Homeಕರ್ನಾಟಕನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ನೋಟ್ ಬ್ಯಾನ್ ಮಾಡುವಂತೆ ಬಸವಣ್ಣನವರು ಹೇಳಿದ್ದರು: ಅರವಿಂದ ಜತ್ತಿ ಮಾತು ನಿಜವೇ?

ಮೋದಿಯ ನೋಟ್ ಬ್ಯಾನ್: ಅರವಿಂದ ಜತ್ತಿಯವರ ರಾಜ್ಯಸಭಾ ಸದಸ್ಯತ್ವದ ಕನಸು ಹಾಗೂ ಹಲವು ಕತ್ತೆಗಳು ?!

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಸನ್ಮಾನ್ಯ ಶ್ರೀ ಅರವಿಂದ ಜತ್ತಿಯವರಿಗೆ ರಾಜ್ಯಸಭೆಯ ಕನಸುಗಳು ಬೀಳುವುದಕ್ಕೆ ಶುರುವಾಗಿ ಐದು ವರ್ಷಗಳು ಗತಿಸಿ ಹೋದವು. ತಮ್ಮ ಕನಸಿಗಾಗಿ ಅವರು ಪ್ರಧಾನಿ ಮೋದಿಯವರನ್ನು ಆಗಾಗ ಹೋಗಳುತ್ತಲೆ ಇರುತ್ತಾರೆ. ಮೋದಿಯವರು ಏನೇ ಮಾಡಿದರು ಅದು ಅವರಿಗೆ ದಿವ್ಯವಾಗಿ ಕಂಡುಬರುತ್ತದೆ. ಆ ಕುರಿತು ಮೆದುಳು ಬೆಳೆಯದ ಮಕ್ಕಳು ಕೂಗುವಂತೆ ಮೋದಿ ಮೋದಿ ಮೋದಿ ಎಂದು ಕೂಗುವ ಮೂಲಕ ತಮ್ಮ ಮನದ ಇಂಗಿತವನ್ನು ಮತ್ತೊಂದು ರೂಪದಲ್ಲಿ ಹೊರ ಹಾಕುತ್ತಾರೆ.

ಪ್ರಧಾನಿ ಮೋದಿಯವರನ್ನು ನಿತ್ಯ, ಕ್ಷಣ ಕ್ಷಣವೂ ಹೊಗಳಲಿ. ರಾಜ್ಯ ಸಭೆಯ ಸದಸ್ಯರೂ ಆಗಲಿ ಯಾರ ತಕರಾರು ಇಲ್ಲ. ಆದರೆ ಮೋದಿ ಹೊಗಳುವ ಭರದಲ್ಲಿ “ನೋಟು ಅಮಾನ್ಯೀಕರಣದ ಕುರಿತು ಬಸವಣ್ಣನವರು 12ನೇ ಶತಮಾನದಲ್ಲಿಯೇ ಉಲ್ಲೇಖಿಸಿದ್ದರು. ಈಗ ಅದು ನಿಜವಾಗಿದೆ. ಈ ವಿಷಯವನ್ನು ಪ್ರಧಾನಿ ಮೋದಿಯವರಿಗೆ ಈ ವಿಷಯ ತಿಳಿಸಿದಾಗ ಅವರು ನಿಬ್ಬೆರಗಾಗಿದ್ದರು” ಎಂದು ಪತ್ರಿಕೆಯೊಂದಕ್ಕೆ ಹೇಳೀಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. 

