Homeಮುಖಪುಟಗೋಯೆಂಕಾ ವಿವಿಯಲ್ಲಿ ನೈಜೀರಿಯಾ- ಭಾರತ ವಿದ್ಯಾರ್ಥಿಗಳ ಹೊಡೆದಾಟ; ಎರಡು ಗುಂಪುಗಳ ಮೇಲೂ ಎಫ್‌ಐಆರ್‌

ಗೋಯೆಂಕಾ ವಿವಿಯಲ್ಲಿ ನೈಜೀರಿಯಾ- ಭಾರತ ವಿದ್ಯಾರ್ಥಿಗಳ ಹೊಡೆದಾಟ; ಎರಡು ಗುಂಪುಗಳ ಮೇಲೂ ಎಫ್‌ಐಆರ್‌

- Advertisement -
- Advertisement -

ಗುರುಗ್ರಾಮ: ಫುಟ್‌ಬಾಲ್ ಆಡುವಾಗ ಭಾರತೀಯ ಮತ್ತು ನೈಜೀರಿಯಾ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಜಿ.ಡಿ.ಗೋಯೆಂಕಾ ವಿಶ್ವವಿದ್ಯಾಲಯದ ಆವರಣದಲ್ಲಿ ಉದ್ವಿಗ್ನತೆ ಉಂಟಾಗಿದೆ.

ಕನಿಷ್ಠ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಉಭಯ ಗುಂಪುಗಳ ಮೇಲೂ ಎಫ್‌ಐಆರ್‌ ದಾಖಲಾಗಿದೆ. ಮತ್ತೊಂದೆಡೆ ವಿಶ್ವವಿದ್ಯಾಲಯವು ವಿಚಾರಣೆಯನ್ನು ಕೈಗೆತ್ತುಕೊಂಡಿದೆ. ಎಂಟು ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸ್ಥಳೀಯರಿಂದ ಕಿರುಕುಳ ಎದುರಾಗಿದೆ ಎಂದು ಆರೋಪಿಸಿರುವ ನೈಜೀರಿಯಾದ ವಿದ್ಯಾರ್ಥಿಗಳು ಕ್ಯಾಂಪಸ್ ತೊರೆಯಲು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ ವಿಶ್ವವಿದ್ಯಾನಿಲಯವು ಇದನ್ನು ನಿರಾಕರಿಸಿದೆ.

ರಾಯಭಾರ ಕಚೇರಿ ಮಧ್ಯಪ್ರವೇಶಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. “ನಮಗೆ ಸ್ಥಳೀಯರಿಂದ ಕಿರುಕುಳವಾಗುತ್ತಿದೆ. ನಿನ್ನೆ ಸಂಜೆ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಮತ್ತು ಫುಟ್‌ಬಾಲ್ ಮೈದಾನದಲ್ಲಿ ನಮ್ಮನ್ನು ಕ್ರೂರವಾಗಿ ಥಳಿಸಲಾಯಿತು. ನಾವು ಈಗ ದೆಹಲಿಗೆ ಬಂದು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದೇವೆ” ಎಂದು ರಬಿಯು ಎಂಬುವರು ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ನೈಜೀರಿಯಾದ ವಿದ್ಯಾರ್ಥಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಫಾರ್ಮಸಿ ವಿದ್ಯಾರ್ಥಿ ಸುಲ್ತಾನ್ ಖಾನ್ ಅವರು ಪ್ರತಿ ದೂರು ದಾಖಲಿಸಿದ್ದಾರೆ.

ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಧೀರೇಂದ್ರ ಸಿಂಗ್ ಪರಿಹಾರ್ ಪ್ರತಿಕ್ರಿಯಿಸಿ, “ಆಟಗಾರನನ್ನು ಬದಲಿಸುವ ಬಗ್ಗೆ ವಿದ್ಯಾರ್ಥಿಗಳು ವಾದಿಸಿದಾಗ ಶುಕ್ರವಾರ ವಿವಾದ ಉಂಟಾಯಿತು. ಸಮಸ್ಯೆ ಬಗೆಹರಿದಿತ್ತು. ಆದರೆ ಶನಿವಾರ ಮತ್ತೆ ಮರುಜೀವ ಪಡೆಯಿತು” ಎಂದು ತಿಳಿಸಿದ್ದಾರೆ.

