Homeಮುಖಪುಟಫುಲೆ ದಂಪತಿ, ಶಿವಾಜಿ ಮಹಾರಾಜರಿಗೆ ಅಗೌರವ ಆರೋಪ: ಬಿಜೆಪಿ ವಿರುದ್ಧ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಬೃಹತ್...

ಫುಲೆ ದಂಪತಿ, ಶಿವಾಜಿ ಮಹಾರಾಜರಿಗೆ ಅಗೌರವ ಆರೋಪ: ಬಿಜೆಪಿ ವಿರುದ್ಧ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಬೃಹತ್ ಪ್ರತಿಭಟನೆ

- Advertisement -
- Advertisement -

ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ‘ಹಲ್ಲಾ ಬೋಲ್’ ಪ್ರತಿಭಟನೆ ಆಯೋಜಿಸಿದೆ. ಪ್ರತಿಭಟನಾ ಮೆರವಣಿಗೆ ಶನಿವಾರ ಆರಂಭವಾಗಿದೆ.

ಮಧ್ಯಾಹ್ನದ ಸುಮಾರಿಗೆ ಬೈಕುಲ್ಲಾದ ಜೆಜೆ ಆಸ್ಪತ್ರೆ ಬಳಿಯ ಕಂಪನಿಯಿಂದ ಆರಂಭವಾದ ಪಾದಯಾತ್ರೆ, ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮಾಡಿರುವ ಅವಮಾನ ಸೇರಿದಂತೆ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮತ್ತು ರಾಜ್ಯದ ಯೋಜನೆಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುತ್ತಿರುವ ಬಗ್ಗೆಯೂ ಪ್ರತಿಭಟನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ವರ್ಷದ ಜೂನ್‌ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವನ್ನು ಉರುಳಿಸಿದ ನಂತರದಲ್ಲಿ ಎಂವಿಎ ಆಯೋಜಿಸಿರುವ ಈ ಪ್ರತಿಭಟನೆಯು ಮಿತ್ರಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನವೆಂದೇ ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ.

ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ ಪಕ್ಷಗಳ ನಾಯಕರು, ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಜೆಜೆ ಆಸ್ಪತ್ರೆ ಬಳಿ ಜಮಾಯಿಸಲಾರಂಭಿಸಿದ್ದರು.

ಮಧ್ಯಾಹ್ನದ ಸುಮಾರಿಗೆ ಮೆರವಣಿಗೆ ಪ್ರಾರಂಭವಾದಾಗ, ಅವರು ಬ್ಯಾನರ್‌ಗಳನ್ನು, ಫಲಕಗಳನ್ನು, ಶಿವಾಜಿ ಮಹಾರಾಜ ಮತ್ತು ಫುಲೆ ದಂಪತಿಯ ಚಿತ್ರಗಳನ್ನು ಹಿಡಿದು ನಡೆದರು.

ಮೆರವಣಿಗೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿಯ ಹಿರಿಯ ನಾಯಕ ಸುನೀಲ್ ತಾಟ್ಕರೆ, “ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಕೆಲವು ಭಾಗಗಳಲ್ಲಿ ಹಕ್ಕು ಸಾಧಿಸುವ ಮೂಲಕ ಮಹಾರಾಷ್ಟ್ರವನ್ನು ಅವಮಾನಿಸಿದ್ದಾರೆ, ಆದರೆ ಶಿಂಧೆ ಸರ್ಕಾರವು ಪ್ರತಿಕ್ರಿಯಿಸದಿರಲು ನಿರ್ಧರಿಸಿದೆ” ಎಂದು ದೂರಿದರು.

