Homeಕರ್ನಾಟಕಮದ್ಯ ಖರೀದಿ ವಯಸ್ಸು ಇಳಿಕೆ ಪ್ರಸ್ತಾಪದ ವಿರುದ್ಧ ಜನಾಕ್ರೋಶ: ಅಧಿಸೂಚನೆ ಹಿಂಪಡೆದ ರಾಜ್ಯ ಬಿಜೆಪಿ ಸರ್ಕಾರ

ಮದ್ಯ ಖರೀದಿ ವಯಸ್ಸು ಇಳಿಕೆ ಪ್ರಸ್ತಾಪದ ವಿರುದ್ಧ ಜನಾಕ್ರೋಶ: ಅಧಿಸೂಚನೆ ಹಿಂಪಡೆದ ರಾಜ್ಯ ಬಿಜೆಪಿ ಸರ್ಕಾರ

- Advertisement -
- Advertisement -

ಮದ್ಯ ಖರೀದಿಸುವ ಕಾನೂನುಬದ್ಧ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸುವ ಬಗ್ಗೆ ಕರಡು ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ, ಪ್ರಸ್ತಾವನೆ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಕೇಳಿತ್ತು. ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೀಗ ಅಧಿಸೂಚನೆ ಹೊರಡಿಸಿ ಹತ್ತು ದಿನಗಳ ನಂತರ ಅದನ್ನು ಹಿಂಪಡೆದಿದೆ.

ಜನವರಿ 18 ರ ಬುಧವಾರ ಬಿಡುಗಡೆ ಮಾಡಿದ ಪತ್ರಿಕಾ ಟಿಪ್ಪಣಿಯಲ್ಲಿ, ರಾಜ್ಯ ಅಬಕಾರಿ ಇಲಾಖೆಯು ಕರ್ನಾಟಕ ಅಬಕಾರಿ (ಪರವಾನಗಿಗಳ ಸಾಮಾನ್ಯ ನಿಯಮಗಳು) ನಿಯಮಗಳು – 1967 ಗೆ ತಿದ್ದುಪಡಿ ಮಾಡುವ ಕರಡು ಅಧಿಸೂಚನೆಯನ್ನು ಸಾರ್ವಜನಿಕರು, ಸಂಘಗಳು ಮತ್ತು ಮಾಧ್ಯಮಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕರ್ನಾಟಕ ಅಬಕಾರಿ (ಪರವಾನಗಿಗಳ ಸಾಮಾನ್ಯ ಷರತ್ತುಗಳು) ನಿಯಮಗಳು – 1967 ರ ನಿಯಮ 10 (1) (ಇ) ಅನ್ನು ತಿದ್ದುಪಡಿ ಮಾಡಲು ಕರಡು ಅಧಿಸೂಚನೆಯನ್ನು ಜನವರಿ 9 ರಂದು ಪ್ರಕಟಿಸಿತ್ತು. ಈ ನಿಯಮವು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಮದ್ಯ ಮಾರಾಟವನ್ನು ನಿಷೇಧಿಸುತ್ತದೆ. ಅಲ್ಲಿ ‘ಇಪ್ಪತ್ತೊಂದು ವರ್ಷ’ ಪದಗಳಿಗೆ ಬದಲಾಗಿ ‘ಹದಿನೆಂಟು ವರ್ಷ’ ಎಂದು ಸೇರಿಸುವ ಬಗ್ಗೆ ಅಧಿಸೂಚನೆ ಹೇಳಿತ್ತು.

ಪ್ರಸ್ತುತ ಅಬಕಾರಿ ಕಾನೂನು 21 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸುತ್ತದೆ. ಇತ್ತೀಚೆಗೆ ಹೊರಡಿಸಿದ ಕರಡು ಅಧಿಸೂಚನೆಯಾದ ‘ಕರ್ನಾಟಕ ಅಬಕಾರಿ ನಿಯಮಗಳು – 2023’ ವಯೋಮಾನ ಕಡಿತಕ್ಕೆ ದಾರಿ ಮಾಡಿಕೊಡುತ್ತದೆ. ಈ ವೇಳೆ ಅಬಕಾರಿ ಇಲಾಖೆ ಆಕ್ಷೇಪಣೆಗಳಿದ್ದಲ್ಲಿ ಅಧಿಸೂಚನೆಯ 30 ದಿನಗಳಲ್ಲಿ ಸಲ್ಲಿಸಬೇಕು ಎಂದು ತಿಳಿಸಿತ್ತು.

2015 ರವರೆಗೆ ಆಲ್ಕೊಹಾಲ್‌‌ ಪಾನೀಯಗಳನ್ನು ಖರೀದಿಸಲು ಕಾನೂನುಬದ್ಧ ವಯಸ್ಸನ್ನು 18 ಇತ್ತು. ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತು) ನಿಯಮಗಳು – 1967 ಗೆ ತಿದ್ದುಪಡಿ ಮಾಡುವ ಮೂಲಕ ಇದನ್ನು 21 ಕ್ಕೆ ಹೆಚ್ಚಿಸಲಾಯಿತು. ಇದು ದುಬಾರಿ ಪಬ್‌ಗಳು ಮತ್ತು ಬಾರ್‌ಗಳಲ್ಲಿ 21 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುವುದನ್ನು ಪರಿಣಾಮಕಾರಿಯಾಗಿ ತಡೆದಿತ್ತು.

ಸರ್ಕಾರದ ಅಧಿಸೂಚನೆಯನ್ನು ವಿರೋಧಿಸಿದ್ದ ವಿದ್ಯಾರ್ಥಿ ಸಂಘಟನೆಗಳು, “ರಾಮ ರಾಜ್ಯದ ಬಗ್ಗೆ ಮಾತನಾಡುವ ಬಿಜೆಪಿ ಸರ್ಕಾರ, ನಾಡನ್ನು ಪಾನ ರಾಜ್ಯವನ್ನಾಗಿ ಮಾಡಲು ಹೊರಟಿದೆ’’ ಎಂದು ಆಕ್ರೋಶ ವ್ಯಕ್ತಪಡಿಸಿತ್ತು ಮತ್ತು ಅಧಿಸೂಚನೆಯನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸಿತ್ತು.

ಇದನ್ನೂ ಓದಿ: ‘ರಾಮರಾಜ್ಯ’ ಬಗ್ಗೆ ಮಾತನಾಡುವ BJP, ನಾಡನ್ನು ‘ಪಾನರಾಜ್ಯ’ ಮಾಡುತ್ತಿದೆ: ಮದ್ಯ ಖರೀದಿ ವಯಸ್ಸಿನ ಇಳಿಕೆಗೆ ವಿದ್ಯಾರ್ಥಿ ಸಂಘಟನೆಗಳ ವಿರೋಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...