“ಜಗಳ ನಡೆದು ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಎಂಟು ವಿದ್ಯಾರ್ಥಿಗಳಿಗೆ ದೀರ್ಘ ರಜೆ ತೆಗೆದುಕೊಳ್ಳಲು ಹೇಳಿದ್ದೇವೆ. ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದೇವೆ” ಎಂದಿದ್ದಾರೆ. ಈ ಹಿಂದೆಯೂ ನಮಾಜ್ ಮಾಡುವ ವಿಚಾರದಲ್ಲಿ ಫುಟ್ಬಾಲ್ ಮೈದಾನದಲ್ಲಿ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿತ್ತು.

ಭಾರತೀಯ ಮತ್ತು ನೈಜೀರಿಯಾ ವಿದ್ಯಾರ್ಥಿಗಳ ನಡುವೆ ಜಗಳ ನಡೆದ ಎರಡು ದಿನಗಳ ನಂತರ, ಜಿಡಿ ಗೋಯೆಂಕಾ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ತಬ್ಧವಾಗಿದೆ. ಈ ವಿಷಯದ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಲಾಯಿತು. ನೈಜೀರಿಯಾದ ಸರ್ಕಾರಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ರಾಜಕಾರಣದಲ್ಲಿ ದಲಿತರನ್ನು ಒಡೆದು ಆಳುವುದು ಸುಲಭವೇ?

ಪೊಲೀಸರ ಪ್ರಕಾರ ಕ್ಯಾಂಪಸ್‌ನಲ್ಲಿ ಫುಟ್‌ಬಾಲ್ ಪಂದ್ಯದ ವೇಳೆ ಶುಕ್ರವಾರ ನಡೆದ ಘರ್ಷಣೆಯಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ವಿಶ್ವವಿದ್ಯಾನಿಲಯದ ಸುಮಾರು 50 ನೈಜೀರಿಯನ್ ವಿದ್ಯಾರ್ಥಿಗಳು ಭಾರತೀಯ ವಿದ್ಯಾರ್ಥಿಗಳ ಕಿರುಕುಳವನ್ನು ಆರೋಪಿಸಿ ತಾತ್ಕಾಲಿಕವಾಗಿ ಕ್ಯಾಂಪಸ್ ತೊರೆದಿದ್ದಾರೆ ಎಂದು ವರದಿಯಾಗಿದೆ.

ವಿಶ್ವವಿದ್ಯಾನಿಲಯ ಆಡಳಿತವು ಅಂತಹ ಬೆಳವಣಿಗೆಯಾಗಿಲ್ಲ ಎಂದು ಹೇಳಿಕೆ ನೀಡಿದೆ. ಈ ವಿಷಯವನ್ನು ಗಮನಿಸಿ, ನೈಜೀರಿಯಾ ರಾಯಭಾರಿ ಕಚೇರಿಯ ತಂಡ ಶನಿವಾರ ರಾತ್ರಿ ವಿಶ್ವವಿದ್ಯಾನಿಲಯಕ್ಕೆ ತೆರಳಿ ನೈಜೀರಿಯಾದ ವಿದ್ಯಾರ್ಥಿಗಳೊಂದಿಗೆ ಘರ್ಷಣೆ ನಡೆಸಿದ ಭಾರತೀಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿದೆ.

“ದೆಹಲಿಯ ಸಮೀಪವಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನೈಜೀರಿಯಾದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿದೆ. 30,000 ನೈಜೀರಿಯನ್ ವಿದ್ಯಾರ್ಥಿಗಳು ಹಣ ಪಾವತಿಸಿ ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದರೆ, 50,000 ಭಾರತೀಯರು ಹಣ ಸಂಪಾದಿಸಲು ನೈಜೀರಿಯಾದಲ್ಲಿ ವಾಸಿಸುತ್ತಿದ್ದಾರೆ” ಎಂದು ಬರಹಗಾರ ಅಶೋಕ್ ಸ್ವೈನ್‌ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...