Homeಮುಖಪುಟಸುಗ್ರಿವಾಜ್ಞೆಗಳನ್ನು ತರುವಂತೆ ರಾಜ್ಯದ ಮೇಲೆ ಒತ್ತಡವೇರಿದ್ದ ಅಮಿತ್‌ ಶಾ ಆಪ್ತ ಸಹಾಯಕ!

ಸುಗ್ರಿವಾಜ್ಞೆಗಳನ್ನು ತರುವಂತೆ ರಾಜ್ಯದ ಮೇಲೆ ಒತ್ತಡವೇರಿದ್ದ ಅಮಿತ್‌ ಶಾ ಆಪ್ತ ಸಹಾಯಕ!

ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ನಮ್ಮ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸುಗ್ರೀವಾಜ್ಞೆ ತನ್ನಿ ಎಂದು ಹೇಳಲು ಗೃಹಮಂತ್ರಿಗಳ ಖಾಸಗಿ ಕಾರ್ಯದರ್ಶಿಗೆ ಅಧಿಕಾರ ಕೊಟ್ಟವರಾರು ಎಂಬ ಪ್ರಶ್ನೆಗಳು ಎದ್ದಿವೆ.

- Advertisement -
- Advertisement -

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ಪಕ್ಷ ಮತ್ತು ಪಕ್ಷದ ಅಭಿಮಾನಿಗಳು ಅವಾಗಾವಾಗ ಹೇಳುತ್ತಿದ್ದರು. ಈಗ ಕರ್ನಾಟಕ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರವಿಡಿದಿದೆ. ಹಾಗಾದರೆ ಈಗ ನಮ್ಮ ರಾಜ್ಯವು ಅಭಿವೃದ್ದಿಯಾಗುತ್ತಿದೆಯೇ? ಇಲ್ಲ ಬದಲಿಗೆ ಬಿಜೆಪಿ ಪಕ್ಷದ ಅಭಿವೃದ್ದಿಯಾಗುತ್ತಿದೆ ಅಷ್ಟೇ ಎಂಬ ಅನುಮಾನಗಳು ಆರಂಭವಾಗಿವೆ.

ಮೇ 04 ರಂದು ಕೊರೊನಾ ಸಾಂಕ್ರಾಮಿಕಗಳ ನಡುವೆ ಕೇಂದ್ರದ ಗೃಹ ಮಂತ್ರಿ ಅಮಿತ್‌ ಶಾರವರ ಖಾಸಗಿ ಕಾರ್ಯದರ್ಶಿ ಕರ್ನಾಟಕ ಮುಖ್ಯಮಂತ್ರಿಯವರ ಪ್ರಿನ್ಸಿಪಲ್ ಸೆಕ್ರಟರಿ ಪಿ.ರವಿ ರಸ್ತೋಗಿ ಅವರಿಗೆ ಪತ್ರ ಬರೆದು, “ಕಾರ್ಮಿಕ ಕಾಯ್ದೆಗಳಿಗೆ ಮತ್ತು ಎಪಿಎಂಸಿ ಕಾಯ್ದೆಗೆ ಆದಷ್ಟು ಬೇಗ ಸುಗ್ರೀವಾಜ್ಞೆಗಳ ಮೂಲಕ ತಿದ್ದುಪಡಿ ತಂದು ಕಟ್ಟುನಿಟ್ಟಾಗಿ ರಾಜ್ಯದಲ್ಲಿ ಜಾರಿಗೊಳಿಸಲು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ” ಎಂದು ಆದೇಶಿಸಿದ್ದಾರೆ.

ಈ ಕುರಿತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ನಿಮಗೆ ನಿರ್ದೇಶನ ನೀಡುತ್ತದೆ ಎಂದು ಆ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ಭಾಸ್ಕರ್‌ರವರಿಗೂ ಕಳಿಸಲಾಗಿದೆ. ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ನಮ್ಮ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸುಗ್ರೀವಾಜ್ಞೆ ತನ್ನಿ ಎಂದು ಹೇಳಲು ಗೃಹಮಂತ್ರಿಗಳ ಖಾಸಗಿ ಕಾರ್ಯದರ್ಶಿಗೆ ಅಧಿಕಾರ ಕೊಟ್ಟವರಾರು ಎಂಬ ಪ್ರಶ್ನೆಗಳು ಎದ್ದಿವೆ.

