Homeಕರ್ನಾಟಕಬ್ರಿಜ್‌ಭೂಷಣ್ ವಿರುದ್ಧದ ಪೋಕ್ಸೋ ಪ್ರಕರಣ ಹಿಂಪಡೆದಿಲ್ಲ; ಮಾಧ್ಯಮಗಳ ಸುಳ್ಳು ಸುದ್ದಿಗೆ ದೂರುದಾರರ ಸ್ಪಷ್ಟನೆ

ಬ್ರಿಜ್‌ಭೂಷಣ್ ವಿರುದ್ಧದ ಪೋಕ್ಸೋ ಪ್ರಕರಣ ಹಿಂಪಡೆದಿಲ್ಲ; ಮಾಧ್ಯಮಗಳ ಸುಳ್ಳು ಸುದ್ದಿಗೆ ದೂರುದಾರರ ಸ್ಪಷ್ಟನೆ

ಮಾಧ್ಯಮಗಳಲ್ಲಿ ಆಗಿರುವ ಸುಳ್ಳು ಸುದ್ದಿಗಳಿಗೆ ಸಂಬಂಧಿಸಿದಂತೆ ಸಂತ್ರಸ್ತ ಅಪ್ರಾಪ್ತ ಕುಸ್ತಿಪಟುವಿನ ತಂದೆ ಸ್ಪಷ್ಟನೆ ನೀಡಿದ್ದಾರೆ

- Advertisement -
- Advertisement -

ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ವಿರುದ್ಧ ಅಪ್ರಾಪ್ತ ಕುಸ್ತಿಪಟು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂತೆಗೆದುಕೊಳ್ಳಲಾಗಿಲ್ಲ ಎಂದು ಸಂತ್ರಸ್ತ ಬಾಲಕಿಯ ತಂದೆ ಸ್ಪಷ್ಟಪಡಿಸಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧದ ಪೋಕ್ಸೋ ಪ್ರಕರಣವನ್ನು ಸೋಮವಾರ ಹಿಂಪಡೆಯಲಾಗಿದೆ ಎಂಬ ವರದಿಗಳನ್ನು ಹಲವಾರು ಮಾಧ್ಯಮಗಳು ಮಾಡಿವೆ. ಆದರೆ, ಬ್ರಿಜ್ ಭೂಷಣ್‌ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯ ತಂದೆ ‘ದಿ ಪ್ರಿಂಟ್‌’ ಪ್ರತಿಕ್ರಿಯಿಸಿ, “ಈ ಸುದ್ದಿ ಸಂಪೂರ್ಣವಾಗಿ ಸುಳ್ಳು, ನಾನು ದೂರನ್ನು ಹಿಂಪಡೆದಿಲ್ಲ, ಹೋರಾಟ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಹೋರಾಟ ಮಾಡಿಯೇ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧದ ಪೋಕ್ಸೋ ಪ್ರಕರಣ ಅಥವಾ ಎಫ್‌ಐಆರ್ ಹಿಂಪಡೆದಿಲ್ಲ ಎಂದು ಹೋರಾಟನಿರತ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಕೂಡ ದೃಢಪಡಿಸಿದ್ದಾರೆ.

ಸೋಮವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ, ಸಾಮಾನ್ಯ ಮಾತುಕತೆಗಳು ನಡೆದಿವೆ. ಬ್ರಿಜ್ ಭೂಷಣ್ ಸಿಂಗ್‌ನನ್ನು ಬಂಧಿಸಬೇಕು ಎಂಬುದಷ್ಟೇ ನಮ್ಮ ಬೇಡಿಕೆಯಾಗಿದೆ. ನಾನು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ರೈಲ್ವೆಯಲ್ಲಿ ಓಎಸ್‌ಡಿಯಾಗಿ ನನ್ನ ಕೆಲಸವನ್ನು ಪುನರಾರಂಭಿಸಿದ್ದೇನೆ. ನಮಗೆ ನ್ಯಾಯ ಸಿಗುವವರೆಗೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಆಕೆ (ಅಪ್ರಾಪ್ತ ಬಾಲಕಿ) ಯಾವುದೇ ಎಫ್‌ಐಆರ್ ಹಿಂಪಡೆದಿಲ್ಲ, ಇದೆಲ್ಲವೂ ಸುಳ್ಳು” ಎಂದು ತಿಳಿಸಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ (ಪೋಕ್ಸೋ) ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿ ತನ್ನ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಸೆಕ್ಷನ್‌ 164ರ ಅನ್ವಯ  ನೀಡುವಾಗ ಹೊಸ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಅಪ್ರಾಪ್ತ ಬಾಲಕಿಯ ತಂದೆ ‘ದಿ ಪ್ರಿಂಟ್‌’ ಪ್ರತಿಕ್ರಿಯಿಸಿ, “ಹೌದು, ನನಗೆ ಹೋರಾಡುವ ಉತ್ಸಾಹವಿದೆ. ನಾನು ಅದರ ವಿರುದ್ಧ ಹೋರಾಡುತ್ತಿದ್ದೇನೆ, ಆದರೆ ನಾನು ಎಲ್ಲಿಯವರೆಗೆ ಮುಂದುವರಿಯಬಹುದು? ಈ ಅನುಭವವು ನನ್ನನ್ನು ಸಂಪೂರ್ಣವಾಗಿ ಬರಿದು ಮಾಡಿದೆ. ಬ್ರಿಜ್ ಭೂಷಣ್ ನೀಡಿರುವ ಲೈಂಗಿಕ ಕಿರುಕುಳದಿಂದಾಗಿ ನನ್ನ ಮಗಳು ಇನ್ನೂ ಚೇತರಿಸಿಕೊಂಡಿಲ್ಲ. ಆಕೆ ಶಾಂತಿಯಿಂದ ಇರಲು ಸಾಧ್ಯವಾಗುತ್ತಿಲ್ಲ” ಎಂದಿದ್ದರು.

