ಹಿರಿಯ ನಟ ವೈಜನಾಥ ಬಿರಾದಾರ ಅವರಿಗೆ ‘ಪದ್ಮಶ್ರೀ’ ನೀಡಲು ಆಗ್ರಹಿಸಿ ಆನ್‌ಲೈನ್‌ ಅಭಿಯಾನ

ಸೆಪ್ಟೆಂಬರ್‌ 15 ರ ವರೆಗೆ ಪದ್ಮ ಪ್ರಶಸ್ತಿಗೆ ಸಾಧಕರ ಹೆಸರನ್ನು ಸೂಚಿಸುವಂತೆ ಪ್ರಧಾನಿ ಮೋದಿ ಕಳೆದ ಭಾನುವಾರ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಬೇಕೆಂದು ಅಭಿಯಾನ ಪ್ರಾರಂಭವಾಗಿದ್ದವು. ಆದರೆ ಇದೀಗ ಕನ್ನಡ ಮತ್ತೊಬ್ಬ ಪ್ರತಿಭಾನ್ವಿತ ನಟ, ಕನ್ನಡ ಸಿನಿಮಾಗಳಲ್ಲಿ ಬಡವರ ಪ್ರತಿನಿಧಿ ವೈಜನಾಥ ಬಿರಾದಾರ ಅವರಿಗೆ ಪದ್ಮಶ್ರೀ ಸಿಗಬೇಕು ಎಂದು ಆನ್‌ಲೈನ್‌ ಅಭಿಯಾನ ಆರಂಭವಾಗಿದೆ.

ಕಳೆದ ಮೂರೂವರೆ ದಶಕಗಳಿಂದ ವೃತ್ತಿ ರಂಗಭೂಮಿ ಮತ್ತು ಕನ್ನಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ 68 ವರ್ಷದ ನಟ ವೈಜನಾಥ ಬಿರಾದಾರ ಅವರ ಹುಟ್ಟೂರು ಬೀದರ್ ಜಿಲ್ಲೆಯ ತೆಗಾಂಪೂರ್. ಎಂ.ಎಸ್.ಸತ್ಯು ನಿರ್ದೇಶನದ ‘ಬರ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಬಿರಾದರ ಮೂಲತಃ ವೃತ್ತಿ ರಂಗಭೂಮಿ ಕಲಾವಿದರಾಗಿದ್ದಾರೆ. ಸುಮಾರು 500ರಷ್ಟು ಸಿನಿಮಾದಲ್ಲಿ ನಟಿಸಿರುವ ಬಿರಾದರ ಅವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾಗಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ‘ವೈಜನಾಥ ಬಿರಾದಾರ’ ಅವರ ಹುಟ್ಟುಹಬ್ಬಕ್ಕೆ ಒಂದು ಬರಹ!

ಗಿರೀಶ್ ಕಾಸರವಳ್ಳಿಯವರ ‘ಕನಸೆಂಬೋ ಕುದುರೆಯನೇರಿ’ ಬಿರಾದಾರ ಅವರ ಮಹತ್ವದ ಚಿತ್ರಗಳಲ್ಲೊಂದು. ಸ್ಪೇನ್‍ನ ಮ್ಯಾಡ್ರಿಡ್ ‘ಇಂಡಿಯಾ ಇಮ್ಯಾಜಿನ್’ ಚಿತ್ರೋತ್ಸವದಲ್ಲಿ (2011) ಈ ಚಿತ್ರ ಪ್ರದರ್ಶನಗೊಂಡಿತ್ತು. ಚಿತ್ರೋತ್ಸವದಲ್ಲಿ ಅವರಿಗೆ ಅತ್ಯುತ್ತಮ ನಟ ಪುರಸ್ಕಾರ ಬಿರಾದಾರ ಅವರಿಗೆ ಸಂದಿತ್ತು. ಇದೀಗ ಇಂತಹ ಪ್ರತಿಭಾನ್ವಿತ ನಟನಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕು ಎಂದು ಫೇಸ್‌ಬುಕ್, ವಾಟ್ಸಪ್‌ನಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ.

ಚಿಂತಕ ಕೆಎಲ್‌ ಚಂದ್ರಶೇಖರ್‌ ಐಜೂರು ಅವರು, “ಇವರು ನಟ ಬಿರಾದಾರ್….ಇವರು ನಿಮ್ಮ ಅನಂತನಾಗ್’ರಷ್ಟು ಸ್ಫುರದ್ರೂಪಿಯಲ್ಲ. ಅನಂತನಾಗ್ ಪ್ರತಿನಿಧಿಸುವ ರಾಜಕಾರಣದ ನಿಲುವಿಗೆ ಸೇರಿದವರಲ್ಲ. ಇವರದು ಅನಂತನಾಗ್ ಜಾತಿಯಂತೂ ಅಲ್ಲವೇ ಅಲ್ಲ. ಅನಂತನಾಗ್ ಅವರಿಗಿಂತಲೂ ನಟ ಬಿರಾದಾರ್ ಒಕ್ಕೂಟ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಗೆ ಎಲ್ಲಾ ರೀತಿಯಲ್ಲೂ ಅರ್ಹ. ಪದ್ಮಶ್ರೀ ಈ ಸಲ ಬಿರಾದಾರರಿಗೆ ಸಿಗಲಿ” ಎಂದು ಆಗ್ರಹಿಸಿದ್ದಾರೆ.

