Homeಕರ್ನಾಟಕಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

ಅಸಹ್ಯ ಹುಟ್ಟಿಸುವ ಪ್ರತಾಪ್ ಸಿಂಹನ ಲೈಂಗಿಕ ಹಗರಣ

- Advertisement -
- Advertisement -

ತೇಜಸ್ವಿ ಸೂರ್ಯನ ಸೆಕ್ಸ್ ಹಗರಣದ ಬಗ್ಗೆ ಸಂತ್ರಸ್ತರು ದೂರಿದ್ದು ಇದೇ ವ್ಯಕ್ತಿಗೆ! ಆದರೆ ಈ ವ್ಯಕ್ತಿಯ ಕಥೆ ಕೇಳಿದರೆ ಬೆಚ್ಚಿ ಬೀಳುತ್ತೀರಿ?

ಏಪ್ರಿಲ್ 16ರ ಸಂಜೆಯ ಹೊತ್ತಿಗೆ ಮೈಸೂರು ಭಾಗದ ಕೆಲವರ ಮೊಬೈಲ್‍ಗೆ ಎರಡು ಆಡಿಯೋಗಳು, ಹುಡುಗಿಯೊಬ್ಬಳು ಹಸ್ತಾಕ್ಷರದಲ್ಲಿ ಬರೆದ 8 ಪುಟಗಳ ಪತ್ರ ಮತ್ತು ಸ್ಕ್ರೀನ್‍ಷಾಟ್‍ಗಳು ತಲುಪಿದವು. ಅದನ್ನು ಮೇಲ್ನೋಟಕ್ಕೆ ನೋಡಿದವರು ಕೂಡಲೇ ಇನ್ನಷ್ಟು ಜನರಿಗೆ ಫಾರ್ವರ್ಡ್ ಮಾಡಿದರು. ನಂತರ ಸಮಯ ಸಿಕ್ಕಾಗ ಆ ಸ್ಕ್ರೀನ್‍ಷಾಟ್‍ಗಳನ್ನು ಓದಿ, ಆಡಿಯೋ ಕೇಳಿದರು. ತೀರಾ ಅಶ್ಲೀಲವಾಗಿದ್ದ ಕಾರಣಕ್ಕೆ, ಮೊದಲು ಫಾರ್ವರ್ಡ್ ಮಾಡಿದ್ದಕ್ಕೆ ಮುಜುಗರ ಪಟ್ಟುಕೊಂಡು, ಕ್ಷಮೆ ಕೇಳಿ ಮತ್ತೆ ಮೆಸೇಜ್ ಮಾಡಿದರು.

ಆ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿದ್ದದ್ದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹರ ಲೈಂಗಿಕ ಪುರಾಣ. ಆಡಿಯೋ ಕೇಳಿದ ಎಲ್ಲರಿಗೂ ಅದು ಪ್ರತಾಪ್ ಸಿಂಹರದ್ದೇ ಎಂಬುದರಲ್ಲಿ ಯಾವ ಸಂದೇಹವೂ ಉಳಿಯುವುದಿಲ್ಲ. ಅದರ ಆಚೆಗೆ ಹಸ್ತಾಕ್ಷರದಲ್ಲಿರುವ ಪತ್ರದಲ್ಲಿ ಮಾಡಿರುವ ಆರೋಪಗಳನ್ನು ನೋಡಿದರೆ, ಅಥವಾ ಆಡಿಯೋ ಕೇಳಿದರೆ ಎರಡು ವಿಚಾರಗಳು ಸ್ಪಷ್ಟವಾಗುತ್ತದೆ. ಒಂದು, ಸಂಬಂಧಿಸಿದ ಹುಡುಗಿಯೂ ಸೋಕಾಲ್ಡ್ ಪ್ರೇಮ ಅಥವಾ ಸಂಬಂಧದಲ್ಲಿ ಒಪ್ಪಿಗೆಯಿಂದಲೇ ಆತನ ಜೊತೆಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾರೆ ಮತ್ತು ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವ ಮೌಲ್ಯಗಳಿಗನುಸಾರ ಅತ್ಯಂತ ಅನೈತಿಕವಾದ ಮತ್ತು ವಿಕೃತವಾದ ಲೈಂಗಿಕ ಆಸಕ್ತಿಗಳನ್ನು ಇಟ್ಟುಕೊಂಡಿದ್ದಾರೆ. ಏಕಕಾಲದಲ್ಲಿ ಹಲವರ ಜೊತೆಗೆ ಲೈಂಗಿಕ ಸಂಬಂಧಗಳನ್ನು ಇಟ್ಟುಕೊಳ್ಳುವ ಚಾಳಿ ಇರುವ ಒಂದು ವರ್ತುಲವನ್ನೇ ಅವರು ಬಿಲ್ಡ್ ಮಾಡಿಕೊಂಡಿದ್ದಾರೆ.

