Homeಮುಖಪುಟಖಲಿಸ್ತಾನವೂ ಅಲ್ಲ, ಗಜವಾ-ಏ-ಹಿಂದ್‌ವೂ ಅಲ್ಲ ಹಾಗೂ ಹಿಂದೂ ರಾಷ್ಟ್ರವೂ ಅಲ್ಲ

ಖಲಿಸ್ತಾನವೂ ಅಲ್ಲ, ಗಜವಾ-ಏ-ಹಿಂದ್‌ವೂ ಅಲ್ಲ ಹಾಗೂ ಹಿಂದೂ ರಾಷ್ಟ್ರವೂ ಅಲ್ಲ

- Advertisement -
- Advertisement -

ಯಾರಿಗೆಲ್ಲ ಖಲಿಸ್ತಾನ್ ಬೇಕೋ, ಯಾರೆಲ್ಲ ಗಜವಾ-ಏ-ಹಿಂದ್‌ನ ಕನಸು ಕಾಣುತ್ತಾರೋ ಅಥವಾ ಯಾರು ಹಿಂದೂ ರಾಷ್ಟ್ರ ಮಾಡಲು ಬಯಸುತ್ತಾರೋ ಅವರಿಗೆ ಭಾರತದಲ್ಲಿ ಯಾವ ಜಾಗವೂ ಇಲ್ಲ. ಈ ಮೂರೂ ವಿಚಾರಧಾರೆಗಳು ಭಾರತದ ಸ್ವಧರ್ಮದ ವಿರುದ್ಧವಾಗಿವೆ. ಈ ದೇಶವು ಸ್ವಧರ್ಮದಲ್ಲಿ ನಂಬಿಕೆ ಇರಿಸುವ ಎಲ್ಲಾ ಜಾತಿ, ಜನಾಂಗ, ಶ್ರದ್ಧೆ, ಪಂಥ ಹಾಗೂ ಸಂಪ್ರದಾಯದವರಿಗೆ ಸೇರಿದ್ದಾಗಿದೆ ಎಂಬುದು ಭಾರತೀಯ ಗಣತಂತ್ರದ ಮೂಲ ಆಧಾರವಾಗಿದೆ. ಭಾರತ ದೇಶದಲ್ಲಿ ಹುಟ್ಟಿದ ಸಂಯೋಗ ಅಥವಾ ನಂಬಿಕೆಯ ಆಧಾರದ ಮೇಲೆ ಯಾರೂ ಮನೆಯೊಡೆಯ ಅಥವಾ ಯಾರೂ ಬಾಡಿಗೆದಾರರು ಆಗಲು ಸಾಧ್ಯವಿಲ್ಲ.

ಕೇವಲ ವಿಚಾರದ ಆಧಾರದ ಮೇಲೆ ನೋಡಿದರೆ ಈ ಮೂರು ವಿಚಾರಗಳು ಒಂದೇ ತೆರನಾಗಿವೆ. ಮೂರೂ ಸಾಂಸ್ಥಿಕ ಧರ್ಮ ಮತ್ತು ಸರಕಾರವನ್ನು ಜೋಡಿಸಿ ನೋಡುತ್ತವೆ ಹಾಗೂ ಇದು ಅತ್ಯಂತ ಅಪಾಯಕಾರಿಯಾದ ವಿಚಾರವಾಗಿದೆ. ಈ ಮೂರೂ ಒಂದು ಸಾಂಸ್ಥಿಕ ಧರ್ಮದ (ಸಿಖ್, ಇಸ್ಲಾಂ ಅಥವಾ ಹಿಂದೂ) ಅನುಯಾಯಿಗಳದ್ದೇ ಅಧಿಕಾರ ದೇಶದಲ್ಲೆಲ್ಲಾ ನಡೆಯಬೇಕು ಎಂದು ಬಯಸುತ್ತಾರೆ, ಅದು ಅನ್ಯಾಯ ಮಾತ್ರವಲ್ಲ, ಅಸಾಧ್ಯವೂ ಆಗಿದೆ. ಇಂದಿನ ಯುಗದಲ್ಲಿ ಭಾರತದಂತಹ ದೇಶದಲ್ಲಿ, ಅಥವಾ ದೇಶದ ಯಾವುದೇ ಪ್ರದೇಶದಲ್ಲಿ, ಯಾವುದೇ ಸಂಪ್ರದಾಯದ ಪ್ರಾಬಲ್ಯ ಸ್ಥಾಪಿಸುವ ಪ್ರಯತ್ನ ದೇಶದಲ್ಲಿ ಆಂತರಿಕ ಯುದ್ಧಕ್ಕೆ ಆಹ್ವಾನ ನೀಡಿದಂತಾಗುವುದು ಮತ್ತು ಅದರಿಂದ ಎಲ್ಲರ ಪಾಲಿಗೆ ದೊರಕುವುದು ಕೇವಲ ವಿನಾಶ ಮಾತ್ರ. ಮೂರೂ ವಿಚಾರಗಳು ತಮ್ಮ ವಿಚಾರವನ್ನು ಸಮರ್ಥಿಸಲು ಧರ್ಮ ಗ್ರಂಥಗಳ ಆಸರೆ ಪಡೆದುಕೊಳ್ಳುತ್ತವೆ, ಆದರೆ ಗುರು ಗ್ರಂಥ ಸಾಹಿಬ್, ಕುರಾನ್ ಶರೀಕ್ ಅಥವಾ ಹದೀಸ್ ಅಥವಾ ಹಿಂದೂ ಧರ್ಮ ಗ್ರಂಥಗಳಲ್ಲಿ ಇಂತಹ ಯಾವ ನಿರ್ದೇಶನವೂ ಕಾಣಿಸುವುದಿಲ್ಲ. ಮೂರೂ ವಿಚಾರಗಳು ಭಾರತೀಯ ಸಂವಿಧಾನದ ಮೂಲ ಭಾವನೆಯ ವಿರುದ್ಧವಾಗಿವೆ.

