HomeಮುಖಪುಟPIB ಫ್ಯಾಕ್ಟ್‌ಚೆಕ್‌ ನಿಯಮಗಳು ಟಿವಿ ಮಾಧ್ಯಮಗಳಿಗೆ ಅನ್ವಯಿಸುವುದಿಲ್ಲ: ಸಚಿವ ರಾಜೀವ್ ಚಂದ್ರಶೇಖರ್

PIB ಫ್ಯಾಕ್ಟ್‌ಚೆಕ್‌ ನಿಯಮಗಳು ಟಿವಿ ಮಾಧ್ಯಮಗಳಿಗೆ ಅನ್ವಯಿಸುವುದಿಲ್ಲ: ಸಚಿವ ರಾಜೀವ್ ಚಂದ್ರಶೇಖರ್

- Advertisement -
- Advertisement -

ಡಿಜಿಟಲ್ ಮೀಡಿಯಗಳ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಐಟಿ ನಿಯಮಗಳನ್ನು ಬಿಗಿಗೊಳಿಸಲು ಹೊರಟಿದೆ. ಈ ಐಟಿ ನಿಯಮಗಳ ಅಡಿಯಲ್ಲಿ ಪಿಐಬಿ ಫ್ಯಾಕ್ಟ್ ಚೆಕ್ ಅಥವಾ ಸರ್ಕಾರಿ ಅಧಿಕೃತ ಸಂಸ್ಥೆಯು ಫ್ಯಾಕ್ಟ್ ಚೆಕ್ ಮೂಲಕ ನಕಲಿ ಸುದ್ದಿಗಳನ್ನು ತಡೆಯುವ ಕೆಲಸ ಮಾಡುತ್ತವೆ. ಆದರೆ ಇದೀಗ ಈ ಬಗ್ಗೆ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ‘ಈ ನಿಯಮಗಳು ಕೇವಲ ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗೆ ಮಾತ್ರ ಸೀಮೀತವಾಗಿದ್ದು, ಟಿವಿ ಸುದ್ದಿ ವಾಹಿನಿಗಳಿಗೆ ಅನ್ವಯಿಸುವುದಿಲ್ಲ’ ಎಂದು ಹೇಳಿದ್ದಾರೆ.

ಈ ಬಗ್ಗೆ ಪಿಟಿಐ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್, “ಐಟಿ ನಿಯಮಗಳು ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಮಾತ್ರ ಸೀಮಿತ” ಎಂದು ಹೇಳಿದ್ದಾರೆ.

“ಯಾವುದೇ ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ವಿಷಯವನ್ನು ಪೋಸ್ಟ್ ಮಾಡದ ಹೊರತು ಇದು ಟಿವಿಯಲ್ಲಿ ಅನ್ವಯಿಸುವುದಿಲ್ಲ. ಐಟಿ ನಿಯಮಗಳು ಆನ್‌ಲೈನ್ ಮಧ್ಯವರ್ತಿಗಳಿಗೆ ಮಾತ್ರ ಸೀಮಿತವಾಗಿದೆ” ಎಂದು ಸಚಿವರು ಹೇಳಿದರು.

ಸರ್ಕಾರವು ಯಾವುದೇ ಡಿಜಿಟಲ್ ಮೀಡಿಯಾ ವಿಷಯವನ್ನು ತೆಗೆದುಹಾಕುವ ಪ್ರಸ್ತಾಪದ ಕುರಿತು ಕಾಮೆಂಟ್‌ಗಳನ್ನು ಆಹ್ವಾನಿಸಿದೆ. ಅವುಗಳ ಮೇಲೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಷಯವನ್ನು ನಕಲಿ, ಸುಳ್ಳು ಅಥವಾ ತಪ್ಪುದಾರಿಗೆಳೆಯುವ ವಿಷಯ ಎಂದು PIB ಫ್ಯಾಕ್ಟ್ ಚೆಕ್ ಏಜೆನ್ಸಿ ಅಥವಾ ಸರ್ಕಾರದಿಂದ ಯಾವುದೇ ಅಧಿಕೃತ ಏಜೆನ್ಸಿಯು ನಿರ್ಧರಿಸುತ್ತವೆ.

ಈ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸುವ ಮೊದಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮುಂದಿನ ತಿಂಗಳು ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಂಪಾದಕರ ಸಂಘ ಮತ್ತು ಇತರ ಮಧ್ಯಸ್ಥಗಾರರನ್ನು ಆಹ್ವಾನಿಸಿ ಸಮಾಲೋಚನೆ ನಡೆಸುತ್ತೇವೆ ಎಂದು ಸಚಿವರು ಹೇಳಿದರು.

2021ರಲ್ಲಿ ನಿಯಮಗಳು ಹೇಗಿರಲಿವೆ ಎಂಬ ಬಗ್ಗೆ ಮಾರ್ಪಾಡುಗಳನ್ನು ಬಿಡುಗಡೆ ಮಾಡಿತ್ತು, ಇದನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡಲಾಗಿತ್ತು. ಸಚಿವಾಲಯವು ಕಳೆದ ವಾರ ಕರಡು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, ಈ ನಿಯಮಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾಗಶಃ ಕಾರ್ಯಗತಗೊಳಿಸುತ್ತದೆ.