ಇವೆಲ್ಲವನ್ನೂ ಅವರವರ ವ್ಯಕ್ತಿಗತ ವಿಚಾರ ಎಂದು ತಳ್ಳಿ ಹಾಕಲಾಗದು.
ಕಾರಣವಿಷ್ಟೇ. ಪ್ರತಾಪ್ ಸಂಸತ್ ಸದಸ್ಯನಂತಹ ಸ್ಥಾನದಲ್ಲಿರುವ ವ್ಯಕ್ತಿ. ಈ ಸ್ಥಾನವೇ ಹಲವರನ್ನು ಆಕರ್ಷಿಸುವ, ಆಮಿಷ ಒಡ್ಡುವ, ಬೆದರಿಕೆ ಒಡ್ಡುವ ಸಾಧ್ಯತೆಗಳನ್ನು ಕಲ್ಪಿಸಿಕೊಡುತ್ತದೆ. ಹಾಗಾಗಿ ಅದರ ಎಲ್ಲಾ ಬಗೆಯ ದುರ್ಬಳಕೆ ಮಾಡಿಕೊಂಡು ಅಮಾಯಕರಾದ ಎಷ್ಟೋ ಹುಡುಗಿಯರನ್ನು ಬಲೆಗೆ ಕೆಡವಿಕೊಂಡಿರುವ ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಪ್ರತಾಪ್ ಸಿಂಹ ಮಾಡಿದ್ದಾರೆ ಎಂದು ನಂಬುವಂತಹ ಸಾಕ್ಷ್ಯಾಧಾರಗಳು ಸದರಿ ವಾಟ್ಸಾಪ್ ಫಾರ್ವರ್ಡ್‍ಗಳಲ್ಲಿವೆ.

ಎರಡನೆಯದಾಗಿ, ಭಾರತೀಯ ಸಂಸ್ಕೃತಿ, ಸಚ್ಚಾರಿತ್ರ್ಯ ಇತ್ಯಾದಿಗಳ ಕುರಿತು ಮಾತನಾಡುವ ಆರೆಸ್ಸೆಸ್ ಜೊತೆಗೆ ಅಭಿಮಾನ ಪೂರ್ವಕ ಹೆಮ್ಮೆಯ ಸಂಬಂಧವನ್ನಿಟ್ಟುಕೊಂಡಿರುವುದಾಗಿ ಘೋಷಿಸುವ ಇಂತಹ ವ್ಯಕ್ತಿಗಳು ಹೀಗೇಕೆ ಎಂಬ ಪ್ರಶ್ನೆ ಏಳುತ್ತದೆ. ಮಾತಿಗೂ, ಕೃತಿಗೂ ಸಂಬಂಧವೇ ಇಲ್ಲ. ಅದರಲ್ಲೂ ಹೆಣ್ಣನ್ನು ಇವರುಗಳು ಭೋಗದ ವಸ್ತುವೆಂದಲ್ಲದೇ ಬೇರ್ಯಾವ ರೀತಿಯಲ್ಲೂ ನೋಡುವಂತೆ ಕಾಣುವುದಿಲ್ಲ.
ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಹಿಳೆಯರಿಗೆ ಸದಸ್ಯತ್ವವೇ ಇಲ್ಲ. ರಾಷ್ಟ್ರ ಸೇವಿಕಾ ಸಂಘ ಇದೆಯಲ್ಲಾ ಎಂದು ಯಾರಾದರೂ ಕೇಳಬಹುದು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ರೀತಿಯಲ್ಲಿ ಅದೂ ಒಂದು ಅಂಗಸಂಸ್ಥೆ ಮಾತ್ರವೇ ಆಗಿದೆ. ಕಾಂಗ್ರೆಸ್ ಅಥವಾ ಸಿಪಿಎಂ ಥರದ ಪಕ್ಷಗಳೂ ಹಾಗೆಯೇ ಅಲ್ಲವೇ ಎಂದು ಕೆಲವರು ಅಮಾಯಕ ಪ್ರಶ್ನೆಯನ್ನು ಹಾಕಬಹುದು. ಇಲ್ಲ, ಕಾಂಗ್ರೆಸ್ ಅಥವಾ ಸಿಪಿಎಂ ಪಕ್ಷಗಳಲ್ಲಿ ಮಹಿಳೆಯರೂ ಸದಸ್ಯರು. ಅದರಲ್ಲಿ ತಾರತಮ್ಯ ಇರುವುದಿಲ್ಲ. ಅದರ ಅಧ್ಯಕ್ಷರೂ ಆಗಬಹುದು. ಅದಲ್ಲದೇ ಮಹಿಳಾ ವಿಭಾಗವೂ ಇರುತ್ತದೆ ಅಷ್ಟೇ.