“ಎಂವಿಎಯ ಮೆರವಣಿಗೆಯನ್ನು ಎದುರಿಸಲು, ಮುಂಬೈನ ಎಲ್ಲಾ ಆರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ “ಮಾಫಿ ಮಾಂಗೋ” ಪ್ರತಿಭಟನೆಗಳನ್ನು ನಡೆಸುತ್ತಿದೆ. ಉದ್ಧವ್ ಬಣದ ಶಿವಸೇನಾ ನಾಯಕ ಸಂಜಯ್ ರಾವುತ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮಸ್ಥಳದ ಬಗ್ಗೆ, ಪಕ್ಷದ ನಾಯಕಿ ಸುಷ್ಮಾ ಅಂಧರೆ ಹಿಂದೂ ದೇವತೆಗಳನ್ನು ಮತ್ತು ಸಂತರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಎಂವಿಎ ನಾಯಕರು, ವಿಶೇಷವಾಗಿ ಉದ್ಧವ್ ಠಾಕ್ರೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಮಾತನಾಡಿ, “ಪ್ರತಿಭಟನಾ ಮೆರವಣಿಗೆ ಮೂಲಕ ಸರ್ಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಲಿದ್ದು, ಈ ಕಾರಣಕ್ಕಾಗಿ ಬಿಜೆಪಿ ಗಮನ ಬೇರೆಡೆ ಸೆಳೆಯಲು ಗಿಮಿಕ್ ಮಾಡುತ್ತಿದೆ’’ ಎಂದು ವ್ಯಂಗ್ಯವಾಡಿದೆ.

ಹೋರಾಟದ ಕುರಿತು ಟ್ವೀಟ್‌ಗಳನ್ನು ಮಾಡಿರುವ ಶಿವಸೇನಾ ಯುವ ನಾಯಕ ಆದಿತ್ಯಾ ಠಾಕ್ರೆ, “ಮಹಾರಾಷ್ಟ್ರ ದ್ರೋಹಿಗಳ ವಿರುದ್ಧ ಎಂವಿಎ ಮಹಾಯಾತ್ರೆ ನಡೆಯಿತು. ಅದೊಂದು ಅಗಾಧ ಅನುಭವ. ಮಹಾರಾಷ್ಟ್ರದ ಮೇಲೆ ಪ್ರೀತಿ ಇರುವ ಲಕ್ಷಾಂತರ ಜನರು ಇದರಲ್ಲಿ ಭಾಗವಹಿಸಿದ್ದರು. ಇದು ಜನಸಾಮಾನ್ಯರ ಹೋರಾಟ” ಎಂದು ಬಣ್ಣಿಸಿದ್ದಾರೆ.

“ಸ್ವಾರ್ಥಕ್ಕಿಂತ ಆತ್ಮಗೌರವವೇ ಮುಖ್ಯ ಎಂಬುದಕ್ಕೆ ಇಂದಿನ ಮಹಾ ಮೆರವಣಿಗೆಯಲ್ಲಿ ನೆರೆದಿದ್ದ ಅಪಾರ ಜನಸ್ತೋಮವೇ ಸಾಕ್ಷಿ. ಆಸೆಗಳಿಗಿಂತ ಮಹಾರಾಷ್ಟ್ರದ ಪ್ರೀತಿ ದೊಡ್ಡದು. ಅಧಿಕಾರಕ್ಕಿಂತ ಹೆಚ್ಚು ಶಕ್ತಿಶಾಲಿ ಮಹಾರಾಷ್ಟ್ರದ ಜನರು. ಮಹಾರಾಷ್ಟ್ರದ ದ್ರೋಹಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ಮಹಾರಾಷ್ಟ್ರ ಎಚ್ಚೆತ್ತುಕೊಂಡಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸಿ.ಎಂಲಿಂಗಪ್ಪ ಅವರು ನಿಗಮದ ಅಧ್ಯಕ್ಷರಾಗಿದ್ದರಷ್ಟೆ, ಸಚಿವ ಸ್ಥಾನ ದೊರೆತಿರಲಿಲ್ಲ. ಸಚಿವ ಸ್ಥಾನ ಕೇಳಿದ ಲಿಂಗಪ್ಪ ಅವರಿಗೆ ನಿಮ್ಮ ಹೆಸರಲ್ಲೇ ಸಿಎಂ ಇದೆ, ನಿಮಗ್ಯಾಕೆ ಸಚಿವ ಸ್ಥಾನ ಎಂದಿದ್ದರಂತೆ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...