Homeಮುಖಪುಟ11ನೇ ತರಗತಿಯ ಪಠ್ಯಪುಸ್ತಕದಿಂದ ಮೌಲಾನಾ ಆಜಾದ್ ಉಲ್ಲೇಖ ಕೈಬಿಟ್ಟ NCERT

11ನೇ ತರಗತಿಯ ಪಠ್ಯಪುಸ್ತಕದಿಂದ ಮೌಲಾನಾ ಆಜಾದ್ ಉಲ್ಲೇಖ ಕೈಬಿಟ್ಟ NCERT

- Advertisement -
- Advertisement -

NCERT ಪ್ರಕಟಿಸಿರುವ 11ನೇ ತರಗತಿಯ ಪರಿಷ್ಕೃತ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿ ‘ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್’ ಅವರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ದಿ ಹಿಂದೂ ಬುಧವಾರ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರವು ಸ್ವಾಯತ್ತವಾಗಿ ಉಳಿಯುತ್ತದೆ ಎಂಬ ಷರತ್ತಿನ ಮೇಲೆ ಭಾರತಕ್ಕೆ ವಿಲೀನವಾಗಿತ್ತು ಎಂಬ ಪ್ಯಾರಾಗ್ರಾಫ್‌ನ್ನು ಸಹ ಅಳಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಮಾಡಿದ ಹಲವಾರು ಬದಲಾವಣೆಗಳು ಸಾಕಷ್ಟು ವಿವಾದ ಹುಟ್ಟುಹಾಕಿದೆ. ಈ ಎಲ್ಲ ಲೋಪಗಳು ಸರ್ಕಾರಿ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಶಾಲೆಗಳಲ್ಲಿ ಪಠ್ಯಕ್ರಮದ ಭಾಗವಾಗಿದೆ.

ಜೂನ್‌ನಲ್ಲಿ ಎನ್‌ಸಿಇಆರ್‌ಟಿ ಪರೀಷ್ಕರಿಸುವ ವಿಷಯಗಳ ಕುರಿತು ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಆ ಪಟ್ಟಿಯಲ್ಲಿ ‘ಆಜಾದ್’ ಮತ್ತು ‘ಕಾಶ್ಮೀರ’ದ ಮೇಲಿನ ಪ್ಯಾರಾಗಳನ್ನು ತಗೆದು ಹಾಕುವ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿರಲಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ.

ಕಳೆದ ವಾರವೂ ಇದೇ ರೀತಿ ಗಾಂಧಿ ಹತ್ಯೆಯ ವಿಷಯದಲ್ಲಿ ಮಾಡಿತ್ತು. ”ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರನ್ನು ಹತ್ಯೆ ಮಾಡಲು ಹಿಂದೂ ಉಗ್ರಗಾಮಿಗಳು ನಡೆಸಿದ ಪ್ರಯತ್ನಗಳು ಮತ್ತು ಅವರ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾದ ನಿಷೇಧ”ದ ಪ್ಯಾರಾಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: NCERT ಪಠ್ಯ ಕಡಿತಗೊಳಿಸಿ, ಸುಳ್ಳು ಇತಿಹಾಸ ಹರಡಲು ದಾರಿ ಮಾಡಿಕೊಟ್ಟಿದೆ: ಇತಿಹಾಸಕಾರರ ಕಳವಳ

ಕಳೆದ ವರ್ಷ NCERT ಕೆಲವು ವಿಷಯಗಳನ್ನು ತಗೆದುಹಾಕುವ ಬಗ್ಗೆ ಹೇಳಿತ್ತು. 2002ರ ಗುಜರಾತ್ ಗಲಭೆಗಳು, ಭಾರತದಲ್ಲಿ ಮೊಘಲ್ ಆಳ್ವಿಕೆ ಮತ್ತು 1975ರಲ್ಲಿ ಹೇರಲಾದ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ವಿಷಯಗಳನ್ನು ಕೈಬಿಡುವುದಾಗಿ ಹೇಳಿತ್ತು. ಈಗ ಯಾವುದೇ NCERT ಪಠ್ಯಪುಸ್ತಕದಲ್ಲೂ ಗುಜರಾತ್ ಗಲಭೆಗಳ ಬಗ್ಗೆ ಯಾವುದೇ ಉಲ್ಲೇಖಗಳು ಕಾಣಸಿಗುವುದಿಲ್ಲ.