ರಾಜಾರಾಂ ಚಿಟ್ಟಾ ಅವರು, “ಬಿರಾದಾರ ಅವರು ಪದ್ಮಶ್ರೀ ಪ್ರಶಸ್ತಿಗೆ ಎಲ್ಲಾ ರೀತಿಯಿಂದಲೂ ಅರ್ಹರಿದ್ದಾರೆ ಎಂಬುದು ಒಬ್ಬ ಕನ್ನಡಿಗನಾಗಿ ನನ್ನ ಅನಿಸಿಕೆ. ನಟ ಎಂದರೇ ಕೇವಲ ಹೀರೋಗಳು ಮಾತ್ರವಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ಅನಂತ್‌ ನಾಗ್‌ಗೆ ಪದ್ಮ ಪ್ರಶಸ್ತಿ ಆಗ್ರಹಿಸಿ ಆನಲೈನ್‌ ಅಭಿಯಾನ

ಪತ್ರಕರ್ತ ರವಿಕುಮಾರ್‌ ಟೆಲೆಕ್ಸ್‌ ಅವರು, “ಬಿರಾದಾರ್ ಕನ್ನಡದ ಮತ್ತೋರ್ವ ಖ್ಯಾತ ನಟ ಅನಂತನಾಗ್‌ರಷ್ಟು ಸ್ಫುರದ್ರೂಪಿಯಲ್ಲ. ಅನಂತನಾಗ್ ಅವರಿಗಿರಬಹುದಾದ ಸಾಮಾಜಿಕ‌ ಹಿನ್ನಲೆಯಾಗಲಿ, ಸಾಂಸ್ಕೃತಿಕ ಪ್ರಭಾವಳಿಯಾಗಲಿ, ರಾಜಕೀಯ ಸಿದ್ಧಾಂತದ ಬಲವಾಗಲಿ ಬಿರಾದರ್‌ಗೆ ಇಲ್ಲ. ಆದರೆ ಬಿರಾದಾರ್ ತನಗೊಹಿಸುವ ಪಾತ್ರದಲ್ಲಿ ಯಾರಿಗೂ ಕಮ್ಮಿಯಿಲ್ಲದಂತೆ ಪ್ರತಿಭೆಯನ್ನು ಮೆರೆಯುತ್ತಾರೆ. ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಅನಂತ್ ನಾಗ್ ಮತ್ತು ಬಿರಾದಾರ್ ಅವರನ್ನು ಪರಸ್ಪರ ಹೋಲಿಕೆ ಮಾಡಲಾಗದು ನಿಜ, ಆದರೆ ನೈಜ ಪ್ರತಿಭೆ ಬಿರಾದಾರ್ ಒಕ್ಕೂಟ ಸರ್ಕಾರದ ‘ಪದ್ಮಶ್ರೀ’ ಪ್ರಶಸ್ತಿಗೆ ಎಲ್ಲಾ ಬಗೆಯಲ್ಲೂ ಅರ್ಹರಿದ್ದಾರೆ ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ. ಬಿರಾದಾರ್ ಅವರಿಗೆ ಪದ್ಮಶ್ರೀ ಸಿಗಲಿ” ಎಂದು ಆಗ್ರಹಿಸಿದ್ದಾರೆ.

ಮರಿಬಸಪ್ಪ ತುಮಕೂರು ಅವರು, “ವೈಜನಾಥ್ ಬಿರಾದರ್‌‌ 600 ಚಲನಚಿತ್ರಗಳಲ್ಲಿ ರಂಗಭೂಮಿಯಲ್ಲಿ ತಮ್ಮ ಬದುಕನ್ನು ಸವೆಸಿದ ಕಲಾವಿದ. ಇಂದು ಬರಿ ದೈನಂದಿನ ಬದುಕು ನೆಡೆಸಲಾಗದ, ಕುಟುಂಬ ಪೋಷಣೆ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದರು ಕಲಾಸೇವೆ ಮಾಡುತ್ತಿರುವ ಅಪ್ಪಟ ಕಲಾವಿದ. ಒಕ್ಕೂಟ ಸರ್ಕಾರ ಈ ಕಲಾವಿದ ಕಲಾಸೇವೆ ಗುರುತಿಸಲಿ” ಎಂದು ಆಗ್ರಹಿಸಿದ್ದಾರೆ.

ಬಸವರಾಜ ಅವರು, ನೈಜ ಕಲಾವಿದ, ಸರಳ ಜೀವಿ, ವೈಜನಾಥ ಬಿರಾದಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜುಲೈ ತಿಂಗಳು ಒಟಿಟಿಯಲ್ಲಿ ದೊರಕುವ ಕೆಲ ಸಿನಿಮಾ ಮತ್ತು ವೆಬ್‌ ಸರಣಿಗಳಿವು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

2 COMMENTS

  1. ಬಿರಾದಾರರಿಗೆ ಪದ್ಮಶ್ರೀ ಪಡೆಯುವ ಎಲ್ಲಾ ಅರ್ಹತೆಗಳೂ ಇವೆ. ಈ ಬಾರಿ ಪದ್ಮಶ್ರೀ ಅವರಿಗೆ ದೊರಕಬೇಕು.

LEAVE A REPLY

Please enter your comment!
Please enter your name here