Homeರಾಷ್ಟ್ರೀಯರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸೂರರೈ ಪಟ್ರು ಅತ್ಯುತ್ತಮ ಚಿತ್ರ; ಸೂರ್ಯ, ಅಜಯ್ ದೇವಗನ್ ಮತ್ತು ಅಪರ್ಣಾ...

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸೂರರೈ ಪಟ್ರು ಅತ್ಯುತ್ತಮ ಚಿತ್ರ; ಸೂರ್ಯ, ಅಜಯ್ ದೇವಗನ್ ಮತ್ತು ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟರು

‘ಡೊಳ್ಳು’ ಚಿತ್ರವೂ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ

- Advertisement -
- Advertisement -

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ದೆಹಲಿಯಲ್ಲಿ ಶುಕ್ರವಾರ ಪ್ರಕಟಿಸಲಾಗಿದೆ. ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸೂರರೈ ಪೊಟ್ರು ಮತ್ತು ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ನಲ್ಲಿನ ನಟನೆಗಾಗಿ ಸೂರ್ಯ ಮತ್ತು ಅಜಯ್ ದೇವಗನ್ ಅವರು ಹಂಚಿಕೊಂಡಿದ್ದಾರೆ.

ಸಿಂಪ್ಲಿಫ್ಲೈ ಡೆಕ್ಕನ್ ಸಂಸ್ಥಾಪಕ ಜಿ. ಗೋಪಿನಾಥ್ ಅವರ ಜೀವನವನ್ನು ಆಧರಿಸಿದ ‘ಸೂರರೈ ಪೊಟ್ರು’ ಅತ್ಯುತ್ತಮ ಚಲನಚಿತ್ರವೆಂದು ಆಯ್ಕೆಯಾಗಿದ್ದು, ಅದರಲ್ಲಿ ನಟಿಸಿದ್ದ ಅಪರ್ಣಾ ಬಾಲಮುರಳಿ ಅವರು ಅತ್ಯುತ್ತಮ ನಟಿ ಪ್ರಶಸ್ತಿ ವಿಜೇತರಾಗಿದ್ದಾರೆ. ಮರಾಠ ಯೋಧ ತಾನಾಜಿ ಮಾಲುಸರೆ ಕುರಿತ ಚಲನಚಿತ್ರವಾದ ‘ತಾನ್ಹಾಜಿ’ ಸಂಪೂರ್ಣ ಮನರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜು ಮೆನನ್ ಅವರು ‘ಅಯ್ಯಪ್ಪನುಂ ಕೊಶಿಯುಂ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ‘ಶಿವರಂಜನಿಯಂ ಇನ್ನುಮ್ ಸಿಲಾ ಪೆಂಗಲುಮ್’ ಚಿತ್ರದಲ್ಲಿನ ನಟನೆಗಾಗಿ ‘ಲಕ್ಷ್ಮಿ ಪ್ರಿಯಾ’ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ನೀಡಲಾಯಿತು. ಈ ಚಿತ್ರವೂ ಇದು ಅತ್ಯುತ್ತಮ ತಮಿಳು ಚಲನಚಿತ್ರ ಮತ್ತು ಅತ್ಯುತ್ತಮ ಸಂಕಲನದ ಚಿತ್ರ ಪ್ರಶಸ್ತಿಯನ್ನೂ ಗೆದ್ದಿದೆ.

ಬಾಲನಟ ವರುಣ್ ಬುದ್ಧದೇವ್ ಅವರಿಗೆ ತೀರ್ಪುಗಾರರ ವಿಶೇಷ ಉಲ್ಲೇಖದೊಂದಿಗೆ ಟೂಲ್ಸಿದಾಸ್ ಜೂನಿಯರ್ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿಯನ್ನು ನೀಡಿದೆ.

ಇದನ್ನೂ ಓದಿ: ಹಿಪೊಕ್ರಸಿ ಜಗತ್ತಿನಲ್ಲಿ ಮತ್ತೊಂದು ಎದೆಯ ದನಿ ಸಾಯಿ ಪಲ್ಲವಿ

ಸಾಗರ್‌ ಪುರಾಣಿಕ್ ನಿರ್ದೇಶನದ ‘ಡೊಲ್ಲು’ ಚಿತ್ರವೂ ಕನ್ನಡದ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ಸ್ಥಳ ಧ್ವನಿ ಚಿತ್ರವಾಗಿ ಹೊರ ಹೊಮ್ಮಿದೆ. ಅವಿಜಾಟ್ರಿಕ್ ಅತ್ಯುತ್ತಮ ಬಂಗಾಳಿ ಚಲನಚಿತ್ರ ಮತ್ತು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಪಡೆದಿದೆ. ಕಲರ್ ಫೋಟೋ ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿಯನ್ನು ಪಡೆದರೆ, ‘ತಿಂಕಲಜ್ಚಾ ನಿಶ್ಚಯಂ’ ಅತ್ಯುತ್ತಮ ಮಲಯಾಳಂ ಚಿತ್ರ ಪ್ರಶಸ್ತಿ ಪಡೆದಿದೆ.

68ನೇ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಮುಖ ಪಟ್ಟಿ ಇಲ್ಲಿದೆ

  • ಅತ್ಯುತ್ತಮ ಚಲನ ಚಿತ್ರ: ಸೂರರೈ ಪೋಟ್ರು
  • ಸಂಪೂರ್ಣ ಮನರಂಜನಾ ಚಿತ್ರ: ತಾನಾಜಿ: ದಿ ಅನ್‌ಸಂಗ್ ವಾರಿಯರ್
  • ಅತ್ಯುತ್ತಮ ನಟಿ: ಅಪರ್ಣ ಬಾಲಮುರಳಿ ( ಸೂರರೈ ಪೋಟ್ರು)
  • ಅತ್ಯುತ್ತಮ ನಟ: ಸೂರ್ಯ( ಸೂರರೈ ಪೋಟ್ರು) ಹಾಗೂ ಅಜಯ್ ದೇವಗನ್(ತಾನಾಜಿ: ದಿ ಅನ್‌ಸಂಗ್ ವಾರಿಯರ್)
  • ಅತ್ಯುತ್ತಮ ಚಿತ್ರಕಥೆ: ಸೂರರೈ ಪೋಟ್ರು 
  • ಅತ್ಯುತ್ತಮ ನಿರ್ದೇಶನ: ಸಚ್ಚಿದಾನಂದನ್ ಕೆಆರ್ (ಅಯ್ಯಪ್ಪನುಂ ಕೋಶಿಯುಂ)
  • ಅತ್ಯುತ್ತಮ ಡೈಲಾಗ್: ಮಂಡೇಲಾ(ತಮಿಳು)
  • ಅತ್ಯುತ್ತಮ ಪರಿಸರ ಸಂರಕ್ಷಣಾ ಸಿನಿಮಾ: ತಲೆದಂಡ (ಕನ್ನಡ)
  • ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು
  • ಅತ್ಯುತ್ತಮ ಆತ್ಮಚರಿತ್ರೆ: ನಾದದ ನವನೀತ (ಗಿರೀಶ್ ಕಾಸರವಳ್ಳಿ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...