Homeರಂಜನೆಕ್ರೀಡೆಮುಂಬೈ ಇಂಡಿಯನ್ಸ್ ಸೋತರೂ RCB ಪ್ಲೇಆಫ್ ಪ್ರವೇಶ ಸಾಧ್ಯ: ಏನಿದು ಲೆಕ್ಕಾಚಾರ?

ಮುಂಬೈ ಇಂಡಿಯನ್ಸ್ ಸೋತರೂ RCB ಪ್ಲೇಆಫ್ ಪ್ರವೇಶ ಸಾಧ್ಯ: ಏನಿದು ಲೆಕ್ಕಾಚಾರ?

- Advertisement -
- Advertisement -

ಐಪಿಎಲ್ 15ನೇ ಆವೃತ್ತಿಯ ಲೀಗ್ ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. 13 ಪಂದ್ಯಗಳಿಂದ 18 ಅಂಕ ಗಳಿಸಿರುವ ಗುಜರಾತ್ ಟೈಟನ್ಸ್ ಈಗಾಗಲೇ ಪ್ಲೇಆಫ್ ಪ್ರವೇಶಿಸಿದೆ. ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ ತಂಡಗಳು ಹೆಚ್ಚು ಸೋಲು ಕಂಡ ಪರಿಣಾಮ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿವೆ. ಹಾಗಾಗಿ ಉಳಿದ 3 ಪ್ಲೇಆಫ್ ಸ್ಥಾನಕ್ಕಾಗಿ 6 ತಂಡಗಳು ಪೈಪೋಟಿ ನಡೆಸುತ್ತಿವೆ. ಇನ್ನೊಂದು ಪಂದ್ಯ ಗೆದ್ದರೆ RCB ಪ್ಲೇಆಫ್ ಪ್ರವೇಶ ಸಾಧ್ಯ. ಒಂದು ವೇಳೆ ಆರ್‌ಸಿಬಿ ಕಡಿಮೆ ಅಂತರದಲ್ಲಿ ಸೋತರೂ ಮುಂಬೈ ಇಂಡಿಯನ್ಸ್ ತಂಡ ಕೂಡ ಸೋಲು ಕಂಡರೆ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಬಹುದು. ಬನ್ನಿ ಆರ್‌ಸಿಬಿ ಪ್ಲೇಆಫ್ ಸಾಧ್ಯತೆಗಳನ್ನು ನೋಡೋಣ.

12 ಪಂದ್ಯಗಳಿಂದ 7 ಜಯ ಮತ್ತು 6 ಸೋಲಿನೊಂದಿಗೆ 14 ಅಂಕ ಗಳಿಸಿರುವ RCB ಅಂಕ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದ್ದು, ಸತತ ನಾಲ್ಕನೇ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಲು ಕಾದು ಕುಳಿತಿದೆ. ಗುಜರಾತ್ ಟೈಟನ್ಸ್ ಮೊದಲ ಸ್ಥಾನ, 15 ಅಂಕ ಪಡೆದಿರುವ ಚನ್ನೈ 2ನೇ ಸ್ಥಾನ, 15 ಅಂಕ ಪಡೆದಿರುವ ಲಕ್ನೋ 3ನೇ ಸ್ಥಾನದಲ್ಲಿದೆ. ತಲಾ 14 ಅಂಕ ಪಡೆದಿರುವ ರಾಜಸ್ಥಾನ್ ರಾಯಲ್ಸ್ 5ನೇ, ಮುಂಬೈ 6ನೇ ಸ್ಥಾನದಲ್ಲಿದ್ದರೆ 12 ಅಂಕ ಪಡೆದಿರುವ ಕೋಲ್ಕತ್ತಾ ನೈಟ್ ರೈಡರ್ಸ್ 7ನೇ ಸ್ಥಾನದಲ್ಲಿವೆ. ಈ ಎಲ್ಲಾ ತಂಡಗಳಿಗೂ ಪ್ಲೇ ಆಫ್ ತಲುಪುವ ಅವಕಾಶವಿದೆ.

ಆರ್‌ಸಿಬಿ ಪ್ಲೇಆಫ್ ಸಾಧ್ಯತೆಗಳು ಹೀಗಿವೆ

ಆರ್‌ಸಿಬಿ ಮೇ 21 ರಂದು ಗುಜರಾತ್ ಟೈಟನ್ಸ್ ಎದುರು ಕೊನೆಯ ಪಂದ್ಯದಲ್ಲಿ ಸೆಣಸಲಿದೆ. ಆ ಪಂದ್ಯದಲ್ಲಿ ಗೆದ್ದರೆ 16 ಅಂಕಗಳೊಂದಿಗೆ ಸುಲಭವಾಗಿ ಪ್ಲೇ ಆಫ್ ತಲುಪಲಿದೆ. ಪಂದ್ಯ ಸೋತರೂ, ಸೋಲಿನ ಅಂತರ ಕಡಿಮೆ ಇದ್ದಲ್ಲಿ 14 ಅಂಕಗಳು ಮತ್ತು ಅದರ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶ ಪಡೆಯಬಹುದು. ಆರ್‌ಸಿಬಿಯ ಸದ್ಯದ ನೆಟ್ ರನ್‌ ರೇಟ್ +0.180 ಇದೆ. ಆದರೆ ಆಗ ಮುಂಬೈ ಇಂಡಿಯನ್ಸ್ ತಂಡವು ಭಾನುವಾರ ನಡೆಯುವ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲಬೇಕಿದೆ. ಆಗ ಮುಂಬೈ ಸಹ 14 ಅಂಕ ಗಳಿಸಿರುತ್ತದೆ. ಆದರೆ ನೆಟ್ ರನ್ ರೇಟ್ (-0.128) ಆರ್‌ಸಿಬಿಗಿಂತ ಕಡಿಮೆ ಇರುವುದರಿಂದ ಆರ್‌ಸಿಬಿಗೆ ಅನುಕೂಲವಾಗುತ್ತದೆ.

