Homeಮುಖಪುಟಪ್ರತಿ ತಿಂಗಳೂ ಕರ್ನಾಟಕಕ್ಕೆ ಬರುತ್ತೇನೆಂದ ಪ್ರಧಾನಿ ಮೋದಿ: ಕಾರಣವೇನು?

ಪ್ರತಿ ತಿಂಗಳೂ ಕರ್ನಾಟಕಕ್ಕೆ ಬರುತ್ತೇನೆಂದ ಪ್ರಧಾನಿ ಮೋದಿ: ಕಾರಣವೇನು?

ಕರ್ನಾಟಕದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಜೋರಾಗಿ ತಟ್ಟುತ್ತಿದೆ. ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಸ್ಕ್ಯಾಮ್, 40% ಕಮಿಷನ್ ಭ್ರಷ್ಟಾಚಾರಗಳು ಸರ್ಕಾರವನ್ನು ಸುತ್ತಿಕೊಂಡಿವೆ.

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟಂಬರ್ 02ರ ಶುಕ್ರವಾರದಂದು ಮಂಗಳೂರಿಗೆ ಭೇಟಿ ನೀಡಿದ್ದರು. ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ಸರ್ಕಾರಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಆನಂತರ ದೆಹಲಿಗೆ ತೆರಳುವ ಮುನ್ನ ಹೆಲಿಪ್ಯಾಡ್‌ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯೊಂದಿಗೆ ಸಭೆ ನಡೆಸಿ ಇನ್ನು ಮುಂದೆ ಪ್ರತಿ ತಿಂಗಳೂ ಸಹ ಕರ್ನಾಟಕಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದೇಶದ ಪ್ರಧಾನಿಯವರು ಪ್ರತಿ ತಿಂಗಳು ಕರ್ನಾಟಕಕ್ಕೆ ಬರುವುದೇಕೆ? ಅಂತಹ ಕೆಲಸಗಳೆನಿವೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಮಂಗಳೂರಿನ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾದರೂ ಅದರಲ್ಲಿ ಸಾಕಷ್ಟು ಜೋಶ್ ಇತ್ತು. ಇದೇ ರೀತಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾದೇಶಿಕವಾಗಿ ಆಯಕಟ್ಟಿನ ಜಾಗದಲ್ಲಿ ಆಯೋಜಿಸಿ. ನಾನು ಪ್ರತಿ ತಿಂಗಳೂ ಬರುತ್ತೇನೆ ಎಂದು ಮೋದಿ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. 15 ದಿನದ ಮುಂಚೆಯೇ ಇನ್ಮುಂದೆ ಪ್ರತಿ ತಿಂಗಳು ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಬರುತ್ತಾರೆ ಎಂದು ಘೋಷಿಸಲಾಗಿತ್ತು.

ಮೇಲ್ನೋಟಕ್ಕೆ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮೋದಿಯವರು ಬರುತ್ತಿರುವುದು ನಿಜವಾದರೂ ಇದು ಕರ್ನಾಟಕದಲ್ಲಿ ಚುನಾವಣಾ ವರ್ಷ ಎಂಬುದನ್ನು ಯಾರೂ ಮರೆಯಲಾರರು. ಇಷ್ಟು ವರ್ಷಗಳ ಕಾಲ ಕರ್ನಾಟಕಕ್ಕೆ ಹೆಚ್ಚು ಸಲ ಬಾರದ ಮೋದಿಯವರು ಚುನಾವಣಾ ವರ್ಷದಲ್ಲಿ ಮಾತ್ರ ಪ್ರತಿ ತಿಂಗಳು ಬರುತ್ತೇನೆ ಎಂದಿದ್ದಾರೆ. ಇದೇ ರೀತಿಯಾಗಿ ಹಿಂದೆಯೂ ಸಹ ಚುನಾವಣೆ ಇದ್ದ ಕಡೆಗಳಿಗೆಲ್ಲಾ ಮೋದಿಯವರು ಭೇಟಿ ನೀಡಿ ಸಾವಿರಾರು ಕೋಟಿ ರೂಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ್ದರು. ಅದನ್ನೆ ಕರ್ನಾಟಕದಲ್ಲಿಯೂ ಸಹ ಮುಂದುವರೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕರ್ನಾಟಕದ ಬಿಜೆಪಿ ಪರಿಸ್ಥಿತಿ

