Homeಮುಖಪುಟಪೆಗಾಸಸ್‌: ನ್ಯೂಯಾರ್ಕ್ ಟೈಮ್ಸ್‌ ವರದಿ ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌‌ಗೆ ಎಡಿಟರ್ಸ್ ಗಿಲ್ಡ್‌‌ ಪತ್ರ

ಪೆಗಾಸಸ್‌: ನ್ಯೂಯಾರ್ಕ್ ಟೈಮ್ಸ್‌ ವರದಿ ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌‌ಗೆ ಎಡಿಟರ್ಸ್ ಗಿಲ್ಡ್‌‌ ಪತ್ರ

- Advertisement -
- Advertisement -

ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚಾರಿಕೆ ಮಾಡಲಾಗಿದೆ ಎಂಬ ಆರೋಪಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಯು ದಿ ನ್ಯೂಯಾರ್ಕ್ ಟೈಮ್ಸ್‌ನ ತನಿಖಾ ವರದಿಯನ್ನೂ ಪರಿಶೀಲಿಸಬೇಕು ಎಂದು ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಒತ್ತಾಯಿಸಿದೆ.

ಭಾರತ ಸರ್ಕಾರವು 2017ರಲ್ಲಿ ಇಸ್ರೇಲ್‌ನಿಂದ ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ. ಸುಮಾರು 2 ಶತಕೋಟಿ ಡಾಲರ್‌‌ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಪ್ಯಾಕೇಜ್‌ನ ಭಾಗವಾಗಿ ಭಾರತವು ಸ್ಪೈವೇರ್ ಖರೀದಿಸಿದೆ ಎಂದು ವರದಿ ಉಲ್ಲೇಖಿಸಿದೆ.

NSO ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಬಳಕೆಯ ಕುರಿತು ಪ್ರಪಂಚದಾದ್ಯಂತದ ಹಲವಾರು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ್ದವು. ಭಾರತದಲ್ಲಿಯೂ ಅನೇಕ ಗಣ್ಯರ ಮೇಲೆ ಗೂಢಚಾರಿಕೆ ಮಾಡಲಾಗುತ್ತಿದೆ ಎಂಬ ವರದಿಯನ್ನು ಸುದ್ದಿಜಾಲತಾಣ, ‘ದಿ ವೈರ್‌‌’ ವರದಿ ಮಾಡಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್‌ ಅವರಿಗೆ ಪತ್ರ ಬರೆದಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ನ್ಯೂಯಾರ್ಕ್ ಟೈಮ್ಸ್‌ ವರದಿಯನ್ನು ಉಲ್ಲೇಖೀಸಿದೆ. ಕೇಂದ್ರ ಸರ್ಕಾರ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಮತ್ತು ಆಪಾದಿತ ಸಚಿವಾಲಯಗಳ ಕಾರ್ಯದರ್ಶಿಗಳಿಂದ ಪ್ರತಿಕ್ರಿಯೆ ಕೇಳುವಂತೆ ಸಮಿತಿಗೆ ಮನವಿ ಮಾಡಿದೆ.

ಪೆಗಾಸಸ್ ಸ್ಪೈವೇರ್ ಬಗ್ಗೆ ತನಿಖೆ ಮಾಡಲು ಅಕ್ಟೋಬರ್ 27ರಂದು ಸುಪ್ರೀಂ ಕೋರ್ಟ್ ನೇಮಿಸಿದ ಮೂವರು ಸದಸ್ಯರ ತಾಂತ್ರಿಕ ಸಮಿತಿಗೆ ನ್ಯಾಯಮೂರ್ತಿ ರವೀಂದ್ರನ್ ಮುಖ್ಯಸ್ಥರಾಗಿದ್ದಾರೆ.

ಪತ್ರಕರ್ತರು, ಭಿನ್ನಮತೀಯರನ್ನು ಗುರಿಯಾಗಿಸಲು ಮೆಕ್ಸಿಕೋ ದೇಶ ಪೆಗಾಸಸ್ ಬಳಸಿದೆ. ಸೌದಿ ಅರೇಬಿಯಾ ದೇಶಯು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಸೌದಿ ಕಾರ್ಯಕರ್ತರಿಂದ ಕೊಲ್ಲಲ್ಪಟ್ಟ ಅಂಕಣಕಾರ ಜಮಾಲ್ ಖಶೋಗಿಯ ಸಹಚರರ ವಿರುದ್ಧ ಸ್ಪೈವೇರ್ ಬಳಸಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಹೇಳಿದೆ. ಇಸ್ರೇಲಿ ರಕ್ಷಣಾ ಸಚಿವಾಲಯದಿಂದ ಪರವಾನಗಿ ಪಡೆದ ಹೊಸ ಒಪ್ಪಂದಗಳ ಅಡಿಯಲ್ಲಿ, ಪೋಲೆಂಡ್, ಹಂಗೇರಿ, ಭಾರತ ಮತ್ತು ಇತರ ದೇಶಗಳಿಗೆ ಪೆಗಾಸಸ್ ಅನ್ನು ಒದಗಿಸಲಾಗಿದೆ ಎಂದು ತನಿಖಾ ವರದಿ ಮಾಡಲಾಗಿದೆ.

ಜುಲೈ 2017ರಲ್ಲಿ ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಆಗಿನ ಒಪ್ಪಂದಗಳತ್ತ ತನಿಖಾ ವರದಿ ಬೆರಳು ತೋರಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯು ಐತಿಹಾಸಿಕವಾಗಿ ಗಮನ ಸೆಳೆಯಿತು. ಅಲ್ಲದೆ ಸೌಹಾರ್ದಯುತವಾಗಿತ್ತು. ಮೋದಿ ಹಾಗೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಥಳೀಯ ಕಡಲತೀರದಲ್ಲಿ ಬರಿಗಾಲಿನಲ್ಲಿ ತಿರುಗಾಡಿದ್ದರು. ಸುಮಾರು 2 ಬಿಲಿಯನ್ ಡಾಲರ್‌ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಪ್ಯಾಕೇಜ್ ಅನ್ನು ಮಾರಾಟ ಮಾಡಲು ಉಭಯ ದೇಶಗಳು ಒಪ್ಪಿಕೊಂಡವು ಎಂದು ವರದಿ ಹೇಳುತ್ತದೆ.

ತಿಂಗಳುಗಳ ನಂತರ ಆ ಸಮಯದಲ್ಲಿ ಇಸ್ರೇಲಿ ಪ್ರಧಾನಿ ನೆತನ್ಯಾಹು ಅವರು ಭಾರತಕ್ಕೆ ಅಪರೂಪದ ಭೇಟಿ ನೀಡಿದರು. ಜೂನ್ 2019ರಲ್ಲಿ ಭಾರತವು ಯುಎನ್‌ನ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ವೀಕ್ಷಕ ಸ್ಥಾನಮಾನವನ್ನು ನಿರಾಕರಿಸಲು ಇಸ್ರೇಲ್‌ಗೆ ಬೆಂಬಲವಾಗಿ ಮತ ಹಾಕಿತು ಎಂದು ವರದಿ ಉಲ್ಲೇಖಿಸಿದೆ.


ಇದನ್ನೂ ಓದಿರಿ: ಬಜೆಟ್ ಅಧಿವೇಶನ: ಪೆಗಾಸಸ್‌‌ ಗೂಢಚಾರಿಕೆ ಪ್ರಶ್ನಿಸಲು ಪ್ರತಿಪಕ್ಷಗಳು ಸಜ್ಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...