Homeಮುಖಪುಟವೈಯಕ್ತಿಕ ವಾಟ್ಸಪ್ ಖಾತೆಗಳು ಸಾರ್ವಜನಿಕ ಸ್ಥಳವಲ್ಲ : ಬಾಂಬೆ ಹೈಕೋರ್ಟ್‌

ವೈಯಕ್ತಿಕ ವಾಟ್ಸಪ್ ಖಾತೆಗಳು ಸಾರ್ವಜನಿಕ ಸ್ಥಳವಲ್ಲ : ಬಾಂಬೆ ಹೈಕೋರ್ಟ್‌

- Advertisement -
- Advertisement -

ವೈಯಕ್ತಿಕ ವಾಟ್ಸಪ್ ಖಾತೆಗಳು ಸಾರ್ವಜನಿಕ ಸ್ಥಳವಲ್ಲ. ವೈಯಕ್ತಿಕ ಖಾತೆಗಳಿಗೆ ಅಶ್ಲೀಲ ಮಾಹಿತಿ ಕಳಿಸಿದರೆ ಅದು ಭಾರತ ದಂಡ ಸಂಹಿತೆ ಸೆಕ್ಷನ್ 294ರಡಿ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ ಎಂದು ಲೈವ್ ಲಾ.ಕಾಮ್ ವರದಿ ಮಾಡಿದೆ.

ಇಬ್ಬರ ನಡುವಿನ ವಾಟ್ಸಪ್ ವೈಯಕ್ತಿಕ ಖಾತೆಗಳು ಸಾರ್ವಜನಿಕ ಸ್ಥಳವಲ್ಲ. ಇಬ್ಬರ ನಡುವೆ ವೈಯಕ್ತಿಕ ವಾಟ್ಸಪ್ ಖಾತೆಗಳಲ್ಲಿ ಆಶ್ಲೀಲ ಮಾಹಿತಿ ವಿನಿಮಯ ಮಾಡಿಕೊಂಡರೆ ಅದು ಅಪರಾಧವಲ್ಲ. ಆದರೆ ಇದೇ ಅಶ್ಲೀಲ ಮಾಹಿತಿಯನ್ನು ವಾಟ್ಸಪ್ ಗ್ರೂಪ್ ಗೆ ಕಳಿಸಿದರೆ ಅದನ್ನು ಸಾರ್ವಜನಿಕ ಸ್ಥಳವೆಂದು ಕರೆಯಬಹುದು. ಏಕೆಂದರೆ ವಾಟ್ಸಪ್ ಗ್ರೂಪ್ ನಲ್ಲಿ ಹಲವು ಸದಸ್ಯರು ಇರುತ್ತಾರೆ. ಅವರೆಲ್ಲರೂ ಆ ಮಾಹಿತಿಯನ್ನು ಓದುತ್ತಾರೆ ಮತ್ತು ಹೊಂದಿರುತ್ತಾರೆ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಟಿ.ವಿ ವಲವಾಡೆ ಮತ್ತು ಎಂ.ಜಿ. ಸೆವ್ಲಿಕರ್ ಅವರಿದ್ದ ವಿಭಾಗೀಯ ಪೀಠ ವೈಯಕ್ತಿಕ ಈ ತೀರ್ಪು ನೀಡಿದ್ದು ಚರ್ಚೆಗೆ ಕಾರಣವಾಗಿದೆ.

ಪ್ರಕರಣವೊಂದರಲ್ಲಿ ಆರೋಪಿತನ ವಿರುದ್ಧ ಆತನ ಪತ್ನಿಯು 2018ರಲ್ಲಿ ನಾಂದೇಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆತ ಅವಳ ವೈಯಕ್ತಿಕ ವಾಟ್ಸಪ್ ಖಾತೆಗೆ “ನೀನು ವ್ಯಭಿಚಾರಿಣಿ, ದೇಹವನ್ನು ವ್ಯಾಪಾರ ಮಾಡಿಕೊಂಡು ಹಣ ಗಳಿಸುತ್ತಿದ್ದಿಯ” ಎಂಬ ಅಶ್ಲೀಲ ಮಾಹಿತಿ ಕಳಿಸಿದ್ದ.