ಅಶೋಕ್ ಗೆಹ್ಲೋಟ್

ಈ ನಿಟ್ಟಿನಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನೀಡಿದ ಈ ಹೇಳಿಕೆ ಅತ್ಯಂತ ಸೂಕ್ತವಾಗಿದೆ; ’ಹಿಂದೂ ರಾಷ್ಟ್ರದ ಮಾತುಗಳನ್ನು ಆಡುವುದರಿಂದ ಖಲಿಸ್ತಾನದ ಬೇಡಿಕೆಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ.’ ಒಂದು ವೇಳೆ ದೇಶದ ಸರ್ವೋಚ್ಚ ಸ್ಥಾನಗಳಲ್ಲಿ ಆಸೀನರಾದ ಜನರು ಹಿಂದೂ ರಾಷ್ಟ್ರದ ಮಾತುಗಳನ್ನು ಆಡಬಹುದಾದರೆ ಇದರಿಂದ ಇನ್ನೊಂದು ಸಾಂಸ್ಥಿಕ ಧರ್ಮಾಧಾರಿತ ಸಂಪ್ರದಾಯವೊಂದು ಪ್ರಾಬಲ್ಯದ ಮಾತುಗಳನ್ನು ಆಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ ಕೆಲವು ಜನರು ಬಹುಮತದ ಆಧಾರದ ಮೇಲೆ ಹಿಂದೂ ರಾಷ್ಟ್ರದ ವಕಾಲತ್ತು ಮಾಡಿದರೆ ಇತರ ಜನರು ಬೇರಾವುದೋ ಒಂದು ಪ್ರದೇಶದಲ್ಲಿ ಸಿಖ್‌ರ ಪ್ರಾಬಲ್ಯ ಇರಬೇಕೆಂದು ವಕಾಲತ್ತು ಹೂಡುತ್ತಾರೆ. ಮತ್ತೊಬ್ಬರು ಮತ್ತೊಂದಾವುದೋ ಪ್ರದೇಶ ಅಥವಾ ಇಡೀ ದೇಶದಲ್ಲಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಅಥವಾ ಇನ್ನೊಂದಾವುದೋ ಮತದ ಅಧಿಪತ್ಯ ಸಾಧಿಸುವ ದಾವೆ ಹೂಡುತ್ತಾರೆ.

ಇದಕ್ಕೆ ಉತ್ತರವಾಗಿ ಖಲಿಸ್ತಾನದಿಂದ ದೇಶದ ವಿಭಜನೆಯಾಗುವುದು, ಹಿಂದೂ ರಾಷ್ಟ್ರ ದೇಶದ ವಿಭಜನೆ ಮಾಡುವುದಿಲ್ಲ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಯಾವುದೇ ದೇಶದ ಶಕ್ತಿಶಾಲಿ ಅಥವಾ ಬಹುಸಂಖ್ಯಾತವಾದ ವರ್ಗವು ದೇಶದ ವಿಭಜನೆಯ ವಿಚಾರಕ್ಕೆ ರಾಷ್ಟ್ರವಾದದ ಮುಖವಾಡ ಹಾಕಿರುತ್ತದೆ.

