Homeಕಂಡದ್ದು ಕಂಡಹಾಗೆಮನ ಮುಟ್ಟುವ ಪತ್ರಿಕೋದ್ಯಮದ  ಹಾದಿಯಲ್ಲಿ ಇನ್ನೊಂದು ಹೆಜ್ಜೆ

ಮನ ಮುಟ್ಟುವ ಪತ್ರಿಕೋದ್ಯಮದ  ಹಾದಿಯಲ್ಲಿ ಇನ್ನೊಂದು ಹೆಜ್ಜೆ

ಹೊಸ ಕಾಲದ ಮತ್ತು ಹೊಸ ಬಗೆಯ ಮಾಧ್ಯಮದ ವಿದ್ಯಾರ್ಥಿಯೆನ್ನುವಷ್ಟು ವಿನಯವನ್ನೂ, ದೀರ್ಘಕಾಲದ ಪತ್ರಿಕೋದ್ಯಮದ ಅನುಭವವನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಮೌಲ್ಯಗಳಿಗೆ ಬದ್ಧತೆ ಹಾಗೂ ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡಿರುವ ಅವರು ನಮ್ಮ ಸಂಪಾದಕೀಯ ತಂಡದ ಮಾರ್ಗದರ್ಶಕರಾಗಿರುವುದು ಹೆಮ್ಮೆಯ ಸಂಗತಿ.

- Advertisement -
- Advertisement -
| ನ್ಯಾಯಪಥ ಸಂಪಾದಕೀಯ ತಂಡ |

ಮಾಧ್ಯಮಗಳು ಪ್ರಜಾತಂತ್ರದ ನಾಲ್ಕನೆಯ ಅಂಗವೆಂದು ಹೇಳುವುದು ಕೇವಲ ಕ್ಲೀಷೆಯಷ್ಟೇ ಅಲ್ಲ, ಅದೀಗ ಅಪಹಾಸ್ಯದ ವಸ್ತುವಾಗುತ್ತಿದೆ. ಒಂದೆಡೆ ನಿರ್ಭೀತ ಪತ್ರಕರ್ತರು ಅಲ್ಲಲ್ಲಿ ದಾಳಿಗೊಳಗಾಗಿ ಕೊಲೆಯಾಗುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕದ ಕೆಲವು ಪತ್ರಕರ್ತರು ಬ್ಲಾಕ್‍ಮೇಲ್, ವಂಚನೆ ಇತ್ಯಾದಿ ಪ್ರಕರಣಗಳಲ್ಲಿ ಜೈಲು ಸೇರುತ್ತಿದ್ದಾರೆ. ರಾಜಕಾರಣಿಗಳನ್ನು ಓಲೈಸುವ ಸರಣಿ ಸರಣಿ ಕಾರ್ಯಕ್ರಮ ಮಾಡುವ ಪತ್ರಕರ್ತರು, ಐಸಿಯುಗೆ ನುಗ್ಗಿ ಮೆದುಳು ಜ್ವರ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ವಾಗ್ದಾಳಿ ನಡೆಸುತ್ತಾರೆ. ಕಾಲ ಸರಿಯುತ್ತಿದ್ದ ಹಾಗೆ, ಹೆಚ್ಚೆಚ್ಚು ಮಾಧ್ಯಮ ಸಂಸ್ಥೆಗಳು ಬೆರಳೆಣಿಕೆಯ ಕಾರ್ಪೋರೇಟ್ ಕುಳಗಳ ಆಸ್ತಿಗಳಾಗುತ್ತಿವೆ.

ದೇಶದ ಅತೀ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ಟೈಮ್ಸ್ ಗುಂಪಿನ ಹಿರಿಯ ಸ್ಥಾನದಲ್ಲಿರುವ ವ್ಯಕ್ತಿ, ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮತ್ರ್ಯಸೆನ್‍ರ ಕುರಿತ ಸುಳ್ಳುಗಳನ್ನು ಖುದ್ದು ಪ್ರಚಾರ ಮಾಡುತ್ತಾರೆ. ಅದರ ಕುರಿತು ಮಾತನಾಡಿದ ಸೆನ್, ಇಷ್ಟು ಪುಟ್ಟ ಲೇಖನದೊಳಗೆ ಅಷ್ಟೊಂದು ಸುಳ್ಳುಗಳನ್ನು ಪೇರಿಸಿರುವ ಅವರ ಸಾಮಥ್ರ್ಯವನ್ನು ಅಭಿನಂದಿಸಬೇಕು ಎಂದರಂತೆ. ಇನ್ನೂ ಯಾವ್ಯಾವ ಬಗೆಯ ಕಿರೀಟಗಳನ್ನು ದೇಶದ ಮಾಧ್ಯಮಗಳು ಪಡೆದುಕೊಳ್ಳುತ್ತವೋ ಗೊತ್ತಿಲ್ಲ.

