Homeಮುಖಪುಟ₹ 2,000 ನೋಟುಗಳ ಹಿಂತೆಗೆತ: ಮೋದಿ ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳ ದಾಳಿ

₹ 2,000 ನೋಟುಗಳ ಹಿಂತೆಗೆತ: ಮೋದಿ ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳ ದಾಳಿ

- Advertisement -
- Advertisement -

₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಆರ್‌ಬಿಐ ಘೋಷಿಸಿದ ಬೆನ್ನಲ್ಲೇ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ವೈಫಲ್ಯದ ವಿರುದ್ಧ ಪ್ರತಿಪಕ್ಷಗಳು ದಾಳಿ ನಡೆಸಿವೆ.

ಮಾಜಿ ವಿತ್ತ ಸಚಿವ ಪಿ.ಚಿದಂಬರಂ ನೋಟು ಅಮಾನ್ಯೀಕರಣ ಎಂಬುದು ಒಂದು ವಿಫಲ ಯೋಜನೆ ಎಂದು ನವು 2016ರಲ್ಲಿಯೇ ಹೇಳಿದ್ದೆವು. ಈಗ ಅದು ಸಾಬೀತಾಗಿದೆ ಎಂದಿದ್ದಾರೆ.

“500 ಮತ್ತು 1000 ರೂಪಾಯಿ ನೋಟು ಅಮಾನ್ಯೀಕರಣದ ಮೂರ್ಖತನದ ನಿರ್ಧಾರವನ್ನು ಮುಚ್ಚಿಹಾಕಲು 2000 ರೂಪಾಯಿ ನೋಟನ್ನು ಕೇಂದ್ರ ಸರ್ಕಾರ ಪರಿಚಯಿಸಿತ್ತು. ಆದರೆ 2000 ರೂಪಾಯಿ ನೋಟು ಅಷ್ಟೇನೂ ಜನಪ್ರಿಯ ವಿನಿಮಯ ಮಾಧ್ಯಮವಲ್ಲ. ಬದಲಿಗೆ 500 ಮತ್ತು 1000 ರೂಪಾಯಿ ನೋಟುಗಳು ಜನಪ್ರಿಯವಾಗಿದ್ದವು ಮತ್ತು ವ್ಯಾಪಕವಾಗಿ ವಿನಿಮಯಗೊಂಡ ಕರೆನ್ಸಿಗಳಾಗಿದ್ದವು. ನಾವು ಇದನ್ನು ನವೆಂಬರ್ 2016 ರಲ್ಲಿ ಹೇಳಿದ್ದೇವೆ ಮತ್ತು ಅದು ಸರಿ ಎಂದು ಸಾಬೀತುಪಡಿಸಿದ್ದೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ನೋಟು ಅಮಾನ್ಯೀಕರಣದ ಕೆಲವು ವಾರಗಳ ನಂತರ, ಸರ್ಕಾರ/ಆರ್‌ಬಿಐ 500 ರೂ ನೋಟನ್ನು ಪುನಃ ಪರಿಚಯಿಸುವಂತೆ ಒತ್ತಾಯಿಸಲಾಯಿತು. ಈಗ ಸರ್ಕಾರ/ಆರ್‌ಬಿಐ 1000 ರೂಪಾಯಿ ನೋಟನ್ನು ಪುನಃ ಪರಿಚಯಿಸಿದರೆ ನನಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ನೋಟು ಅಮಾನ್ಯೀಕರಣದ ಬಂಡವಾಳ ಬಯಲಾಗಿದೆ ಎಂದು ಚಿದಂಬರಂ ಟೀಕಿಸಿದ್ದಾರೆ.

ಪ್ರಧಾನಿಗೆ ಶಿಕ್ಷಣ ಬೇಕು – ಕೇಜ್ರಿವಾಲ್ ವ್ಯಂಗ್ಯ

ಭ್ರಷ್ಟಾಚಾರ ನಿರ್ಮೂಲನೆ ಮಾಡಲು 2000 ರೂ ನೋಟುಗಳನ್ನು ಪರಿಚಯಿಸಲಾಗಿತ್ತು. ಈಗ ಅವುಗಳನ್ನು ರದ್ದುಪಡಿಸುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಅದಕ್ಕೆ ಹೇಳುವುದು ಪ್ರಧಾನಿ ಶಿಕ್ಷಣ ಬೇಕೆಂದು. ಅನಕ್ಷರಸ್ಥ ಪ್ರಧಾನಿಗೆ ಯಾರು ಏನು ಬೇಕಾದರೂ ಹೇಳುತ್ತಾರೆ. ಆದರೆ ಅವರಿಗೆ ಅರ್ಥವಾಗುತ್ತಿಲ್ಲ. ಅದರಿಂದ ಜನರು ಕಷ್ಟ ನಷ್ಟ ಅನುಭವಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.

