Homeಮುಖಪುಟಯೋಗಿ ಸರ್ಕಾರದ ಕ್ರೌರ್ಯವನ್ನು ನಿಮ್ಮ ಸರ್ಟಿಫಿಕೇಟ್‌ ಮರೆಮಾಚಲು ಅಸಾಧ್ಯ: ಮೋದಿಗೆ ಪ್ರಿಯಾಂಕ ಗಾಂಧಿ ತಿರುಗೇಟು

ಯೋಗಿ ಸರ್ಕಾರದ ಕ್ರೌರ್ಯವನ್ನು ನಿಮ್ಮ ಸರ್ಟಿಫಿಕೇಟ್‌ ಮರೆಮಾಚಲು ಅಸಾಧ್ಯ: ಮೋದಿಗೆ ಪ್ರಿಯಾಂಕ ಗಾಂಧಿ ತಿರುಗೇಟು

- Advertisement -
- Advertisement -

ಕೊರೊನಾ ಎರಡನೆ ಅಲೆಯ ಸಮಯದಲ್ಲಿ ಆದಿತ್ಯನಾಥ್‌‌ ಸರ್ಕಾರದ “ಆಕ್ರಮಣಕಾರಿ ಕ್ರೌರ್ಯ, ನಿರ್ಲಕ್ಷ್ಯ ಮತ್ತು ಅಸಮರ್ಪಕ ನಿರ್ವಹಣೆ”ಯನ್ನು ತಮ್ಮ “ಪ್ರಮಾಣಪತ್ರ” ಮರೆಮಾಚಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರು ಗುರುವಾರ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಉತ್ತರ ಪ್ರದೇಶದ ಆದಿತ್ಯನಾಥ್‌ ಸರ್ಕಾರವು ಕೊರೊನಾ ಬಿಕ್ಕಟ್ಟನ್ನು ಅಭೂತಪೂರ್ವವಾಗಿ ನಿಭಾಯಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಇದನ್ನೂಓದಿ: ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ಜಾಹೀರಾತು: ಪೋಟೋ ಹಂಚಿಕೊಂಡ ವಕೀಲರಿಗೆ ಯುಪಿ ಪೊಲೀಸರ ಬೆದರಿಕೆ!

ಈ ಶತಮಾನದಲ್ಲಿ ಇಡೀ ಜಗತ್ತನ್ನೇ ಭಾದಿಸುತ್ತಿರುವ ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಉತ್ತರ ಪ್ರದೇಶ ಸರ್ಕಾರ ಮಾಡಿದ ಪ್ರಯತ್ನಗಳು ಶ್ಲಾಘನೀಯ ಎಂದು ಅವರು ಹೊಗಳಿದ್ದರು.

ಇದಕ್ಕೆ ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ ಗಾಂಧಿ, “ಮೋದಿ ಅವರ ಪ್ರಮಾಣಪತ್ರವು ಉತ್ತರ ಪ್ರದೇಶದಲ್ಲಿ ಕೊರೊನಾ ಎರಡನೆ ಅಲೆಯ ಸಮಯದಲ್ಲಿ ಯೋಗಿ ಸರ್ಕಾರದ ಆಕ್ರಮಣಕಾರಿ ಕ್ರೌರ್ಯ, ನಿರ್ಲಕ್ಷ್ಯ ಮತ್ತು  ಅಸಮರ್ಪಕ ನಿರ್ವಹಣೆಯ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

“ಜನರು ಅಪಾರ ನೋವು, ಅಸಹಾಯಕತೆಯನ್ನು ಏಕಾಂಗಿಯಾಗಿ ಎದುರಿಸಿದರು. ಮೋದಿ, ಯೋಗಿ ಈ ಸತ್ಯವನ್ನು ಮರೆಯಬಹುದು. ಆದರೆ ಕೊರೊನಾ ಸಮಯದಲ್ಲಿ ನೋವನ್ನು ಅನುಭವಿಸಿದವರು ಇದನ್ನು ಮರೆಯುವುದಿಲ್ಲ” ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್‌ನ ಉಸ್ತುವಾರಿಯೂ ಆಗಿರುವ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ಇದನ್ನೂಓದಿ: ಉತ್ತರ ಪ್ರದೇಶ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಒಬ್ಬನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಾನು ಗೌರಿ ಅಲ್ಲಾ ಅಥವಾ ಹೌದ ಈ ವಾಟ್ಸಪ್ಪ್ ಗ್ರೂಪ್ನಲ್ಲಿ ಮತ್ತು ಫೇಸ್ಬುಕ್ ನಲ್ಲಿ ಒಟ್ಟಾಗಿ ಪ್ರೆಸೆಂಟ್ ಸೆಂಟ್ರಲ್ ಗವರ್ನಮೆಂಟ್ ಮತ್ತು ಸೆಲೆಕ್ಷವ್ ಆಗಿ ಸ್ಟೇಟ ಗೋವರ್ನಮೆಂಟ್ಸ್ ಲೈಕ್ W. B, ತಮಿಳುನಾಡು, ತೆಲಂಗಾಣ, ಮುಂತಾದವಗಳನ್ನು ಬಿಟ್ಟು ಬಿಜೆಪಿ ಗವರ್ನಮೆಂಟ್ ಇರುಕಡೆ ಓನ್ಲಿ ನೆಗೆಟಿವ್ ಕಾಮೆಂಟ್ಸ್ ಮಾಡುದೇ ಹೆಚ್ಚು? ಇದು ಪ್ರತಿಯೊಂದು fb ಪೋಸ್ಟಿಂಗ್ಸ್ whatsappa ನಲ್ಲಿ ಹಾಕುದೆ ಗುರಿ ಅನ್ನೋದೋoತೂ ಸತ್ತ್ಯ ಅನಿಸುತ್ತೆ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...