ಪ್ರಸ್ತಾವಿತ ತಿದ್ದುಪಡಿಯ ಅಡಿಯಲ್ಲಿ, ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನಾ ಘಟಕವು ನಕಲಿ ಅಥವಾ ಸುಳ್ಳು ಎಂದು ಗುರುತಿಸಿದ ಮಾಹಿತಿಯನ್ನು ಅಪ್‌ಲೋಡ್ ಮಾಡುವುದು, ಪ್ರಕಟಿಸುವುದು, ರವಾನೆ ಮಾಡುವುದು ಅಥವಾ ಹಂಚಿಕೊಳ್ಳದಿರುವಂತೆ ತಡೆಯುವುದು ಮಧ್ಯವರ್ತಿಗಳ ಕರ್ತವ್ಯವಾಗಿರುತ್ತದೆ. ಇದು ನಾಗರಿಕರಿಗೆ ಪೋರ್ಟಲ್‌ನಲ್ಲಿ ಅಥವಾ ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ಬರುವ ನಕಲಿ ಮಾಹಿತಿಯನ್ನು  ತಡೆಯುತ್ತದೆ.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದು, “ಪಿಐಬಿಯ ಫ್ಯಾಕ್ಟ್ ಚೆಕಿಂಗ್ ಮೂಲಕ “ನಕಲಿ” ಎಂದು ಗುರುತಿಸಲಾದ ಸುದ್ದಿ ಅಥವಾ ಮಾಹಿತಿಯನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ನಿರ್ದೇಶಿಸಲು ಪ್ರಯತ್ನಿಸುವ ಐಟಿ ನಿಯಮಗಳಿಗೆ ತಿದ್ದುಪಡಿಗಳನ್ನು “ಮುಕ್ತಗೊಳಿಸುವಂತೆ” ಒತ್ತಾಯಿಸಿದೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಡಿಜಿಟಲ್ ಮಾಧ್ಯಮದ ನಿಯಂತ್ರಕ ಚೌಕಟ್ಟಿನ ಕುರಿತು ಪತ್ರಿಕಾ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆಯನ್ನು ಪ್ರಾರಂಭಿಸುವಂತೆ ಮಂಗಳವಾರ ವೈಷ್ಣವ್ ಅವರಿಗೆ ಕಳುಹಿಸಲಾದ ಪತ್ರದಲ್ಲಿ ಗಿಲ್ಡ್ ಸಚಿವಾಲಯವನ್ನು ಕೇಳಿದೆ. ಪ್ರಸ್ತಾವಿತ ತಿದ್ದುಪಡಿಯಿಂದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಗೆ ವ್ಯಾಪಕ ಅಧಿಕಾರವನ್ನು ನೀಡಿದಂತಾಗುತ್ತದೆ” ಎಂದು ಗಿಲ್ಡ್ ಹೇಳಿದೆ.

ನಕಲಿ ಸುದ್ದಿಗಳನ್ನು ತಗೆದುಹಾಕುವ ನಿರ್ಣಯವು ಸರ್ಕಾರದ ಏಕೈಕ ಸಂಸ್ಥೆಯ ಕೈಯಲ್ಲಿ ಇರಬಾರದು ಮತ್ತು ಪತ್ರಿಕಾ ಸೆನ್ಸಾರ್‍‌ಶಿಪ್‌ಗೆ ಕಾರಣವಾಗುತ್ತದೆ ಎಂದು ಗಿಲ್ಡ್ ಇಲ್ಲಿ ಹೇಳಿಕೆಯಲ್ಲಿ ತಿಳಿಸಿದೆ. ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಕರಡು ತಿದ್ದುಪಡಿಯ ಬಗ್ಗೆ “ಆಳವಾದ ಕಳವಳ” ವ್ಯಕ್ತಪಡಿಸಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಅವರು, “ಡಿಜಿಟಲ್ ಮೀಡಿಯಾಗಳಲ್ಲಿ ಸುಳ್ಳುಸುದ್ದಿಗಳು ಬರುತ್ತಿರುವುದು ನಿಜವೇ ಇದ್ದರೂ ಕೂಡ, ಇತ್ತೀಚೆಗೆ ಅತಿಹೆಚ್ಚು ಸುಳ್ಳುಗಳನ್ನು ಟಿವಿ ಮಾಧ್ಯಮಗಳೇ ಹರಡುತ್ತವೆ ಎಂದು ಹೇಳಿದರು. ಕೇಂದ್ರ ಸರ್ಕಾರ ಪ್ರಸ್ತಾವಿತ ತಿದ್ದುಪಡಿಯಿಂದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಗೆ ವ್ಯಾಪಕ ಅಧಿಕಾರವನ್ನು ನೀಡಲು ಮುಂದಾಗಿದೆ. ಇದು ಸರ್ಕಾರದ ಅಡಿಯಲ್ಲಿ ಬರುವುದುರಿಂದ ನಕಲಿ ಸುದ್ದಿಯ ನಿಯಂತ್ರಣದ ಹೆಸರಲ್ಲಿ ಪತ್ರಿಕಾ ಸ್ವಾತಂತ್ರಹರಣವಾಗುವಂತೆ ಮಾಡಿದರೆ ಏನು ಮಾಡುವುದು” ಎಂದು ಆತಂಕ ವ್ಯಕ್ತಪಡಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...