ಮೊದಲು ಕೆಲಸ – ನಂತರ ಯೋಚನೆ : ಜೈರಾಂ ರಮೇಶ್

ಮೊದಲು ಕೆಲಸ ನಂತರ ಯೋಚನೆ (ಎಫ್‌ಎಎಸ್‌ಟಿ) ನಮ್ಮ ಸ್ವಯಂ ಘೋಷಿತ ವಿಶ್ವಗುರುವಿನ (ಪ್ರಧಾನಿ ಮೋದಿ) ವೈಶಿಷ್ಟ್ಯವಾಗಿದೆ. 2016ರ ನವೆಂಬರ್‌ 8 ರಂದು ತುಘಲಕ್ ಶಾಸನದಂತೆ ಭಾರೀ ಅಬ್ಬರದೊಂದಿಗೆ ಪರಿಚಯಿಸಿದ ₹2000 ಮುಖಬೆಲೆಯ ನೋಟುಗಳನ್ನು ಈಗ ಹಿಂತೆಗೆದುಕೊಳ್ಳಲಾಗುತ್ತಿದೆ” ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.

“2000 ಮುಖಬೆಲೆಯ ನೋಟುಗಳ ಚಲಾವಣೆ ಹಿಂಪಡೆಯಲಾಗುತ್ತಿದೆ. ಈಗ ಅಸ್ತಿತ್ವದಲ್ಲಿರುವ ನೋಟುಗಳನ್ನು ನಾಗರಿಕರು ತಮ್ಮ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಸೆಪ್ಟೆಂಬರ್‌ 30ರೊಳಗೆ ವಿನಿಮಯ ಮಾಡಿಕೊಳ್ಳಬಹುದು” ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರ ನವೆಂಬರ್‌ 8 ರಂದು 500 ಮತ್ತು 1000 ಮುಖಬೆಲೆಯ ನೊಟುಗಳನ್ನು ಅಮಾನ್ಯೀಕರಣಗೊಳಿಸಿತ್ತು ಮತ್ತು 2000 ಮುಖಬೆಲೆಯ ನೋಟನ್ನು ಪರಿಚಯಿಸಿತ್ತು. ಅಲ್ಲದೇ ಈ ನಿರ್ಧಾರ ತಪ್ಪಾಗಿದ್ದರೆ ನನ್ನನ್ನು ಜೀವಂತ ಸುಟ್ಟುಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿ ಎದೆಯುಬ್ಬಿಸಿ ಹೇಳಿದ್ದರು. ಆದರೆ ಆ ಯೋಜನೆ ಸಂಪೂರ್ಣ ವಿಫಲವಾಗಿದೆ. ಅಲ್ಲದೇ ಭಾರತದ ಆರ್ಥಿಕತೆ ದೊಡ್ಡ ಹೊಡೆತ ನೀಡಿದೆ. ನೋಟು ಅಮಾನ್ಯೀಕರಣದಿಂದಾಗಿ ಬಡವರು ಬೀದಿಗೆ ಬಿದ್ದಿದ್ದಾರೆ. ನೂರಾರು ಜನರು ಸಾವನಪ್ಪಿದ್ದಾರೆ. ಸಣ್ಣ-ಪುಟ್ಟ ವ್ಯಾಪಾರಿಗಳು ನೆಲ ಕಚ್ಚಿದ್ದಾರೆ. ಇಷ್ಟೆಲ್ಲ ಆದ ನಂತರ ಮೋದಿ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ.

ಇದನ್ನೂ ಓದಿ: ಕೋವಿಡ್ ದುರಂತದ ಮೂಲ ಮೋದಿಯವರ ನೋಟು ಅಮಾನ್ಯೀಕರಣದಲ್ಲಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...