ಮಾಧ್ಯಮಗಳು ಮಾಡಿದ ವರದಿ ಏನು?

“ಪ್ರಕರಣ ದಾಖಲಿಸಿರುವ ಏಳು ಕುಸ್ತಿಪಟುಗಳ ಪೈಕಿ ಅಪ್ರಾಪ್ತ ಕುಸ್ತಿಪಟು ತನ್ನ ಹೇಳಿಕೆಯನ್ನು ಹಿಂಪಡೆದಿದ್ದಾರೆ” ಎಂದು ಮಾಧ್ಯಮಗಳು ಸುದ್ದಿ ಹಬ್ಬಿಸಿವೆ.

17 ವರ್ಷ ವಯಸ್ಸಿನ ಕುಸ್ತಿಪಟು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೊಸ ಹೇಳಿಕೆಯನ್ನು ದಾಖಲಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಹೇಳಿಕೆಯು ನ್ಯಾಯಾಲಯದ ಮುಂದೆ ಸಾಕ್ಷಿಯಾಗಿ ಪರಿಗಣಿಸಲ್ಪಡುತ್ತದೆ ಎಂದು ಮಾಧ್ಯಮಗಳು ವರದಿ ಪ್ರಕಟಿವೆ.

“ನಾವು ಕೇಳಿದ ಪ್ರಶ್ನೆಗೆ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ” ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಹೇಳಿತ್ತು.

ದೆಹಲಿ ಪೊಲೀಸರು ಬ್ರಿಜ್‌ ವಿರುದ್ಧ ದಾಖಲಿಸಿದ ಎರಡು ಪ್ರಕರಣಗಳ ಪೈಕಿ ಒಂದು ಪೋಕ್ಸೋಗೆ ಸಂಬಂಧಿಸಿದೆ. ಅಪ್ರಾಪ್ತ ಕುಸ್ತಿಪಟುವಿನ ತಂದೆ ನೀಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ. “ನನ್ನ ಮಗಳು ಸಂಪೂರ್ಣವಾಗಿ ತೊಂದರೆಗೀಡಾಗಿದ್ದಾರೆ. ಮುಂದಿನ ದಿನಗಳಲ್ಲಿ ಮೊದಲಿನಂತೆ ಆಕೆ ಶಾಂತವಾಗಿ ಇರಲಾರಳು. ಆರೋಪಿ ಬ್ರಿಜ್ ಭೂಷಣ್ ನೀಡಿರುವ ಲೈಂಗಿಕ ಕಿರುಕುಳ ಆಕೆಯನ್ನು ಕಾಡುತ್ತಲೇ ಇದೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿರಿ: ಪ್ರತಿಭಟನೆಯಿಂದ ನಾನು ಹಿಂದೆ ಸರಿದಿಲ್ಲ, ಮಾಧ್ಯಮಗಳೇ ಸುಳ್ಳು ಸುದ್ದಿ ಹಬ್ಬಿಸಬೇಡಿ: ಸಾಕ್ಷಿ ಮಲಿಕ್ ಟ್ವೀಟ್

“ಫೋಟೋ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಬ್ರಿಜ್ ಭೂಷಣ್‌ ನನ್ನ ಮಗಳನ್ನು ಬಿಗಿಯಾಗಿ ಹಿಡಿದುಕೊಂಡು ಕಿರುಕುಳ ನೀಡಿದ್ದನು. ತನ್ನತ್ತ ಎಳೆದುಕೊಂಡು, ಮಗಳ ಭುಜವನ್ನು ಬಲವಾಗಿ ಒತ್ತಿದನು. ಉದ್ದೇಶಪೂರ್ವಕವಾಗಿ ಆಕೆಯ ಸ್ತನಗಳನ್ನು ಮುಟ್ಟಿದನು” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಪೋಕ್ಸೋ ಕಾಯಿದೆಯ ಸೆಕ್ಷನ್ 10 ಮತ್ತು ಐಪಿಸಿ ಸೆಕ್ಷನ್‌ 354 (ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಆಕೆಯ ನಮ್ರತೆಯನ್ನು ಕೆರಳಿಸಲು ಕ್ರಿಮಿನಲ್ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಹೆಚ್‌.ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ...

0
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದ ನಿರಾಳರಾಗಿದ್ದ ಶಾಸಕ ಹೆ.ಚ್‌ಡಿ ರೇವಣ್ಣ ಅವರಿಗೆ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನದ ಆತಂಕ ಎದುರಾಗಿದೆ. ಈ ಹಿನ್ನೆಲೆ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ...