Homeಮುಖಪುಟ'ದೇಶವನ್ನು ಹಾಳುಗೆಡವುತ್ತಿರುವ ದಬ್ಬಾಳಿಕೆ ಶಕ್ತಿಗಳನ್ನು ಜನ ಸೋಲಿಸುತ್ತಾರೆ..'; ಕಲ್ಪನಾ ಸೊರೇನ್

‘ದೇಶವನ್ನು ಹಾಳುಗೆಡವುತ್ತಿರುವ ದಬ್ಬಾಳಿಕೆ ಶಕ್ತಿಗಳನ್ನು ಜನ ಸೋಲಿಸುತ್ತಾರೆ..’; ಕಲ್ಪನಾ ಸೊರೇನ್

- Advertisement -
- Advertisement -

‘ತಮ್ಮ ಪತಿ ಹೇಮಂತ್ ಸೊರೆನ್ ಮತ್ತು ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧದ ಆರೋಪಗಳನ್ನು ಯಾರಿಂದಲೂ ಸಾಬೀತುಪಡಿಸಲು ಸಾಧ್ಯವಿಲ್ಲ; ದೇಶವನ್ನು ಹಾಳು ಮಾಡುತ್ತಿರುವ ದಬ್ಬಾಳಿಕೆಯ ಶಕ್ತಿಗಳನ್ನು ಜನತೆ ಸೋಲಿಸುತ್ತಾರೆ’ ಎಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೆನ್ ಹೇಳಿದ್ದು,”ಪ್ರಜಾಪ್ರಭುತ್ವವನ್ನು ಉಳಿಸಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಪಕ್ಷಗಳಿಗೆ ಮತ ಚಲಾಯಿಸಬೇಕು” ಎಂದು ಜನರನ್ನು ಒತ್ತಾಯಿಸಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಲೋಕತಂತ್ರ ಬಚಾವೋ’ (ಪ್ರಜಾಪ್ರಭುತ್ವ ಉಳಿಸಿ) ಮಹಾ ರ್ಯಾಲಿಯಲ್ಲಿ ಮಾತನಾಡಿದ ಕಲ್ಪನಾ, “ಯಾರು ಎಷ್ಟೇ ದೊಡ್ಡವರಾದರೂ ಶ್ರೇಷ್ಠರಾಗಲು ಸಾಧ್ಯವಿಲ್ಲ. ದೊಡ್ಡ ವಿಷಯವೆಂದರೆ ಸಾರ್ವಜನಿಕರು. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಿಮ್ಮ ಮತವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಲ್ಲದೆ, ಇಂಡಿಯಾ ಮೈತ್ರಿಕೂಟ ಗೆಲ್ಲಲೇಬೇಕು. ಕೇಜ್ರಿವಾಲ್ 10 ದಿನದಿಂದ ಜೈಲಿನಲ್ಲಿದ್ದಾರೆ. ಎರಡು ತಿಂಗಳ ಹಿಂದೆ ಹೇಮಂತ್ ಸೊರೇನ್ ಅವರನ್ನು ಬಂಧಿಸಲಾಗಿತ್ತು. ಇದುವರೆಗೂ ಅವರ ಮೇಲಿನ ಆರೋಪ ಸಾಬೀತುಪಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ; ನಿಮ್ಮ ಮತವೇ ದೊಡ್ಡ ನ್ಯಾಯಾಲಯ” ಎಂದು ಜನರಲ್ಲಿ ಮನವಿ ಮಾಡಿದರು.

ದೆಹಲಿ ಸಿಎಂ ಪತ್ನಿ ಸುನಿತಾ ಕೇಜ್ರಿವಾಲ್ ನಂತರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಲ್ಪನಾ ಸೊರೆನ್, “ದೇಶವನ್ನು ನಾಶಮಾಡಲು ನಿರ್ಧರಿಸಿದ ನಿರಂಕುಶ ಶಕ್ತಿಗಳಿಗೆ ವಿರೋಧವಿದೆ ಎಂಬುದನ್ನು ಈ ಜನಸಾಗರ ಇಂದು ಸಾಬೀತುಪಡಿಸುತ್ತದೆ” ಎಂದು ಹೇಳಿದರು.

