Homeಮುಖಪುಟನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ: ಆಯುಷ್ಮಾನ್‌ ಖುರಾನ

ನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ: ಆಯುಷ್ಮಾನ್‌ ಖುರಾನ

- Advertisement -
- Advertisement -

ಹೊಸ ವರ್ಷವನ್ನು ಸಮಾನತೆ ಮತ್ತು ಹೆಮ್ಮೆಯಿಂದ ಸ್ವಾಗತಿಸಿರುವ ಖ್ಯಾತ ಬಾಲಿವುಟ್‌ ನಟ ಆಯುಷ್ಮಾನ್ ಖುರಾನಾ, ನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ ಎಂದು ಹೇಳಿದ್ದಾರೆ.

ದೇಶದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹಿಂದೂಸ್ತಾನ್‌ ಟೈಮ್ಸ್‌ನೊಂದಿಗಿನ ಸಂದರ್ಶನದಲ್ಲಿ ಅವರು “ಸಮಾನತೆಯ ಬಗ್ಗೆ ಹೆಮ್ಮೆಪಡುವ ತಾನು ಸಾಮಾಜಿಕವಾಗಿ ಜಾಗೃತ ನಾಗರಿಕ ಎಂದು ಹೇಳಿಕೊಂಡಿದ್ದಾರೆ. ಅವರ ಸಿನೆಮಾ ಆಯ್ಕೆಯು ಯಾವಾಗಲೂ ಸಾಮಾಜಿಕವಾಗಿ ಸಂಬಂಧಿಸಿದ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ, ಅದು ಚರ್ಚೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.

ಅವರ ಚೊಚ್ಚಲ ಬಾಲಿವುಡ್ ಚಿತ್ರ ’ವಿಕ್ಕಿಂಗ್ ವಿಕಿ ದಾನಿ (2012) ದಿಂದ ಅವರ ಕೊನೆಯ ತೆರೆಯ ಬಂದ ಜಾಯ್‌ರೈಡ್ ಬಾಲಾ (2019) ಮತ್ತು ಮುಂಬರುವ ಸಲಿಂಗಕಾಮದ ಕುರಿತ “ಶುಭ್ ಮಂಗಲ್ ಜ್ಯಾದ ಸಾವಧಾನ್”ವರೆಗೂ ಸಾಮಾಜಿಕ ಬದಲಾವಣೆಯು ತಮ್ಮ ಚಲನಚಿತ್ರಗಳಲ್ಲಿ ಮುಖ್ಯ ಆಧಾರವಾಗಿದೆ ಎಂದು ಆಯುಷ್ಮಾನ್ ಖುರಾನಾ ಹೇಳಿದ್ದಾರೆ.

ಚಿತ್ರವೊಂದರಲ್ಲಿಅ ವರು ಒಂದು ಕೈಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ ಹೆಮ್ಮೆಯ ಭಾವುಟವನ್ನು ಹಿಡಿದುಕೊಂಡಿದ್ದಾರೆ. ಇದು ಸಲಿಂಗಕಾಮ ಮತ್ತು ಎಲ್ಜಿಬಿಟಿಕ್ ಸಮುದಾಯದ ವಿಷಯಕ್ಕೆ ಬಂದಾಗ ಭಾರತವನ್ನು ಪ್ರಗತಿಪರ ನಿಲುವಿನಲ್ಲಿ ತೋರಿಸುತ್ತದೆ. ಇದು ಸೆಕ್ಷನ್ 377 (ಭಾರತೀಯ ದಂಡ ಸಂಹಿತೆಯ) ಯನ್ನು ತಾರತಮ್ಯಗೊಳಿಸಿದೆ ಮತ್ತು ನಾವು ಹೆಚ್ಚು ಹೆಮ್ಮೆಪಡುವಂತಿಲ್ಲ ಎಂದು ಅವರು ಹೇಳುತ್ತಾರೆ.