ಈ ಸಂಬಂಧ ಪತಿಯ ವಿರುದ್ದ ಭಾರತ ದಂಡ ಸಂಹಿತೆ ಸೆಕ್ಷನ್ 294, 500, 506 ಮತ್ತು 507ರಡಿ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ದ್ವಿಸದಸ್ಯ ಪೀಠ ಐಪಿಸಿ ಸೆಕ್ಷನ್ 294ನ್ನು ಪರಿಶೀಲಿಸಿದಾಗ ಆರೋಪಿತ ವ್ಯಕ್ತಿ ಆಕೆಯ ವೈಯಕ್ತಿಕ ವಾಟ್ಸಪ್ ಖಾತೆಗೆ ಕಳಿಸಿದ್ದಾನೆ. ಇದು ಸಾರ್ವಜನಿಕ ಸ್ಥಳವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಈ ಪ್ರಕರಣದಲ್ಲಿ ಆರೋಪಿತ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾಹಿತಿ ಪ್ರದರ್ಶಿಸಿಲ್ಲ. ಸಾಮಾಜಿಕ ಜಾಲತಾಣ ವಾಟ್ಸಪ್‌ನ ವೈಯಕ್ತಿಕ ಖಾತೆ ಸಾರ್ವಜನಿಕ ಸ್ಥಳವಲ್ಲ ಎಂಬುದನ್ನು ಪುನರುಚ್ಚರಿಸಿದೆ.

ಸಂದೇಶ ಪ್ರಕಟವಾಗಿರುವುದು ವಾಟ್ಸಪ್‌ನ ಇಬ್ಬರ ವೈಯಕ್ತಿಕ ಖಾತೆಯಲ್ಲಿ. ಅದು ಒಬ್ಬರಿಂದ ಇನ್ನೊಬ್ಬರಿಗೆ ಕಳಿಸಿರುವ ಮಾಹಿತಿ. ಈ ಕೊನೆಯಿಂದ ಆ ಕೊನೆಗೆ ಮಾತ್ರ ಮಾಹಿತಿ ಹೋಗಿದೆ. ಒಬ್ಬರು ಕಳಿಸಿದ್ದರೆ ಮತ್ತೊಬ್ಬರು ಆ ಮಾಹಿತಿಯನ್ನು ಸ್ವೀಕರಿಸಿದ್ದಾರೆ. ಅವರಿಬ್ಬರೇ ಆ ಮಾಹಿತಿ ಹೊಂದಿದ್ದು ಅವರಿಬ್ಬರು ಮಾತ್ರ ಓದಲು ಸಾಧ್ಯವಾಗಿದೆ. ಇವರಿಬ್ಬರ ನಡುವೆ ಬೇರೆ ಯಾರೂ ಇಲ್ಲ. ವಾಟ್ಸಪ್ ಕೂಡ ಈ ಮಾಹಿತಿಯನ್ನು ಓದಿಲ್ಲ. ಈ ಮಾಹಿತಿ ಸುಭದ್ರವಾಗಿದೆ ಮತ್ತು ಬೀಗಮುದ್ರೆ ಹಾಕಲಾಗಿದೆ. ಮಾಹಿತಿ ಕಳಿಸಿದವರು ಮತ್ತು ಸ್ವೀಕರಿಸಿದವರು ಮಾತ್ರ ಬೀಗ ತೆಗೆದು ನೋಡುವ, ಓದುವ ಅವಕಾಶವಿದೆ. ವಾಟ್ಸಪ್ ಕೂಡ ಆ ಮಾಹಿತಿಯನ್ನು ತನ್ನ ಸರ್ವರ್ ನಲ್ಲಿ ಸಂಗ್ರಹಿಸಿಲ್ಲ.

ಈ ಮಾಹಿತಿ ತುಂಬಾ ವೈಯಕ್ತಿಕ. ವಾಟ್ಸಪ್ ಗ್ರೂಪ್ ನಲ್ಲಿ ಕಳಿಸಿದರೆ ಎಲ್ಲರೂ ಹೊಂದುತ್ತಾರೆ ಮತ್ತು ಓದುತ್ತಾರೆ. ಆಗ ಕಾನೂನು ಕ್ರಮ ಕೈಗೊಳ್ಳಬಹುದು. ಆದರೆ ಅರ್ಜಿದಾರರು ಈ ಪ್ರಕರಣದಲ್ಲಿ ಆರೋಪಿಸಿರುವಂತೆ ಆಧುನಿಕ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಅವಮಾನ ಮಾಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಇದು ಭಾರತ ದಂಡ ಸಂಹಿತೆ 509ರಡಿ ಬರುತ್ತದೆ ಎಂದು ನ್ಯಾಯ ಪೀಠ ಹೇಳಿದೆ ಎಂದು ಲೈವ್ ಲಾ ತಿಳಿಸಿದೆ.

ಮೂಲ: ಲೈವ್ ಲಾ.ಕಾಮ್

ಕನ್ನಡಕ್ಕೆ: ಕೆ.ಈ.ಸಿದ್ದಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...