“ದೇಶದ ಜನರು ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರಿಗಿಂತ ದೊಡ್ಡವರು. ಪ್ರಜಾಪ್ರಭುತ್ವವನ್ನು ಉಳಿಸಲು ನಮಗೆ ಮತ ನೀಡುವ ಮೂಲಕ ಇಂಡಿಯಾ ಮೈತ್ರಿಯನ್ನು ಬಲಪಡಿಸಿ. ದೇಶವನ್ನು ಹಾಳು ಮಾಡುತ್ತಿರುವ ದಬ್ಬಾಳಿಕೆಯ ಶಕ್ತಿಗಳನ್ನು ಜನತೆ ಸೋಲಿಸುತ್ತಾರೆ. ಇದು ಇಂದಿನ ಜನಸಮೂಹದಿಂದ ಸಾಬೀತಾಗಿದೆ” ಎಂದು ಅವರು ಹೇಳಿದರು.

“ಈ ದೇಶದ 140 ಕೋಟಿ ಜನರೇ ನಮ್ಮ ಶಕ್ತಿ, ಆದರೆ ಬಿಆರ್ ಅಂಬೇಡ್ಕರ್ ಅವರು ನೀಡಿದ ಭರವಸೆಗಳನ್ನು ಕಸಿದುಕೊಳ್ಳುವ ಮತ್ತು ಸಮುದಾಯಗಳ ನಡುವೆ ಒಡಕು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಎದುರಾಳಿಯನ್ನು ಸೋಲಿಸಿದ ನಂತರವೂ ಗೌರವ ನೀಡಿದ ಭಗವಾನ್ ರಾಮನಿಂದ ನಾವು ಪಾಠ ಕಲಿಯಬೇಕಾಗಿದೆ” ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಭಾರತೀಯ ಜನತಾ ಪಕ್ಷದ (ಬಿಜೆಪಿ) “ಮೋದಿ ಕಿ ಗ್ಯಾರಂಟಿ” ಚುನಾವಣಾ ಘೋಷಣೆಯನ್ನು ಲೇವಡಿ ಮಾಡಿದ ಅವರು, “ಎನ್‌ಡಿಎ ಗ್ಯಾರಂಟಿಯನ್ನು ಯಾರು ತೆಗೆದುಕೊಳ್ಳುತ್ತಾರೆ” ಎಂದು ಪ್ರಶ್ನಿಸಿದರು.

“ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಬೀದಿಗೆ ಬರಬೇಕು, ಜಾರ್ಖಂಡ್ ತಲೆಬಾಗುವುದಿಲ್ಲ. ಈ ಐತಿಹಾಸಿಕ ‘ಸಂಕಲ್ಪ ಸಭೆ’ಯನ್ನು ಇಂದು (ದೇಶದಲ್ಲಿ) ಸರ್ವಾಧಿಕಾರದ ವಿರುದ್ಧ ಆಯೋಜಿಸಲಾಗುತ್ತಿದೆ. ಇಂದು ಇಲ್ಲಿಗೆ ಬಂದಿರುವ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ, ಇದು ಇಂಡಿಯಾ ಮೈತ್ರಿಯನ್ನು ಬಲಪಡಿಸುತ್ತದೆ” ಎಂದು ಅವರು ಹೇಳಿದರು.

ಮೈತ್ರಿಕೂಟದ ಪ್ರಜಾಪ್ರಭುತ್ವ ಉಳಿಸಿ ರ್ಯಾಲಿಯಲ್ಲಿ ದೇಶಾದ್ಯಂತದ ಪ್ರಮುಖ ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಯಿಂದ ಮೆಹಬೂಬಾ ಮುಫ್ತಿ, ಸಮಾಜವಾದಿ ಪಕ್ಷದಿಂದ (ಎಸ್‌ಪಿ) ಅಖಿಲೇಶ್ ಯಾದವ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ ಶರದ್ ಪವಾರ್ (ಶರದ್ಚಂದ್ರ ಪವಾರ್), ನ್ಯಾಷನಲ್ ಕಾನ್ಫರೆನ್ಸ್‌ನಿಂದ ಫಾರೂಕ್ ಅಬ್ದುಲ್ಲಾ ಸೇರಿದಂತೆ ನಾಯಕರು ( ಎನ್‌ಸಿ), ಮತ್ತು ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ತೇಜಸ್ವಿ ಯಾದವ್, ಇತರರು ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದರು.

ಇದನ್ನೂ ಓದಿ; ಮ್ಯಾಚ್ ಫಿಕ್ಸಿಂಗ್ ಇಲ್ಲದೆ 400 ಸ್ಥಾನ ಗೆಲ್ಲುವ ಘೋಷಣೆ ಸಾಧ್ಯವಿಲ್ಲ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read