Homeಮುಖಪುಟ'ಸಂವಿಧಾನ್ ಸಮ್ಮಾನ್ ಮಹಾಸಭಾ': ರಾಹುಲ್‌ಗೆ ಪ್ರಕಾಶ್ ಅಂಬೇಡ್ಕರ್ ಆಹ್ವಾನ

‘ಸಂವಿಧಾನ್ ಸಮ್ಮಾನ್ ಮಹಾಸಭಾ’: ರಾಹುಲ್‌ಗೆ ಪ್ರಕಾಶ್ ಅಂಬೇಡ್ಕರ್ ಆಹ್ವಾನ

- Advertisement -
- Advertisement -

ಮಹತ್ವದ ಬೆಳವಣಿಗೆಯೊಂದರಲ್ಲಿ ವಂಚಿತ್ ಬಹುಜನ ಅಘಾಡಿ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ನ.25 ರಂದು ಮುಂಬೈನಲ್ಲಿ ನಡೆಯುವ ಸಂವಿಧಾನ್ ಸಮ್ಮಾನ್ ಮಹಾಸಭಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಆಹ್ವಾನಿಸಿದ್ದಾರೆ.

1949ರ ನ.26 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸಂವಿಧಾನ ದಿನದ ಮುನ್ನಾದಿನದಂದು ಸಭೆ ಸಭೆ ನಡೆಯಲಿದೆ. ರಾಹುಲ್‌ ಗಾಂಧಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಮೊಮ್ಮಗನಾಗಿದ್ದರೆ, ಪ್ರಕಾಶ್‌ ಅಂಬೇಡ್ಕರ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗನಾಗಿದ್ದಾರೆ.

ಸಂವಿಧಾನದ ತತ್ವಗಳು ಮತ್ತು ಕಲ್ಪನೆಗಳನ್ನು ನಾಶಮಾಡಲು ಅಸ್ತಿತ್ವದಲ್ಲಿರುವ ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ಹೋರಾಡಲು ನಮ್ಮ ಬದ್ಧತೆಯ ಆಧಾರದ ಮೇಲೆ ನನ್ನ ಪಕ್ಷ ವಿಬಿಎ ಪರವಾಗಿ ನಾನು ನಿಮಗೆ ಸಂವಿಧಾನ್ ಸಮ್ಮಾನ್ ಮಹಾಸಭಾದ ಆಹ್ವಾನವನ್ನು ನೀಡುತ್ತೇನೆ ಎಂದು ಪ್ರಕಾಶ್‌ ಅಂಬೇಡ್ಕರ್ ಅವರು ರಾಹುಲ್‌ ಗಾಂಧಿಗೆ ಬರೆದ ಆಹ್ವಾನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಂಬೈನ ದಾದರ್‌ನಲ್ಲಿರುವ ಐತಿಹಾಸಿಕ ಛತ್ರಪತಿ ಶಿವಾಜಿ ಮಹಾರಾಜ್ ಪಾರ್ಕ್‌ನಲ್ಲಿ ಸಂವಿಧಾನ್ ಸಮ್ಮಾನ್ ಮಹಾಸಭಾ ನಡೆಯಲಿದೆ. ಇದು ಡಾ ಅಂಬೇಡ್ಕರ್ ಅವರ ಚೈತ್ಯಭೂಮಿಯಿಂದ ಸ್ವಲ್ಪ ದೂರದಲ್ಲಿದೆ.

ಪ್ರಕಾಶ್‌ ಅಂಬೇಡ್ಕರ್‌ ಅವರು ನೀಡಿರುವ ಆಹ್ವಾನಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಥವಾ ರಾಹುಲ್‌ ಗಾಂಧಿಯವರ ಕಚೇರಿ ಇನ್ನೂ ಪ್ರತಿಕ್ರಿಯಿಸಿಲ್ಲ.

ಭಾರತದ ಸಂವಿಧಾನವು ದೇಶದ ತಾರತಮ್ಯ, ಅಂಚಿನಲ್ಲಿರುವ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡಿದೆ. ಮುನ್ನುಡಿಯ ಆರಂಭಿಕ ಮತ್ತು ಕೊನೆಯ ವಾಕ್ಯಗಳು, ನಾವು ಈ ಸಂವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ, ಜಾರಿಗೊಳಿಸುತ್ತೇವೆ ಎಂಬುದು ಹೇಳುತ್ತದೆ. ಇದು ಜನರ ಕೈಯಲ್ಲಿ ಅಧಿಕಾರ ಇರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದು, ಸೋನಿಯಾ ಗಾಂಧಿಯವರು ಕಾಂಗ್ರೆಸ್‌ ಅಧ್ಯಕ್ಷರಾಗಿರುವ ವೇಳೆ ಭಾರಿಪಾ ಬಹುಜನ ಮಹಾಸಂಘವು ಕಾಂಗ್ರೆಸ್‌ನ್ನು ಹೇಗೆ ಬೆಂಬಲಿಸಿದೆ ಎಂದು ಕೂಡ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ಮಧ್ಯಪ್ರದೇಶ: ಘರ್ಷಣೆ ವೇಳೆ ಕೈ ಕಾರ್ಯಕರ್ತ ಸಾವು: ಬಿಜೆಪಿ ಅಭ್ಯರ್ಥಿಯ ಬಂಧನಕ್ಕೆ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...