Homeಮುಖಪುಟಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

ಶಿಕ್ಷಣದ ಗುಣಮಟ್ಟ ಪ್ರಪಾತಕ್ಕೆ ಕುಸಿದಿರುವ ಕಥೆ ಹೇಳುವ ವರದಿ!

- Advertisement -
- Advertisement -

ಸುಮ್ಮನೆ ಊಹಿಸಿಕೊಳ್ಳಿ, ಕೆಲವು ಮಕ್ಕಳು ಬೆಳಗ್ಗೆ ಎದ್ದು ಶಾಲೆಗೆ ಹೋಗುತ್ತಾರೆ, ಅಲ್ಲಿ ಹೋದ ನಂತರ ಅವರಿಗೆ ಗೊತ್ತಾಗುವುದೇನೆಂದರೆ, ನಿನ್ನೆಯ ತನಕ ಐದನೆಯ ತರಗತಿಯಲ್ಲಿದ್ದ ಅವರು ಈಗ ನಾಲ್ಕನೆಯ ತರಗತಿಗೆ ಸೇರಿಕೊಳ್ಳಲಿದ್ದಾರೆ, ನಾಲ್ಕನೆಯ ತರಗತಿಯವರು ಮೂರನೆಯ ತರಗತಿಗೆ; ಯಾವ ಪುಸ್ತಕವನ್ನು ಅವರು ಮೊದಲು ಓದಬಹುದಾಗಿತ್ತೋ, ಈಗ ತೊದಲುತ್ತಿದ್ದಾರೆ, ಯಾರಿಗೆ ಗಣಿತ ಬರುತ್ತಿತ್ತೋ ಈಗ ಅದನ್ನು ಮರೆತಿದ್ದಾರೆ. ಅಂದರೆ ರಾತ್ರೋರಾತ್ರಿ ಇಡೀ ಶಾಲೆ ಒಂದು ಹಂತ ಕೆಳಗೆ ಕುಸಿದುಬಿಟ್ಟಿದೆ. ಯೋಚಿಸಿ, ಆಗ ಆ ಶಾಲೆ, ಆ ಮಕ್ಕಳು, ಆ ಹಳ್ಳಿಯ ಮೇಲೆ ಯಾವ ಪರಿಣಾಮ ಬೀರಬಹುದು. ಇದು ಸೈನ್ಸ್ ಫಿಕ್ಷನ್‌ನ ಒಂದು ಹೊಸ ಕಲ್ಪನೆಯಲ್ಲ. ಇದು ವಾಸ್ತವ. ಕೇವಲ ಒಂದು ಶಾಲೆಯದ್ದಲ್ಲ, ಇಡೀ ದೇಶದ ವಾಸ್ತವ. ಯಾವುದೇ ದೂರದ ದೇಶದ್ದೂ ಅಲ್ಲ, ನಮ್ಮ ಭಾರತದ ಕಥೆಯೇ ಇದು. ಯಾವುದೋ ಒಂದು ಭೂತಕಾಲದ ಕಥೆಯೂ ಅಲ್ಲ, ಕಳೆದ 4 ವರ್ಷಗಳ ದುಃಖಭರಿತ ಕಥೆ ಇದು.

ಕಳೆದ ವರ್ಷ ಪ್ರಥಮ್ ಎಂಬ ಸರಕಾರೇತರ ಸಂಸ್ಥೆಯು ’ಅಸರ್’ ಎಂಬ ಹೆಸರಿನ ಸಮೀಕ್ಷೆಯ 2022ರ ವರದಿ ಬಿಡುಗಡೆ ಮಾಡಿತು, ಈ ವರದಿ ಈ ಧಾರುಣ ಕಥೆ ಹೇಳುತ್ತದೆ. ಅಸರ್ ಎಂದರೆ ’ಎನುವಲ್ ಸ್ಟೇಟಸ್ ಆಫ್ ಎಜ್ಯುಕೇಷನ್ ರಿಪೋರ್ಟ್’ (Annul status of education report). ಇದು ಕಳೆದ 17 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅರ್ಹತೆಯನ್ನು ಅಳೆಯುವ ಒಂದು ಪ್ರಾಮಾಣಿಕ ಅಸ್ತ್ರವಾಗಿ ಹೊರಹೊಮ್ಮಿದೆ. ಈ ಸಮೀಕ್ಷೆಯಲ್ಲಿ, ಶಾಲೆಯಲ್ಲಿ ಮಕ್ಕಳ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳುವ ಬದಲಿಗೆ ಅವರ ಮನೆಗೆ ಹೋಗಿ ಭಾಷೆ ಮತ್ತು ಗಣಿತದ ಸಾಧಾರಣ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರದ್ದೇ ಆದ ಪಠ್ಯಪುಸ್ತಕದ ಒಂದು ಸಾಧಾರಣ ಪ್ಯಾರಾವನ್ನು ಓದಿಸಲಾಗುತ್ತದೆ. ಗಣಿತದಲ್ಲಿ ಕೂಡುವ ಕಳೆಯುವ ಅತ್ಯಂತ ಸಾಧಾರಣ ಲೆಕ್ಕ ಬಿಡಿಸಲು ಹೇಳಲಾಗುತ್ತದೆ.