“ಮಾದರಿ ಎಪಿಎಲ್ಎಂ ಕಾಯ್ದೆ 2017 ರಲ್ಲಿ ತಿಳಿಸಿರುವಂತೆ ನಿಮ್ಮ ರಾಜ್ಯವು ಈಗಾಗಲೇ ಸುಧಾರಣೆಯ ಒಂಬತ್ತು ಕ್ಷೇತ್ರಗಳಲ್ಲಿ ಎಂಟು ಸುಧಾರಣೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಪ್ರಶಂಸಿಸಲಾಗುತ್ತದೆ. ಆದರೂ ಎಪಿಎಂಸಿಯನ್ನು ಕೇವಲ ಮಂಡಿ ಮಾರುಕಟ್ಟೆಗಳಿಗೆ ಸೀಮಿತಗೊಳಿಸಿರುವುದು ಸರಿಯಿಲ್ಲ. ಈ ನಿಟ್ಟಿನಲ್ಲಿ, ನೀತಿ ಆಯೋಗದ ಕೊನೆಯ ಆಡಳಿತ ಮಂಡಳಿ ಸಭೆಯಲ್ಲಿ, ಭಾರತದ ಗೌರವಾನ್ವಿತ ಪ್ರಧಾನಿ ರಾಜ್ಯಗಳು ಮಾದರಿ ಎಪಿಎಲ್ಎಂ ಕಾಯ್ದೆ 2017 ಅನ್ನು ಅಂಗೀಕರಿಸುವ ಬಗ್ಗೆ ಒತ್ತು ನೀಡಿದ್ದರು. ಆದ್ದರಿಂದ ನಿಮ್ಮ ರಾಜ್ಯವು ರೈತರು ಮತ್ತು ಉತ್ಪಾದಕರ ಹಿತದೃಷ್ಟಿಯಿಂದ ಸುಗ್ರೀವಾಜ್ಞೆ ಮಾರ್ಗದ ಮೂಲಕ ತುರ್ತಾಗಿ ಅಳವಡಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಇದನ್ನು ನಿಮ್ಮ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಯ ಗಮನಕ್ಕೆ ತಂದು ಸುಗ್ರೀವಾಜ್ಞೆಯ ನಂತರ ತಿದ್ದುಪಡಿ ಮಾಡಿದ ಕಾಯಿದೆಯ ಪ್ರತಿಯನ್ನು ಸಚಿವಾಲಯಕ್ಕೆ ಬೇಗನೆ ಕಳುಹಿಸಬೇಕು”. ಇದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಕರ್ನಾಟಕ ಸರ್ಕಾರದ ಅಡಿಷನಲ್‌ ಚೀಫ್ ಸೆಕ್ರಟರಿ ಡಾ.ನಾಗಾಂಬಿಕಾ ದೇವಿಯವರಿಗೆ ಮೇ 05ರಂದು ಬರೆದ ಪತ್ರ..

ಈ ಮೇಲಿನ ಎರಡು ಪತ್ರಗಳಿಂದ ಸ್ಪಷ್ಟವಾಗುವ ಅಂಶವೇನೆಂದರೆ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಜನರಿಗೆ ಉಪಯೋಗವಾಗುವ ಬದಲು ತೊಂದರೆಯೇ ಹೆಚ್ಚು. ಕೇಂದ್ರದ ಬಿಜೆಪಿ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ಸುಗ್ರೀವಾಜ್ಞೆಗಳನ್ನು ತರುವಂತೆ ಒತ್ತಡ ಹೇರಿದೆ. ಅದನ್ನು ರಾಜ್ಯ ಸರ್ಕಾರ ಚಾಚೂ ತಪ್ಪದೇ ಪಾಲಿಸಿದೆ. ಆ ಸುಗ್ರೀವಾಜ್ಞೆಗಳ ಮೂಲಕ ಬಂದು ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರವಾದರೆ ಬಿಜೆಪಿಗೆ ಬಹುಮತವಿಲ್ಲದ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಿಲ್ಲ.

ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗೀಕರಿಸಿರುವ ಕೃಷಿ ಸುಗ್ರೀವಾಜ್ಞೆಗಳ ವಿರುದ್ಧ ದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇವು ಕಾರ್ಪೊರೇಟ್ ಸ್ನೇಹಿ, ರೈತ ವಿರೋಧಿ ಎಂದು ದೇಶವ್ಯಾಪಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದಲ್ಲಿಯೂ ಕಳೆದ 8 ದಿನಗಳಿಂದ ನಿರಂತರ ಪ್ರತಿಭಟನೆಗಳು ನಡೆದು ಇಂದು ರಾಜ್ಯ ಬಂದ್ ಕೂಡ ಯಶಸ್ವಿಯಾಗಿದೆ.

2 ದಿನಗಳ ಅಂತರದಲ್ಲಿಯೇ 2 ಸಚಿವಾಲಯಗಳಿಂದ ರಾಜ್ಯಗಳಿಗೆ ಸುತ್ತೊಲೆ ಬಂದು ಒತ್ತಡ ಹೇರಿರುವುದು ಈ ಪತ್ರಗಳು ಸಾಬೀತು ಪಡಿಸುತ್ತವೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವಾಲಯ ಎರಡೂ ಕಡೆಯಿಂದ ಸುಗ್ರೀವಾಜ್ಞೆಗಳ ಜಾರಿಗೆ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗಿದೆ. ರೈತರ ಮೇಲಿನ ಕಾಳಜಿಗಾಗಿಯೇ ಮಸೂದೆಗಳನ್ನು ಜಾರಿಗೊಳಿಸುವ ಹಾಗಿದ್ದರೇ ಅವರ ರೈತರ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳಬೇಕಿತ್ತು. ಆದರೆ ಇಲ್ಲಿ ಯಾರ ಒಪ್ಪಿಗೆ, ಚರ್ಚೆಗಳಿಗೂ ಅವಕಾಶ ನೀಡದೇ, ಸುಗ್ರೀವಾಜ್ಞೆಗಳ ಮೂಲಕ ಮಸೂದೆಗಳನ್ನು ಜಾರಿಗೆ ತಂದಿದ್ದು ರೈತ ಸಮುದಾಯ ಮತ್ತು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

 

ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ APMC ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯಗಳಿಗೆ ಪತ್ರ ಬರೆದಿದ್ದ ಕೇಂದ್ರ

 

ಕಾಯ್ದೆಗಳ ತಿದ್ದುಪಡಿಗಳನ್ನು ಆದಷ್ಟು ಬೇಗ ಮಾಡಬೇಕು ಎಂಬ ಆತುರ ಕೇಂದ್ರ ಸರ್ಕಾರಕ್ಕೆ ಇತ್ತು. ಇದರ ಹಿಂದೆ ಕಾಪೋರೇಟ್‌ ಕಂಪನಿಗಳ ಹಿತಾಸಕ್ತಿ ಅಡಗಿದೆ ಎಂದು ರೈತ ಮುಖಂಡರು ಆರೋಪಿಸಿ, ಆಕ್ರೋಶ ಹೊರಹಾಕಿದ್ದಾರೆ. ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲದ ವಿಷಯಗಳಲ್ಲೂ ಮೂಗುತೂರಿಸಿ ಸರ್ವಾಧಿಕಾರ ತೋರಿಸುತ್ತಿರುವ ಕೇಂದ್ರದ ವಿರುದ್ದ ರೈತ ಹೋರಾಟಗಾರರು ಹಾಗೂ ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಜಿಎಸ್‌ಟಿ ಪಾಲನ್ನು ಕೇಂದ್ರ ಕೊಟ್ಟಿಲ್ಲ. ಪೂರ್ಣ ಪ್ರಮಾಣದಲ್ಲಿ ಪ್ರವಾಹ ಪರಿಹಾರದ ಹಣ ಬಂದಿಲ್ಲ. ಬದಲಿಗೆ ರೈತರ ತೀವ್ರ ವಿರೋಧದ ಮಸೂದೆಗಳನ್ನಷ್ಟೇ ಕೇಂದ್ರ ಜಾರಿಗೊಳಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯದ ಕುರಿತು ಇದೇ ನಿಲುವು ಮುಂದುವರೆಸಿದರೆ ಒಕ್ಕೂಟ ಸರ್ಕಾರ ಮತ್ತು ರಾಜ್ಯದ ನಡುವೆ ತಿಕ್ಕಾಟ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.


ಇದನ್ನೂ ಓದಿ:  Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...