Homeಕರ್ನಾಟಕನಿಮಾನ್ಸ್‌‌ ನೇಮಕಾತಿ ಪ್ರಕಟಣೆ: ಮೇಲ್ಜಾತಿಗೆ ಶೇ.64ರಷ್ಟು ಹುದ್ದೆ ಸಿಗುವಂತೆ ಹಂಚಿಕೆ- ಆರೋಪ

ನಿಮಾನ್ಸ್‌‌ ನೇಮಕಾತಿ ಪ್ರಕಟಣೆ: ಮೇಲ್ಜಾತಿಗೆ ಶೇ.64ರಷ್ಟು ಹುದ್ದೆ ಸಿಗುವಂತೆ ಹಂಚಿಕೆ- ಆರೋಪ

50% ಜನಸಂಖ್ಯೆಗೆ ಕೇವಲ 9 ಹುದ್ದೆಗಳನ್ನು ನೀಡಿ, ಬೆರಳೆಣಿಯಷ್ಟಿರುವ ಜಾತಿಗೆ 16 ಹುದ್ದೆಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಬಂದಿದೆ.

- Advertisement -
- Advertisement -

ಬೆಂಗಳೂರಿನಲ್ಲಿರುವ ಪ್ರತಿಷ್ಟಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮಾನ್ಸ್‌‌) ನೀಡಿರುವ ನೇಮಕಾತಿ ಪ್ರಕಟಣೆಯು ಅನ್ಯಾಯದಿಂದ ಕೂಡಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಅನ್ಯಾಯ ಎಸಗುವಂತೆ ಮೀಸಲಾತಿ ಹಂಚಿಕೆ ಮಾಡಲಾಗಿದ್ದು, ಸ್ಪಶ್ಯ ಮೇಲ್ಜಾತಿಗಳಿಗೆ ಮುಖ್ಯವಾಗಿ ಬ್ರಾಹ್ಮಣರಿಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ. ಇದು ಸಂಘಪರಿವಾರದ ಸಾಮಾಜಿಕ ನ್ಯಾಯ ಎಂದು ಚಿಂತಕರು ಆರೋಪಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, “ಬೆಂಗಳೂರಿನಲ್ಲಿರುವ ಪ್ರತಿಷ್ಟಿತ ನಿಮಾನ್ಸ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸಮಾಡಲು, ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಇಂದು ನೋಟಿಫಿಕೇಶನ್ ಪ್ರಕಟವಾಗಿದೆ. ಇಲ್ಲಿ ಒಟ್ಟಾರೆ 25 ಹುದ್ದೆಗಳಿವೆ. ಇದರಲ್ಲಿ 11 ಹುದ್ದೆಗಳನ್ನು ಯುಆರ್‌‌ (unreserved) ಅಡಿ ನೀಡಲಾಗಿದೆ. ಅಂದರೆ ಜನರಲ್ ಕ್ಯಾಟಗರಿಯವರು ತೆಗೆದುಕೊಳ್ಳುತ್ತಾರೆ. ಈ ‘ಜನರಲ್’ನಲ್ಲಿ ಈ ಹುದ್ದೆಗಳನ್ನು ಯಾರು ಪಡೆಯುತ್ತಾರೆಂದು ವಿವರಿಸಬೇಕಿಲ್ಲ” ಎಂದು ತಿಳಿಸಿದ್ದಾರೆ.