ಆರ್‌ಸಿಬಿ ಎರಡನೇ ಸ್ಥಾನಕ್ಕೂ ತಲುಪಬಹುದು!

ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದಲ್ಲಿ 16 ಗಳಿಸುತ್ತದೆ. ಅದೇ ರೀತಿ ಚನ್ನೈ ಮತ್ತು ಲಕ್ನೋ ತಂಡಗಳು ತಮ್ಮ ಕಡೆಯ ಪಂದ್ಯಗಳಲ್ಲಿ ಸೋತರೆ ಅವು 15 ಅಂಕಗಳಿಗೆ ಸೀಮತವಾಗುತ್ತವೆ. ಆಘ ಆರ್‌ಸಿಬಿ ತಂಡ ಎರಡನೇ ಸ್ಥಾನಕ್ಕೆ ಲಗ್ಗೆ ಇಡಬಹುದಾಗಿದೆ. ಆಗ ಅದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತರೂ ಫೈನಲ್ ತಲುಪಲು ಮತ್ತೊಂದು ಅವಕಾಶವಿರುತ್ತದೆ. ಆದರೆ 3ನೇ ಮತ್ತು 4ನೇ ಸ್ಥಾನ ಪಡೆದ ತಂಡಗಳಿಗೆ ಆ ಅವಕಾಶ ಇರುವುದಿಲ್ಲ. ಆ ತಂಡಗಳು ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಎರಡೂ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಬೇಕಿರುತ್ತದೆ.

ಈ ತಂಡಗಳಿಗೂ ಅವಕಾಶವಿದೆ

ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸೋತು ಮುಂಬೈ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಮುಂಬೈ ತಂಡ ಪ್ಲೇ ಆಫ್ ಪ್ರವೇಶಿಸುತ್ತದೆ. 15 ಅಂಕ ಗಳಿಸಿರುವ ಚನ್ನೈ ಮತ್ತು ಲಕ್ನೋ ಸಹ ಪ್ಲೇ ಆಫ್ ಪ್ರವೇಶಿಸುತ್ತವೆ. ಆಗ ಆರ್‌ಸಿಬಿ ಹೊರಬೀಳುತ್ತದೆ.

ಆರ್‌ಸಿಬಿ ಮತ್ತು ಮುಂಬೈ ತಂಡಗಳು ತನ್ನ ಕಡೆಯ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಸೋತರೆ ಎರಡೂ ಸಹ ಹೋರಬೀಳುತ್ತವೆ. ಆಗ 14 ಅಂಕ ಮತ್ತು +0.148 ನೆಟ್ ರನ್‌ ರೇಟ್ ಹೊಂದಿರುವ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ಪ್ರವೇಶಿಸುತ್ತದೆ. ಕೋಲ್ಕತ್ತ ನೈಟ್ ರೈಡರ್ಸ್ ತಂಡ ಭಾರೀ ವಿಜಯದಿಂದ ತನ್ನ ಕೊನೆಯ ಪಂದ್ಯ ಗೆದ್ದು 14 ಅಂಕಗಳೊಂದಿಗೆ ಉತ್ತಮ ನೆಟ್ ರನ್‌ ರೇಟ್ ಪಡೆದು ರಾಜಸ್ಥಾನ್ ರಾಯಲ್ಸ್ ಹಿಂದಿಕ್ಕಿ ಪ್ಲೇ ಆಫ್ ಪ್ರವೇಶಿಸಲು ಯತ್ನಿಸುತ್ತಿದೆ. ಆದರೆ ಆ ಸಾಧ್ಯತೆ ತೀರಾ ಕಡಿಮೆ ಇದೆ. ಏಕೆಂದರೆ ಕೋಲ್ಕತ್ತ ತಂಡದ ನೆಟ್‌ ರನ್‌ ರೇಟ್ -0.256 ಇದೆ.

ಮೊದಲ ಕ್ವಾಲಿಫೈಯರ್ ಪಂದ್ಯ ಮೇ 23 ರಂದು ನಡೆದರೆ, ಎಲಿಮಿನೇಟರ್ ಪಂದ್ಯ 24 ರಂದು ನಡೆಯಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ 26 ರಂದು ನಡೆದರೆ, ಫೈನಲ್ ಪಂದ್ಯ ಮೇ 28 ರಂದು ನಡೆಯಲಿದೆ.

ಇದನ್ನೂ ಓದಿ: ₹ 2,000 ನೋಟುಗಳ ಹಿಂತೆಗೆತ: ಮೋದಿ ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳ ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...