ಈ ವರ್ಷ ಅಸರ್‌ನ ವರದಿಯನ್ನು ನಾನು ಕಾತುರದಿಂದ ಕಾಯುತ್ತಿದ್ದೆ. 2005ರಿಂದ ಪ್ರತಿ ವರ್ಷ ಹಾಗೂ 2014ರ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ವರದಿ ಹೊರಬರುತ್ತಿದೆ. ಆದರೆ 2018ರ ನಂತರ ಈ ಪ್ರಕ್ರಿಯೆ ನಿಂತಿತ್ತು. ಕೋವಿಡ್ ಮಹಾಮಾರಿಯ ಕಾರಣದಿಂದ ಶಾಲೆಗಳೂ ಮುಚ್ಚಿದ್ದವು ಹಾಗೂ ಅಸರ್ ಸಮೀಕ್ಷೆಯನ್ನೂ ಮಾಡಲಾಗಲಿಲ್ಲ. ಹಾಗಾಗಿ 2022ರ ವರದಿ ಕಳೆದ 4 ವರ್ಷಗಳ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒದಗಿದ ಅಡೆತಡೆಯ ದಾಖಲೆಯಾಗಿ ಹೊರಹೊಮ್ಮಿದೆ. ದೇಶದ 606 ಜಿಲ್ಲೆಗಳಲ್ಲಿ 19 ಸಾವಿರ ಹಳ್ಳಿಗಳ 7 ಲಕ್ಷ ಮಕ್ಕಳ ಸಮೀಕ್ಷೆಯ ಆಧಾರಿತ ಈ ವರದಿ ಮೊದಲ ಬಾರಿ ಕೋವಿಡ್ ಮಹಾಮಾರಿ ಕಾರಣದಿಂದ ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಣದ ಮೇಲೆ ಆದ ಪರಿಣಾಮಗಳನ್ನು ದಾಖಲಿಸುತ್ತದೆ.

ಸುದ್ದಿ ಒಳ್ಳೆಯದಿಲ್ಲ. ಅಸರ್ 2018ರ ವರದಿಯು 5ನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಕೇವಲ 51% ಮಕ್ಕಳು 2ನೆಯ ತರಗತಿಯ ಸಾಧಾರಣ ಪುಸ್ತಕದ ಸರಳವಾದ ಪ್ಯಾರಾ ಓದಬಲ್ಲರು ಎಂದು ಹೇಳಿತ್ತು.

ಇದನ್ನೂ ಓದಿ: ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಮರು ಹೊಂದಾಣಿಕೆ | ಶಿಕ್ಷಣ ಇಲಾಖೆಯ ಕ್ರಮಕ್ಕೆ ತಜ್ಞರ ವಿರೋಧ

ಇದು ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿತ್ತು. ಈಗ 2022ರ ವರದಿ ಹೇಳುವುದೇನೆಂದರೆ, ಈ ಅಂಕಿ ಇನ್ನಷ್ಟು ಕೆಳಗಿಳಿದು ಆ ಅನುಪಾದ 43%ಕ್ಕೆ ಕುಸಿದಿದೆ. ಅಂದರೆ ಪ್ರಾಥಮಿಕ ಶಾಲೆ ಪಾಸ್ ಮಾಡುವ 10 ಮಕ್ಕಳಲ್ಲಿ 6 ಮಕ್ಕಳಿಗೆ ತಮ್ಮ ಮೂರು ವರ್ಗ ಕೆಳಗಿನ ಪುಸ್ತಕದ ಸರಳವಾದ ಒಂದು ಪ್ಯಾರಾ ಕೂಡ ಓದಲು ಆಗುವುದಿಲ್ಲ. ಅಸರ್‌ನದ್ದೇ ಹಳೆಯ ಸಮೀಕ್ಷೆಯೊಂದಿಗೆ ಹೋಲಿಸಿದಾಗ ತಿಳಿಯುವುದೇನೆಂದರೆ ಒಂದೇ ಏಟಿನಲ್ಲಿ ನಾವು 2012ರ ಸ್ತರಕ್ಕೆ ಮರಳಿದ್ದೇವೆ. ಒಂದು ತರಗತಿಯಲ್ಲ, ಒಂದು ಶಾಲೆಯಲ್ಲ, ಒಂದು ಹಳ್ಳಿಯಲ್ಲ, ಇಡೀ ದೇಶದ ಶಿಕ್ಷಣದ ಒಂದು ಹಂತ ಕೆಳಗಿಳಿದುಬಿಟ್ಟಿದೆ.

