Homeಮುಖಪುಟಟಿಎಂಸಿ ಇಂಡಿಯಾ ಬಣದ ಭಾಗವಾಗಿದೆ; ಮುಂದೆಯೂ ಇರುತ್ತದೆ: ಡೆರೆಕ್ ಒ'ಬ್ರಿಯಾನ್

ಟಿಎಂಸಿ ಇಂಡಿಯಾ ಬಣದ ಭಾಗವಾಗಿದೆ; ಮುಂದೆಯೂ ಇರುತ್ತದೆ: ಡೆರೆಕ್ ಒ’ಬ್ರಿಯಾನ್

- Advertisement -
- Advertisement -

ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಂದ ಪ್ರತಿಪಕ್ಷಗಳ ನಾಯಕರ ಮೇಲಿನ ದಾಳಿ ಮತ್ತು ಬಂಧನ ಖಂಡಿಸಿ ಇಂಡಿಯಾ ಬ್ಲಾಕ್ ನಾಯಕರು ಇಂದು ಪ್ರತಿಭಟನಡೆ ನಡೆಸುತ್ತಿದ್ದು, ವಿರೋಧ ಪಕ್ಷದ ಕೂಟದಿಂದ ಅಂತರ ಕಾಯ್ದುಕೊಂಡಿರುವ ತೃಣಮೂಲ ಕಾಂಗ್ರೆಸ್ ಅಚ್ಚರಿಯ ಹೇಳಿಕೆ ನೀಡಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯು ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ, ಮೈತ್ರಿಕೂಟದೊಳಗಿನ ಕಿತ್ತಾಟದ ವರದಿಗಳ ಮಧ್ಯೆಯೇ “ತೃಣಮೂಲ ಕಾಂಗ್ರೆಸ್ ಪ್ರತಿಪಕ್ಷಗಳ ಇಂಡಿಯಾ ಬಣದ ಭಾಗವಾಗಿದೆ” ಎಂದು ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರಿಯಾನ್ ಭಾನುವಾರ ಘೋಷಿಸಿದ್ದಾರೆ.

“ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ, ಇದೆ ಮತ್ತು ಇರುತ್ತದೆ; ಇದು ಬಿಜೆಪಿ ವಿರುದ್ಧ ಪ್ರಜಾಪ್ರಭುತ್ವದ ಹೋರಾಟ” ಎಂದು ಡೆರೆಕ್ ಒ’ಬ್ರೇನ್ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಬ್ಲಾಕ್ ‘ಪ್ರಜಾಪ್ರಭುತ್ವ ಉಳಿಸಿ’ ರ್ಯಾಲಿಯಲ್ಲಿ ಹೇಳಿದರು.

ಪಕ್ಷವು ತನ್ನ ಐದು ಹಾಲಿ ಲೋಕಸಭಾ ಸದಸ್ಯರನ್ನು ಕೈಬಿಟ್ಟಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಸೇರಿದಂತೆ ಹೊಸ ಅಭ್ಯರ್ಥಿಗಳ ಪಟ್ಟಿಗೆ ಹೆಸರಿಸಿದ್ದಾರೆ. ಯೂಸಫ್ ಅವರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮತ್ತು ಐದು ಬಾರಿ ಬಹರಂಪುರ ಕ್ಷೇತ್ರದಿಂದ ಸಂಸದರಾಗಿರುವ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಲಿದ್ದಾರೆ.

ಅಧೀರ್ ರಂಜನ್ ಚೌಧರಿ ಟಿಎಂಸಿ ಮುಖ್ಯಸ್ಥ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯನ್ನು ಟೀಕಿಸಿದ್ದು, “ಪಶ್ಚಿಮ ಬಂಗಾಳದ ಎಲ್ಲಾ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಮಮತಾ ಬ್ಯಾನರ್ಜಿ ಯಾವುದೇ ರಾಜಕೀಯ ನಾಯಕ ಅಥವಾ ಪಕ್ಷವು ತನ್ನನ್ನು ನಂಬಬಾರದು ಎಂದು ಸಾಬೀತುಪಡಿಸಿದ್ದಾರೆ. ಅವರು ಇಂಡಿಯಾ ಬಣದಲ್ಲಿ ಇಲ್ಲ ಎಂಬ ಸಂದೇಶವನ್ನು ಪ್ರಧಾನಿ ಕಚೇರಿಗೆ ಕಳುಹಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಭಾನುವಾರದ ರ್ಯಾಲಿಯಲ್ಲಿ, ಡೆರೆಕ್ ಒ’ಬ್ರಿಯಾನ್ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಟೀಕಿಸಿದರು, ಪ್ರಧಾನಿ ನೀಡುವ ಖಾತರಿಗಳು “ಶೂನ್ಯ ವಾರಂಟಿ” ಎಂದು ಹೇಳಿದರು.

