Homeಅಂತರಾಷ್ಟ್ರೀಯಕ್ಯೂಬಾದ ವೈದ್ಯಕೀಯ ತಂಡಕ್ಕೆ ’ನೋಬೆಲ್ ಶಾಂತಿ’ ಪ್ರಶಸ್ತಿ ನೀಡುವಂತೆ ಪ್ರತಿಪಾದನೆ

ಕ್ಯೂಬಾದ ವೈದ್ಯಕೀಯ ತಂಡಕ್ಕೆ ’ನೋಬೆಲ್ ಶಾಂತಿ’ ಪ್ರಶಸ್ತಿ ನೀಡುವಂತೆ ಪ್ರತಿಪಾದನೆ

ಕ್ಯೂಬಾದ ವೈದ್ಯಕೀಯ ನೆರವನ್ನು ತಿರಸ್ಕರಿಸುವಂತೆ ಅಮೇರಿಕಾ ಕರೆನೀಡಿ ಅಂತರಾಷ್ಟ್ರೀಯವಾಗಿ ವಿವಾದಕ್ಕೊಳಗಾಗಿತ್ತು

- Advertisement -
- Advertisement -

ಕೊರೊನಾ ವಿರುದ್ಧದ ಹೋರಾಟಕ್ಕಾಗಿ 20 ಕ್ಕೂ ಹೆಚ್ಚು ದೇಶಗಳಲ್ಲಿ ನಿಯೋಜಿಸಲಾಗಿರುವ ಕ್ಯೂಬಾದ ವೈದ್ಯಕೀಯ ದಳವಾದ ’ಹೆನ್ರಿ ರೀವ್‌’‌ಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಂತೆ ಫ್ರೆಂಚ್ ಸಂಘ ಕ್ಯೂಬಾ ಲಿಂಡಾ ಪ್ರತಿಪಾದಿಸಿದೆ.

ಕೊರೊನಾ ಸಾಂಕ್ರಮಿಕ ಹರಡುತ್ತಿರುವಾಗ ಇತರ ದೇಶಗಳಿಗೆ ತನ್ನ ವೈದ್ಯಕೀಯ ದಳವನ್ನು ಕಳುಹಿಸಿದ ಕ್ಯೂಬಾ ದೇಶವನ್ನು ವಿಶ್ವದಾದ್ಯಂತ ಜನರು ಅಭಿನಂಧಿಸಿದ್ದರು. ವೈದ್ಯಕೀಯ ನೆರವಿಗಾಗಿ ಕ್ಯೂಬಾ ಈ ಹಿಂದೆಯೂ ತನ್ನ ತಂಡವನ್ನು ಬೇರೆ ಬೇರೆ ಸಂದರ್ಭದಲ್ಲಿ ಕಳುಹಿಸಿತ್ತು.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಕ್ಯೂಬಾ ತನ್ನ ಮೊದಲ ಕಾರ್ಯಾಚರಣೆಯನ್ನು ಕೊರೊನಾ ಪೀಡಿತ ಪ್ರದೇಶವಾದ ಇಟಲಿಯ ಲೊಂಬಾರ್ಡಿಗೆ ಕಳುಹಿಸಿತ್ತು. ಇಟಲಿಯ ನಂತರ, ವೆನಿಜುವೆಲಾ, ನಿಕರಾಗುವಾ, ಬೆಲೀಜ್, ಸುರಿನಾಮ್, ಡೊಮಿನಿಕಾ, ಸೇಂಟ್ ಲೂಸಿಯಾ, ಮೆಕ್ಸಿಕೊ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಆಂಟಿಗುವಾ ಮತ್ತು ಬಾರ್ಬುಡಾ, ಜಮೈಕಾ, ಹೊಂಡುರಾಸ್, ಗ್ರೆನಡಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಬಾರ್ಬಡೋಸ್, ಹೈಟಿ, ಅಂಡೋರಾ, ಅಂಗೋಲಾ, ಟೋಗೊ, ಸೇಂಟ್ ಥಾಮಸ್ ಮತ್ತು ಪ್ರಿನ್ಸ್, ಕತಾರ್, ಕೇಪ್ ವರ್ಡೆ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳಿಗೆ ನರವಿಗಾಗಿ ತನ್ನ ವೈದ್ಯಕೀಯ ದಳವನ್ನು ಕಳುಹಿಸಿದೆ.


ಇದನ್ನೂ ಓದಿ: ಕ್ಯೂಬಾದ ವೈದ್ಯರು ಜಗತ್ತಿನ ಅತ್ಯುತ್ತಮ ವೈದ್ಯರಾಗಿದ್ದು ಹೇಗೆ?


ಕ್ಯೂಬಾ ಕ್ರಾಂತಿಕಾರಿ ಹಾಗೂ ಮಾಜಿ ಅಧ್ಯಕ್ಷರಾದ ಫಿಡೆಲ್ ಕ್ಯಾಸ್ಟ್ರೊ ಕ್ಯೂಬಾದ ವೈದ್ಯರನ್ನು ಕ್ಯೂಬಾದ “ಬಿಳಿ ಕೋಟುಗಳ ಸೈನ್ಯ” ಎಂದು ವ್ಯಾಖ್ಯಾನಿಸಿದ್ದರು. ಹಲವಾರು ವರ್ಷಗಳಿಂದ ಈ ಸೈನ್ಯವು ಸಾರ್ಸ್, ಎಬೋಲಾ, ಕಾಲರಾ ಮುಂತಾದ ಮಾರಣಾಂತಿಕ ವೈರಸ್‌ಗಳ ವಿರುದ್ದ ಹೋರಾಡಲು ಹಲವಾರು ದೇಶಗಳಿಗೆ ಸಹಾಯ ಮಾಡಿತ್ತು.

ಕ್ಯೂಬಾದ ಹೆನ್ರಿ ರೀವ್ ಅಂತರಾಷ್ಟ್ರೀಯ ವೈದ್ಯಕೀಯ ದಳ 2005 ಮತ್ತು 2017 ರ ನಡುವೆ 21 ದೇಶಗಳಲ್ಲಿ 3.5 ಮಿಲಿಯನ್ ಜನರಿಗೆ ಸಹಾಯ ಮಾಡಿದೆ.

ಕ್ಯೂಬನ್ ಕ್ರಾಂತಿಯ ಆರಂಭಿಕ ದಿನಗಳಿಂದಲೂ, ನಾಯಕ ಫಿಡೆಲ್ ಕ್ಯಾಸ್ಟ್ರೊ ದೇಶವನ್ನು ನಿರ್ಮಿಸುವಲ್ಲಿ ಸಾರ್ವತ್ರಿಕ ಮುಕ್ತ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣವು ಪ್ರಮುಖ ತಂತ್ರವಾಗಿದೆ ಎಂದು ನಂಬಿದ್ದರು. ಕ್ಯೂಬಾದಲ್ಲಿ ಅಮೆರಿಕಾಗಿಂತ ತಲಾ ಮೂರು ಪಟ್ಟು ಹೆಚ್ಚು ವೈದ್ಯರಿದ್ದಾರೆ.

ಕ್ಯೂಬಾದ ಆರೋಗ್ಯ ಮಂತ್ರಿ ಜೋಸ್ ಏಂಜಲ್ ಪೋರ್ಟಲ್ ಮಿರಾಂಡಾ ಒಂದು ತಿಂಗಳ ಹಿಂದೆ ಟ್ವೀಟ್ ಮಾಡಿ ““ಕ್ಯೂಬಾ ಹಲವು ಬಾರಿ ಸಹಾಯಕ್ಕೆ ಕೈ ಚಾಚಿದೆ ಆದರೆ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಬಾರಿ ಸಹಾಯ ಮಾಡಿದ್ದು ಇದು ಮೊದಲ ಬಾರಿಯಗಿದೆ. ಕಳೆದ ವಾರದಲ್ಲಿ ಹೆನ್ರಿ ರೀವ್ ಬ್ರಿಗೇಡ್ ಪ್ರತಿ ಸೂರ್ಯೋದಯದೊಂದಿಗೆ ಹೊರಟಿದೆ. ಹೀಗಾಗಿದ್ದು ಇದುವೇ ಮೊದಲು, ಈಗಾಗಲೇ ಒಟ್ಟು 11 ಬಾರಿ ಅದು ಇಲ್ಲಿಂದ ಹೊರಟಿದೆ”

ಕ್ಯೂಬಾದ ವೈದ್ಯಕೀಯ ನೆರವನ್ನು ತಿರಸ್ಕರಿಸುವಂತೆ ಅಮೇರಿಕಾ ಕರೆನೀಡಿ ಅಂತರಾಷ್ಟ್ರೀಯವಾಗಿ ವಿವಾದಕ್ಕೊಳಗಾಗಿತ್ತು. ಜಗತ್ತು ಒಗ್ಗಟ್ಟಿನಲ್ಲಿ ನಿಲ್ಲಬೇಕಾದ ಈ ಕಾಲದಲ್ಲಿ, ‘ಬಿಳಿ ಕೋಟುಗಳ ಸೈನ್ಯ’ ಮಾಡಿದ ಮಾನವೀಯ ಕಾರ್ಯಗಳು ಮಹತ್ವದ್ದಾಗಿದೆ ಎಂದು ಅಂತರಾಷ್ಟೀಯ ಸಮುದಾಯ ಅಮೆರಿಕಾಕ್ಕೆ ತಿರುಗೆಟು ನೀಡಿತ್ತು.


ಇದನ್ನೂ ಓದಿ: ಕ್ಯೂಬಾದ ವೈದ್ಯಕೀಯ ಸಹಾಯ ತಿರಸ್ಕರಿಸುವಂತೆ ಹಲವು ದೇಶಗಳಿಗೆ ಅಮೆರಿಕದ ಒತ್ತಡ


ಇದೇ ಸುದ್ದಿಯನ್ನು ಇನ್ನಷ್ಟು ವಿಸ್ತಾರವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...