Homeಅಂತರಾಷ್ಟ್ರೀಯಡೊನಾಲ್ಡ್‌‌ ಟ್ರಂಪ್‌ ಫೇಸ್‌‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗೆ ಅನಿರ್ದಿಷ್ಟಾವಧಿ ತಡೆ

ಡೊನಾಲ್ಡ್‌‌ ಟ್ರಂಪ್‌ ಫೇಸ್‌‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗೆ ಅನಿರ್ದಿಷ್ಟಾವಧಿ ತಡೆ

- Advertisement -
- Advertisement -

ಅಮೆರಿಕ ಸಂಸತ್‌ ಗಲಭೆಗೆ ಪ್ರಚೋದಿಸಿ ವಿವಾದಕ್ಕೀಡಾಗಿರುವ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್‌‌ಬುಕ್ ಖಾತೆಯನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯಲಾಗಿದೆ ಎಂದು ಫೇಸ್‌ಬುಕ್ ಸಿಇಒ ಮಾರ್ಕ್‌ ಝಕರ್‌‌ಬರ್ಗ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣಾ ಎಣಿಕೆಯಲ್ಲಿ ಸೋತ ಡೊನಾಲ್ಡ್ ಟ್ರಂಪ್, ತನ್ನ ಸೋಲನ್ನು ಒಪ್ಪಿಕೊಳ್ಳದೆ ತಾನೇ ವಿಜಯಿಯಾಗಿದ್ದೇನೆ ಎಂದು ಪ್ರತಿಪಾದಿಸಿದ್ದರು. ಚುನಾವಣಾ ಫಲಿತಾಂಶದ ವಿರುದ್ದ ಸುಪ್ರೀಂಕೋರ್ಟ್‌ಗೆ ಕದವನ್ನು ತಟ್ಟಿದ್ದರು. ಆದರೆ ಅವರು ಸಲ್ಲಿಸಿರುವ ಬಾಗಶಃ ಎಲ್ಲಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಬುಧವಾರ ತನ್ನ ಬೆಂಬಲಿಗರಿಗೆ ಸಂಸತ್‌ ಭವನಕ್ಕೆ ರ್‍ಯಾಲಿ ಹೊರಡಿ ಎಂದು ಕರೆ ನೀಡಿದ್ದ ಟ್ರಂಪ್, ನೆರೆದಿದ್ದ ಜನರನ್ನು ಉದ್ರಿಕ್ತರನ್ನಾಗಿ ಮಾಡಿದ್ದರು.

ಇದನ್ನೂ ಓದಿ: ಅಮೆರಿಕ ಸಂಸತ್‌ ದಾಳಿಯಲ್ಲಿ ಭಾರತೀಯ ಧ್ವಜ ಹಾರಾಟ: ವ್ಯಾಪಕ ಟೀಕೆ

ಅದರ ನಂತರ ಅವರ ಉದ್ರಿಕ್ತ ಬೆಂಬಲಿಗರು ಸಂಸತ್‌ ಬಳಿ ತೆರಳಿ ಅಲ್ಲಿ ನೆರೆದಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಪ್ರಾಮಾಣೀಕರಿಸುವ ಕಾರ್ಯಕ್ರಮ ನಡೆಯುವ ವೇಳೆ ಬಲವಂತವಾಗಿ ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದ್ದರು. ಇದರಿಂದ ಗೊಂದಲ ಉಂಟಾಗಿದ್ದು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ.

ಈ ಹಿನ್ನಲೆಯಲ್ಲಿ ಫೇಸ್‌‌ಬುಕ್‌, ಟ್ರಂಪ್ ಸಾಮುದಾಯಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು, ಅವರ ಖಾತೆಯನ್ನು 24 ಗಂಟೆಗಳ ಕಾಲ ನಿಷ್ಕ್ರಿಯಗೊಳಿಸಲಾಗುವುದು ಎಂದು ತಿಳಿಸಿತ್ತು. ಆದರೆ ಇದೀಗ ನಿಯಮ ಪಾಲಿಸದ ಟ್ರಂಪ್ ಖಾತೆಯನ್ನು ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡಲಾಗಿದೆ ಎಂದು ಝಕರ್‌‌ಬರ್ಗ್ ತಿಳಿಸಿದ್ದಾರೆ.

ಈ ಸಮಯದಲ್ಲಿ ಅಧ್ಯಕ್ಷರು ಫೇಸ್‌ಬುಕ್ ಬಳಸುದಕ್ಕೆ ಅನುವು ಮಾಡಿಕೊಡುವುದು ಅಪಾಯಕಾರಿ ಎಂದು ನಾವು ನಂಬಿದ್ದೇವೆ. ಅದಕ್ಕಾಗಿ ಅವರ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಮ್ ಖಾತೆಗಳ ಮೇಲಿನ ಅಮಾನತನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದೇವೆ. ಈ ಅಮಾನತು ಅಧಿಕಾರದ ಹಸ್ತಾಂತರ ಶಾಂತಿಯುತವಾಗಿ ನಡೆಯುವ ತನಕ, ಅಂದರೆ ಮುಂದಿನ ಕನಿಷ್ಠ ಎರಡು ವಾರಗಳ ತನಕ ಇರಲಿದೆ ಎಂದು ಝಕರ್‌‌ಬರ್ಗ್ ಹೇಳಿದ್ದಾರೆ.

ಅಲ್ಲಿ ಜನವರಿ 20 ಕ್ಕೆ ನೂತನ ಅಧ್ಯಕ್ಷರು ಅಧಿಕಾರ ವಹಿಸಲಿದ್ದಾರೆ.

ಇದನ್ನೂ ಓದಿ: ಅಮೆರಿಕ ಸಂಸತ್ ಮೇಲೆ ದಾಳಿ: ಟ್ರಂಪ್ ಖಾತೆ ಸ್ಥಗಿತಗೊಳಿಸಿದ ಟ್ವಿಟರ್, ಫೇಸ್‌ಬುಕ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...