“ಮೋದಿಯವರ ಗ್ಯಾರಂಟಿ ಶೂನ್ಯ ವಾರಂಟಿಯನ್ನು ಹೊಂದಿದೆ! ಬೆಲೆ ಏರಿಕೆ, ಉದ್ಯೋಗಗಳು ಮತ್ತು ಭಾರತದ ಸಂಸ್ಥೆಗಳನ್ನು ರಕ್ಷಿಸುವ ವಿಚಾರದಲ್ಲಿ ಶೂನ್ಯ ವಾರಂಟಿ” ಎಂದು ಅವರು ಹೇಳಿದರು.

2019 ರ ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು “ನರೇಂದ್ರ ಮೋದಿ ಸತ್ಯ ಹೊರಬರಲು ಬಯಸುವುದಿಲ್ಲ” ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ ಎಂದು ಹೇಳಿದರು.

“ನರೇಂದ್ರ ಮೋದಿ ಏನು ಮರೆಮಾಡಲು ಬಯಸಿದ್ದರು? ನಮ್ಮ ಯೋಧರು ಪ್ರಾಣ ತ್ಯಾಗ ಮಾಡಿದಾಗ ನರೇಂದ್ರ ಮೋದಿಯವರು ಹತಾಶವಾಗಿ ಮತ ಕೇಳುವ ಅಗ್ಗದ ರಾಜಕಾರಣವನ್ನು ಏಕೆ ಮಾಡಿದರು” ಎಂದು ಪ್ರಶ್ನಿಸಿದರು.

“ನಮ್ಮ ಯೋಧರನ್ನು ಗೌರವಿಸಲು ಸತ್ಯವನ್ನು ಹೊರತರಬೇಕೆಂದು ನಾವು ಒತ್ತಾಯಿಸುತ್ತೇವೆ. ನಾವು ಶ್ವೇತಪತ್ರವನ್ನು ಕೇಳುತ್ತೇವೆ” ಎಂದು ಹೇಳಿದರು.

ಟಿಎಂಸಿ ಸಂಸದೆ ಸಾಗರಿಕಾ ಘೋಸ್ ಅವರು ಇಂಡಿಯಾ ಬ್ಲಾಕ್‌ಗೆ ಪಕ್ಷದ ಬೆಂಬಲವನ್ನು ಪುನರುಚ್ಚರಿಸಿದರು. “ಟಿಎಂಸಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪರವಾಗಿ, ಟಿಎಂಸಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ಜೊತೆಗಿದೆ ಎಂದು ಹೇಳಲು ನಾನು ಬಯಸುತ್ತೇನೆ. ಟಿಎಂಸಿ ಇಂಡಿಯಾ ಮೈತ್ರಿಯೊಂದಿಗೆ ಇದೆ ಎಂದು ನಾನು ಹೇಳಲು ಬಯಸುತ್ತೇನೆ” ಎಂದು ಅವರು ಹೇಳಿದರು.

ಇಂಡಿಯಾ ಬ್ಲಾಕ್ ಮಹಾ ರ್ಯಾಲಿ

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳ ನಾಯಕರು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಶಕ್ತಿ ಪ್ರದರ್ಶನದಲ್ಲಿ ನಡೆಸಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎಸ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೋರೆನ್ ಕೂಡ ಉಪಸ್ಥಿತರಿದ್ದರು.

ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ರದ್ದುಪಡಿಸಿದ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿಸಲಾಯಿತು. ಅವರು ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಯಲ್ಲಿರಲಿದ್ದಾರೆ.

ಇದನ್ನೂ ಓದಿ; ‘ದೇಶವನ್ನು ಹಾಳುಗೆಡವುತ್ತಿರುವ ದಬ್ಬಾಳಿಕೆ ಶಕ್ತಿಗಳನ್ನು ಜನ ಸೋಲಿಸುತ್ತಾರೆ..’; ಕಲ್ಪನಾ ಸೊರೇನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...