Homeಮುಖಪುಟರಾಷ್ಟ್ರ ರಾಜಧಾನಿಯಲ್ಲಿ ನನಗೇ ರಕ್ಷಣೆ ಇಲ್ಲ: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯ ಆರೋಪ

ರಾಷ್ಟ್ರ ರಾಜಧಾನಿಯಲ್ಲಿ ನನಗೇ ರಕ್ಷಣೆ ಇಲ್ಲ: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯ ಆರೋಪ

- Advertisement -
- Advertisement -

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಪಾನಮತ್ತ ಚಾಲಕನೊಬ್ಬ ಗುರುವಾರ ಬೆಳಿಗ್ಗೆ ರಸ್ತೆಯಲ್ಲಿ ಅಶ್ಲೀಲ ಸನ್ನೆ ಮಾಡಿ ಕಿರುಕುಳ ನೀಡಿದ್ದಲ್ಲದೇ, ಅವರನ್ನು ಅಡ್ಡಗಟ್ಟಿ 15 ಮೀಟರ್ ದೂರ ಎಳೆದೊಯ್ದಿದ್ದಾನೆ. ಇದೀಗ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ “ರಿಯಾಲಿಟಿ ಚೆಕ್‌ಗಾಗಿ” ಬೀದಿಗಿಳಿದಿದ್ದಾಗ ದೆಹಲಿಯ ಏಮ್ಸ್ ಆಸ್ಪತ್ರೆಯ ಬಳಿ ಮಲಿವಾಲ್ ಅವರಿಗೆ ಕಿರುಕುಳ ನೀಡಿ ಎಳೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು, ಘಟನೆಯನ್ನು ವಿವರಿಸಿದ್ದಾರೆ ಮತ್ತು “ದೇವರು ನನ್ನ ಜೀವ ಉಳಿಸಿದ್ದಾನೆ, ಮಹಿಳಾ ಆಯೋಗದ ಅಧ್ಯಕ್ಷರು ದೆಹಲಿಯಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ಉಳಿದವರ ಪರಿಸ್ಥಿತಿಯನ್ನು ಊಹಿಸಿ.” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ನಮ್ಮ ಹೋಂವರ್ಕ್‌ ಪರಿಶೀಲಿಸಲು ಅವರು ನಮ್ಮ ಹೆಡ್‌‌ಮಾಸ್ಟರ್‌‌‌ ಅಲ್ಲ: ಲೆಫ್ಟಿನೆಂಟ್‌ ಗವರ್ನರ್‌‌‌‌ ವಿರುದ್ಧ ದೆಹಲಿ ಸಿಎಂ ಆಕ್ರೋಶ

ಕಳೆದ ರಾತ್ರಿ 3.11 ರ ಸುಮಾರಿಗೆ ಏಮ್ಸ್ ಬಳಿಯ ರಸ್ತೆಯಲ್ಲಿ ಹೊರಟಿದ್ದರು. ಈ ವೇಳೆ ಬಲೆನೋ ಕಾರಿನಲ್ಲಿ ಬಂದ ಚಾಲಕನು ಕಾರಿನಲ್ಲಿ ಹತ್ತಿಕೊಳ್ಳುವಂತೆ ಒತ್ತಾಯಿಸಿದನು. ಆತ ಹೆಚ್ಚು ಕುಡಿದಿದ್ದನು ಎಂದು ಮಲಿವಾಲ್ ಅವರು ಪೊಲೀಸರಿಗೆ ತಿಳಿಸಿದ್ದಾರೆ.

“ಆ ಚಾಲಕ ಬಲವಂತ ಮಾಡಿದಾಗ ನಾನು ನಿರಾಕರಿಸಿದೆ. ಆಗ ಆ ವ್ಯಕ್ತಿ ಕಾರು ಚಲಾಯಿಸಿಕೊಂಡು ಹೋಗಿ ನಂತರ ಯು-ಟರ್ನ್ ತೆಗೆದುಕೊಂಡು ಹಿಂತಿರುಗಿದನು” ಎಂದು ಮಲಿವಾಲ್ ಹೇಳಿದರು.

“ಆತ ನನ್ನನ್ನು ಕಾರಿನಲ್ಲಿ ಸೇರುವಂತೆ ಒತ್ತಾಯಿಸಲು ಪ್ರಯತ್ನಿಸಿದಾಗ, ಅವನನ್ನು ಹಿಡಿಯಲು ಕಿಟಕಿಯ ಮೂಲಕ ಪ್ರವೇಶಿಸಿದೆ. ಆಗ ಆತ ಕಿಟಕಿಯನ್ನು ಆರ್ಧ ಮುಚ್ಚಿದನು. ಆಗ ನನ್ನ ಕೈ ಸಿಕ್ಕಿಹಾಕಿಕೊಂಡಿತು. ಬಿಡಿಸಿಕೊಳ್ಳುವ ಮೊದಲು ಆತ ವಾಹನ ಚಲಾಯಿಸುತ್ತಿದ್ದನು, ಸುಮಾರು 15 ಮೀಟರ್‌ಗಳವರೆಗೆ ಎಳೆದೊಯ್ದನು” ಎಂದು ಘಟನೆಯನ್ನು ಮಲಿವಾಲ್ ಅವರು ವಿವರಿಸಿದ್ದಾರೆ. ಸಧ್ಯ ಆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...