Homeಚಳವಳಿಉತ್ತರ ಪ್ರದೇಶದಲ್ಲಿ ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ ರಕ್ಷಣೆ ನೀಡಲಾಗುತ್ತಿದೆ: ಕೆ.ಎಲ್ ಅಶೋಕ್

ಉತ್ತರ ಪ್ರದೇಶದಲ್ಲಿ ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ ರಕ್ಷಣೆ ನೀಡಲಾಗುತ್ತಿದೆ: ಕೆ.ಎಲ್ ಅಶೋಕ್

ನಮ್ಮ ದೇಶದ ಪ್ರಧಾನಿ ಭೇಟಿ ಪಡಾವೋ, ಭೇಟಿ ಬಚಾವೋ ಎಂಬ ಘೋಷಣೆ ನೀಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ರಕ್ಷಣೆ ಸಿಗುತ್ತಿಲ್ಲ- ಟಿ.ಎಚ್ ಹಾಲೇಶಪ್ಪ.

- Advertisement -
- Advertisement -

ಉತ್ತರ ಪ್ರದೇಶದಲ್ಲಿ ಸಾಮೂಹಿಕವಾಗಿ ಅರ್ಚಕರು ನಡೆಸಿರುವ ಪೈಶಾಚಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಇಂದು ಶಿವಮೊಗ್ಗದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು “ಗೂಂಡಾ ರಾಜ್ಯ ಯುಪಿ ಸರ್ಕಾರಕ್ಕೆ, ಯುಪಿ ಪೊಲೀಸರಿಗೆ ಧಿಕ್ಕಾರ” ಎಂಬ ಘೋಷಣೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್‌ರವರು ಮಾತನಾಡಿ “ಉತ್ತರ ಪ್ರದೇಶದಲ್ಲಿ ದೇವರಿಗೆ ಪೂಜೆ ಮಾಡುವ ಅರ್ಚಕರು ಅಂಗನವಾಡಿ ಶಿಕ್ಷಕಿಯ ಮೇಲೆ ಸಾಮೂಹಿಕವಾಗಿ ಕ್ರೂರ ಅತ್ಯಾಚಾರ ನಡೆಸಿದ್ದಾರೆ. ನಾವು ದೇವರಿಗೆ ಪೂಜೆ ಮಾಡುವ ಪೂಜಾರಿಗಳನ್ನು ದೇವರೆಂದೇ ಭಾವಿಸುತ್ತೇವೆ. ಆ ಪೂಜಾರಿಗಳು 50 ವರ್ಷದ ಮಹಿಳೆಯ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿರುವುದು ನಾವೆಲ್ಲರೂ ತಲೆ ತಗ್ಗಿಸಬೇಕಾದ ವಿಚಾರ” ಎಂದರು.

ಈ ರೀತಿಯ ಬರ್ಬರ ಕೃತ್ಯಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತಿವೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಆತ ನಿಜಕ್ಕೂ ಯೋಗಿಯಲ್ಲ. ಯೋಗಿ ಅಂದರೆ ಆಧ್ಯಾತ್ಮ, ಒಳ್ಳೆಯವರು. ಆ ರೀತಿಯ ಒಳ್ಳೆಯ ಸ್ವಾಮಿಗಳಿದ್ದು, ಒಳ್ಳೆಯ ಕೆಲಸ ಮಾಡುತ್ತಾರೆ. ಆದರೆ ಆತ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಯಲಾಗದ ರೋಗಿ ಆಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2012ರಲ್ಲಿಯೂ ಸಹ ಒಬ್ಬ ದಲಿತ ಬಾಲಕಿಯ ಮೇಲೆ ಇದೇ ಯೋಗಿ ಆದಿತ್ಯನಾಥ್‌ ಕಡೆಯ ಗೂಂಡಾಗಳು ಅತ್ಯಾಚಾರ ಎಸಗಿ ಕೊಂದರು. ವಿಶ್ವದಲ್ಲಿ ಸುಮಾರು 200 ದೇಶಗಳಿವೆ, ಸಾವಿರಾರು ರಾಜ್ಯಗಳಿವೆ. ಆ ಎಲ್ಲಾ ದೇಶ-ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಅತ್ಯಾಚಾರ-ಕೊಲೆಗಳು ನಡೆಯುತ್ತಿರುವುದು ಉತ್ತರ ಪ್ರದೇಶದಲ್ಲಿಯೇ ಆಗಿದೆ. ಒಬ್ಬ ಖಾವಿ ಬಟ್ಟೆಯನ್ನು ಹಾಕಿಕೊಂಡಿರುವ, ಜನರ ಪ್ರಾಣ – ಮಾನ ಕಾಪಾಡಬೇಕಾದ ಮುಖ್ಯಮಂತ್ರಿಯನ್ನು ಹೊಂದಿರುವ ರಾಜ್ಯದಲ್ಲಿ ಇವೆಲ್ಲ ನಡೆಯುತ್ತಿವೆ ಎಂದು ಕೆ.ಎಲ್ ಅಶೋಕ್ ಬೇಸರ ವ್ಯಕ್ತಪಡಿಸಿದರು.

