Homeಮುಖಪುಟಅರುಣ್ ಗೋಯೆಲ್ ರಾಜೀನಾಮೆ; 'ಖಾಸಗಿತನ' ಮುಖ್ಯ ಎಂದ ಮುಖ್ಯ ಚುನಾವಣಾ ಆಯುಕ್ತರು!

ಅರುಣ್ ಗೋಯೆಲ್ ರಾಜೀನಾಮೆ; ‘ಖಾಸಗಿತನ’ ಮುಖ್ಯ ಎಂದ ಮುಖ್ಯ ಚುನಾವಣಾ ಆಯುಕ್ತರು!

- Advertisement -
- Advertisement -

ಮಾಜಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರ ಅನಿರೀಕ್ಷಿತ ರಾಜೀನಾಮೆ ಮತ್ತು ಚುನಾವಣಾ ಬಾಂಡ್‌ ಕುರಿತ ಪಾರದರ್ಶಕತೆಯ ಕುರಿತು ಕೇಳಿದಾಗ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ವಿಷಯಗಳಲ್ಲಿ ಖಾಸಗಿತನವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.

ಗೋಯೆಲ್ ಅವರ ರಾಜೀನಾಮೆ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ರಾಜೀವ್‌ ಕುಮಾರ್, ಈ ವಿಷಯ ವೈಯಕ್ತಿಕ. ಅರುಣ್ ಅವರು ನಮ್ಮ ತಂಡದ ಅತ್ಯಂತ ಗೌರವಾನ್ವಿತ ಸದಸ್ಯರಾಗಿದ್ದರು ಮತ್ತು ನಾನು ಅವರೊಂದಿಗೆ  ಕೆಲಸ ಮಾಡುವುದನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಆದರೆ ಪ್ರತಿ ಸಂಸ್ಥೆಯಲ್ಲಿ ಯಾರಿಗಾದರೂ ವೈಯಕ್ತಿಕ ಸ್ಥಳವನ್ನು ನೀಡಬೇಕಾಗುತ್ತದೆ ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಕೇಳುವುದು ಸಂವೇದನಾಶೀಲವಲ್ಲ. ವೈಯಕ್ತಿಕ ಕಾರಣದಿಂದ ಅವರು ರಾಜೀನಾಮೆ ನೀಡಿದ್ದರೆ ಅದನ್ನು ನಾವು ಗೌರವಿಸಬೇಕು ಎಂದು ಹೇಳಿದ್ದಾರೆ.

ನಮ್ಮಲ್ಲಿ ಒಂದು ಉತ್ತಮ ಪದ್ದತಿಯಿದೆ. ಆಯೋಗದೊಳಗಿನ ಭಿನ್ನಾಭಿಪ್ರಾಯವನ್ನು ನಾವು ಉತ್ತೇಜಿಸುತ್ತೇವೆ, ಇದು ಕಠಿಣ ಕೆಲಸವಾದ್ದರಿಂದ ಒಬ್ಬರಿಗಿಂತ ಮೂರು ಮನಸ್ಸುಗಳು ಉತ್ತಮ, ನಾವು ವಿಚಾರ ಮಂಥನ ಮಾಡುತ್ತೇವೆ, ನಾವು ವಿಶ್ಲೇಷಿಸುತ್ತೇವೆ ಎಂದು ಹೇಳಿದ್ದಾರೆ.

ಇದಲ್ಲದೆ ಚುನಾವಣಾ ಬಾಂಡ್‌ ಕುರಿತು ಮಾನಾಡಿದ ರಾಜೀವ್‌ ಕುಮಾರ್‌, ಭಾರತದ ಚುನಾವಣಾ ಆಯೋಗವು  ದಾನಿಗಳ ಖಾಸಗಿತನವನ್ನು ಗೌರವಿಸುತ್ತದೆ ಎಂದು ಹೇಳಿದ್ದಾರೆ. ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ, ಆಯೋಗವು ಯಾವಾಗಲೂ ಪಾರದರ್ಶಕತೆಯ ಪರವಾಗಿಯೇ ಇದೆ. ಪ್ರಜಾಪ್ರಭುತ್ವದಲ್ಲಿ ವಿಷಯಗಳನ್ನು ಮರೆಮಾಚಲು ಅವಕಾಶವಿಲ್ಲ. ಚುನಾವಣೆಯಲ್ಲಿ ಬಳಕೆಯಾಗುತ್ತಿರುವ ಲೆಕ್ಕಕ್ಕೆ ಸಿಗದ ಹಣಗಳ ಬಗ್ಗೆ ನಾವು ನಿಗಾ ವಹಿಸುತ್ತೇವೆ, ಲೆಕ್ಕಕ್ಕೆ ಸಿಗದ ರೂಪದಲ್ಲಿ ದೇಣಿಗೆಯನ್ನು ನಾವು ಹೇಗೆ ನಿಯಂತ್ರಿಸಬೇಕು ಎಂಬವುದರ ಬಗ್ಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆ ಮತ್ತು ಗುಜರಾತ್‌, ಹರಿಯಾಣ,, ಝಾರ್ಖಾಂಡ್, ಮಹರಾಷ್ಟ್ರ, ಕರ್ನಾಟಕ, ತಮಿಳುನಾಡು, ಪ.ಬಂಗಾಳ ರಾಜ್ಯಗಳ 26 ಕ್ಷೇತ್ರಗಳಿಗೆ ಉಪ ಚುನಾವಣೆ ಹಾಗೂ ಸಿಕ್ಕಿಂ, ಒಡಿಸ್ಸಾ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ ನಾಲ್ಕು ರಾಜ್ಯಗಳಿಗೆ ವಿಧಾನಸಭಾ ಚುನಾವಣೆ  ದಿನಾಂಕವನ್ನು ನಿನ್ನೆ ಕೇಂದ್ರ ಚುನಾವಣಾ ಆಯೋಗದ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಲಾಗಿದೆ. ಎಪ್ರಿಲ್‌ 19ರಿಂದ 7 ಹಂತಗಳಲ್ಲಿ ದೇಶದಾದ್ಯಂತ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜೀವ್‌ ಕುಮಾರ್‌, ಪ್ರತಿಯೊಂದು ಚುನಾವಣೆ ನಮಗೆ ಪರೀಕ್ಷೆ ಇದ್ದಂತೆ, ನ್ಯಾಯ ಸಮ್ಮತ, ಮುಕ್ತ ಪಾರದರ್ಶಕ ಚುನಾವಣೆ ನಮ್ಮ ಉದ್ದೇಶವಾಗಿದೆ. ನಾವು ರಾಷ್ಟ್ರಕ್ಕೆ ನಿಜವಾದ ಹಬ್ಬದ, ಪ್ರಜಾಸತ್ತಾತ್ಮಕ ವಾತಾವರಣವನ್ನು ನೀಡಲು ಬದ್ಧರಾಗಿದ್ದೇವೆ. 17ನೇ ಲೋಕಸಭೆಯ ಅವಧಿಯು 16 ಜೂನ್ 2024ರಂದು ಮುಕ್ತಾಯಗೊಳ್ಳಲಿದೆ. ಆಂಧ್ರ ಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಯ ಅವಧಿ ಕೂಡ ಜೂನ್ 2024ರಲ್ಲಿ ಅವಧಿ ಮುಗಿಯಲಿದೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ನಡೆಯಲಿವೆ ಎಂದು ಹೇಳಿದ್ದರು.

ಇದನ್ನು ಓದಿ:  ಗುಜರಾತ್ ಹಾಸ್ಟೆಲ್‌ನಲ್ಲಿ ನಮಾಝ್‌ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪು ದಾಳಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಾಯುವ ಮುನ್ನ ‘ಹೇ ರಾಮ್’ ಎಂದ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತೇವೆ: ಪ್ರಿಯಾಂಕಾ ಗಾಂಧಿ

0
"ನಮ್ಮ ಪಕ್ಷವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತದೆ; ಅವರು ಸಾಯುವ ಮೊದಲು 'ಹೇ ರಾಮ್' ಎಂದು ಉಚ್ಚರಿಸಿದರು. ಆದರೆ, ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ವಿರೋಧಿ ಎಂದು ಆರೋಪಿಸುವುದು...