Homeಮುಖಪುಟರಾಹುಲ್ ಗಾಂಧಿ ಬಳಿ ಮೀನುಗಾರ ಮಹಿಳೆಯ ಅಳಲು: ತಪ್ಪಾಗಿ ಭಾಷಾಂತರಿಸಿದ ಪುದುಚೇರಿ ಸಿಎಂ!

ರಾಹುಲ್ ಗಾಂಧಿ ಬಳಿ ಮೀನುಗಾರ ಮಹಿಳೆಯ ಅಳಲು: ತಪ್ಪಾಗಿ ಭಾಷಾಂತರಿಸಿದ ಪುದುಚೇರಿ ಸಿಎಂ!

- Advertisement -
- Advertisement -

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿನ್ನೆ (ಫೆ. 17) ಪುದುಚೇರಿಗೆ ಭೇಟಿ ನೀಡಿದ್ದರು. ಇದರ ಭಾಗವಾಗಿ ಕರಾವಳಿ ತೀರದ ಹಳ್ಳಿಯೊಂದಕ್ಕೂ ಭೇಟಿ ನೀಡಿದ್ದರು. ಅಲ್ಲಿ ಮೀನುಗಾರ ಮಹಿಳೆಯೊಬ್ಬರು ಹೇಳಿಕೊಂಡ ಸಮಸ್ಯೆಯನ್ನು ಪುದುಚೇರಿಯ ಮುಖ್ಯಮಂತ್ರಿ ನಾರಾಯಣಸಾಮಿ ತಪ್ಪಾಗಿ ಭಾಷಾಂತರ ಮಾಡಿದ್ದಾರೆ. ಇದಕ್ಕೆ ತೀವ್ರವಾದ ಖಂಡನೆ ವ್ಯಕ್ತವಾಗಿದೆ.

ರಾಹುಲ್ ಗಾಂಧಿಯವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಮಹಿಳೆ, “ಕಡಲತೀರದ ನಮ್ಮ ಬದುಕು ಹೀಗೆ ಇದೆ. ನಮಗೆ ಯಾರೂ ಸಹಕರಿಸುತ್ತಿಲ್ಲ. ಅವರೇ (ಮುಖ್ಯಮಂತ್ರಿ ನಾರಾಯಣಸಾಮಿ) ಇಲ್ಲಿದ್ದಾರೆ. ಅವರನ್ನೇ ಕೇಳಿ, ಚಂಡಮಾರುತದ ಸಂದರ್ಭದಲ್ಲಿ ಎಂದಾದರೂ ಇಲ್ಲಿಗೆ ಭೇಟಿ ನೀಡಿದ್ದಾರಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಇದನ್ನು ರಾಹುಲ್ ಗಾಂಧಿಯವರಿಗೆ ತಪ್ಪಾಗಿ ಭಾಷಾಂತರ ಮಾಡಿದ ಮುಖ್ಯಮಂತ್ರಿ ನಾರಾಯಣಸಾಮಿ, “ನಿವಾರ್ ಚಂಡಮಾರುತದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ನಾನು ಪರಿಹಾರ ನೀಡಿದ್ದೇನೆ. ಅದನ್ನೇ ಆಕೆ ಹೇಳುತ್ತಿದ್ದಾಳೆ” ಎಂದು ಹೇಳಿದ್ದಾರೆ.

ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂವಾದದಲ್ಲಿ ಮಹಿಳೆಯ ಕಷ್ಟವನ್ನು ತಪ್ಪಾಗಿ ಭಾಷಾಂತರ ಮಾಡಲಾಗಿದೆ.


ಇದನ್ನೂ ಓದಿ: ದೆಹಲಿಯಲ್ಲಿ ಮೀನುಗಾರರಿಗೇಕೆ ಸಚಿವಾಲಯವಿಲ್ಲ: ರಾಹುಲ್ ಗಾಂಧಿ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...