Homeಮುಖಪುಟರಾಷ್ಟ್ರಪತಿ ಚುನಾವಣೆ ಫಲಿತಾಂಶ: ಸಂಸದರ ಮತಗಳಲ್ಲಿ ದ್ರೌಪದಿ ಮುರ್ಮುಗೆ 540 ಮತ, ಸಿನ್ಹಾಗೆ 208

ರಾಷ್ಟ್ರಪತಿ ಚುನಾವಣೆ ಫಲಿತಾಂಶ: ಸಂಸದರ ಮತಗಳಲ್ಲಿ ದ್ರೌಪದಿ ಮುರ್ಮುಗೆ 540 ಮತ, ಸಿನ್ಹಾಗೆ 208

- Advertisement -
- Advertisement -

ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಪಾರ್ಲಿಮೆಂಟ್ ಹೌಸ್‌ನ 63ನೇ ರೂಂನಲ್ಲಿ ಆರಂಭಗೊಂಡಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಸಂಸದರ ಮತ ಎಣಿಕೆ ಮುಕ್ತಾಯವಾಗಿದೆ. ಅದರಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ 540 ಮತ ಪಡೆದರೆ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ 208 ಮತಗಳನ್ನು ಪಡೆದಿದ್ದಾರೆ. ಉಳಿದ 15 ಮತಗಳು ಅಸಿಂಧುಗೊಂಡಿವೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಸದಸ್ಯರು ಮತ್ತು ವಿಧಾನಸಭೆಯ ಸದಸ್ಯರಿಗೆ ವಿಭಿನ್ನ ಮೌಲ್ಯಗಳನ್ನು ನಿಗದಿಪಡಿಸಲಾಗಿದೆ. ಒಬ್ಬ ಸಂಸದನ ಮತದ ಮೌಲ್ಯವನ್ನು ‘700’ ಎಂದು ನಿಗದಿ ಪಡಿಸಲಾಗಿದೆ. ಈ ಮೌಲ್ಯವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತಗಳ ಮೌಲ್ಯವನ್ನು, ಒಟ್ಟು ಚುನಾಯಿತ ಸಂಸದರ ಸಂಖ್ಯೆಯಿಂದ ಭಾಗಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಸಂಸತ್ತಿನ ಒಟ್ಟು ಮತಗಳ ಸಂಖ್ಯೆ 5,43,200 ಮತ್ತು ಸಂಸದರ ಸಂಖ್ಯೆ 776 ಆಗಿರುವುದರಿಂದ, ಪ್ರತಿ ಸಂಸದರ ಮತದ ಮೌಲ್ಯ 700 ಆಗಿರುತ್ತದೆ.

ಈ ನಿಟ್ಟಿನಲ್ಲಿ ಇದುವರೆಗೂ ದ್ರೌಪದಿ ಮುರ್ಮುರವರು ಸದ್ಯಕ್ಕೆ 3.78 ಲಕ್ಷ ಮತಗಳ ಮೌಲ್ಯ (72%) ಪಡೆದರೆ ಯಶವಂತ ಸಿನ್ಹಾರವರು 1.45 ಮತಗಳ ಮೌಲ್ಯ (28%) ಪಡೆದಿದ್ದಾರೆ.

ಈಗ ವಿಧಾನಸಭಾ ಸದಸ್ಯರ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದ್ದು, ದ್ರೌಪದಿ ಮುರ್ಮುರವರು ರಾಷ್ಟ್ರದ ಪ್ರಥಮ ಪ್ರಜೆಯಾಗುವುದು ಬಹುತೇಕ ಖಚಿತವಾಗಿದೆ. ಆ ಮೂಲಕ ಮೊದಲ ಆದಿವಾಸಿ ಮಹಿಳೆ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ಅವರು ಆಯ್ಕೆಯಾಗಲಿದ್ದಾರೆ.

ಇದನ್ನೂ ಓದಿ: ಭಾರತದ ರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? | ಸಂಕ್ಷಿಪ್ತ ವಿವರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...