ಒಂದು ಕಡೆಯಲ್ಲಿ ಸಮಾನತವಾದಿ ಬಸವಣ್ಣ ಮತ್ತೊಂದು ಕಡೆಯಲ್ಲಿ ಮನುವಾದವನ್ನು ಎತ್ತಿ ಹಿಡಿಯುವ ಮೋದಿ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ನಾವು ಅನಿವಾರ್ಯವಾಗಿ ಪ್ರಶ್ನಿಸಲೆಬೇಕಾಗಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯಾ ! ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ’ ಎಂದ ಬಸವಣ್ಣನವರೆಲ್ಲಿ, ರಾಮ ಮಂದಿರ ಕಟ್ಟಲೇಬೇಕು ಎಂಬ ತುಡಿತ ಇರುವ ಮೋದಿಯವರೆಲ್ಲಿ ? ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿರುವವರು ಬಿ.ಜೆ.ಪಿಗರು. ಇದನ್ನು ಇಡೀ ರಾಷ್ಟ್ರದ ಜನತೆ ಬಲ್ಲುದು. ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ವ ಬಸವಣ್ಣನವರದು. ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿದ್ದು ಬಸವಣ್ಣನವರಾದರೆ ಮೋದಿ ನೇತೃತ್ವದ ಸರಕಾರ ಮಹಿಳೆಗೆ ಮತ್ತೆ ಕಟ್ಟಳೆಗಳನ್ನು ವಿಧಿಸಿ ಮನುವಾದವನ್ನು ಮುನ್ನೆಲೆಗೆ ತರಲು ಹಾತೊರೆಯುತ್ತದೆ.

ಭಾರತದ ಸಂವಿಧಾನ ಬೇರೆ ಅಲ್ಲ, ಬಸವಾದಿ ಶರಣರು ಬರೆದ ವಚನಗಳು ಬೇರೆ ಅಲ್ಲವೇ ಅಲ್ಲ. ಎರಡೂ ಒಂದರೊಳಗೆ ಒಂದು ಹಾಸು ಹೊಕ್ಕಾಗಿ ಇರುವಂಥವು. ಹನ್ನೆರಡನೆಯ ಶತಮಾನದಲ್ಲಿ ವಚನಗಳನ್ನು ಬದುಕಿದ ಶರಣರು ಸುಖಿಯಾದ ಸಮಾಜವನ್ನು ಕಟ್ಟಲು ಸಾಧ್ಯವಾಗಿತ್ತು. ಡಾ. ಬಿ.ಆರ್. ಅಂಬೇಡ್ಕರರವರು ನಮಗಾಗಿ ಕಟ್ಟಿಕೊಟ್ಟ ಭಾರತೀಯ ಸಂವಿಧಾನ ವಿಶ್ವದ ಸಂವಿಧಾನದಲ್ಲಿಯೇ ಅತ್ಯುನ್ನತ ಮೌಲ್ಯಗಳನ್ನು ಒಳಗೊಂಡದ್ದು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಮೋದಿ ಸರಕಾರದ ಕೆಲವು ಮಂತ್ರಿಗಳೆ ಬೀದಿಯಲ್ಲಿ ನಿಂತು ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಹೇಳುತ್ತಾರೆ. ಈ ಮಾತುಗಳ ಪ್ರಚೋದನೆ ಪಡೆದ ಕೆಲವು ಅಬ್ಬೆಪಾರಿ ಜನಗಳು ಸಂವಿಧಾನದ ಪ್ರತಿಯನ್ನು ದೆಹಲಿಯ ಸಂಸತ್ತಿನ ಮುಂದೆಯೇ ಸುಡುತ್ತಾರೆ. ಇದನ್ನು ಕಂಡೂ ಕಾಣದಂತೆ ಮೋದಿಯವರು ದೊಡ್ಡ ಕೌದಿಯನ್ನು ತಮ್ಮ ಕಣ್ಣ ಮೇಲೆ ಹಾಕಿಕೊಂಡು ಕುಳಿತ್ತಿದ್ದಾರಲ್ಲ ! ಇದೆಲ್ಲ ನಮ್ಮ ಅರವಿಂದ ಜತ್ತಿಯವರಿಗೆ ಕಾಣುವುದಿಲ್ಲವೆ ?

