Homeಕರ್ನಾಟಕಬೆಂಗಳೂರು: ಯತೀಂಖಾನಾ ವಿರುದ್ಧ ಎಫ್‌ಐಆರ್‌ಗೆ NCPCR ಸೂಚನೆ

ಬೆಂಗಳೂರು: ಯತೀಂಖಾನಾ ವಿರುದ್ಧ ಎಫ್‌ಐಆರ್‌ಗೆ NCPCR ಸೂಚನೆ

- Advertisement -
- Advertisement -

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ನ.19 ರಂದು ಬೆಂಗಳೂರಿನ ಸಯೀದ್ ನಗರದಲ್ಲಿರುವ ದಾರುಲ್ ಉಲೂಮ್ ಸಯೀದಿಯಾ ಯತೀಂಖಾನಾದಲ್ಲಿ(ಅನಾಥಾಶ್ರಮ) ತಪಾಸಣೆ ನಡೆಸಿದ್ದು, ಯತೀಂಖಾನಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸೂಚಿಸಿದೆ.

ಆಯೋಗವು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಕಳುಹಿಸಿದ್ದು, ಅನಾಥಾಶ್ರಮವನ್ನು ಮೇಲ್ವಿಚಾರಣೆ ಮಾಡುವ ಸಮಿತಿಯ ಮುಖ್ಯಸ್ಥರು ಮತ್ತು ಸದಸ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದ್ದಾರೆ.

ಯತೀಂಖಾನಾ ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಮತ್ತು ಮೂಲಸೌಕರ್ಯಗಳನ್ನು ಹೊಂದಿಲ್ಲ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಲಾಗಿದೆ.

ಆಯೋಗದ ಮುಖ್ಯಸ್ಥ ಪ್ರಿಯಾಂಕ್‌ ಕನುಂಗೊ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಅನಾಥಾಶ್ರಮಕ್ಕೆ ಹಠಾತ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಇಲ್ಲಿ  ಸುಮಾರು 200 ಅನಾಥ ಮಕ್ಕಳಿದ್ದಾರೆ. 100 ಚದರ ಅಡಿ ಕೋಣೆಯಲ್ಲಿ 8 ಮಕ್ಕಳನ್ನು ಇರಿಸಲಾಗಿದೆ. ಅಂತಹ 5 ಕೊಠಡಿಗಳಲ್ಲಿ 40 ಮಕ್ಕಳು ವಾಸಿಸುತ್ತಿದ್ದಾರೆ ಮತ್ತು 16 ಮಕ್ಕಳು ಕಾರಿಡಾರ್‌ನಲ್ಲಿ ವಾಸಿಸುತ್ತಿದ್ದಾರೆ. ಉಳಿದ 150 ಮಕ್ಕಳು ಹಾಲ್‌ಗಳಲ್ಲಿ ಮಲಗುತ್ತಾರೆ. ಮಕ್ಕಳು ಮದ್ರಸಾದಲ್ಲಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಯಾವುದೇ ಮಗುವನ್ನು ಶಾಲೆಗೆ ಕಳುಹಿಸಲಾಗುತ್ತಿಲ್ಲ. ಅಲ್ಲಿಆಟದ ಪರಿಕರಗಳಿಲ್ಲ. ಮಕ್ಕಳು ಟಿವಿ ನೋಡಲೂ ವ್ಯವಸ್ಥೆ ಇಲ್ಲ. ಚಿಕ್ಕ ಮಕ್ಕಳು ತುಂಬಾ ಮುಗ್ಧರು, ಅವರನ್ನು ಬೆಳಿಗ್ಗೆ 3ಗಂಟೆಗೆ ಮದರಸಾ ಅಧ್ಯಯನಕ್ಕೆ ಎಚ್ಚರಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಮಧ್ಯಾಹ್ನ ಮಲಗುತ್ತಾರೆ. ನಂತರ ಸಂಜೆಯಿಂದ ರಾತ್ರಿಯವರೆಗೆ ತರಬೇತಿ ಇರುತ್ತದೆ. ನಮಾಝ್‌ಗೆ ಸಣ್ಣ ವಿರಾಮಗಳಿವೆ. ಊಟ, ವಿರಾಮ, ಮನರಂಜನೆ ಇತ್ಯಾದಿಗಳಿಗೆ ಬೇರೆ ಸ್ಥಳವಿಲ್ಲ. ಮಸೀದಿಯಲ್ಲಿ ಮಾತ್ರ ಉಳಿದುಕೊಳ್ಳಬೇಕು. ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ಸಂವಿಧಾನದ ಉಲ್ಲಂಘನೆಯಾಗಿದೆ NCPCR ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...