ಕರ್ನಾಟಕದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಜೋರಾಗಿ ತಟ್ಟುತ್ತಿದೆ. ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಸ್ಕ್ಯಾಮ್, 40% ಕಮಿಷನ್ ಭ್ರಷ್ಟಾಚಾರಗಳು ಸರ್ಕಾರವನ್ನು ಸುತ್ತಿಕೊಂಡಿವೆ. ಗುತ್ತಿಗೆದಾರರ ಸಂಘ ಪದೇ ಪದೇ ಈ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಮತೀಯ ಗಲಭೆಗಳು ತಿರುಗುಬಾಣವಾಗಿವೆ. ಹರ್ಷ ಕೊಲೆ ವಿಚಾರ ಮತ್ತು ಪ್ರವೀಣ್ ನೆಟ್ಟಾರು ಕೊಲೆ ವಿಚಾರದಲ್ಲಿ ಅದು ಸಾಬೀತಾಗಿದೆ. ಈ ಸರ್ಕಾರ ಹಿಂದೂಗಳ ರಕ್ಷಣೆಗೆ ಏನೂ ಮಾಡುತ್ತಿಲ್ಲ ಎಂಬ ಭಾವನೆ ಹಿಂದುತ್ವವಾದಿಗಳಲ್ಲಿ ಮೂಡಿದೆ. ಮುಂಚಿತವಾಗಿ ಚುನಾವಣೆ ನಡೆಸಬೇಕೆಂದು ಬಯಸುವ ಬಿಜೆಪಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಆದರೆ ಇವೆಲ್ಲದರ ನಡುವೆ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯನವರು ತಮ್ಮ 75ನೇ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಅದ್ದೂರಿ ಕಾರ್ಯಕ್ರಮ ಮಾಡಿದ್ದಾರೆ. ಇದು ಸಹ ಬಿಜೆಪಿಯವರನ್ನು ಆತಂಕಕ್ಕೆ ತಳ್ಳಿರುವ ಸಾಧ್ಯತೆಯಿದೆ.

ಸಮರ್ಥ ಸಿಎಂ ಅಭ್ಯರ್ಥಿಯ ಕೊರತೆ

ಯಡಿಯೂರಪ್ಪನವರು ನಡೆಸಿದ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ನಂತರ ಬೊಮ್ಮಾಯಿಯವರನ್ನು ಸಿಎಂ ಆಗಿ ಹೊಂದಿದೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಲಿಂಗಾಯಿತ ಮುಖಂಡ ಯಡಿಯೂರಪ್ಪನವರನ್ನು ಬಿಜೆಪಿ ಸಂಸದೀಯ ಮಂಡಳಿಗೆ ಸೇರಿಸಿಕೊಂಡಿದೆ. ಇಷ್ಟರಿಂದ ಜನ ಬಿಜೆಪಿಗೆ ಮತ ಹಾಕುತ್ತಾರೆಯೇ ಎಂಬ ಅನುಮಾನ ಬಿಜೆಪಿಯಲ್ಲಿದೆ. ಹಾಗಾಗಿ ಅದನ್ನು ಸರಿದೂಗಿಸುವುದು ಮೋದಿಯವರಿಂದ ಮಾತ್ರ ಸಾಧ್ಯ ಎಂಬ ನಿರ್ಧಾರಕ್ಕೆ ಅದು ಬಂದಿದೆ. ಹಾಗಾಗಿಯೇ ಪ್ರತಿ ತಿಂಗಳೂ ಸಹ ಮೋದಿಯವರು ರಾಜ್ಯಕ್ಕೆ ಬರಬೇಕೆಂದು ಬಿಜೆಪಿ ಮುಖಂಡರು ಬಯಸುತ್ತಿದ್ದಾರೆ.

ನಡೆಯಲಿದೆಯೇ ಮೋದಿ ಮ್ಯಾಜಿಕ್?

2018ರ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಎಷ್ಟೆಲ್ಲ ಮೋದಿ ಅಲೆ ಇದ್ದಾಗಲೂ ರಾಜ್ಯದಲ್ಲಿ ಬಿಜೆಪಿ ಗಳಿಸಿದ್ದು 105 ಸ್ಥಾನಗಳನ್ನು ಮಾತ್ರ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಹೆಸರೇಳಿಯೆ ಬಿಜೆಪಿ 28ರಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು. ಆದರೆ ಲೋಕಸಭಾ ಚುನಾವಣೆಗೂ, ವಿಧಾನಸಭಾ ಚುನಾವಣೆಗೂ ವ್ಯತ್ಯಾಸವಿದೆ. ರಾಜ್ಯದ ಸಮಸ್ಯೆಗಳು, ವಿಚಾರಗಳೇ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವ ಬೀರುತ್ತವೆ ಎನ್ನುವುದನ್ನು ಇತಿಹಾಸ ತೋರಿಸಿದೆ. ಹಾಗಾಗಿ ಸದ್ಯ ಕೊಂಚ ಹಿನ್ನಡೆ ಅನುಭವಿಸುತ್ತಿರುವ ಬಿಜೆಪಿ ಮೋದಿ ಮೊರೆ ಹೋಗಿದೆ. ಆದರೆ ವಿಧಾನಸಭೆಯಲ್ಲಿ ಮೋದಿ ಮ್ಯಾಜಿಕ್ ನಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ; 2019ರ ಕೊಲ್ಕತ್ತಾ ರ್‍ಯಾಲಿ ವಿಡಿಯೊವನ್ನು ಮಂಗಳೂರಿನ ಕಾರ್ಯಕ್ರಮದೆಂದು ಬಿಂಬಿಸಿದ ಬಿಜೆಪಿ ನಾಯಕರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...