Homeಮುಖಪುಟಕೋವಿಡ್-19 ಲಸಿಕೆ: ಕ್ಯಾಟಲಿನ್ ಕಾರಿಕೊ, ಡ್ರ್ಯೂ ವೈಸ್‌ಮನ್‌​​ಗೆ ವೈದ್ಯಕೀಯ ನೊಬೆಲ್ ಪುರಸ್ಕಾರ

ಕೋವಿಡ್-19 ಲಸಿಕೆ: ಕ್ಯಾಟಲಿನ್ ಕಾರಿಕೊ, ಡ್ರ್ಯೂ ವೈಸ್‌ಮನ್‌​​ಗೆ ವೈದ್ಯಕೀಯ ನೊಬೆಲ್ ಪುರಸ್ಕಾರ

- Advertisement -
- Advertisement -

ಕೋವಿಡ್ -19 ವಿರುದ್ಧ ಹೋರಾಡಲು ಮೊದಲ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್‌ಮನ್ ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರ ದೊರೆತಿದೆ.

ವಿಜ್ಞಾನ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ’ ಎಂದೇ ಕರೆಯಲಾಗುವ ಈ ಪ್ರಶಸ್ತಿಯ ಆಯ್ಕೆಯನ್ನು ಸ್ವೀಡನ್‌ನಲ್ಲಿರುವ ಕ್ಯಾರೊಲಿನ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡಿದೆ.. ಬಹುಮಾನ ವಿಜೇತರಿಗೆ 18.31 ಕೋಟಿ ನಗದು ಬಹುಮಾನ ರೂಪದಲ್ಲಿ ಸಿಗಲಿದೆ.

ಕ್ಯಾಟಲಿನ್ ಕಾರಿಕೊ ಅವರು ಹಂಗೇರಿಯವರು ಹಾಗೂ ಅಮೆರಿಕದ ವೈದ್ಯ ವಿಜ್ಞಾನಿ ಡಾ. ಡ್ರ್ಯೂ ವೈಸ್‌ಮನ್ ಅವರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

2022 ರಲ್ಲಿ ಸ್ವೀಡನ್‌ನ ಸ್ವಾಂಟೆ ಪಾಬೊ ಅವರಿಗೆ ಈ ಕ್ಷೇತ್ರದಲ್ಲಿ ನೊಬೆಲ್​​ ಪ್ರಶಸ್ತಿಯನ್ನಯನ್ನು ನೀಡಲಾಗಿತ್ತು. ಕಟಾಲಿನ್ ಕರಿಕೊ ಅವರು 2022 ರವರೆಗೆ ಬಯೋಎನ್‌ಟೆಕ್‌ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸದ್ದರು. ಆರ್‌ಎನ್‌ಎ ಪ್ರೋಟೀನ್ ಮುಖ್ಯಸ್ಥರಾಗಿದ್ದರು. ನಂತರ ಒಂದು ಸಂಶೋಧನ ಕಂಪನಿಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಹಂಗೇರಿಯ ಸ್ಜೆಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇದರ ಜತೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರೆಲ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಜಗತ್ತನ್ನೇ ಕಾಡಿದ ಕೋವಿಡ್ 19ರ ಸೋಂಕು ನಿವಾರಣೆಗೆ ನ್ಯೂಕ್ಯಿಯೊಸೈಡ್ ಆಧಾರಿತ ಪರಿಣಾಮಕಾರಿಯಾದ ಎಂಆರ್‌ಎನ್‌ಎ ತಂತ್ರಜ್ಞಾನದಡಿ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಕಾರಿಕೊ ಹಾಗೂ ವೈಸ್‌ಮನ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ 2023ರ ನೋಬೆಲ್ ಬಹುಮಾನ ಇವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಆಯ್ಕೆ ಸಮಿತಿ ಹೇಳಿದೆ.

ಇನ್ನು ಕಟಾಲಿನ್ ಕರಿಕೊ ಅವರ ಜತೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದವರು ಡ್ರೂ ವೈಸ್‌ಮನ್‌. ಇವರು ಪೆರೆಲ್‌ಮನ್ ಲಸಿಕೆ ಸಂಶೋಧನ ಕೇಂದ್ರದ ಪ್ರಾಧ್ಯಾಪಕರಾಗಿದ್ದಾರೆ. ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್‌ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು ಅಭೂತಪೂರ್ವ. ಕೊರೊನಾ ಸಮಯದಲ್ಲಿ mRNA ಕೋವಿಡ್ -19 ಲಸಿಕೆಯು ಹೇಗೆ ಪ್ರತಿರಕ್ಷಣಾ ವ್ಯವಸ್ಥೆ ಉಂಟು ಮಾಡುತ್ತದೆ ಎಂಬುದನ್ನು ಸಂಶೋಧನೆ ನಡೆಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...