ಪಶ್ಚಿಮ ಪಾಕಿಸ್ತಾನದ ಪಂಜಾಬಿ ಸಮುದಾಯದ ಮೂಲಕ ಉರ್ದು ಹೇರುವ ಪ್ರಯತ್ನವೇ ಪಾಕಿಸ್ತಾನದ ವಿಭಜನೆ ಮಾಡಿತು. ಶ್ರೀಲಂಕಾದಲ್ಲಿ ಬಹುಸಂಖ್ಯಾತ ಸಿಂಹಳಿ ಸಮಾಜದ ಮೂಲಕ ಅಲ್ಪಸಂಖ್ಯಾತ ತಮಿಳು ಮತ್ತು ಹಿಂದೂ ಜನರ ಮೇಲೆ ತಮ್ಮ ಪ್ರಾಬಲ್ಯ ಸ್ಥಾಪಿಸುವ ಪ್ರಯತ್ನವೇ ಅಲ್ಲಿ ಪ್ರತ್ಯೇಕತೆಗೆ ಅಡಿಪಾಯ ಹಾಕಿತು. ಇದೇ ರೀತಿಯಲ್ಲಿ ಇಂದು ಭಾರತದಲ್ಲಿ ಹಿಂದೂ ರಾಷ್ಟ್ರದ ಆಗ್ರಹವು ದೇಶವನ್ನು ಮುರಿಯುವ ವಿಚಾರವಾಗಿದೆ.

ಇದನ್ನೂ ಓದಿ: ವಿವಾಹ ಕಾಯ್ದೆ; ಎಲ್‌ಜಿಬಿಟಿಕ್ಯುಐ ಸಮುದಾಯದ ಬೇಡಿಕೆ ಮತ್ತು ಭಾರತ ಸರ್ಕಾರದ ನಿರಾಶಾದಾಯಕ ಪ್ರತಿಕ್ರಿಯೆ

