Homeಮುಖಪುಟ'ಮರಾಠ ಸಮುದಾಯಕ್ಕಿಂತ ಯಾರೂ ದೊಡ್ಡವರಲ್ಲ..'; ಮಹಾರಾಷ್ಟ್ರ ಸಿಎಂ-ಡಿಸಿಎಂ ವಿರುದ್ಧ ಜಾರಂಗೆ ವಾಗ್ದಾಳಿ

‘ಮರಾಠ ಸಮುದಾಯಕ್ಕಿಂತ ಯಾರೂ ದೊಡ್ಡವರಲ್ಲ..’; ಮಹಾರಾಷ್ಟ್ರ ಸಿಎಂ-ಡಿಸಿಎಂ ವಿರುದ್ಧ ಜಾರಂಗೆ ವಾಗ್ದಾಳಿ

- Advertisement -
- Advertisement -

ಮರಾಠಾ ಮೀಸಲಾತಿಗಾಗಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ನಡೆಸುತ್ತಿರುವ ಆಂದೋಲನದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಗಣಿಸಿ, ಜಿಲ್ಲಾಡಳಿತ ಹೊರಡಿಸಿದ ಆದೇಶ ಹೊರಡಿಸಿದ್ದು, ಮಹಾರಾಷ್ಟ್ರದ ಜಲ್ನಾ, ಬೀಡ್ ಮತ್ತು ಛತ್ರಪತಿ ಸಂಭಾಜಿನಗರ ಜಿಲ್ಲೆಗಳಲ್ಲಿ ಇಂಟರ್ನೆಟ್ ನಿಷೇಧದ ಜೊತೆಗೆ ಕರ್ಫ್ಯೂ ವಿಧಿಸಲಾಗಿದೆ.

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮುಂಬೈಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಮರಾಠ ಕೋಟಾ ಮೀಸಲಾತಿ ಪರ ಹೋರಾಟಗಾರ ಮನೋಜ್ ಜಾರಂಗೆ ಭಾನುವಾರ ಘೋಷಿಸಿದ್ದಾರೆ.

ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಲ್ನಾದ ಅಂತರವಾಲಿ ಸಾರತಿ ಗ್ರಾಮದಿಂದ ಅವರು ಮುಂಬೈಗೆ ಹೋಗದಂತೆ ತಡೆಯಲು ಪೊಲೀಸರು ಸಜ್ಜಾಗಿದ್ದಾರೆ. ಭಾರೀ ಜನಸಂದಣಿಯಿಂದಾಗಿ ಧುಲೆ-ಮುಂಬೈ ಹೆದ್ದಾರಿ ಮತ್ತು ಇತರ ಹತ್ತಿರದ ಪ್ರದೇಶಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಮನ್ನೆಚ್ಚರಿಕೆ ಕ್ರಮವಾಗಿ, ಕಾನೂನು ಸುವ್ಯವಸ್ಥೆಯನ್ನು ಪರಿಗಣಿಸಿ ಕರ್ಫ್ಯೂ ವಿಧಿಸಲಾಗಿದೆ.

ಸರ್ಕಾರಿ ಕಚೇರಿಗಳು, ಶಾಲೆಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ, ಹಾಲು ವಿತರಣೆ, ಮಾಧ್ಯಮ ಮತ್ತು ಆಸ್ಪತ್ರೆಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಜಾರಂಗೆ ಭಾನುವಾರ ರಾತ್ರಿ ಅಂತರವಾಲಿ ಸಾರತಿಯಿಂದ ಹೊರಟು ಸಮೀಪದ ಭಂಬೇರಿ ಗ್ರಾಮಕ್ಕೆ ಬಂದರು.

ಆದರೆ, ಸೋಮವಾರ ಬೆಳಗ್ಗೆ ಪ್ರತಿಭಟನಾ ನಿರತ ಕಾರ್ಯಕರ್ತರು ಅಂತರವಾಲಿ ಸಾರಥಿಗೆ ತೆರಳಿ ಚಿಕಿತ್ಸೆ ಪಡೆಯಲಾರಂಭಿಸಿದರು. ಈ ಮಧ್ಯೆ, ಜಲ್ನಾದಲ್ಲಿ ಎಂಎಸ್ಆರ್‌ಟಿಸಿ ಬಸ್ಸು ಸುಟ್ಟುಹೋದ ಕಾರಣ, ಸದ್ಯಕ್ಕೆ ಸೇವೆಗಳನ್ನು ಬಂದ್ ಮಾಡಲಾಗಿದೆ.

