Homeಕರೋನಾ ತಲ್ಲಣಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ನಿರ್ಧಾರ- ಫೈಜರ್ ಫಾರ್ಮಾ

ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ನಿರ್ಧಾರ- ಫೈಜರ್ ಫಾರ್ಮಾ

- Advertisement -
- Advertisement -

ಭಾರತದಲ್ಲಿ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವುದಾಗಿ ಫೈಜರ್ ಫಾರ್ಮಾ ಹೇಳಿದೆ. ಅಮೆರಿಕದ ಔಷಧ ಕಂಪೆನಿಯಾದ ಫೈಝರ್ 2020ರ ಡಿಸಂಬರ್ ನಲ್ಲಿ ತುರ್ತು ಬಳಕೆಯ ಅಧಿಕಾರಕ್ಕಾಗಿ ಭಾರತದ ಔಷಧ ನಿಯಂತ್ರಕರಾದ DCGI-ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ-ದಿಂದ ಅನುಮತಿ ಕೋರಿತ್ತು.

“ಭಾರತದಲ್ಲಿ ಲಸಿಕೆಯ ತುರ್ತು ಬಳಕೆಗೆ ಫೈಜರ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಪ್ರಾಧಿಕಾರವು ನಮ್ಮಿಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ಅಪೇಕ್ಷಿಸಿದೆ” ಎಂದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದ ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಕಂಪನಿಯ ವಕ್ತಾರರು ಹೇಳಿದ್ದಾರೆ ಎಂಬುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅದಾಗ್ಯೂ ಫೈಜರ್ ಕಂಪನಿಯು ಪ್ರಾಧಿಕಾರದೊದಿಗಿನ ಸಹಭಾಗಿತ್ವವನ್ನು ಮುಂದುವರಿಸುತ್ತದೆ. ಮುಂದಿನ ದಿನಗಳಲ್ಲಿ ಲಸಿಕೆಯ ಅನುಮೋದನೆಗಾಗಿ ಹೆಚ್ಚಿನ ಮಾಹಿತಿಗಳೊಂದಿಗೆ ಮತ್ತೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

“ಫೈಜರ್ ತನ್ನ ಲಸಿಕೆಯನ್ನು ಭಾರತದಲ್ಲಿ ಲಭ್ಯವಾಗುವಂತೆ ಮಾಡಲು ಮತ್ತು ತುರ್ತು ಬಳಕೆಯ ದೃಢೀಕರಣಕ್ಕೆ ಬೇಕಾಗಿರುವ ಅಗತ್ಯ ಮಾರ್ಗಸೂಚಿಯನ್ನು ಅನುಸರಿಸಲು ಬದ್ಧವಾಗಿದೆ” ಎಂದು ವಕ್ತಾರರು ಹೇಳಿದರು.

ಇದನ್ನೂ ಓದಿ: ಫೈಜರ್ ಲಸಿಕೆ ಪಡೆದ 12,400 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢ!

ಫೈಜರ್/ಬಯೋಟೆಕ್ ಕೊರೊನಾ ಲಸಿಕೆ ಪಡೆದ ನಂತರ 12,400 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಪ್ರಕರಣ ಇಸ್ರೇಲ್‌ನಲ್ಲಿ ನಡೆದಿತ್ತು. ಜಾಗತಿಕವಾಗಿ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿಯೂ ಲಸಿಕೆ ನೀಡಲಾಗುತ್ತಿತ್ತು.

ಫೈಜರ್‌ನ ಲಸಿಕೆ ಹಾಕಿದ ನಂತರ ಇಸ್ರೇಲ್‌ನ ಆರೋಗ್ಯ ಸಚಿವಾಲಯವು 189,000 ಜನರನ್ನು ಪರೀಕ್ಷಿಸಿತ್ತು. ಇವರಲ್ಲಿ ಶೇಕಡಾ 6.6 ರಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ತಿಳಿದುಬಂದಿದೆ. ಇತ್ತೀಚೆಗೆ, ಸಾಂಕ್ರಾಮಿಕ ರೋಗದ ರಾಷ್ಟ್ರೀಯ ಸಂಯೋಜಕರಾದ ನಾಚ್ಮನ್ ಆಶ್, “ಫೈಜರ್ ಲಸಿಕೆ ನಾವು ಅಂದುಕೊಂಡಿದ್ದಕ್ಕಿಂತ ಕಡಿಮೆ ಪರಿಣಾಮಕಾರಿಯಾಗಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: ಕೋವಿಡ್ ಲಸಿಕೆಯಷ್ಟೇ ಸಾಕೆ? ಭವಿಷ್ಯದ ಸಾಂಕ್ರಾಮಿಕಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆಯೆ?

ಅಮೆರಿಕ ಮೂಲದ ಫೈಝರ್‌ ಮತ್ತು ಜರ್ಮನಿ ಮೂಲದ ಬಯೋಎಂಡೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯು ಮೂರನೇ ಹಂತದ ಪ್ರಯೋಗಗಳಲ್ಲಿ 95% ನಷ್ಟು ದಕ್ಷತೆಯನ್ನು ವರದಿ ಮಾಡಿತ್ತು.

ಬ್ರಿಟನ್ ಮತ್ತು ಬಹ್ರೇನ್‌ನಲ್ಲಿ ಅನುಮತಿ ಪಡೆದ ನಂತರ ಭಾರತದಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ಕೊರೊನಾ ಲಸಿಕೆಗಾಗಿ ಭಾರತದಲ್ಲಿ ಅನುಮತಿ ಕೋರಿದ ಮೊದಲ ಕಂಪನಿ ಇದಾಗಿದೆ.

ಸಾಮಾನ್ಯವಾಗಿ ಲಸಿಕೆ ಉತ್ಪಾದಿಸಲು ಹಾಗೂ ಸಂಶೋಧನೆ ಮತ್ತು ಬಳಕೆಯ ಹಂತವನ್ನು ತಲುಪಲು 10 ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ. ಆದರೆ ಫಿಜರ್ ಮತ್ತು ಬಯೋಎಂಡೆಕ್ ಅಭಿವೃದ್ಧಿಪಡಿಸಿದ ಈ ಕೊರೊನಾ ವೈರಸ್ ಲಸಿಕೆ ಕೇವಲ ಹತ್ತು ತಿಂಗಳಿನಲ್ಲಿ ತಯಾರಾಗಿದೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ತಯಾರಾದ ಲಸಿಕೆ ಇದಾಗಿದೆ.


ಇದನ್ನೂ ಓದಿ: ಲಸಿಕೆಯ ಲಗುಬಗೆಯ ಲೋ ಪಾಲಿಟಿಕ್ಸ್? – ಏಕೈಕ ’ದೇಸಿ’ ಲಸಿಕೆ ಕೊವಾಕ್ಸಿನ್ ಎಷ್ಟು ಸುರಕ್ಷಿತ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಕಾಲದ ಸಂದೇಶ ಓದಿದ ಪತ್ನಿ

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...