“ಮಿಕ್ಕಂತೆ 5 ಪೋಸ್ಟ್‌ಗಳನ್ನು ಇಡಬ್ಲ್ಯೂಎಸ್‌ (ಆರ್ಥಿಕವಾಗಿ ಹಿಂದುಳಿದ ವರ್ಗ) ಮೀಸಲು ಮಾಡಲಾಗಿದೆ. ಅಂದರೆ ಮೇಲ್ಜಾತಿ ಮತ್ತು ಮೇಲ್ಜಾತಿ ‘ಬಡವರಿಗೆ’ ಒಟ್ಟು 16 ಹುದ್ದೆಗಳು, ಮಿಕ್ಕಂತೆ ಒಬಿಸಿಗೆಗಳಿಗೆ 5, ಎಸ್‌ಸಿಗೆ 3, ಮತ್ತು ಎಸ್‌ಟಿಗೆ 1 ಪೋಸ್ಟ್ ಅನ್ನು ನೀಡಲಾಗಿದೆ. ಅಂದರೆ ಒಟ್ಟು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಸೇರಿ 50% ಜನಸಂಖ್ಯೆಗೆ ಕೇವಲ 9 ಹುದ್ದೆಗಳು. ಹೇಗಿದೆ ಸಂಘಪರಿವಾರ ಸರ್ಕಾರದ ‘ಸಾಮಾಜಿಕ ನ್ಯಾಯ!?’ ಅಲ್ಲಿ ಜೀತ ಮಾಡುತ್ತಿರುವ, ಚೆಡ್ಡಿ ಹೊರುತ್ತಿರುವ ನಮ್ಮ ಎಸ್‌ಸಿ, ಎಸ್‌ಟಿ, ಒಬಿಸಿ ಗೇಟ್ ಕೀಪರ್‌ಗಳಿಗೆ ಈ ಸೂಕ್ಷ್ಮ ಅರ್ಥವಾದಂತಿಲ್ಲ. ಅಕಸ್ಮಾತ್ ಅರ್ಥವಾದರೂ ಬಾಯಿಗೆ ಲಕ್ವ ಬಡಿದವರಂತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿಂತಕರಾದ ಶ್ರೀಪಾದ್ ಭಟ್ ಅವರು ನಿಮಾನ್ಸ್‌‌ ನೇಮಕಾತಿಗೆ ಸಂಬಂಧಿಸಿದಂತೆ ಎದ್ದಿರುವ ಆಕ್ಷೇಪಗಳಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದರು. “ಇಡಬ್ಲ್ಯೂಎಸ್‌ ಅಡಿ ಬರುವ ಜಾತಿಗಳ ಅಧಿಕೃತ ಪಟ್ಟಿಯನ್ನೇ ಕರ್ನಾಟಕ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಇಡಬ್ಲ್ಯೂಎಸ್‌‌ ಹೇಗೆ ಕೊಡುತ್ತಾರೆ?” ಎಂದು ಪ್ರಶ್ನಿಸಿದರು.

“ರಾಜ್ಯದಲ್ಲಿ ಇಡಬ್ಲ್ಯೂಎಸ್‌ ಅಡಿ ಫಲಾನುಭವಿಗಳಾಗುವುದು ಬ್ರಾಹ್ಮಣರು ಮಾತ್ರ. ಉಳಿದಂತೆ ನಾಯರ್‌ಗಳು, ಮೊದಲಿಯಾರ್‌ಗಳು, ಕೋಮ್ಟ ಶೆಟ್ಟರು, ಮಾರ್ವಾಡಿಗಳು ಅರ್ಜಿ ಸಲ್ಲಿಸುವುದು ಅನುಮಾನ. ಹೀಗಾಗಿ ಇಡಬ್ಲ್ಯೂಎಸ್‌ನ ಐದು ಪೋಸ್ಟ್‌ಗಳನ್ನೂ ಬ್ರಾಹ್ಮಣರೇ ಪಡೆದುಕೊಳ್ಳುತ್ತಾರೆ” ಎಂದು ವಿವರಿಸಿದರು.

“ಇಡಬ್ಲ್ಯೂಎಸ್‌ಗೆ ನೀಡಿರುವ ಐದು ಪೋಸ್ಟ್‌ಗಳನ್ನು ಎಲ್ಲಿಂದ ಕಿತ್ತುಕೊಂಡಿದ್ದಾರೆ? ಹಿಂದೆ ಎಸ್‌ಸಿ, ಎಸ್‌ಟಿ, ಒಬಿಸಿ, ಜನರಲ್ ಕ್ಯಾಟಗರಿಗಳಿಗೆ ಎಷ್ಟು ಸ್ಥಾನಗಳು ಮೀಸಲಾಗಿದ್ದವು? ಇಡಬ್ಲ್ಯೂಎಸ್‌ಗಾಗಿ ಹೊಸ ಪೋಸ್ಟ್‌ಗಳನ್ನು ಸೃಷ್ಟಿ ಮಾಡಿದ್ದಾರಾ? ಅಥವಾ ಎಸ್‌ಸಿ, ಎಸ್‌ಟಿ, ಒಬಿಸಿಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡಿ ಇಡಬ್ಲ್ಯೂಎಸ್‌ ಕೋಟಾ ನೀಡಿದ್ದಾರಾ?- ಈ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಾಗಬೇಕು” ಎಂದು ಆಗ್ರಹಿಸಿದರು.