ಆದರೆ, ಇಲ್ಲಿ ಆರೆಸ್ಸೆಸ್‍ನ ನಾಯಕರಾಗುವುದು ಹೋಗಲಿ, ಸದಸ್ಯೆಯರಾಗೂ ಮಹಿಳೆಯರು ಇರುವಂತಿಲ್ಲ. ಮಹಿಳೆಯರು ಎರಡನೆಯ ದರ್ಜೆಯ ಪ್ರಜೆಗಳು, ಅವರು ಮನೆಗೆಲಸ ಮಾಡುವುದಕ್ಕೆ, ಸೇವೆ ಮಾಡುವುದಕ್ಕೆ, ಪುರುಷರ ಭೋಗಕ್ಕೆ ಬಳಕೆಯಾಗಲು ಅಷ್ಟೇ ಇದ್ದಾರೆ ಎಂಬ ಮನೋಭಾವ ಇದ್ದಾಗ, ಅದರ ಸುತ್ತಲಿನ ಪರಿವಾರ ಹೀಗೇ ಇರಲು ಸಾಧ್ಯ. ಹಾಗಾಗಿಯೇ ಕರ್ನಾಟಕವೊಂದರಲ್ಲೇ ಇಂತಹವರ (ಇದು ಆರೆಸ್ಸೆಸ್‍ನ ಲೈಂಗಿಕ ಹಗರಣಗಳ ಪಟ್ಟಿಯಲ್ಲ, ಕಳೆದ 10 ವರ್ಷಗಳಿಂದ ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಚರ್ಚೆಯಾಗಿರುವ ಬಿಜೆಪಿ ನಾಯಕರ ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿರುವ ನಾಯಕರ ಪಟ್ಟಿ) ದೊಡ್ಡ ಪಟ್ಟಿ ಸಿಗುತ್ತದೆ. ಹಾಲಪ್ಪ, ರಘುಪತಿ ಭಟ್, ರೇಣುಕಾಚಾರ್ಯ, ಸಿದ್ದು ಸವಡಿ, ಕೃಷ್ಣ ಪಾಲೇಮಾರ್, ಸಿ.ಸಿ.ಪಾಟೀಲ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ.
ಇದು ಇಷ್ಟಕ್ಕೇ ಸೀಮಿತವಾಗಿರದು. ಏಕೆಂದರೆ ತೇಜಸ್ವಿ ಸೂರ್ಯನಿಂದ ಕಿರುಕುಳಕ್ಕೆ ಒಳಗಾದ ಇಬ್ಬರು ಮಹಿಳೆಯರು ತಮಗೆ ನೆರವಾಗಬೇಕೆಂದು ಪ್ರತಾಪ್ ಸಿಂಹನ ಮೊರೆ ಹೋಗಿದ್ದಾರೆಂದು ಈಗಾಗಲೇ ಬಹಿರಂಗವಾಗಿದೆ. ಯಾವ ಸಮಸ್ಯೆಯ ಕುರಿತು ಯಾರ ಬಳಿ ಹೋಗಿದ್ದಾರೆಂದು ನೋಡಿದರೆ ಆಘಾತವಾಗುತ್ತದೆ.