ಈ ಕಥೆಯನ್ನು ಬೇರೆ ಬೇರೆ ಸ್ತರಗಳಲ್ಲಿ ಪುನರುಚ್ಚರಿಸಲಾಗಿದೆ. 2ನೆಯ ತರಗತಿಯ ಪುಸ್ತಕ ಓದಲು ಸಾಧ್ಯವಾಗುವ 3ನೆಯ ತರಗತಿಯ ಮಕ್ಕಳ ಸಂಖ್ಯೆ 2018ರಲ್ಲಿ 27% ಇತ್ತು; ಈಗ 2022ರಲ್ಲಿ ಕುಸಿದು 21%ಗೆ ನಿಂತಿದೆ. 3ನೆಯ ತರಗತಿಯ ಮಕ್ಕಳು ಕಳೆಯುವ ಪ್ರಶ್ನೆಗಳನ್ನು ಉತ್ತರಿಸಬಲ್ಲ ಹಾಗೂ 5ನೆಯ ತರಗತಿಯ ಮಕ್ಕಳು ಭಾಗಾಕಾರ ಮಾಡಬಲ್ಲವರ ಸಂಖ್ಯೆ 28%ರಿಂದ ಇಳಿದು ಈಗ 26%ಕ್ಕೆ ಬಂದಿದೆ. ಶಿಕ್ಷಣದಲ್ಲಿ ಈ ಕುಸಿತ ಕೇವಲ ಬಡರಾಜ್ಯಗಳಲ್ಲಿ ಕಾಣಿಸಿಲ್ಲ. ಈ ಹೊಡೆತ ಶಿಕ್ಷಣದ ವ್ಯವಸ್ಥೆ ಉತ್ತಮವಾಗಿರುವ ಕೇರಳ, ಹಿಮಾಚಲ ಹಾಗೂ ಹರಿಯಾಣದಂತಹ ರಾಜ್ಯಗಳಲ್ಲೂ ಕಂಡುಬಂದಿದೆ. ಈ ಕುಸಿತ ಎಲ್ಲಾ ರೀತಿಯ ಮಕ್ಕಳಲ್ಲಿ ದಾಖಲಾಗಿದೆ, ಅವರು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಾಗಲಿ, ಖಾಸಗಿಯಲ್ಲಿ ಓದುವವರಾಗಿರಲಿ. ಅಂದರೆ, ಕೋವಿಡ್ ಮಹಾಮಾರಿಯ ಸಮಯದಲ್ಲಿ ನಮ್ಮ ಗ್ರಾಮೀಣ ಮಕ್ಕಳ ಶಿಕ್ಷಣ ವ್ಯವಸ್ಥೆ ಧ್ವಂಸಗೊಂಡಿದೆ.

ಆದರೆ ಇದರರ್ಥ ಶಿಕ್ಷಣದಲ್ಲಿ ಪೋಷಕರ ಅಥವಾ ಮಕ್ಕಳ ಆಸಕ್ತಿ ಕುಂದಿದೆ ಅಂತಲ್ಲ. ಇದೇ ಸಮೀಕ್ಷೆ ಈ ವಾಸ್ತವವನ್ನೂ ದಾಖಲಿಸುತ್ತದೆ: ಈ ನಾಲ್ಕು ವರ್ಷಗಳಲ್ಲಿ ಶಾಲೆಗೆ ದಾಖಲಾಗುವ ಗ್ರಾಮೀಣ ಮಕ್ಕಳ ಸಂಖ್ಯೆ 97.2%ರಿಂದ 98.4%ಗೆ ಏರಿದೆ. ಹೆಣ್ಣುಮಕ್ಕಳ ದಾಖಲಾತಿಯೂ ಮೊದಲಿಗಿಂತ ಹೆಚ್ಚಿದೆ. ಶಾಲೆಗಳಲ್ಲಿ ಮಾತ್ರವಲ್ಲ ಅಂಗನವಾಡಿಯಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆಯೂ 57% ಇಂದ ಜಿಗಿತ ಕಂಡು ಈಗ 67% ಆಗಿದೆ. ಮೂರು ವರ್ಷ ವಯಸ್ಸಿನ 78% ಮಕ್ಕಳು ಒಂದಲ್ಲ ಒಂದು ನರ್ಸರಿ ಶಾಲೆಗೆ ಹೋಗುತ್ತಿದ್ದಾರೆ. ಅಂದರೆ ಶಿಕ್ಷಣದ ಹಸಿವು ನಿರಂತರವಾಗಿ ಹೆಚ್ಚುತ್ತಿದೆ.

