Homeಮುಖಪುಟನಿರುದ್ಯೋಗ ಸಮಸ್ಯೆ ಪ್ರಸ್ತಾಪಿಸಿ ರೋಡ್‌ ಶೋ ನಡೆಸಿದ ಪ್ರಿಯಾಂಕಾ ಗಾಂಧಿ

ನಿರುದ್ಯೋಗ ಸಮಸ್ಯೆ ಪ್ರಸ್ತಾಪಿಸಿ ರೋಡ್‌ ಶೋ ನಡೆಸಿದ ಪ್ರಿಯಾಂಕಾ ಗಾಂಧಿ

- Advertisement -
- Advertisement -

ಅಲಿಗಢ (ಉತ್ತರ ಪ್ರದೇಶ): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಕಾಂಗ್ರೆಸ್‌ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಅಲಿಗಢದಲ್ಲಿ ರೋಡ್ ಶೋ ನಡೆಸಿದರು.

ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಕಾಂಗ್ರೆಸ್‌ನ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಜನರ “ಅಹಂಕಾರ” ತೊಡೆದುಹಾಕುವುದಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆ ವಿರುದ್ಧ ಕಿಡಿಕಾರಿರುವ ಅವರು, “ಕಾಂಗ್ರೆಸ್ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವತ್ತ ಗಮನಹರಿಸಿದೆ” ಎಂದರು. ಸರ್ಕಾರದಲ್ಲಿ ಸುಮಾರು 12 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕರಿಗೆ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ಹೂವಿನ ದಳಗಳನ್ನು ಸುರಿಸಿ ಆತ್ಮೀಯವಾಗಿ ಸ್ವಾಗತ ನೀಡಿದರು. ಆರು ಗಂಟೆಗಳ ಕಾಲ ರೋಡ್ ಶೋ ನಡೆದಿದ್ದು, ಕಾಂಗ್ರೆಸ್ ಬೆಂಬಲಿಗರು ರಸ್ತೆಗಳಲ್ಲಿ ಜಮಾಯಿಸಿ ಬೆಂಬಲ ಸೂಚಿಸಿದರು.

ಪ್ರಿಯಾಂಕಾ ಅವರು ಗುರುವಾರ ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ಕೋಯಿಲ್‌ನ ಕಾಂಗ್ರೆಸ್ ಅಭ್ಯರ್ಥಿ ವಿವೇಕ್ ಬನ್ಸಾಲ್, ಇಗ್ಲಾಸ್ ಅಭ್ಯರ್ಥಿ ಪ್ರೀತಿ ಧಂಗರ್ ಮತ್ತು ಅಲಿಘರ್ ಅಭ್ಯರ್ಥಿ ಸಲ್ಮಾನ್ ಇಮ್ತಿಯಾಜ್ ಅವರಿಗೆ ಮತ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದರು.

ಇಗ್ಲಾಸ್ ಮತ್ತು ಕೊಯಿಲ್‌ನಲ್ಲಿ ಅವರು ಸ್ಥಳೀಯ ಜನರೊಂದಿಗೆ ಸಾರ್ವಜನಿಕ ಸಭೆಗಳನ್ನು ನಡೆಸಿದರು. ಕಚ್ಚಾ ವಸ್ತು, ವಿದ್ಯುತ್ ಮತ್ತು ಇಂಧನದ ಬೆಲೆ ಏರಿಕೆಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಪ್ಪರ್‌‌ಪೋರ್ಟ್ ಪ್ರದೇಶದಲ್ಲಿ ಹಲವಾರು ಅಂಗಡಿಗಳ ಮಾಲೀಕರೊಂದಿಗೆ ಅವರು ಮಾತನಾಡಿದರು.

ರೋಡ್ ಶೋನ ಭಾಗವಾಗಿ ಯುವತಿಯರು ಮತ್ತು ಮಹಿಳೆಯರು ಕಾಂಗ್ರೆಸ್ ಪಕ್ಷದ ಮುಖ್ಯ ಘೋಷಣೆಯಾದ, “ಲಡ್ಕಿ ಹೂಂ, ಲಾಡ್ ಸಕ್ತಿ ಹೂಂ (ನಾನು ಹುಡುಗಿ, ಮತ್ತು ನಾನು ಹೋರಾಡಬಲ್ಲೆ)” ಕೂಗಿದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ರೋಡ್‌ಶೋ ಸಮಯದಲ್ಲಿ, ಅವರು ಅಪ್ಪರ್‌ಪೋರ್ಟ್‌ ಪ್ರದೇಶದಲ್ಲಿ ಬಟ್ಟೆ ಮಾರಾಟಗಾರರನ್ನು ಭೇಟಿಯಾದರು. COVID-19 ಲಾಕ್‌ಡೌನ್ ಸಮಯದಲ್ಲಿ ಅವರು ಎದುರಿಸಿದ ತೊಂದರೆಗಳ ಬಗ್ಗೆ ಕೇಳಿದರು.

ಲಾಕ್‌ಡೌನ್‌ನಿಂದ ಉದ್ಯಮದ ಮೇಲಾದ ಪರಿಣಾಮವನ್ನು ವ್ಯಾಪಾರಿಗಳು ಹಂಚಿಕೊಂಡ ನಂತರ, “ಬಿಜೆಪಿ ಸರ್ಕಾರವು ದ್ವೇಷದ ಮೇಲೆ ಹೆಚ್ಚು ಗಮನಹರಿಸಿರುವುದರಿಂದ ಕಾಂಗ್ರೆಸ್‌ಗೆ ಮತ ಚಲಾಯಿಸಿರಿ” ಎಂದು ಅವರು ಕೋರಿದರು.

ಪ್ರಿಯಾಂಕಾ ಅವರು ಬ್ಯೂಟಿ ಪಾರ್ಲರ್‌ಗೆ ಭೇಟಿ ನೀಡಿದರು. ಮಹಿಳಾ ಸಮಸ್ಯೆಗಳ ಕುರಿತು ಕಾಂಗ್ರೆಸ್ ರೂಪಿಸಿರುವ ಪ್ರಣಾಳಿಕೆಯ ಕುರಿತು ಅವರು ತಿಳಿಸಿದರು.

ಖೈರ್ ಪ್ರದೇಶದಲ್ಲಿ, ಅವರು ಕೆಲವು ಅಂಗಡಿಯವರು ಮತ್ತು ಯುವಕರೊಂದಿಗೆ ಮಾತನಾಡಿದರು. ಯುವಕರೊಬ್ಬರು, “ಖಾಲಿ ಇರುವ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ನಡೆಯದೆ, ಯುವಜನರಿಗೆ ದೊಡ್ಡ ಸಮಸ್ಯೆಯಾಗಿದೆ” ಎಂದು ಹೇಳಿದರು.

“ಯುವಕರು ಸಮಸ್ಯೆಗಳ ಆಧಾರದ ಮೇಲೆ ಮತ ಚಲಾಯಿಸಬೇಕು” ಎಂದು ಪ್ರಿಯಾಂಕಾ ಪ್ರತಿಕ್ರಿಯೆ ನೀಡಿದರು.


ಇದನ್ನೂ ಓದಿರಿ: ಅಂಬೇಡ್ಕರ್‌ ಅನುಯಾಯಿಗಳು ಸಮಾಜವಾದಿ ಪಕ್ಷಕ್ಕೆ ಕೈಜೋಡಿಸಬೇಕು: ಅಖಿಲೇಶ್ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...