ನೋಟು ಅಮಾನ್ಯೀಕರಣವನ್ನು ದೇಶದ ಮಹತ್ವದ ಆರ್ಥಿಕ ಚಿಂತಕ ಮನಮೋಹನ ಸಿಂಗ್ “ವ್ಯವಸ್ಥಿತ ಸಂಘಟಿತ ಲೂಟಿ’’ ಎಂದು ಜರಿದರು. ಇವತ್ತಿಗೂ ಬಡವರು, ಮಧ್ಯಮ ವರ್ಗದ ಜನ ನೋಟು ಅಮಾನ್ಯೀಕರಣದ ಬಿಸಿಗೆ ಬೀದಿಗೆ ಬಿದ್ದಿದ್ದಾರೆ. ನೊಂದವರ ನೋವ ಅರಿಯುವುದೆ ಬಸವ ಪ್ರಣೀತ ಲಿಂಗಾಯತ ಧರ್ಮ. ಬಸವ ಸಮಿತಿಯ ಆಯಿಲ್ ಪೆಂಟ್ ಜತ್ತಿಯವರಿಗೆ ಇದು ಕಾಣಲಿಲ್ಲವೇಕೆ ? ತಮ್ಮ ಯಾವುದೋ ಒಂದು ವೈಯಕ್ತಿಕ ಬಯಕೆಗೆ ಲಿಂಗಾಯತ ಧರ್ಮದ ತತ್ವಗಳನ್ನು ಬಲಿಕೊಡುವುದು ಎಷ್ಟು ಸರಿ ?

ಶರಣರು ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಹೇಳಿಲ್ಲ. ಆದರೆ ಜತ್ತಿಯವರು ಮಾತ್ರ ಅದೆಲ್ಲಿಯ ವಚನ ಅಧ್ಯಯನ ಮಾಡಿದರೊ ಕಾಣೆ. ನೋಟು ಅಮಾನ್ಯೀಕರಣದ ಕುರಿತು ಶರಣರು ಹೇಳಿದ್ದಾರೆಂದು ಜತ್ತಿಯವರು ಹೇಳಿದ ಸಂಗತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನಾನು ಅಧ್ಯಯನ ಮಾಡಿದಂತೆ ವಚನದಲ್ಲಿ ತೆರಿಗೆಯನ್ನು ವಂಚಿಸಬಾರದು ಎಂದಿದೆ.

ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ
ವಿರಹಿತ ಹೋಗಬಾರದು
ಲಿಂಗ ಸಂಬಂಧಿಯಾದಡೆ
ಜಂಗಮ ಪ್ರೇಮಿ ನೀನಾಗು.
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ
ಜಂಗಮದಲ್ಲಿ ನಿರುತ ಭರಿತ
ಕೂಡಲಸಂಗಮದೇವಾ

ಇದರಲ್ಲಿ ಎಲ್ಲಿಯೂ ನೋಟು ಅಮಾನ್ಯೀಕರಣದ ಕುರಿತು ಚಕಾರ ಶಬ್ಧವೂ ಇಲ್ಲ. ಜತ್ತಿಯವರ ದಿವ್ಯ ದೃಷ್ಟಿಯಲ್ಲಿ ಕಂಡಿದ್ದರೆ ಅದನ್ನವರು ನಮಗೆಲ್ಲ ತಿಳಿಸಿಕೊಡಬೇಕು. ಇಷ್ಟು ವರ್ಷಗಳ ಕಾಲ ಮಠಾಧೀಶರು ಬಸವಾದಿ ಶರಣರ ಡುಬ್ಬದ ಮೇಲೆ ಕುಳಿತು ತಮ್ಮ ಮೆರವಣಿಗೆ ಉರವಣಿಗೆ ನಡೆಸಿಕೊಂಡು ದೊಡ್ಡವರಾಗಿ ಮೆರೆದಿದ್ದಾರೆ. ಈಗ ಬಸವಣ್ಣನವರ ಹೆಸರಿನ ಮೇಲೆ ಸಮಿತಿ, ಪ್ರತಿಷ್ಠಾನ, ಕೇಂದ್ರಗಳ ಆರ್ಭಟ ನಡೆದಿದೆ. ಈ ಸೂಕ್ಷ್ಮವನ್ನು ಲಿಂಗಾಯತರು ಈಗ ಅರಿತಿದ್ದಾರೆ. ಹಿಂದೊಮ್ಮೆ ತಮ್ಮ ಬಸವ ಸಮಿತಿಯಿಂದ ಹೊರಡುವ ಪತ್ರಿಕೆಯ ಮುಖ ಪುಟದಲ್ಲಿ ಸರ್ವಜ್ಞನ ವಚನವನ್ನು ತಿರುಚಿ ತಮಗೆ ಅನುಕೂಲವಾಗುವಂತೆ ಬಸಳಸಿಕೊಂಡಿದ್ದರು.