ಸೈದ್ಧಾಂತಿಕ ನೆಲೆಯನ್ನು ಬಿಟ್ಟು ಒಂದು ವೇಳೆ ರಾಜಕೀಯ ನೆಲೆಯಲ್ಲಿ ನೋಡಿದರೆ ಈ ಮೂರೂ ಬೇಡಿಕೆಗಳ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ. ವಾಸ್ತವ ಏನೆಂದರೆ ಭಾರತದಲ್ಲಿ ಗಜವಾ-ಏ-ಹಿಂದ್‌ದ ಕಲ್ಪನೆಗೆ ಯಾವುದೇ ನೆಲೆಯಿಲ್ಲ. ಭಾರತದ ಮೇಲೆ ಇಸ್ಲಾಂ ವಶಪಡಿಸಿಕೊಳ್ಳುವ ಕಲ್ಪನೆ ನೂರಾರು ವರ್ಷಗಳ ಹಿಂದೆ ಯಾವುದೋ ವಿದೇಶಿ ಆಕ್ರಮಣಕಾರಿಯ ಮನಸ್ಸಿನಲ್ಲಿ ಖಂಡಿತವಾಗಿಯೂ ಇದ್ದಿರಬಹುದು, ಆದರೆ ಕಾಲಕ್ರಮೇಣ ಇಂತಹ ಎಲ್ಲ ಕಲ್ಪನೆಗಳು ಈ ದೇಶದ ಮಣ್ಣಿನಲ್ಲಿ ಲೀನವಾದವು. ಭಾರತದ ಒಬ್ಬ ಸರಾಸರಿ ಮುಸಲ್ಮಾನನು ಈ ಪದವನ್ನೇ ಕೇಳಿರಲಿಕ್ಕಿಲ್ಲ, ಇದರ ಕನಸು ಕಾಣುವುದಂತೂ ದೂರದ ಮಾತು. ದೇಶದಲ್ಲಿ ಈ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ ಯಾವುದೇ ರಾಜಕೀಯ ದಳ, ಆಂದೋಲನ ಅಥವಾ ಗುಪ್ತ ಸಂಘಟನೆಯೂ ಇಲ್ಲ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತರಹದ ಮುಸ್ಲಿಂ ಸಾಂಪ್ರದಾಯಿಕ ಸಂಘಟನೆಗಳು ಅಥವಾ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರೂ ಗಜವಾ-ಏ-ಹಿಂದ್‌ದ ಹೆಸರನ್ನೂ ಉಚ್ಛರಿಸುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಿಂದ ನಡೆಸಲಾಗುತ್ತಿದ್ದ ಅಲ್‌ಕೈದ ಸಂಘಟನೆಯ ಒಂದು ವೆಬ್‌ಸೈಟ್ ಈ ವಿಚಾರವನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡುತ್ತಿದೆ, ಆದರೆ ತನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ಭಾರತದಲ್ಲಿ ಅದಕ್ಕೆ ಯಾವುದೇ ಸಫಲತೆ ಸಿಕ್ಕಿಲ್ಲ. ಒಂದು ವೇಳೆ ಯಾವುದೇ ಒಬ್ಬ ವ್ಯಕ್ತಿ ಈ ಸಿದ್ಧಾಂತವನ್ನು ಜನಪ್ರಿಯಗೊಳಿಸಿದ್ದಾನೆ ಎಂದರೆ ಅದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಅವರು 2022ರ ಚುನಾವಣೆಗೆ ಮುನ್ನ ತನ್ನ ಭಾಷಣದಲ್ಲಿ ಈ ಅಪಾಯವನ್ನು ಉಲ್ಲೇಖಿಸಿದರು, ಆದರೆ ಅದಕ್ಕೆ ಯಾವುದೇ ಪ್ರಮಾಣಗಳನ್ನು ನೀಡಲಿಲ್ಲ. ಒಂದು ವೇಳೆ ನೀವು ಗಜವಾ-ಏ-ಹಿಂದ್ ಎಂಬ ಪದಗುಚ್ಛವನ್ನು ಗೂಗಲ್ ಮಾಡಿದರೆ, ಇದರ ಉಲ್ಲೇಖ ಕೇವಲ ಆರ್‌ಎಸ್‌ಎಸ್‌ಗೆ ಸಂಬಂಧಿತ ಲಿಂಕ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆಯೇ ಹೊರತು ಯಾವುದೇ ಭಾರತೀಯ ಮುಸ್ಲಿಂ ವ್ಯಕ್ತಿ ಅಥವಾ ಸಂಘಟನೆಗಳ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಯೋಗಿ ಆದಿತ್ಯನಾಥ

ಖಲಿಸ್ತಾನದ ವಿಚಾರದ ಕೆಲವೇ ಕೆಲವು ಸಮರ್ಥಕರು ದೀರ್ಘ ಕಾಲದಿಂದ ಇದ್ದಾರೆ ಹಾಗೂ ಇತ್ತೀಚಿಗೆ ವಾರಿಸ್ ಏ ಪಂಜಾಬ್‌ನ ಹೆಸರಿನಲ್ಲಿ ಅಮೃತಪಾಲ್ ಸಿಂಗ್ ಮೂಲಕ ಈ ಬೇಡಿಕೆಯನ್ನು ಮತ್ತೊಮ್ಮೆ ಎತ್ತಲಾಗಿದೆ. ನಿಜ ಏನೆಂದರೆ, ಪಂಜಾಬ್‌ನ ಬಹುಸಂಖ್ಯಾತ ಸಿಖ್ ಜನಸಮೂಹವು ಖಲಿಸ್ತಾನದ ವಿಚಾರವನ್ನು ಎಂದೂ ಸಮರ್ಥನೆ ಮಾಡಿಕೊಂಡಿಲ್ಲ. ವಾಸ್ತವದಲ್ಲಿ, ಪಂಜಾಬಿನ ಮೇಲೆ ದೆಹಲಿ ದರಬಾರಿನ ದಾದಾಗಿರಿಯನ್ನು ಪಂಜಾಬಿನ ಜನರು ಇಷ್ಟಪಡುವುದಿಲ್ಲ; ಅವರು ಪಂಜಾಬಿನ ಅಸ್ಮಿತೆಗೆ ಗೌರವ ನೀಡುವ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಿಸುವ ಒಂದು ಫೆಡರಲ್ ಭಾರತವನ್ನು ನೋಡಲು ಬಯಸುತ್ತಾರೆ. ಆದರೆ ಅವರು ಖಲಿಸ್ತಾನದಂತಹ ಪ್ರಯೋಗಗಳಿಂದ ಬೇಸತ್ತಿದ್ದಾರೆ. ಪಂಜಾಬಿನಲ್ಲಿ ಗೊತ್ತಿದ್ದವರು ಹೇಳುವುದೇನೆಂದರೆ, ಅಮೃತಪಾಲ್‌ನಂತಹ ಪ್ರತ್ಯೇಕತಾವಾದಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎಂದು. ಈಗ ಅವರ ಹಿಂಬಾಲಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.