”ಸಂವಿಧಾನ – ಏಕೆ ಮತ್ತು ಹೇಗೆ?” ಎಂಬ ಶೀರ್ಷಿಕೆಯ 11ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದ ಮೊದಲ ಅಧ್ಯಾಯದಲ್ಲಿ ಆಜಾದ್ ಅವರ ಪ್ಯಾರಾವನ್ನು ಕೈಬಿಡಲಾಗಿದೆ.

ಈ ಪಠ್ಯಪುಸ್ತಕದ ಹಿಂದಿನ ಆವೃತ್ತಿಗಳಲ್ಲಿ, ”ವಿಧಾನ ಸಭೆಯು ವಿವಿಧ ವಿಷಯಗಳ ಮೇಲೆ ಎಂಟು ಪ್ರಮುಖ ಸಮಿತಿಗಳನ್ನು ಹೊಂದಿತ್ತು. ಸಾಮಾನ್ಯವಾಗಿ ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಅಥವಾ ಅಂಬೇಡ್ಕರ್ ಈ ಸಮಿತಿಗಳ ಅಧ್ಯಕ್ಷರಾಗಿದ್ದರು” ಎಂದು ಇದೆ.

ಆದರೆ ಪಠ್ಯಪುಸ್ತಕದ ಹೊಸ ಆವೃತ್ತಿಯು ಪ್ಯಾರಾಗ್ರಾಫ್‌ನ ಎರಡನೇ ಸಾಲನ್ನು ಹೀಗೆ ಪರಿಷ್ಕರಿಸಿದೆ- ”ಸಾಮಾನ್ಯವಾಗಿ, ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್ ಅಥವಾ ಬಿಆರ್ ಅಂಬೇಡ್ಕರ್ ಈ ಸಮಿತಿಗಳ ಅಧ್ಯಕ್ಷರಾಗಿದ್ದರು” ಎಂದು ಬರೆಯಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಅದೇ ಪಠ್ಯಪುಸ್ತಕದ ”ಸಂವಿಧಾನದ ತತ್ವಶಾಸ್ತ್ರ” ಎಂಬ ಇನ್ನೊಂದು ಅಧ್ಯಾಯದಲ್ಲಿ, ಜಮ್ಮು ಮತ್ತು ಕಾಶ್ಮೀರವು ಸ್ವಾಯತ್ತತೆಯ ಷರತ್ತಿನ ಮೇಲೆ ಭಾರತಕ್ಕೆ ಸೇರಿಕೊಂಡಿದೆ ಎಂಬ ಅಂಶದ ಉಲ್ಲೇಖವನ್ನು ತೆಗೆದುಹಾಕಲಾಗಿದೆ.

ಈ ಪಠ್ಯಪುಸ್ತಕದ ಹಿಂದಿನ ಆವೃತ್ತಿಗಳಲ್ಲಿ, ”ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವುದು ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಅದರ ಸ್ವಾಯತ್ತತೆಯನ್ನು ಕಾಪಾಡುವ ಬದ್ಧತೆಯ ಮೇಲೆ ಆಧಾರಿತವಾಗಿದೆ” ಎಂದು ಇದೆ.

ಆದರೆ ಪಠ್ಯಪುಸ್ತಕದ ಹೊಸ ಆವೃತ್ತಿಯಲ್ಲಿ, ಅದನ್ನು ಕೈ ಬಿಟ್ಟು, ”ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರ್ಕಾರವು ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 370 ರ ಅಡಿಯಲ್ಲಿ ರಾಜ್ಯತ್ವ ಮತ್ತು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.”

”ಜಮ್ಮು ಮತ್ತು ಕಾಶ್ಮೀರದ “ಶಾಶ್ವತ ನಿವಾಸಿಗಳು” ಎಂದು ವ್ಯಾಖ್ಯಾನಿಸಲಾದ ಜನರಿಗೆ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಖಾತ್ರಿಪಡಿಸುವ ಆರ್ಟಿಕಲ್ 35A ಅನ್ನು ಕೇಂದ್ರವು ರದ್ದುಗೊಳಿಸಿದೆ. ಅಂದಿನಿಂದ, ಈ ಪ್ರದೇಶವು ಕೇಂದ್ರ ಆಡಳಿತದಲ್ಲಿದೆ” ಎಂದು ಸೇರಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...