ಕಳೆದ ಮಂಗಳವಾರ ನಡೆದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಹಾರಾಷ್ಟ್ರ ಶಾಸಕಾಂಗವು ಮರಾಠರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ವರ್ಗದಡಿಯಲ್ಲಿ ಶೇ.10 ಪ್ರತಿಶತ ಮೀಸಲಾತಿಯನ್ನು ಒದಗಿಸುವ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಆದರೆ, ಒಬಿಸಿ ಅಡಿಯಲ್ಲಿ ಸಮುದಾಯಕ್ಕೆ ಕೋಟಾದ ಬೇಡಿಕೆಗೆ ಜಾರಂಗೆ ದೃಢವಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಾರಂಗೆ, ‘ನಾನು ಅದನ್ನು ಕೇಳಿಲ್ಲ. ಆದರೆ ಮರಾಠ ಸಮುದಾಯದ ಸಂಬಂಧಿಕರ (ಮರಾಠರ) ಕೋಟಾದ ಅಧಿಸೂಚನೆಯನ್ನು ಏಕೆ ಜಾರಿಗೊಳಿಸಲಿಲ್ಲ ಎಂದು ಅವರು ಹೇಳಬೇಕು. ನಾನು ಅವರನ್ನು ತುಂಬಾ ಗೌರವಿಸುತ್ತೇನೆ; ಅವರು ಹೀಗೆಲ್ಲಾ ಮಾಡಬಾರದು’ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಲ್ಲಿ ಮನವಿ ಮಾಡಿದರು. ‘ಮರಾಠ ಸಮುದಾಯಕ್ಕಿಂತ ಯಾರೂ ದೊಡ್ಡವರಲ್ಲ’ ಎಂದು ಜಾರಂಗೆ ಹೇಳಿದರು.

‘ಮರಾಠರ ಅಧಿಸೂಚನೆಯನ್ನು ಜಾರಿಗೊಳಿಸುವುದು ಅವರ (ಶಿಂಧೆ) ಜವಾಬ್ದಾರಿಯಾಗಿದೆ ಮತ್ತು ಕುಂಬಿ ಜಾತಿಯ ಪ್ರಮಾಣಪತ್ರಗಳನ್ನು ನೀಡಲು (ನಿಜಾಮ್ ರಾಜ್ಯ, ಸತಾರಾ) ಗೆಜೆಟ್ ಅನ್ನು ಪುರಾವೆಯಾಗಿ ತೆಗೆದುಕೊಳ್ಳುವುದನ್ನು ಪರಿಗಣಿಸಿ, ಪ್ರಮಾಣಪತ್ರಗಳ ವಿತರಣೆಯನ್ನು ನಿಲ್ಲಿಸಲಾಗಿದೆ’ ಎಂದರು.

ಸರ್ಕಾರದ ವಿರುದ್ಧ ಮತ್ತೆ ಮತ್ತೆ ಪ್ರತಿಭಟನೆ ನಡೆಸುತ್ತಿರುವವರು ನಮ್ಮ ತಾಳ್ಮೆ ಪರೀಕ್ಷಿಸಬಾರದು, ಅವರು ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಬಾರದು’ ಎಂದು ಸಿಎಂ ಶಿಂಧೆ ಭಾನುವಾರ ಹೇಳಿದ್ದಾರೆ.

ಜಾರಂಗೆ ಅವರ ಭಾಷಣವು ಸಾಮಾನ್ಯವಾಗಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಬಳಸುವ ಸ್ಕ್ರಿಪ್ಟ್‌ನಂತೆ ಏಕೆ ಕಾಣುತ್ತದೆ ಎಂದು ಅವರು ಆಶ್ಚರ್ಯಪಟ್ಟರು.

