ಹಿಂದೂ ಧಾರ್ಮಿಕ ಸಮಾರಂಭದಲ್ಲಿ ಭಾಗಿ - ಬೆದರಿಕೆಗೆ ಮಣಿದು ಕ್ಷಮೆ ಕೇಳಿದ ಮುಸ್ಲಿಂ ಕ್ರಿಕೆಟಿಗ!
PC: The Times

ಭಾರತದ ಹಿಂದೂ ಧಾರ್ಮಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ಬೆದರಿಕೆಗಳನ್ನು ಎದುರಿಸಿದ್ದ ಬಾಂಗ್ಲಾದೇಶದ ಪ್ರಖ್ಯಾತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಈಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಕಲ್ಕತ್ತಾದಲ್ಲಿ ನಡೆದ ಹಿಂದೂ ದೇವತೆಯ ಆರಾಧನೆಯ ಸಮಾರಂಭದಲ್ಲಿ ಅವರು ಭಾಗಹಿಸಿದ್ದರು.

ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಾಂಗ್ಲಾದೇಶದ ಮುಸ್ಲಿಂ ಮೂಲಭೂತವಾದಿಗಳು ಆಕ್ರೋಶಗೊಂಡಿದ್ದರು. ಮುಸ್ಲಿಮರು ಅನ್ಯ ಧರ್ಮಗಳ ಸಮಾರಂಭಗಳಿಗೆ ಹಾಜರಾಗಬಾರದು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಬೆದರಿಕೆಗೆ ಜಗ್ಗದ ಮಾಜಿ ಶಾಸಕ ಮೊಯ್ದೀನ್ ಬಾವಾ: ಮತ್ತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಕೆ

“ನಾನು ಕೇವಲ ಎರಡು ನಿಮಿಷಗಳ ಕಾಲ ವೇದಿಕೆಯಲ್ಲಿದ್ದೆ ಅಷ್ಟೆ. ನಾನು ಅದನ್ನು ಉದ್ಘಾಟಿಸಿದ್ದೇನೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ನಾನೊಬ್ಬ ಮುಸ್ಲಿಂ ಆಗಿರುವುದರಿಂದ ಪ್ರಜ್ಞಾಪೂರ್ವಕವಾಗಿಯೇ ಇದನ್ನು ಮಾಡಲು ಸಾಧ್ಯವಿಲ್ಲ. ಬಹುಶಃ ನಾನು ಅಲ್ಲಿಗೆ ಹೋಗಬಾರದಿತ್ತು. ಇದಕ್ಕಾಗಿ ನಾನು ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ” ಎಂದು ಶಕೀಬ್ ಸೋಮವಾರ ತಡರಾತ್ರಿ ತಿಳಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಭಾರತದ ಸಂಸ್ಕೃತಿಯೆಂದರೆ ಕೇವಲ ವೈದಿಕ ಸಂಸ್ಕೃತಿಯೇ?: ಭಾರತೀಯ ಸಂಸ್ಕೃತಿ ಅಧ್ಯಯನದ ಹಿಂದಿನ ಹುನ್ನಾರಗಳು

“ನಾನು ಒಬ್ಬ ಮುಸ್ಲಿಂ ಆಗಿ ನನ್ನ ಧಾರ್ಮಿಕ ಪದ್ಧತಿಗಳನ್ನು ಯಾವಾಗಲೂ ಅನುಸರಿಸುತ್ತೇನೆ. ನಾನು ಏನಾದರೂ ತಪ್ಪು ಮಾಡಿದ್ದರೆ ದಯವಿಟ್ಟು ಕ್ಷಮಿಸಿ” ಎಂದು ಕ್ಷಮೆ ಕೇಳಿದ್ದಾರೆ.

ಫೇಸ್‌ಬುಕ್ ಲೈವ್‌ನಲ್ಲಿ ವ್ಯಕ್ತಿಯೊಬ್ಬ, “ಕ್ರಿಕೆಟಿಗ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದ್ದಾರೆ” ಎಂದು ಆರೋಪಿಸಿ, ಶಕೀಬ್‌ಗೆ ಬೆದರಿಕೆ ಹಾಕಿದ್ದ. ನಂತರ ಕ್ಷಮೆಯಾಚಿಸಿ ತಲೆಮರೆಸಿಕೊಂಡಿದ್ದ. ಆದರೆ ಇಂದು ಪೊಲೀಸರು ಆತನನ್ನು ಸುನಮ್‌ಗಂಜ್‌ನಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: ಫ್ಯಾಸಿಜ಼ಮ್‍ನ ನಿಜವಾದ ಗೆಲುವು…

ಪ್ರಸ್ತುತ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಲ್‌ರೌಂಡರ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿದ್ದ ಶಕೀಬ್, 2019ರ ಅಕ್ಟೋಬರ್‌ನಲ್ಲಿ ಐಸಿಸಿ ನಿಯಮವನ್ನು ಉಲ್ಲಂಘಿಸಿದ್ದರು ಎಂದು 2 ವರ್ಷಗಳ ನಿಷೇದ ಮತ್ತು 1 ವರ್ಷ ಅಮಾನತುಗೊಂಡಿದ್ದರು.

2015 ರಲ್ಲಿ ಐಸಿಸಿಯ ಅಲ್‌ರೌಂಡರ್ ವಿಭಾಗದಲ್ಲಿ ಅಂತರಾಷ್ಟ್ರೀಯ ಟೆಸ್ಟ್, ಏಕದಿನ ಮತ್ತು ಟ್ವೆಂಟಿ -20 ಪಂದ್ಯಗಳಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.


ಇದನ್ನೂ ಓದಿ: ಸರ್ವಜನಾಂಗದ ಶಾಂತಿಯ ತೋಟದಲ್ಲಿ ಕೂಡುಬದುಕಿನ ನೆನಪು : ರಹಮತ್‌ ತರೀಕೆರೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here