ದಲಿತರು, ಬಡವರು, ಶೂದ್ರರು, ದಮನಿತರು ಎನ್ನುವ ಕಾರಣಕ್ಕೆ ಅತ್ಯಾಚಾರಕ್ಕೊಳಗಾದವರಿಗೆ ನ್ಯಾಯ ಸಿಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಈಗಾಗಿಯೇ ಇಂತಹ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ಬಿಹಾರವನ್ನು ಗೂಂಡಾ ರಾಜ್ ಎಂದು ಕರೆಯಲಾಗುತ್ತಿದೆ. ಅದರ ಹತ್ತು ಪಟ್ಟು ಅಪರಾಧದ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತು. ಅತ್ಯಾಚಾರ ಎಂಬ ಪಿಡುಗು ನಮ್ಮ ಮನೆಯ ಬಾಗಿಲಿನಲ್ಲಿಯೇ ಇದೆ. ಹಾಗಾಗಿ ನಾವೆಲ್ಲ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಡುವುದು ಅನಿವಾರ್ಯ ಎಂದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಜಿಲ್ಲಾ ಕಾರ್ಯದರ್ಶಿ ಟಿ.ಎಚ್ ಹಾಲೇಶಪ್ಪನವರು ಮಾತನಾಡಿ “ನಮ್ಮ ಕರ್ನಾಟಕದಲ್ಲಿ ಅರ್ಚಕರನ್ನು ಮದುವೆಯಾದರೆ 3 ಲಕ್ಷ ರೂಗಳ ಬಾಂಡ್ ಕೊಡುತ್ತೇವೆ ಎಂದು ಸಿಎಂ ಯಡಿಯೂರಪ್ಪನವರು ಘೋಷಿಸಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಅದೇ ಹಣವನ್ನು ಮಹಿಳೆಯರ ರಕ್ಷಣೆಗೆ ನೀಡಬೇಕು” ಎಂದು ಆಗ್ರಹಿಸಿದರು.

ದೇವಸ್ಥಾನ ಪವಿತ್ರ ಎನ್ನುತ್ತಾರೆ. ಅಲ್ಲಿಯ ಅರ್ಚಕರೆ ಕಾಮುಕರಾದರೆ ಮಹಿಳೆಯರಿಗೆ ಇನ್ನೆಲ್ಲಿ ರಕ್ಷಣೆ ಇದೆ. ಇಂದು ನಮ್ಮ ದೇಶದ ಪ್ರಧಾನಿ ಭೇಟಿ ಪಡಾವೋ, ಭೇಟಿ ಬಚಾವೋ ಎಂಬ ಘೋಷಣೆ ನೀಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ರಕ್ಷಣೆ ಸಿಗುತ್ತಿಲ್ಲ. ಈ ಗೂಂಡಾ ಸರ್ಕಾರಗಳನ್ನು ಕೆಳಗಿಳಿಸಬೇಕು, ಮಹಿಳೆಯರಿಗೆ ನಾವೇ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಪ್ರತಿಭಟನೆಯಲ್ಲಿ ರಾಮಚಂದ್ರಪ್ಪ, ಅನಿಲ್ ಕುಮಾರ್, ನಾಗವೇಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.


ಇದನ್ನೂ ಓದಿ: ಉತ್ತರ ಪ್ರದೇಶ ದೇವಸ್ಥಾನದಲ್ಲಿ ಅತ್ಯಾಚಾರ, ಕೊಲೆ: ಅರ್ಚಕನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌ ಹಗರಣ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಮನವಿ

0
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪ್ರೇರಿತ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕಿತ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು...