Homeಅಂತರಾಷ್ಟ್ರೀಯಗಾಝಾದಲ್ಲಿ ಮುಂದುವರಿದ ಹತ್ಯಾಕಾಂಡ: ಪ್ಯಾಲೆಸ್ತೀನ್ ಪ್ರಧಾನಿ ಮುಹಮ್ಮದ್ ಶ್ತಾಯಿಹ್ ರಾಜೀನಾಮೆ

ಗಾಝಾದಲ್ಲಿ ಮುಂದುವರಿದ ಹತ್ಯಾಕಾಂಡ: ಪ್ಯಾಲೆಸ್ತೀನ್ ಪ್ರಧಾನಿ ಮುಹಮ್ಮದ್ ಶ್ತಾಯಿಹ್ ರಾಜೀನಾಮೆ

- Advertisement -
- Advertisement -

ಗಾಝಾದಲ್ಲಿ ಇಸ್ರೇಲ್ ಹತ್ಯಾಕಾಂಡವನ್ನು ಮುಂದುವರಿಸಿರುವ ಮಧ್ಯೆ ಪ್ಯಾಲೆಸ್ತೀನ್ ಪ್ರಧಾನಿ ಮುಹಮ್ಮದ್ ಶ್ತಾಯಿಹ್ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ಆಕ್ರಮಣ ಹಾಗೂ ವೆಸ್ಟ್‌ ಬ್ಯಾಂಕ್‌ ಮತ್ತು ಜೆರುಸಲೇಮ್‌ನಲ್ಲಿ ಪರಿಸ್ಥಿತಿ ಉಲ್ಬಣ, ಯುದ್ಧದ ನಂತರ ರಾಜಕೀಯ ವ್ಯವಸ್ಥೆಗಳ ಬಗ್ಗೆ ಪ್ಯಾಲೆಸ್ತೀನಿಯಾದವರಲ್ಲಿ ಒಮ್ಮತವನ್ನು ರೂಪಿಸಲು ಅವಕಾಶ ಮಾಡಿಕೊಡಲು ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಪ್ಯಾಲೆಸ್ತೀನ್ ಪ್ರಧಾನಿ ಮುಹಮ್ಮದ್ ಶ್ತಾಯಿಹ್ ಸೋಮವಾರ ಘೋಷಿಸಿದ್ದಾರೆ.

ಶ್ತಾಯಿಹ್ ಅವರ ರಾಜೀನಾಮೆಯನ್ನು ಅಬ್ಬಾಸ್ ಅವರು ಇನ್ನೂ ಅಂಗೀಕರಿಸಬೇಕು, ಬೇರೆ ಪ್ರಧಾನಿ  ನೇಮಕಗೊಳ್ಳುವವರೆಗೆ ಉಸ್ತುವಾರಿಯಾಗಿ ಉಳಿಯಲು ಅವರನ್ನು ಕೇಳಬಹುದು ಎಂದು ವರದಿಗಳು ಉಲ್ಲೇಖಿಸಿದೆ.

2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮುಹಮ್ಮದ್ ಶ್ತಾಯಿಹ್ ಅರ್ಥಶಾಸ್ತ್ರಜ್ಞರು ಕೂಡ ಹೌದು. ಮುಹಮ್ಮದ್ ಶ್ತಾಯಿಹ್ ರಾಜೀನಾಮೆಯನ್ನು ಘೋಷಿಸಿದ್ದಾರೆ. ಗಾಝಾ ಪಟ್ಟಿಯಲ್ಲಿ ಯುದ್ಧ, ನರಮೇಧ ಮತ್ತು ಹಸಿವಿನಿದ ಜನರು ತತ್ತರಿಸಿರುವ ಮಧ್ಯೆ ರಾಜೀನಾಮೆ ನೀಡುವ ನಿರ್ಧಾರವು ಹೊರ ಬಂದಿದೆ.

ಮುಂದಿನ ಹಂತ ಮತ್ತು ಅದರ ಸವಾಲುಗಳಿಗೆ ಹೊಸ ಸರ್ಕಾರಿ ಮತ್ತು ರಾಜಕೀಯ ವ್ಯವಸ್ಥೆಗಳ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಪ್ಯಾಲೆಸ್ತೀನ್‌ನ ಏಕತೆ ಮತ್ತು ಪ್ಯಾಲೆಸ್ತೀನ್‌ ಭೂ ವಿಚಾರದಲ್ಲಿ ಪ್ಯಾಲೆಸ್ತೀನ್‌-ಪ್ಯಾಲೆಸ್ತೀನ್‌ ಒಮ್ಮತದ ಅಗತ್ಯವಿದೆ ಎಂದು ಮುಹಮ್ಮದ್ ಶ್ತಾಯಿಹ್ ಹೇಳಿದ್ದಾರೆ.

ಯುದ್ಧದ ಸ್ಥಿತಿ ಬಳಿಕ ಪ್ಯಾಲೆಸ್ತೀನ್‌ನ್ನು ಆಳುವ ರಾಜಕೀಯ ರಚನೆಯ ಬಗ್ಗೆ ಕೆಲಸವನ್ನು ಪ್ರಾರಂಭಿಸಲು US ಒತ್ತಡ ಹೆಚ್ಚುತ್ತಿರುವ ಮಧ್ಯೆ ಶ್ತಾಯಿಹ್ ಅವರ ರಾಜೀನಾಮೆ ಹೊರ ಬಿದ್ದಿದೆ. ಆದರೆ ಇಸ್ರೇಲ್‌ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಹಲವಾರು ಸಂದರ್ಭಗಳಲ್ಲಿ ಅಬ್ಬಾಸ್ ಅವರು ಗಾಝಾವನ್ನು ನಿಯಂತ್ರಿಸುವ ಬಗೆಗೆ ವಿರೋಧಿಸಿದೆ. ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯಿಂದ ಶಾಂತಿ ಸ್ಥಾಪನೆಯಲ್ಲಿ ವಿಫಲವಾಗುವುದರ ಜೊತೆಗೆ ಇಸ್ರೇಲ್ ರಾಜ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ನೆತನ್ಯಾಹು ಹೇಳಿದ್ದರು.

ಅ.7ರಂದು ಇಸ್ರೇಲ್‌- ಪ್ಯಾಲೆಸ್ತೀನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಗಾಝಾದಲ್ಲಿ 30,000 ನಾಗರಿಕರನ್ನು ಹತ್ಯೆ ಮಾಡಿದೆ. ಹತ್ಯೆಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 60,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮನೆಗಳು ಧ್ವಂಸಗೊಂಡಿದ್ದು, ಜನರು ನಿರಾಶ್ರಿತರಾಗಿ ತಾತ್ಕಾಲಿಕ ಶಿಬಿರಗಳಲ್ಲಿ ದಿನದೂಡುತ್ತಿದ್ದಾರೆ. ಶಿಬಿರಗಳಲ್ಲಿ ಆಹಾರ, ನೀರು ವೈದ್ಯಕೀಯ ಸೌಲಭ್ಯಗಳ ಸಮಸ್ಯೆಯಿಂದ ಜನರ ಜೀವನ ನರಕ ಸದೃಶವಾಗಿದೆ.

ಇದನ್ನು ಓದಿ: ಗಾಝಾ ಹತ್ಯಾಕಾಂಡವನ್ನು ಖಂಡಿಸಿ ಇಸ್ರೇಲ್‌ ರಾಯಭಾರ ಕಚೇರಿಯೆದುರು ಬೆಂಕಿ ಹಚ್ಚಿಕೊಂಡ ಅಮೆರಿಕದ ಅಧಿಕಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...