯವಾದ ತಿಳಿಸುತ್ತಿರುವ ಪಂಜಾಬ್ ರೈತರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕೇರಳದ ಕಾಂಗ್ರೆಸ್ ನಾಯಕ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ರಾ?

0
ಕೇರಳದ ಕಾಂಗ್ರೆಸ್ ನಾಯಕ ಪಿ.ಸಿ ಜಾರ್ಜ್ ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಲ ಪಂಥೀಯ ಎಕ್ಸ್ ಬಳಕೆದಾರ 'ಜಿತೇಂದ್ರ ಪ್ರತಾಪ್ ಸಿಂಗ್' ವಿಡಿಯೋ ಹಂಚಿಕೊಂಡಿದ್ದು, "...