ಅವರ ಚಲನಚಿತ್ರಗಳ ಆಯ್ಕೆಯ ಕುರಿತು (ಆರ್ಟಿಕಲ್ 15) (ಶುಭ್ ಮಂಗಲ್ ಜ್ಯಾದ ಸಾವಧಾನ್)  ಸಾಮಾಜಿಕವಾಗಿ ಪ್ರಸ್ತುತವಾದ, ಒಂದು ಕೋಲಾಹಲವನ್ನು ಉಂಟುಮಾಡುವ ಅಥವಾ ಕೆಲವು ರೀತಿಯ ಚರ್ಚೆಯನ್ನು ಉಂಟುಮಾಡುವ ವಿಷಯಗಳನ್ನು ಆಯ್ಕೆ ಮಾಡಲು ನಾನು ಯಾವಾಗಲೂ ಬಯಸುತ್ತೇನೆ. ಹೌದು, ನಾನು ಸಾಮಾಜಿಕವಾಗಿ ಜಾಗೃತ ನಾಗರಿಕ. ನಾನು ಸಾಮಾಜಿಕವಾಗಿ ಸಂಬಂಧಿಸಿದ ಅನೇಕ ಸಮಸ್ಯೆಗಳ ಕುರಿತ ಬೀದಿ ನಾಟಕವನ್ನು ಮಾಡಿದ್ದೇನೆ ಮತ್ತು ನಾನು ಮಾಡುತ್ತಿರುವ ಸಿನೆಮಾ ನನ್ನ ರಂಗಭೂಮಿ ದಿನಗಳ ವಿಸ್ತರಣೆಯಾಗಿದೆ ಎನ್ನುತ್ತಾರೆ.

ಗಣರಾಜ್ಯೋತ್ಸವದ ಮಹತ್ವ ಮತ್ತು ದೇಶಪ್ರೇಮವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ಎಂಬ ಪ್ರಶ್ನೆಗೆ
ಗಣರಾಜ್ಯೋತ್ಸವು ನಮ್ಮ ದೇಶದಲ್ಲಿ ಒಬ್ಬರಾಗಿ ನಮ್ಮ ದೇಶವು ಹೊಂದಿರು ಬಹು – ಸಾಂಸ್ಕೃತಿಕ ವಿಭಿನ್ನತೆಯನ್ನು ಸಂಭ್ರಮಿಸಬೆಕು. ನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ. ದೇಶಪ್ರೇಮವು ಒಂದು ಜವಾಬ್ದಾರಿಯೊಂದಿಗೆ ಬರುತ್ತದೆ, ನಿಮ್ಮ ದೇಶದ ಮೇಲಿನ ಪ್ರೀತಿಯು ನಾನು ಪುನರುಚ್ಚರಿಸಿದಂತೆ ಇದು ಕುರುಡು ಪ್ರೀತಿ ಆಗಿರಬಾರದು ಎನ್ನುತ್ತಾರೆ.

ನಮ್ಮ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ಇದು ನಮ್ಮ ಅತಿದೊಡ್ಡ ಶಕ್ತಿ ಮತ್ತು ನಮ್ಮ ದೊಡ್ಡ ದೌರ್ಬಲ್ಯವೂ ಆಗಿದೆ. ನಾವು ವೈವಿಧ್ಯಮಯರು ಜೊತೆಗೆ ನಾವು ಒಟ್ಟಾಗಿರಬೇಕು. ನಾನು ಆಚರಿಸುವುದು ಭಾರತವು ಸಂಸ್ಕೃತಿಯಾಗಿದೆ. ನಮ್ಮ ಕೊರತೆಯೆಂದರೆ ನಾವು ದೇಶವನ್ನು ಸ್ವಚ್ಛವಾಗಿಟ್ಟಿಲ್ಲ. ಸಣ್ಣ ಆರ್ಥಿಕತೆಯನ್ನು ಹೊಂದಿರುವ ದೇಶಗಳು ಸಹ ನಮಗಿಂತ ಸ್ವಚ್ಛವಾಗಿವೆ ಎನ್ನುತ್ತಾರೆ.

