Homeಮುಖಪುಟಎನ್‌ಡಿಟಿವಿ ಪತ್ರಕರ್ತೆ ’ನಿಧಿ ರಾಝ್‌ದನ್’ ಹಾರ್ವರ್ಡ್ ವಿವಿ‍ಯಲ್ಲಿ ಪ್ರೊಫೆಸರ್ !

ಎನ್‌ಡಿಟಿವಿ ಪತ್ರಕರ್ತೆ ’ನಿಧಿ ರಾಝ್‌ದನ್’ ಹಾರ್ವರ್ಡ್ ವಿವಿ‍ಯಲ್ಲಿ ಪ್ರೊಫೆಸರ್ !

- Advertisement -
- Advertisement -

ಪತ್ರಕರ್ತೆ ನಿಧಿ ರಾಝ್‌ದನ್ ಎನ್‌ಡಿಟಿವಿ ತೊರೆಯಲು ನಿರ್ಧರಿಸಿದ್ದು, ಹಾರ್ವರ್ಡ್ ವಿಶ್ವವಿದ್ಯಾಲಯದ ಆಟ್ರ್ಸ್ ಎಂಡ್ ಸಾಯನ್ಸಸ್ ವಿಭಾಗದಲ್ಲಿ ಪತ್ರಿಕೋದ್ಯಮ ಅಸೋಸಿಯೇಟ್ ಫ್ರೊಫೆಸರ್ ಆಗಿ ಮುಂದೆ ಕಾರ್ಯನಿರ್ವಹಿಸುವುದಾಗಿ ನಿಧಿ ಹೇಳಿದ್ದಾರೆ.

‘ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ ಪ್ರಶಸ್ತಿ’ ಪಡೆದ ಪತ್ರಕರ್ತೆ ನಿಧಿ ರಾಝ್‌ದನ್ 21 ವರ್ಷಗಳ ಕಾಲ ಎನ್‌ಡಿಟಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ರಾಜಕೀಯ ಮತ್ತು ರಾಜಕೀಯೇತರ ಜಾಗತಿಕ ಸುದ್ದಿಗಳ ವರದಿಗಾರಿಕೆಯಲ್ಲಿ ಅನುಭವ ಹೊಂದಿದ್ದಾರೆ.

“ನಾನು ಎನ್‌ಡಿಟಿವಿಯಲ್ಲಿ 21 ವರ್ಷಗಳ ಅನುಭವದ ನಂತರ ನನ್ನ ವೃತ್ತಿಯ ದಿಕ್ಕನ್ನು ಬದಲಾಯಿಸಿ ಮುಂದುವರಿಯುತ್ತಿದ್ದೇನೆ. ಈ ವರ್ಷದ ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದ ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಪತ್ರಿಕೋದ್ಯಮವನ್ನು ಬೋಧಿಸುವ ಸಹಾಯಕ ಪ್ರಾಧ್ಯಾಪಕಳಾಗಿ ಹೊಸ ವೃತ್ತಿಯನ್ನು ಪ್ರಾರಂಭಿಸುತ್ತೇನೆ” ಎಂದು ನಿಧಿ ರಾಝ್‌ದನ್‌ ಹೇಳಿದ್ದಾರೆ.

“ಎನ್‌ಡಿಟಿವಿ ನನ್ನ ಮನೆಯಾಗಿದೆ. ಅದು ನನಗೆ ಎಲ್ಲವನ್ನೂ ಕಲಿಸಿದೆ. ನಾವು ಮಾಡುವ ಕೆಲಸ, ನಾವು ಒಳಗೊಳ್ಳುವ ಸುದ್ದಿಗಳು, ನಾವು ನಿಂತಿರುವ ಮೌಲ್ಯಗಳು, ಅದರಲ್ಲೂ ಎನ್‌ಡಿಟಿವಿಯ ವಸ್ತುನಿಷ್ಠತೆಯ ಬಗೆಗೆ ನಾನು ಹೆಮ್ಮೆಪಡುತ್ತೇನೆ” ಎಂದಿದ್ದಾರೆ.

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಎಡ ಬಲ ಮತ್ತು ಮಧ್ಯದ ಆಯಾಮಗಳಲ್ಲಿ ವರದಿಯನ್ನು ಮಾಡಿದ್ದಾರೆ. ಪ್ಯಾನಲ್ ಚರ್ಚೆಗಳನ್ನು ನಡೆಸಿರುವ ಇವರು, ಜಮ್ಮು ಕಾಶ್ಮೀರದಲ್ಲಿನ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇವರು ಮಾಡಿದ ವರದಿಗಾರಿಕೆಗೆ ಇತ್ತೀಚೆಗೆ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಪ್ರೆಸ್ ಇನ್‍ಸ್ಟಿಟ್ಯೂಟ್ ಇಂಡಿಯಾ ಪ್ರಶಸ್ತಿ ದಕ್ಕಿತ್ತು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾರತೀಯ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಾ “ನಮ್ಮಲ್ಲಿ ಪತ್ರಕರ್ತರಾಗಿ ನಮ್ಮ ಕೆಲಸ ಮಾಡುವವರನ್ನು ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ದುಃಖದ ಸಂಗತಿಯೆಂದರೆ, ಕೆಲವೇ ಕೆಲವರು ಸತ್ಯವನ್ನು ಮಾತನಾಡಲು ಸಿದ್ಧರಿದ್ದಾರೆ. ಉಳಿದಂತೆ ಪ್ರಭುತ್ವವನ್ನು ಪ್ರಶ್ನೆ ಮಾಡುವುದನ್ನು ಮಾಧ್ಯಮಗಳು ಮರೆತಿವೆ. ಬದಲಾಗಿ, ಸರ್ಕಾರದ ಕರಪತ್ರಗಳನ್ನು ಪುನರುತ್ಪಾದಿಸಲು ಮತ್ತು ಅದನ್ನು ಸುದ್ದಿಯಾಗಿ ರವಾನಿಸಲು ಆದ್ಯತೆ ನೀಡುತ್ತಿವೆ” ಎಂದು ನಿಧಿ ಹೇಳಿದ್ದರು.

ಎಡ, ಬಲ ಮತ್ತು ಮಧ್ಯಮ ಪಂಥೀಯ ವಾದಕ್ಕೆ ಸಂಬಂಧಿಸಿದ ಜುಲೈ 2017 ರಲ್ಲಿ ಪ್ರಕಟವಾದ ‘ದಿ ಐಡಿಯಾ ಆಫ್ ಇಂಡಿಯಾ’ ಎಂಬ ಶೀರ್ಷಿಕೆಯ ಪುಸ್ತಕವನ್ನು ಸಹ ಇವರು ಬರೆದಿದ್ದಾರೆ. ಈಜಿಪ್ಟಿನ ಕ್ರಾಂತಿ ಮತ್ತು ಇನ್ನೂ ಅನೇಕ ಪ್ರಮುಖ ವರದಿ ಮಾಡಿದವರಲ್ಲಿ ಭಾರತದ ನಿಧಿ ರಾಝ್‌ದನ್‌ ಮುಂಚೂಣಿಯಲ್ಲಿದ್ದರು.


ಓದಿ: ಪ್ರತಿಭಟನೆಗೆ ಕರೆ ನೀಡಿದ ಪತ್ರಕರ್ತ ಆಕಾರ್ ಪಟೇಲ್ ಟ್ವಿಟ್ಟರ್ ಖಾತೆ ಭಾರತದಲ್ಲಿ ನಿರ್ಬಂಧ!


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...