Homeಮುಖಪುಟಎಡಿನ್ಬರ್ಗ್ ವಿವಿಗೆ ನೈಲಿ ಆಯ್ಕೆ: ದಲಿತ ಯುವತಿಯ ವ್ಯಾಸಂಗಕ್ಕೆ ಸಹಕಾರ ನೀಡಿ

ಎಡಿನ್ಬರ್ಗ್ ವಿವಿಗೆ ನೈಲಿ ಆಯ್ಕೆ: ದಲಿತ ಯುವತಿಯ ವ್ಯಾಸಂಗಕ್ಕೆ ಸಹಕಾರ ನೀಡಿ

- Advertisement -
- Advertisement -

ಮಹಾರಾಷ್ಟ್ರದ ಥಾನೆ ನಿವಾಸಿ, ದಲಿತ ಯುವತಿ ನೈಲಿ ಗಾಯಕವಾಡ್‌ ಅವರು ಎಡನ್ಬರ್ಗ್ ವಿವಿಗೆ ಆಯ್ಕೆಯಾಗಿದ್ದು, ವ್ಯಾಸಂಗಕ್ಕಾಗಿ ಸಹಾಯಹಸ್ತ ಕೋರಿದ್ದಾರೆ. ಎಡನ್ ಬರ್ಗ್ ವಿವಿಯು, ಕ್ಯೂಎ‌ಸ್ ರ್‍ಯಾಂಕಿಂಗ್ ಪಡೆದ ವಿಶ್ವದ ಅಗ್ರಮಾನ್ಯ ವಿವಿಗಳಲ್ಲಿ 20ನೇ ಸ್ಥಾನದಲ್ಲಿದೆ.

ಮುಂಬೈ ವಿ.ವಿ.ಯ ಬಿ.ಎನ್.ಬಂಡಾರ್‍ಕರ್‌ ಕಾಲೇಜಿನಲ್ಲಿ ಜೀವ ರಸಾಯನ ವಿಜ್ಞಾನದಲ್ಲಿ ಸ್ನಾತಕ ಪದವಿಯನ್ನು ಪೂರೈಸಿರುವ ನೈಲಿ, ರಾಮ್ ನಾರಾಯಣ್ ರೂಯಾ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಜೀವ ರಸಾಯನವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ನೈಲಿ ಅವರಿಗೆ, ಪ್ರತಿಷ್ಟಿತ ವಿವಿಯಲ್ಲಿ ವ್ಯಾಸಂಗ ಮಾಡಲು ಅವಕಾಶ ದೊರೆತಿದೆ. ಖಗೋಳ ವಿಜ್ಞಾನ ಕುರಿತು ಇವರು ಕೈಗೊಳ್ಳಬೇಕೆಂದಿರುವ ಸಂಶೋಧನೆಗೆ ಈ ಅವಕಾಶ ಮಹತ್ವದ್ದಾಗಿದ್ದು, ಮಿಲಾಪ್‌ ಫಂಡ್ ರೈಸಿಂಗ್ ವೇದಿಕೆಯಲ್ಲಿ ಸಹಾಯಹಸ್ತ ಕೋರಿದ್ದಾರೆ.

ಎಡನ್ ಬರ್ಗ್ ವಿವಿಯ ಆನ್ಲೈನ್ ಕೋರ್ಸ್‌ನಲ್ಲಿ ಖಗೋಳ ವಿಜ್ಞಾನ ವ್ಯಾಸಂಗ ಮಾಡಿರುವ ನೈಲಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ.

“ನನ್ನ ಸಾಧನೆಯ ಹಾದಿ ಸುಲಭವಾಗಿಲ್ಲ. ದಲಿತಳಾಗಿ ಬಾಲ್ಯದಿಂದಲೂ ಲೈಂಗಿಕತೆ ಮತ್ತು ಜಾತಿಯತೆಯನ್ನು ಎದುರಿಸಿದ್ದೇನೆ. ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸಿದ್ದೇನೆ. ಈ ಸರಳುಗಳನ್ನು ಶಿಕ್ಷಣದ ಮೂಲಕ ಕಳಚಬೇಕು. ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ ಅವರು ಹೇಳಿದ- ಶಿಕ್ಷಣ, ಸಂಘಟನೆ, ಹೋರಾಟ- ನಮ್ಮ ವಿಮೋಚನೆಯ ಹಾದಿಯಾಗಿದೆ. ಮೊದಲ ದಲಿತ ಮಹಿಳೆ ಖಗೋಳವಿಜ್ಞಾನಿಯಾಗುವುದನ್ನು ನೋಡಿ ದಲಿತ ಯುವಕ, ಯುವತಿಯರು ಸ್ಫೂರ್ತಿಪಡೆಯುತ್ತಾರೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ ನೈಲಿ.

“ಹೆಚ್ಚಿನ ಮಹಿಳೆಯರು ವಿಜ್ಞಾನವನ್ನು ಓದಬೇಕು. ಕನಸುಗಳನ್ನು ಸಾಕಾರಗೊಳಿಸಿಕೊಂಡು ಸಮಾಜದ ಕಟ್ಟುಪಾಡುಗಳಿಂದ ಹೊರಬರಬೇಕು. ನನ್ನ ವ್ಯಾಸಂಗ ಮುಗಿದ ಬಳಿಕ, ನಾನು ಕಲಿತದ್ದದ್ದನ್ನು ಸಮುದಾಯಕ್ಕೆ ಮುಡಿಪಾಗಿಡಲಿದ್ದೇನೆ” ಎಂದು ಮಿಲಾಪ್ನಲ್ಲಿ ನೈಲಿ ಬರೆದುಕೊಂಡಿದ್ದಾರೆ.

“ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳಾಗಿದ್ದು, ಈ ಕೋವಿಡ್ ಬಿಕ್ಕಟ್ಟಿನಿಂದಾಗಿ ಹಣವನ್ನು ಹೊಂದಿಸಿಕೊಳ್ಳುವುದು ಕಷ್ಟವಾಗಿದೆ. ವಿ.ವಿ.ಯ ಪ್ರವೇಶ ಶುಲ್ಕ 35,00,000  ರೂ.ಗಳಿದೆ. ನಿಮ್ಮ ಸಹಕಾರ ಅಗತ್ಯವಿದೆ” ಎಂದು ಮನವಿ ಮಾಡಿದ್ದಾರೆ.

ಬೇಕಾಗಿರುವ ಹಣದ ವಿವರ

Tuition fees: £34,200 (34,59,954.89 ₹)
Immigration Health Surcharge (IHS): £470(47,549.09₹)
Living expenses: £12,276(12,41,941₹)
Total expenses: £46,946(47,49,444₹)

ದಲಿತ ಯುವತಿಯ ಶಿಕ್ಷಣಕ್ಕೆ ಸಹಾಯ ಮಾಡಲು ಇಚ್ಛಿಸುವವರು ಇಲ್ಲಿ ಕ್ಲಿಕ್ ಮಾಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...