ಎಲ್ಜಿಬಿಟಿಕ್ ಸಮುದಾಯ ಮತ್ತು ವಿವಿಧ ಜಾತಿಯ ಜನರಿಗೆ ಸಾಂವಿಧಾನಿಕ ಸಿಂಧುತ್ವ ಇರಬಹುದು, ಆದರೆ ಅಂತಿಮವಾಗಿ ಸ್ವೀಕಾರಾರ್ಹತೆಯ ಜವಾಬ್ದಾರಿ ರಾಷ್ಟ್ರದ ಜನರ ಮೇಲಿದೆ ಎಂದು ನೀವು ನಂಬುತ್ತೀರಾ? ಎಂಬ ಪ್ರಶ್ನೆಗೆ ಅವರು ಈ ಸಮುದಾಯದ ಕುರಿತು ಯೂಟ್ಯೂಬ್‌ನಲ್ಲಿ ಟ್ರೈಲರ್‌ನಲ್‌ಇ ನಾವು ನೋಡಿದ ರೀತಿಯ ವೀಕ್ಷಣೆಗಳು ಮತ್ತು ಕಾಮೆಂಟ್‌ಗಳು ನಮ್ಮ ದೇಶದ ಪ್ರಗತಿಪರ ನಿಲುವನ್ನು ತೋರಿಸುತ್ತದೆ. ಇದು ಸಲಿಂಗಕಾಮವನ್ನು ಆಧರಿಸಿದ ಚಿತ್ರಕ್ಕಾಗಿ ಸಿದ್ಧವಾಗಿದೆ. ಚಿತ್ರದ ಟ್ರೈಲರ್ ಅನ್ನು ನಮ್ಮ ದೇಶ ಸ್ವೀಕರಿಸಿದೆ ಎಂದು ಅದು ತೋರಿಸುತ್ತದೆ. ಇದು 2020ರ ಸಲಿಂಗಕಾಮಿ ಪ್ರೇಮಕಥೆಯ ಮುಖ್ಯವಾಹಿನಿಯ ಅತಿ ದೊಡ್ಡ ಕಮರ್ಷಿಯಲ್‌ ಹಿಂದಿ ಸಿನೆಮಾವಾಗಿದೆ ಎಂದಿದ್ದಾರೆ.

ನಮ್ಮ ಚಲನಚಿತ್ರೋದ್ಯಮದ ಸಾಮಾಜಿಕ ಒಳಗೊಳ್ಳುವಿಕೆ ಸಾಕಷ್ಟಿದೆಯೇ? ಎಂಬ ಪ್ರಶ್ನೆಗೆ ಉದ್ಯಮದಲ್ಲಿ ನಾವು ಮುಕ್ತತೆಯಿಂದ ಇದ್ದೇವೆ. ನೀವು ಯಾವ ಜಾತಿ, ಬಣ್ಣ, ಧರ್ಮಕ್ಕೆ ಸೇರಿದವರು ಅಥವಾ ನಿಮ್ಮ ಲೈಂಗಿಕತೆ ಏನೆಂಬುದು ನಮಗೆ ಮುಖ್ಯವಲ್ಲ. ನಿಮ್ಮ ಪ್ರತಿಭೆಯ ಬಗ್ಗೆ ಮಾತ್ರ ನಾವು ಕಾಳಜಿ ವಹಿಸುತ್ತೇವೆ. ನೀವು ಸಾಕಷ್ಟು ಒಳ್ಳೆಯವರಾಗಿದ್ದರೆ, ನೀವು ಅಲ್ಲಿಗೆ ಹೋಗುತ್ತೀರಿ ಮತ್ತು ನಿಮಗಾಗಿ ಒಳ್ಳೆಯದನ್ನು ಮಾಡುತ್ತೀರಿ ಎಂದು ಅವರು ಹೇಳಿದ್ದಾರೆ.

ಕೃಪೆ: ಹಿಂದೂಸ್ತಾನ್‌ ಟೈಮ್ಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...