 ಇದನ್ನೂ ಓದಿರಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

“ಬ್ರಾಹ್ಮಣೇತರ ಜಾತಿಗಳ ಅಭ್ಯರ್ಥಿಗಳು ಕೂಡ ಜನರಲ್‌ ಕ್ಯಾಟಗರಿಯಲ್ಲಿ ಸ್ಪರ್ಧಿಸುತ್ತಾರೆ. ಆದರೆ ಸಂದರ್ಶನಗಳಲ್ಲಿ ಮೇಲ್ಜಾತಿ ವ್ಯಕ್ತಿಗಳೇ ಕೂತಿರುತ್ತಾರೆ. ಹೀಗಾಗಿ ಅನೇಕ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಜಾತಿಗಳ ವ್ಯಕ್ತಿಗಳನ್ನು ವ್ಯವಸ್ಥಿತಿವಾಗಿ ಹೊರಗೆ ಹಾಕಲಾಗುತ್ತದೆ. ತಾಂತ್ರಿಕ ಕಾರಣವನ್ನೋ, ಮತ್ಯಾವುದೋ ತಕರಾರರನ್ನೋ ತೆಗೆದು ಈಗಿರುವ 11 ಸ್ಥಾನಗಳೂ ಬ್ರಾಹ್ಮಣರಿಗೆ ಸಿಗುವಂತೆ ನೋಡಿಕೊಳ್ಳುತ್ತಾರೆ. ಇಡಬ್ಲ್ಯೂಎಸ್‌ ಮತ್ತು ಜನರಲ್ ಕ್ಯಾಟಗರಿ ಸೇರಿ 16 ಪೋಸ್ಟ್‌ಗಳನ್ನು ಬ್ರಾಹ್ಮಣರೇ ಪಡೆದುಕೊಳ್ಳುತ್ತಾರೆ” ಎಂದು ವಿಷಾದಿಸಿದರು.

ಚಿಂತಕರು ಆರೋಪಿಸುತ್ತಿರುವಂತೆ 25 ಪೋಸ್ಟ್‌ಗಳಲ್ಲಿ 16 ಹುದ್ದೆಗಳು ಬ್ರಾಹ್ಮಣರಿಗೆ ಹೋದರೆ ಶೇ. 64ರಷ್ಟು ಸ್ಥಾನಗಳು ಒಂದು ಜಾತಿಗೆ ಸಿಕ್ಕಂತಾಗುತ್ತದೆ. ಈಗ ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ಅಂಕಿ-ಅಂಶದ ಪ್ರಕಾರ ಶೇ. 2ರಷ್ಟಿರುವ ಬ್ರಾಹ್ಮಣರಿಗೆ 64ರಷ್ಟು ಅವಕಾಶ ನೀಡಿದಂತಾಗುತ್ತದೆ. ಒಂದು ವೇಳೆ ಇಡಬ್ಲೂಎಸ್‌ ಅಡಿ ಬರುವ ಇತರ ಸಮುದಾಯದಲ್ಲಿ ಯಾರಾದರೂ ಅರ್ಜಿ ಹಾಕಿದರೂ ಶೇ. 90ರಷ್ಟು ಫಲಾನುಭವಿಗಳು ಬ್ರಾಹ್ಮಣರೇ ಆಗಿರುತ್ತಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 50% ಜನಸಂಖ್ಯೆಗೆ ಕೇವಲ 9 ಹುದ್ದೆಗಳನ್ನು ನೀಡಿ, ಶೇ. 2ರಷ್ಟಿರುವ ಜಾತಿಗೆ 16 ಹುದ್ದೆಗಳನ್ನು ನೀಡಲಾಗುತ್ತಿದೆ ಎಂಬ ವಾದ ಮುನ್ನೆಲೆಗೆ ಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಅಹಿಂದ ವರ್ಗದವರು ಒಗ್ಗಟ್ಟಿನಿಂದ ಇಂತಹ ಅನ್ಯಾಯಗಳನ್ನು ಪ್ರತಿಬಟಿಸಬೇಕು.

  2. ಅಂದರೆ ದ್ವಾರಕಾನಾಥ್ ಪ್ರಕಾರ ಬ್ರಾಹ್ಮಣರನ್ನು ಬಿಟ್ಟರೆ ಬೇರೆಯವರಲ್ಲಿ ಪ್ರತಿಭೆ ಇಲ್ಲ ಹಾಗಾಗಿ ಜೆನರಲ್ ಕೆಟೊಗರಿಯ ಎಲ್ಲಾ ಹುದ್ದೆಗಳೂ ಬ್ರಾಹ್ಮಣರ ಪಾಲಾಗುತ್ತವೆ ಎನ್ನುವ ವಾದ ಎಷ್ಟು ಸಾರಿ? ಇದು ಬ್ರಾಹ್ಮಣ ಏತರರಿಗೆ ಮಾಡುವ ಅವಮಾನ ಅಲ್ಲವೇ?

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...