ಆದರೆ ಇಂತಹ ಯಾವುದೇ ಕ್ರಮವನ್ನು ಹಿಂದೂ ರಾಷ್ಟ್ರದ ಮಾತುಗಳನ್ನು ಆಡುವವರ ಮೇಲೆ ಕೈಗೊಳ್ಳಲಾಗುವುದೇ? ಗಜವಾ-ಏ-ಹಿಂದ್‌ನ ಮಾತಂತೂ ಯಾರೂ ಆಡುವುದಿಲ್ಲ, ಖಲಿಸ್ತಾನದ ಮಾತುಗಳನ್ನು ಮೆತ್ತಗೆ ಅಲ್ಲೊಮ್ಮೆ ಇಲ್ಲೊಮ್ಮೆ ಆಡಲಾಗುತ್ತದೆ. ಆದರೆ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಬಹಿರಂಗವಾಗಿ ಘೋಷಣೆ ಮಾಡಲಾಗುತ್ತದೆ, ಅಲ್ಪಸಂಖ್ಯಾತರ ಮಾರಣಹೋಮ ಮಾಡುವ ಬೆದರಿಕೆಗಳನ್ನು ಹಾಕಲಾಗುತ್ತದೆ, ಸಮ್ಮೇಳನಗಳನ್ನು ಮಾಡಿ ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ ಮಾಡಲಾಗುತ್ತದೆ. ಹಾಗೂ ಪೊಲೀಸ್ ವ್ಯವಸ್ಥೆ ಇದನ್ನು ಕುಂತಲ್ಲೇ ಕುಳಿತು ನೋಡುತ್ತದೆ. ಇದಷ್ಟೇ ಅಲ್ಲ, ದೇಶದ ಸರ್ವೋನ್ನತ ಸ್ಥಾನಗಳಲ್ಲಿ ಆಸೀನರಾದ ಜನರು ಈ ವಿಚಾರಕ್ಕೆ ತಮ್ಮ ಆಶೀರ್ವಾದ ನೀಡುತ್ತಾರೆ. ಈಗ ನೀವೇ ಯೋಚಿಸಿ, ದೇಶಕ್ಕೆ ನಿಜವಾದ ಅಪಾಯ ಖಲಿಸ್ತಾನದ ವಿಚಾರದಿಂದ ಇದೆಯೇ, ಗಜವಾ-ಏ-ಹಿಂದ್‌ನಿಂದ ಇದೆಯಾ ಅಥವಾ ಹಿಂದೂ ರಾಷ್ಟ್ರದಿಂದ ಇದೆಯಾ? ಹಿಂದೂ ರಾಷ್ಟ್ರದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಖಾಲಿಸ್ತಾನಿಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆಯೇ ಹಾಗೂ ಗಜವಾ-ಏ-ಹಿಂದ್‌ನಂತಹ ಅಸ್ತಿತ್ವದಲ್ಲೇ ಇರದ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆಯೇ? ಭಾರತದಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ಈ ಪ್ರಶ್ನೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. To counter two neighbouring Islamic countries we have to declare india as a Hindu rastra. Hindu rastra means Khalistha too. Hindu rastra means secular country. Hindustan means Hindurastea .
    The real problem is only caste system in India.
    This problem can be resolved if and only if every Indian citizen clean public streets and public toilets at least two hours per month.
    The next problems is Islam.
    We love muslims but not Mohammed Quran and Islam.
    Mohammed Quran and Islam hates khafirs and other religion. Otherwise we would have temples and churches and monasteries in mecca and madeena .
    This problem can be resolved if and only if we could build temples and churches and monasteries in mecca and madeena.
    As far as Christan is concern no problem.

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...