Homeಮುಖಪುಟಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

- Advertisement -
- Advertisement -

ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಉಭಯ ಸದನದಲ್ಲಿ ಅಂಗೀಕಾರವಾದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗೆ ರಾಷ್ಟ್ರಪತಿಗಳು ಅಂತಿಮ ಮುದ್ರೆಯನ್ನು ಹಾಕಿದ್ದು, ಅದು ಕಾನೂನಾಗಿ ಮಾರ್ಪಟ್ಟಿವೆ. ಇದಿರಿಂದ ಭಾರತದಲ್ಲಿ ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿಗೆ ಬರಲಿವೆ.

ಭಾರತೀಯ ನ್ಯಾಯ (ಎರಡನೇ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತವನ್ನು ಹಾಕಿದ್ದಾರೆ.

ಈ ಮಸೂದೆಗಳು ಉಭಯ ಸದನಗಳಿಂದ ಸಂಸತ್ತಿನ ಭದ್ರತಾ ಲೋಪದ ಕುರಿತು ಗೃಹ ಸಚಿವರ ಹೇಳಿಕೆಗೆ ಪಟ್ಟು ಹಿಡದ ಬಳಿಕ ಪ್ರತಿಪಕ್ಷದ ಬಹುಪಾಲು ಸಂಸದರ ಅಮಾನತಿನ ಬೆನ್ನಲ್ಲೆ ಡಿ.20ರಂದು ಲೋಕಸಭೆ ಮತ್ತು ಡಿ.21ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದವು. ಮಸೂದೆ ಕುರಿತು ಸರಿಯಾದ ಚರ್ಚೆ ಮತ್ತು ಪ್ರತಿಪಕ್ಷಗಳ ಸಲಹೆಯನ್ನು ಪಡೆಯದೆ ಏಕಪಕ್ಷೀಯವಾಗಿ ಅಂಗೀಕಾರ ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು.

ಕಳೆದ ವಾರ ಲೋಕಸಭೆಯಲ್ಲಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದರು. ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ-1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್-1898 ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯಿದೆಗೆ ಬದಲಾವಣೆಗಳನ್ನು ಸೂಚಿಸುತ್ತದೆ.

ಇದು ಪೊಲೀಸ್ ಬಲವನ್ನು ಮಿತಿಮೀರಿದ ಬಳಕೆಗೆ ಕಾರಣವಾಗಬಹುದು ಮತ್ತು ಮಾನವ ಹಕ್ಕುಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂಬ ಕಳವಳದ ನಡುವೆ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಸೂದೆಗಳ ಬಗ್ಗೆ ಚರ್ಚಿಸುವಾಗ, ಪ್ರಸ್ತಾವಿತ ಕಾನೂನುಗಳನ್ನು ಸಮಗ್ರ ಸಮಾಲೋಚನೆಯ ನಂತರ ರಚಿಸಲಾಗಿದೆ ಮತ್ತು ಸದನದ ಅನುಮೋದನೆಗೆ ತರುವ ಮೊದಲು ಕರಡು ಶಾಸನಗಳ ಕೂಲಂಕುಷವಾಗಿ ಪರಿಶೀಲಿಸಲಾಗಿದೆ ಎಂದು ಹೇಳಿದರು. ಅಸ್ತಿತ್ವದಲ್ಲಿರುವ ಕ್ರಿಮಿನಲ್ ಕಾನೂನುಗಳು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಶಿಕ್ಷಿಸುವ ಉದ್ದೇಶವನ್ನು ಹೊಂದಿದೆ ನ್ಯಾಯವನ್ನು ನೀಡುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದರು.

ಭಾರತೀಯ ನ್ಯಾಯ (ಎರಡನೇ) ಸಂಹಿತಾ ಪ್ರಸ್ತುತ 358 ವಿಭಾಗಗಳನ್ನು ಹೊಂದಿದೆ. ಭಾರತೀಯ ನಾಗರಿಕಾ ಸುರಕ್ಷಾ (ಎರಡನೇ) ಸಂಹಿತಾ 531 ವಿಭಾಗಗಳನ್ನು ಹೊಂದಿದೆ ಮತ್ತು ಭಾರತೀಯ ಸಾಕ್ಷಿ (ಎರಡನೇ) ಸಂಹಿತಾ 170 ವಿಭಾಗಗಳನ್ನು ಹೊಂದಿದೆ. ಮಸೂದೆಗಳನ್ನು ಮೊದಲು ಆ.11ರಂದು ಸಂಸತ್ತಿನಲ್ಲಿ ಪರಿಚಯಿಸಲಾಯಿತು. ನಂತರ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಈ ಬಗ್ಗೆ ಹೆಚ್ಚಿನ ಶಿಫಾರಸುಗಳನ್ನು ಮಾಡಿದ ನಂತರ ಸರ್ಕಾರವು ಮಸೂದೆಯನ್ನು ಹಿಂಪಡೆದಿತ್ತು.

ಭಾರತೀಯ ನ್ಯಾಯ ಸಂಹಿತಾ (BNS2) ಅಡಿಯಲ್ಲಿ ದೇಶದ್ರೋಹವನ್ನು ‘ರಾಜ್ಯದ್ರೋಹದ’ (ಸರ್ಕಾರದ ವಿರುದ್ಧ) ಬದಲಾಗಿ ‘ದೇಶದ್ರೋಹ’ (ರಾಷ್ಟ್ರದ ವಿರುದ್ಧ) ಎಂದು ಬದಲಾಯಿಸಲಾಗಿದೆ. ಇದಲ್ಲದೆ, ‘ಸಂಘಟಿತ ಅಪರಾಧ’ವನ್ನು ಅಪರಾಧ ಎಂದು ಸೇರಿಸಲಾಗಿದೆ. ಐದು ಅಥವಾ ಹೆಚ್ಚು ಜನರ ಗುಂಪು ಒಬ್ಬ ವ್ಯಕ್ತಿಯ ಜನಾಂಗ, ಜಾತಿ, ಲಿಂಗ, ಭಾಷೆ ಅಥವಾ ವೈಯಕ್ತಿಕ ನಂಬಿಕೆಯ ಆಧಾರಗಳ ಮೇಲೆ ಕೊಲೆ ಅಥವಾ ಗಂಭೀರ ಗಾಯ ಮಾಡಿದರೆ ಅದು ಗುಂಪು ಹತ್ಯೆಯಾಗಲಿದೆ. ಇಂತಹ ಅಪರಾಧಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲು ನೂತನ ಕಾನೂನಿನಲ್ಲಿ ಅವಕಾಶವಿದೆ.

ಇದನ್ನು ಓದಿ: ಪೂಂಛ್‌ ನಾಗರಿಕರ ಹತ್ಯೆ ಪ್ರಕರಣ: ಸಂತ್ರಸ್ತ ಕುಟುಂಬದ ಭೇಟಿಗೆ ಮುಂದಾದ ಮೆಹಬೂಬಾ ಮುಫ್ತಿಗೆ ಗೃಹಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...