Homeಮುಖಪುಟಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಸಾವಿನ ಸುದ್ದಿ ಸುಳ್ಳು: ಪುತ್ರಿ ನಂದನ ಸೆನ್ ಸ್ಪಷ್ಟನೆ

ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಸಾವಿನ ಸುದ್ದಿ ಸುಳ್ಳು: ಪುತ್ರಿ ನಂದನ ಸೆನ್ ಸ್ಪಷ್ಟನೆ

- Advertisement -
- Advertisement -

ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ ನಿಧನರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಅವರ ಪುತ್ರಿ ನಂದನ ಸೆನ್ ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ಸ್ನೇಹಿತರೇ, ನಿಮ್ಮ ಕಾಳಜಿಗೆ ಧನ್ಯವಾದಗಳು ಆದರೆ ಇದು ಸುಳ್ಳು ಸುದ್ದಿ: ಬಾಬಾ ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ನಾವು ಕುಟುಂಬದೊಂದಿಗೆ ಅದ್ಭುತವಾದ ವಾರವನ್ನು ಕಳೆದಿದ್ದೇವೆ-ಕಳೆದ ರಾತ್ರಿ ನಾವು ವಿದಾಯ ಹೇಳಿದಾಗ ಅವರ ಅಪ್ಪುಗೆ ಯಾವಾಗಲೂ ಪ್ರಬಲವಾಗಿದೆ! ಅವರು ಹಾರ್ವರ್ಡ್‌ನಲ್ಲಿ ವಾರಕ್ಕೆ 2 ಕೋರ್ಸ್‌ಗಳನ್ನು ಕಲಿಸುತ್ತಿದ್ದಾರೆ, ಎಂದಿನಂತೆ ಕಾರ್ಯನಿರತರಾಗಿದ್ದಾರೆ!” ಎಂದು ತಿಳಿಸಿದ್ದಾರೆ.

ಅಮರ್ತ್ಯ ಸೇನ್ ಅವರು 1933ರ ನವೆಂಬರ್ 3 ರಂದು ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಜನಿಸಿದರು. ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 1998ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read