ಪರಿಸ್ಥಿತಿ ಹೀಗಿರುವಾಗ, 2 ದಶಕಕ್ಕೂ ಹೆಚ್ಚು ಕಾಲ ದೆಹಲಿಯಲ್ಲಿದ್ದ ಕರ್ನಾಟಕದ ಪತ್ರಕರ್ತರೊಬ್ಬರು ನಮ್ಮಲ್ಲಿ ವಿಸ್ಮಯ ಮೂಡಿಸಿದರು. ಗೌರಿ ಲಂಕೇಶರ ಆಶಯಗಳ ಮುಂದುವರಿಕೆಯ ನ್ಯಾಯಪಥ ಪತ್ರಿಕೆಗೆ ಮಾರ್ಗದರ್ಶನ ಮಾಡಬೇಕೆಂದು ಅವರಲ್ಲಿ ಟ್ರಸ್ಟ್‍ನ ಹಿರಿಯರು ಮನವಿ ಮಾಡಿದರು. ಅದಕ್ಕೆ ಅವರು ವಿಧಿಸಿದ ಷರತ್ತುಗಳು ಆಶ್ಚರ್ಯಕರವಾಗಿತ್ತು. ಅದರಲ್ಲಿ ಮುಖ್ಯವಾದುದು, ತನ್ನ ಆಸ್ತಿ ವಿವರಗಳನ್ನು ಟ್ರಸ್ಟ್‍ನ ಹಿರಿಯರು ಖುದ್ದಾಗಿ ಕೇಳಿಸಿಕೊಳ್ಳಬೇಕು ಮತ್ತು ತಾನು ಇದುವರೆಗೆ ‘ಮಾಡಿರಬಹುದಾದ’ ತಪ್ಪುಗಳ ಕುರಿತ ವರದಿಯನ್ನು ಒಪ್ಪಿಸುತ್ತೇನೆ. ಆ ನಂತರ ಟ್ರಸ್ಟ್‍ಗೆ ಒಪ್ಪಿಗೆಯಿದ್ದರೆ, ಇದರೊಂದಿಗೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಡಿ.ಉಮಾಪತಿಯವರನ್ನು ಬಲ್ಲ ಯಾರಿಗೂ ಇಂತಹ ವಿಚಾರಗಳಲ್ಲಿ ಯಾವ ಹುಳುಕೂ ಇರುವುದಿಲ್ಲ ಎಂಬ ಖಚಿತ ವಿಶ್ವಾಸವಿತ್ತು. ಆದರೂ ಅಪಾರ ಮುಜುಗರ, ಕಟು ಪ್ರಾಮಾಣಿಕತೆಯ ಅವರು ಸಂಪೂರ್ಣ ಪಾರದರ್ಶಕವಾಗಿ ತಮ್ಮ ಅನಿಸಿಕೆಗಳನ್ನು ಮುಂದಿಟ್ಟರು. ಅದು ಅವರ ಬಗ್ಗೆ ವಿಶ್ವಾಸ ಹೆಚ್ಚಿಸಿದ್ದಷ್ಟೇ ಅಲ್ಲದೇ, ಇತರರಿಗೂ ಒಂದು ಮಾದರಿ ನಿರ್ಮಾಣವಾದಂತಾಯಿತು.

ಈ ‘ಪ್ರಕ್ರಿಯೆ’ ಪೂರ್ಣಗೊಂಡ ನಂತರವೇ ಡಿ.ಉಮಾಪತಿಯವರು ಇದರ ‘ಕನ್ಸಲ್ಟಿಂಗ್ ಎಡಿಟರ್’ ಆಗಲು ಒಪ್ಪಿಕೊಂಡರು. ಹೊಸ ಕಾಲದ ಮತ್ತು ಹೊಸ ಬಗೆಯ ಮಾಧ್ಯಮದ ವಿದ್ಯಾರ್ಥಿಯೆನ್ನುವಷ್ಟು ವಿನಯವನ್ನೂ, ದೀರ್ಘಕಾಲದ ಪತ್ರಿಕೋದ್ಯಮದ ಅನುಭವವನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಮೌಲ್ಯಗಳಿಗೆ ಬದ್ಧತೆ ಹಾಗೂ ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡಿರುವ ಅವರು ನಮ್ಮ ಸಂಪಾದಕೀಯ ತಂಡದ ಮಾರ್ಗದರ್ಶಕರಾಗಿರುವುದು ಹೆಮ್ಮೆಯ ಸಂಗತಿ. ಕರ್ನಾಟಕದ ಮೂರು ಪ್ರಮುಖ ದಿನಪತ್ರಿಕೆಗಳಲ್ಲಿ (ಕನ್ನಡಪ್ರಭ, ವಿಜಯಕರ್ನಾಟಕ ಮತ್ತು ಪ್ರಜಾವಾಣಿ) ದೆಹಲಿ ವರದಿಗಾರರಾಗಿ ಕೆಲಸ ಮಾಡಿರುವ ಉಮಾಪತಿಯವರು, ಕಳೆದ ಕೆಲ ಕಾಲದಿಂದ ಬರೆದ ಅಂಕಣ ಬರಹಗಳು ರಾಜ್ಯದ ಪ್ರಜ್ಞಾವಂತರನ್ನು ತಟ್ಟಿರುವ ಪರಿ ಅನನ್ಯವಾದುದು.