ಸಿಎಂ ಹೆಳಿಕೆಗೆ ಪ್ರತಿಕ್ರಿಯಿಸಿರುವ ಜಾರಂಗೆ, ‘ನಾನು ಅವರನ್ನು (ಸಿಎಂ ಶಿಂಧೆ) ಈಗಲೂ ಗೌರವಿಸುತ್ತೇನೆ. ನಮ್ಮ ಜಾತಿಯೇ ನಮ್ಮ ‘ಸ್ಕ್ರಿಪ್ಟ್’, ನೀವು ನಿಜವಾದ ಮುಖ್ಯಮಂತ್ರಿ ಎಂದು ನಮ್ಮ ಭಾವನೆ. ನಾನು ಪ್ರಾಮಾಣಿಕನಿದ್ದೇನೆ ಮತ್ತು ನನಗೆ ಹೆಚ್ಚು ಮಾತನಾಡಲು ಬಿಡುವುದಿಲ್ಲ. ನಾನು ಮುಂಬೈಗೆ ಬರುತ್ತಿದ್ದೇನೆ, ನಮಗೆ ಮೋಸ ಮಾಡುತ್ತಿದ್ದರೆ ನಾವು ಏನು ಹೇಳಬೇಕು? ಮೂವರು (ಶಿಂಧೆ, ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್) ತಮ್ಮ ರಾಜಕೀಯಕ್ಕಾಗಿ ಮರಾಠ ಸಮುದಾಯವನ್ನು ಕೊಲ್ಲಲು ಬಯಸುತ್ತಾರೆಯೇ? ಮರಾಠ ಸಮುದಾಯವು ಈಗಲೂ ಶಿಂಧೆಯ ಪರವಾಗಿ ಮಾತನಾಡುತ್ತಾರೆ ಮತ್ತು ಅವರು ಹಾಗೆಲ್ಲಾ ಕೇಳಬಾರದು’ ಎಂದು ಅವರು ಹೇಳಿದರು.

‘ಜನರನ್ನು ಮೂರ್ಖರನ್ನಾಗಿಸಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು ಸರ್ಕಾರದ ಸಂಸ್ಕೃತಿಯೇ’ ಎಂದು ಕಾರ್ಯಕರ್ತ ಪ್ರಶ್ನಿಸಿದರು. ‘ಮರಾಠಾ ಕೋಟಾ ವಿಚಾರದಲ್ಲಿ ಸರ್ಕಾರ ಏನು ಮಾಡಿದೆ ಎಂಬುದನ್ನು ತಿಳಿಸಬೇಕು’ ಎಂದು ಸವಾಲು ಹಾಕಿದರು.

‘ಅವರು ಗೆಜೆಟ್ ತೆಗೆದುಕೊಂಡಿಲ್ಲ ಮತ್ತು ಮರಾಠವಾಡದಲ್ಲಿ ಪತ್ತೆಯಾದ ದಾಖಲೆಗಳ ಡೇಟಾವನ್ನು ನೀಡಿಲ್ಲ. ಪತ್ತೆಯಾದ ದಾಖಲೆಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶಿಸಲಾಗಿಲ್ಲ’ ಎಂದು ಅವರು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಫಡ್ನವೀಸ್, ಜಾರಂಗೆಯ ಹಿಂದಿರುವ ಜನರ ಬಗ್ಗೆ ರಾಜ್ಯ ಸರ್ಕಾರಕ್ಕೆ ನ್ಯಾಯಯುತವಾದ ಕಲ್ಪನೆ ಇದೆ, ಸೂಕ್ತ ಸಮಯದಲ್ಲಿ ವಿವರಗಳು ಹೊರಬರುತ್ತವೆ’ ಎಂದು ಹೇಳಿದರು.

ಜಾರಂಗೆ ಅವರು ಫಡ್ವೀಸ್ ಬಂಗಲೆ ಎದುರು ಪ್ರತಿಭಟನೆ ನಡೆಸಲು ಮುಂಬೈಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಇದು ಉಪ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸವಾಗಿದ್ದು, ಯಾವುದೇ ರೀತಿಯ ಕೆಲಸವಿರುವವರು ಭೇಟಿ ನೀಡಬಹುದು’ ಎಂದು ಹೇಳಿದರು.

ಇದನ್ನೂ ಓದಿ; ಮರಾಠ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆಗೆ ಕರೆಕೊಟ್ಟ ಮನೋಜ್ ಜಾರಂಗೆ; ಜಲ್ನಾ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...