ಆದರೆ ಶಿಕ್ಷಣದ ಅವಕಾಶದಲ್ಲಿ ಕುಸಿತ ಕಂಡುಬರುತ್ತಿದೆ. ಈ ಸಮೀಕ್ಷೆಯು ಮೊದಲ ಬಾರಿಗೆ ಒಂದು ಐತಿಹಾಸಿಕ ಪ್ರಕ್ರಿಯೆಯು ತಲೆಕೆಳಗಾಗಿದ್ದನ್ನು ದಾಖಲಿಸುತ್ತದೆ. ಬಹಳಷ್ಟು ಸಮಯದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕುಸಿಯುತ್ತಿತ್ತು. ಅದಕ್ಕೆ ಕಾರಣ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಸಾಧ್ಯತೆ ಒಂದು. ಆದರೆ ಮೊದಲ ಬಾರಿ 2018ರಿಂದ 2022ರ ನಡುವೆ ಖಾಸಗಿ ಶಾಲೆಗಳಿಗೆ ಹೋಗುವ ಗ್ರಾಮೀಣ ಮಕ್ಕಳ ಸಂಖ್ಯೆಯು 35%ರಿಂದ ಇಳಿದು 27% ಆಗಿದೆ. ಹೀಗೆ ಆಗಿದ್ದು ಸರಕಾರಿ ಶಾಲೆಗಳ ಗುಣಮಟ್ಟ ಉತ್ತಮಗೊಂಡ ಕಾರಣಕ್ಕೇನೂ ಅಲ್ಲ. ಅದರ ಬದಲಿಗೆ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಂದೆತಾಯಿಯ ಆರ್ಥಿಕ ವ್ಯವಸ್ಥೆಯಲ್ಲಿ ಕುಸಿತ ಕಂಡಿದ್ದರಿಂದ. ಮಹಾಮಾರಿಯ ಕಾರಣದಿಂದ ಶಾಲೆಗಳು ಮುಚ್ಚಿಕೊಂಡವು ಹಾಗೂ ಹೆಚ್ಚಿನ ಜನರ ಗಳಿಕೆಯ ಮೇಲೆ ಪೆಟ್ಟುಬಿತ್ತು; ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ತಂದೆತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಅವರನ್ನು ಸರಕಾರಿ ಶಾಲೆಗಳಿಗೆ ಸೇರಿಸಿದರು.

ಗ್ರಾಮೀಣ ಭಾರತದಲ್ಲಿ ಶಿಕ್ಷಣಕ್ಕಾಗಿ ನಿರಂತರವಾಗಿ ಹೆಚ್ಚುತ್ತಿರುವ ಹಸಿವು, ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕ, ಆದರೆ ಸಾಮಾನ್ಯ ಜನರಿಗೆ ಅಲಭ್ಯವಾಗುತ್ತಿರುವ ಸಂಪನ್ಮೂಲಗಳು ಹಾಗೂ ಸರಕಾರಿ ಶಾಲೆಗಳ ವ್ಯವಸ್ಥೆ ನಿರಂತರವಾಗಿ ಹಿನ್ನೆಡೆ ಕಾಣುತ್ತಿರುವ ಈ ಸಮಯದಲ್ಲಿ, ಶಿಕ್ಷಣದ ಗುಣಮಟ್ಟದಲ್ಲಿ ದಾಖಲಾದ ಕುಸಿತವು ಒಂದು ದೊಡ್ಡ ರಾಷ್ಟ್ರೀಯ ವಿಪತ್ತಿನ ಕಡೆ ಕೈತೋರಿಸುತ್ತದೆ. ಮುಂದಿನ 5 ವರ್ಷಗಳ ತನಕ ದೇಶದ ಶಾಲಾ ಶಿಕ್ಷಣ ಏಕಮೇವ ಮಿಷನ್ ಆಗಿರಬೇಕಾಗಿದೆ. ಅದು ಈ ಹೊಡೆತದ ಪರಿಣಾಮವನ್ನು ತಗ್ಗಿಸಿ, ಗ್ರಾಮೀಣ ಮತ್ತು ನಗರದ ಬಡವರ ಒಂದು ಇಡೀ ತಲೆಮಾರಿಗೆ ಈ ನಷ್ಟದಿಂದ ಕಾಪಾಡಬೇಕಿದೆ. ಇಲ್ಲವಾದರೆ ಇದರ ಪೆಟ್ಟು ಒಂದು ಶಾಶ್ವತ ದುರಂತವಾಗಿ ಬದಲಾಗಬಹುದು.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dont consider the report or study of Pratham organization. This is a fake study.
    This is only coocked data to fetch money from abroad and from governments.

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...