ಇದರೊಂದಿಗೆ, ಪತ್ರಿಕೆಯ ಜವಾಬ್ದಾರಿಯಲ್ಲಿ ಇನ್ನೂ ಕೆಲವು ಬದಲಾವಣೆಗಳು ಆಗುತ್ತಲಿವೆ. ಹಲವು ಹಿರಿಯರು ಬೇರೆ ಬೇರೆ ರೀತಿಯಲ್ಲಿ ಇದರ ಜೊತೆಗೂಡಲಿದ್ದಾರೆ. ಮುಂಬರುವ ಸಂಚಿಕೆಗಳಲ್ಲಿ ಅಧಿಕೃತವಾಗಿ ನಿಮ್ಮೊಂದಿಗೆ ಅದನ್ನು ವಿಸ್ತೃತವಾಗಿ ಹಂಚಿಕೊಳ್ಳಲಿದ್ದೇವೆ.

ಹೊಸ ಕಾಲದ ಜನಪರ ಮಾಧ್ಯಮದ ಹಲವು ಪ್ರಯೋಗಗಳು ದೇಶಾದ್ಯಂತ ಜಾರಿಯಲ್ಲಿದೆ. ‘80ರ ದಶಕದಲ್ಲಿ ಕರ್ನಾಟಕದ ರಾಜಕಾರಣ, ಸಾಹಿತ್ಯ ಸಂಸ್ಕೃತಿಗಳನ್ನು ಮತ್ತು ಯುವತಲೆಮಾರನ್ನು ಗಾಢವಾಗಿ ಪ್ರಭಾವಿಸಿದ ಲಂಕೇಶ್ ಪತ್ರಿಕೆಯು ಈ ನಾಡಿನ ವಿಶಿಷ್ಟ ಟ್ಯಾಬ್ಲಾಯ್ಡ್ ಆಗಿತ್ತು. ಇಂದು ಅದೇ ಬಗೆಯ ಟ್ಯಾಬ್ಲಾಯ್ಡ್ ಅದೇ ರೀತಿಯ ಪಾತ್ರ ನಿರ್ವಹಿಸಲಾರದು. ಮುದ್ರಣ ಮಾಧ್ಯಮದ ಸಾಧ್ಯತೆಗಳು ಇನ್ನೂ ಮುಗಿದು ಹೋಗಿಲ್ಲ; ಆದರೆ, ವೆಬ್ ಮೀಡಿಯಾದಲ್ಲಿ ಅಪಾರವಾದ ಸಾಧ್ಯತೆಗಳು ತೆರೆದುಕೊಂಡಿವೆ. ಇವೆಲ್ಲವನ್ನೂ ಬೆಸೆದು, ಹೊಸ ನುಡಿಗಟ್ಟು, ಭಾಷೆ-ಪರಿಭಾಷೆಗಳೊಂದಿಗೆ ಈ ಕಾಲದ ಯುವತಲೆಮಾರನ್ನು ಒಳಗೊಳ್ಳುವ ರೀತಿ-ನೀತಿಗಳನ್ನು ರೂಪಿಸುವ ಹಂತದಲ್ಲಿ ನಾವಿದ್ದೇವೆ. ಅದಕ್ಕಾಗಿ ಪ್ರಯೋಗಗಳು ನಡೆಯುತ್ತಿವೆ. ಇದರಲ್ಲಿ ನೀವೆಲ್ಲರೂ ಪಾಲುದಾರರು.

ಈ ಪತ್ರಿಕೆಯು ಒಂದು ಗುಂಪಿನ, ಒಂದು ಪಂಥದ, ಒಂದು ಸೈದ್ಧಾಂತಿಕ ಧಾರೆಯ ಮುಖವಾಣಿಯಲ್ಲ; ದೇಶ ಮತ್ತು ಜನಪರ ಹಿತಾಸಕ್ತಿಯ ಹೊರತಾಗಿ ಬೇರೆ ಆಸಕ್ತಿಗಳೂ ಇಲ್ಲ. ಪ್ರಜಾತಂತ್ರ ಮತ್ತು ಜೀವಪರತೆಯ ಆಶಯಗಳುಳ್ಳ ಎಲ್ಲ ಪಂಥಗಳೂ ಒಟ್ಟುಗೂಡಿ ಒಂದು ಪಂಥವಾಗಲಿ ಎಂಬ ಆಶಯವಷ್ಟೇ ನಮ್ಮದು.

ಇವತ್ತಿನ ಜಾಣಜಾಣೆಯರನ್ನು ಒಳಗೊಳ್ಳುವ ರಂಜನೆ, ಬೋಧನೆ, ಪ್ರಚೋದನೆಗಳು ಎಂದಿನಂತೆ ಪತ್ರಿಕೆಯ ಹೂರಣ ಹಾಗೂ ಸ್ವರೂಪವನ್ನು ನಿರ್ಧರಿಸಬೇಕು. ಹಾಗಾಗಿ ಪತ್ರಿಕೆಯು ನಿಮ್ಮೆಲ್ಲರ ಅಭಿವ್ಯಕ್ತಿಯ ವೇದಿಕೆಯೂ ಆಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...