ಇಂತಹ ಹಗರಣಗಳು ಬಿಜೆಪಿಗೆ ಮಾತ್ರ ಸೀಮಿತವಾಗಿದೆಯೆಂದು ಅರ್ಥವಲ್ಲ. ಉಳಿದ ಪಕ್ಷಗಳಲ್ಲೂ ನಡೆದಿರುವ ಎಲ್ಲಾ ಹಗರಣಗಳೂ ಹೊರಗೆ ಬಂದಿವೆಯೆಂದೂ ಹೇಳಲಾಗದು. ಆದರೆ, ಬಿಜೆಪಿಯು ನೆಹರೂರಂಥ ನಾಯಕರು ಕುರಿತು ಸುಳ್ಳು ಸುದ್ದಿ, ಫೋಟೋಷಾಪ್ ಫೋಟೋಗಳನ್ನು ಸೃಷ್ಟಿ ಮಾಡುವ ದೊಡ್ಡ ಪಡೆಯನ್ನೇ ಹೊಂದಿದೆ. ತಮ್ಮ ಒಳಗೇ ಅಸಹ್ಯಕರ ಹುಳುಕುಗಳನ್ನು ಇಟ್ಟುಕೊಂಡಿದೆ.
ಬಿಜೆಪಿಯ ಯುವನಾಯಕರುಗಳಿಗೆ ಕೂಡಲೇ ಸೆಕ್ಸ್ ತಜ್ಞರಿಂದ ಕೌನ್ಸೆಲಿಂಗ್‍ನ ಅಗತ್ಯವಿದೆ. ಅದಕ್ಕೆ ವ್ಯವಸ್ಥೆ ಆಗದಿದ್ದರೆ, ಅವರು ದೊಡ್ಡ ಸಮಸ್ಯೆಯನ್ನು ಉಂಟು ಮಾಡಲಿದ್ದಾರೆ.

ಅಪ್‍ಡೇಟ್:
ಮೇಲೆ ಹೇಳಲಾದ ವಾಟ್ಸಾಪ್ ಫಾರ್ವರ್ಡ್‍ಗಳೊಂದಿಗೆ (ಪತ್ರಿಕೆಗೆ ಆ ಫೋಟೋಗಳು ಬಂದಿರಲಿಲ್ಲ) ಪ್ರತಾಪ್ ಸಿಂಹ ಒಬ್ಬ ಹುಡುಗಿಯ ಜೊತೆಗೆ ಇರುವ ಫೋಟೋ ಸಹಾ ಇತ್ತೆಂದು ಹೇಳಲಾಗುತ್ತಿದೆ. ಆ ಫೋಟೋದಲ್ಲಿರುವ ಹುಡುಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸದರಿ ಸುದ್ದಿ ಸುಳ್ಳೆಂದು ದೂರು ನೀಡಿರುವ ಕುರಿತು ವರದಿಯಾಗಿದೆ. ಆದರೆ, ಆಡಿಯೋದಲ್ಲಿ ಮಾತಾಡಿರುವ ಹುಡುಗಿ ಮತ್ತು ಈ ಹುಡುಗಿ ಒಬ್ಬರೇನಾ ಬೇರೆಯವರಾ ಎಂಬುದು ಗೊತ್ತಿಲ್ಲ.
ಈ ಕುರಿತು ನಡೆಯುವ ಇತರ ಬೆಳವಣಿಗೆಗಳ ಕುರಿತು ಈ ಪೇಜ್‍ನಲ್ಲಿ ನಂತರ ಅಪ್‍ಡೇಟ್ ಮಾಡಲಾಗುವುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...