ಬಸವ ಸಮಿತಿ (ಪೀಠ)ವೂ ಎದ್ದು
ಒಸೆದು ನಾಣ್ಯವು ಹುಟ್ಟಿ
ಬಸವನಾ ಮುದ್ರೆ ಮೆರೆದಾವು ಲೋಕವವಗೆ ವಶವಾಗದಿಹುದೆ ಸರ್ವಜ್ಞ !

ಇದನ್ನು ಓದಿ: ಬಸವಣ್ಣ ಮತ್ತು ಅಕ್ಷಯ ತೃತೀಯ

ಸರ್ವಜ್ಞ ಬಳಸಿದ ಪೀಠ ಎಂಬ ಪದ ಹೃದಯ ಪೀಠ ಎಂದು ಅರ್ಥೈಸಿಕೊಳ್ಳದಷ್ಟು ದಡ್ಡರೇನು ಜತ್ತಿಯವರಲ್ಲ, ಮುದ್ದಾಂ ಆಗಿಯೆ ಈ ತಪ್ಪುಗಳನ್ನು ಮಾಡುವ ಮೂಲಕ ದೊಡ್ಡವರಾಗಬೇಕೆಂದು ಬಯಸುತ್ತಾರೆ. ಕೆಂಭೂತ ನವಿಲಿನಂತೆ ಕುಣಿಯಬಹುದು ಆದರೆ ಅದು ನವಿಲಾಗಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯರ ಗುಲಾಮರಾಗಿ ಯಾರೂ ಬೇಡ ಅನ್ನುವುದಿಲ್ಲ. ಆದರೆ ಲಿಂಗಾಯತ ಧರ್ಮದವರನ್ನು ಯಾರಿಗೂ ಒತ್ತೆ ಇಡಬೇಡಿ.

ವೇದವ ಮೀರಿದ ಮಹಾವೇದಿಗಳು ಲಿಂಗವಂತರು
ಶಾಸ್ತ್ರವ ಮೀರಿದ ಮಹಾಶಾಸ್ತ್ರಜ್ಞರು ಲಿಂಗವಂತರು
ಪುರಾಣವ ಮೀರಿದ ಮಹಾಪುರಾಣಿಕರು ಲಿಂಗವಂತರು
ಲಿಂಗವಂತ ನಡೆ, ನುಡಿ ಭಿನ್ನಕಾಣಿರೋ
ಎಂಬ ನಗೆ ಮಾರಿತಂದೆಗಳ ಮಾತು ಅರಿತು ಜತ್ತಿಯವರು ನಡೆಯಬೇಕಿದೆ. ಕುದುರೆಗೆ ಕುದುರೆ, ಕತ್ತೆಗೆ ಕತ್ತೆ ಎಂದೆನ್ನದೆ ಕತ್ತೆಗೆ ಕುದುರೆ ಅಂದರೆ ಜನ ಅದನ್ನು ಅರಿಯದಷ್ಟು ದಡ್ಡರಲ್ಲ. ಹಲವು ಕತ್ತೆಗಳ ನಡುವೆ ಕುದುರೆ ಜಾತಿ ಕಳೆದ ಹೋಗದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...